• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಅತ್ತೆ ಜೊತೆ ಅಳಿಯ ಲವ್ವಿಡವ್ವಿ, ಅಳಿಯನಿಗೆ ಮಾವ ಸ್ಕೆಚ್, ಹೊಳೆಯ ದಡದಲ್ಲಿ ಕೊಲೆಯಾದ ಪ್ರಿಯತಮ

ಅತ್ತೆ ಜೊತೆ ಅಳಿಯ ಲವ್ವಿಡವ್ವಿ, ಅಳಿಯನಿಗೆ ಮಾವ ಸ್ಕೆಚ್, ಹೊಳೆಯ ದಡದಲ್ಲಿ ಕೊಲೆಯಾದ ಪ್ರಿಯತಮ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತನಿಖೆ ವೇಳೆ ಹೇಳಿಕೆ ನೀಡಿರುವ ಪ್ರಕಾರ ಚಿಕ್ಕತಿಮ್ಮಯ್ಯನ ಹೆಂಡತಿಯ ಜೊತೆಗೆ ಕೊಲೆಯಾದ ಮಹಾದೇವ ಅಕ್ರಮವಾಗಿ ಸಂಬಂಧ ಬೆಳೆಸಿದ್ದ. ಈ ವಿಚಾರ ತಿಳಿದ ಚಿಕ್ಕತಿಮ್ಮಯ್ಯ ರಮೇಶ ಎಂಬುವನ ಜೊತೆಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಈ ಪ್ರಕರಣದ ವಿಚಾರವಾಗಿ ಇನ್ನು ಹೆಚ್ಚಿನ ತನಿಖೆ ನಡೆಸಲಾಗುತ್ತೆ ಎಂದು ತಿಳಿಸಿದರು.

ಮುಂದೆ ಓದಿ ...
  • Share this:

ರಾಮನಗರ: ಸೋದರ ಮಾವನ ಹೆಂಡತಿಯನ್ನೇ ಪಟಾಯಿಸಿದ್ದ ಅಳಿಯನನ್ನ ಮಾವನೇ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾನೆ. ವಯಸ್ಸಿನಲ್ಲಿ ತನಗಿಂತ 12 ವರ್ಷ ವ್ಯತ್ಯಾಸವಿದ್ದರೂ ಸಹ ಅತ್ತೆ-ಅಳಿಯ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಾರೆ. ಇವರಿಬ್ಬರೂ ಚಕ್ಕಂದ ಆಡುವುದನ್ನು ಕಂಡ ಮಾವ ಅಳಿಯನಿಗೆ ಯಮಲೋಕದ ದಾರಿ ತೋರಿಸಿದ್ದಾನೆ. 20 ವರ್ಷದ ಮಹಾದೇವ ಎಂಬಾತ ಆನೇಕಲ್ ಭಾಗದಲ್ಲಿ ಫಾರೆಸ್ಟ್ ವಾಚರ್ ಆಗಿ ಕೆಲಸ ಮಾಡುತ್ತಿದ್ದ. ತಂದೆ-ತಾಯಿಯಿಲ್ಲದ ಇವನಿಗೆ ಚಿಕ್ಕಪ್ಪ ರೇವಣ್ಣ ಹಾಗೂ ಅಜ್ಜಿ ಆಸರೆಯಾಗಿದ್ದರು. ಚಿಕ್ಕಪ್ಪ ರೇವಣ್ಣ ರಾಮನಗರ ಜಿಲ್ಲೆಯ ಹಾರೋಹಳ್ಳಿ ಭಾಗದಲ್ಲಿ ವಾಸವಾಗಿದ್ದರು. ಕೆಲ ದಿನಗಳು ಹಾರೋಹಳ್ಳಿಯ ಚಿಕ್ಕಪ್ಪನ ಮನೆಯಲ್ಲಿ ಇರುತ್ತಿದ್ದ, ಇನ್ನು ಕೆಲ ದಿನಗಳ ಅಜ್ಜಿಯ ಜೊತೆಗೆ ಆನೇಕಲ್ ತಾಲೂಕಿನ ಜಿಗಣಿ ಬಳಿ ಮಾದಪ್ಪನದೊಡ್ಡಿ ಗ್ರಾಮದಲ್ಲಿಯೂ ವಾಸಮಾಡುತ್ತಿದ್ದ. ಆದರೆ ಅದೇ ಗ್ರಾಮದಲ್ಲಿ ತನ್ನ ತಾಯಿಯ ತಮ್ಮ ಚಿಕ್ಕತಿಮ್ಮಯ್ಯ ಸಹ ವಾಸವಾಗಿದ್ದರು.


ಚಿಕ್ಕತಿಮಯ್ಯ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ. ಈತನ ಹೆಂಡತಿಗೆ ಕೇವಲ 32 ವರ್ಷ ವಯಸ್ಸು. ಚಿಕ್ಕತಿಮ್ಮಯ್ಯಗೆ 50 ವರ್ಷ. ಮಾವನ ಮನೆಗೆ ಮಹಾದೇವ ಆಗಿಂದಾಗಲೇ ಬಂದುಹೋಗಿ ಮಾಡುತ್ತಿದ್ದ. ಮನೆಗೆ ಬರುವ ಸಮಯದಲ್ಲಿ ಮಾವನ ಹೆಂಡತಿ ಅರ್ಥಾತ್ ಅತ್ತೆಯನ್ನು ಪಟ್ಟಾಯಿಸಿದ್ದ ಮಹಾದೇವ ಮಾವನಿಗೆ ಗೊತ್ತಾಗದಂತೆ ಅತ್ತೆಯ ಜೊತೆಗೆ ಕಾಮದಾಟವಾಡಲು ಶುರು ಮಾಡಿಕೊಂಡಿದ್ದ. 12 ವರ್ಷ ವಯಸ್ಸಿನಲ್ಲಿ ಅಂತರವಿದ್ದರೂ ಸಹ ಅತ್ತೆ ಸಹ ಅಳಿಯನ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು.


ಹಲವು ತಿಂಗಳುಗಳಿಂದ ಇವರಿಬ್ಬರ ಕಾಮದಾಟ ನಡೆಯುತ್ತಿದೆ ಎಂದು ಮಾವ ಚಿಕ್ಕತಿಮ್ಮಯ್ಯಗೆ ಗೊತ್ತಾದ ಕೂಡಲೇ ಮಹಾದೇವನ ಜೊತೆಗೆ ಕೆಲಸ ಮಾಡುತ್ತಿದ್ದ ರಮೇಶ ಎಂಬಾತನ ಸಹಾಯ ಪಡೆದು ಕೊಲೆಗೆ ಪ್ಲ್ಯಾನ್ ಮಾಡಿದ. ಸದಾ ಎಣ್ಣೆ ಮತ್ತಿನಲ್ಲಿ ಇರುತ್ತಿದ್ದ ಮಹಾದೇವನಿಗೆ ರಮೇಶನ ಮೂಲಕ ಎಣ್ಣೆ ಆಸೆ ತೋರಿಸಿದ ಮಾವ ಚಿಕ್ಕತಿಮ್ಮಯ್ಯ ಹಾರೋಹಳ್ಳಿ ವ್ಯಾಪ್ತಿಯ ಮರಳವಾಡಿ ಬಳಿಯಿರುವ ಸುವರ್ಣಮುಖಿ ಹೊಳೆಯ ಬಳಿಗೆ ಬೈಕ್‌ನಲ್ಲಿ ಕರೆಸಿಕೊಂಡಿದ್ದಾನೆ. ಇವರಿಬ್ಬರು ಹೋಗುವ ಮೊದಲೇ ಚಿಕ್ಕತಿಮ್ಮಯ್ಯ ಮತ್ತೊಂದು ಬೈಕ್‌ನಲ್ಲಿ ಸ್ಥಳಕ್ಕೆ ಹೋಗಿದ್ದಾನೆ. ಇನ್ನು ಎಣ್ಣೆ ಆಸೆಯಿಂದ ಬಂದ ಮಹಾದೇವನಿಗೆ ಚೆನ್ನಾಗಿ ಕುಡಿಸಿ ಟೈಟ್ ಮಾಡಿಸಿದ ಚಿಕ್ಕತಿಮ್ಮಯ್ಯ ಹಾಗೂ ರಮೇಶ, ಕೊನೆಯ ಪೆಗ್‌ನಲ್ಲಿ ಎಣ್ಣೆಗೆ ಪಾಲಿಡಾಲ್ ಬೆರೆಸಿ ಕುಡಿಸಿದ್ದಾರೆ.


ಇದನ್ನು ಓದಿ: ಯುವರಾಜ್ ವಂಚನೆ ಪ್ರಕರಣ; ವಿಚಾರಣೆಗೆ ಹಾಜರಾಗುವಂತೆ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್


ಬಳಿಕ ಎಣ್ಣೆ ಮತ್ತಿನಲ್ಲಿದ್ದ ಮಹಾದೇವನನ್ನ ಹೊಳೆಗೆ ಬಿಸಾಕಿದ ಚಿಕ್ಕತಿಮ್ಮಯ್ಯ ಹಾಗೂ ರಮೇಶ ಸ್ಥಳದಿಂದ ಪರಾರಿಯಾಗಿದ್ದಾರೆ.  ಕಳೆದ ವರ್ಷ ಅಕ್ಟೋಬರ್  12 ರಂದು ಕೊಲೆ ಮಾಡಿದ್ದ ಇಬ್ಬರು ಏನು ಗೊತ್ತಿಲ್ಲದ ಹಾಗೆ ಸುಮ್ಮನಿದ್ದರು. ಆದರೆ ಮಹಾದೇವನ ಚಿಕ್ಕಪ್ಪ ರೇವಣ್ಣ ಎಂಬುವರು ಹಾರೋಹಳ್ಳಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದರು. 18 ದಿನಗಳ ನಂತರ ಅಂದರೆ ಅಕ್ಟೋಬರ್ 30ರಂದು ಮಹಾದೇವನ ಮೃತದೇಹ ಸುವರ್ಣಮುಖಿ ಹೊಳೆಯ ದಡದಲ್ಲಿ ಪತ್ತೆಯಾಗುತ್ತದೆ. ನಂತರ ಪ್ರಕರಣದ ತನಿಖೆ ನಡೆಸಿದ ಹಾರೋಹಳ್ಳಿ ಪೊಲೀಸರ ತಂಡ ಆರೋಪಿಗಳಾದ ಚಿಕ್ಕತಿಮ್ಮಯ್ಯ ಹಾಗೂ ರಮೇಶ ಕೊಲೆ ಮಾಡಿದ್ದಾರೆಂದು ಪತ್ತೆ ಮಾಡುತ್ತಾರೆ. ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ಸಹ ವಶಕ್ಕೆ ಪಡೆಯುತ್ತಾರೆ.


ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ರಾಮನಗರ ಎಸ್ಪಿ ಎಸ್.ಗಿರೀಶ್ ಅವರು ಮಹಾದೇವನನ್ನ ಆತನ ಮಾವ ಚಿಕ್ಕತಿಮ್ಮಯ್ಯ ಹಾಗೂ ರಮೇಶ ಎಂಬುವರು ಸೇರಿ ಕೊಲೆ ಮಾಡಿದ್ದಾರೆ. 18 ದಿನಗಳ ಬಳಿಕ ಕೊಲೆಯಾದ ಮಹಾದೇವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ವೇಳೆ ಹೇಳಿಕೆ ನೀಡಿರುವ ಪ್ರಕಾರ ಚಿಕ್ಕತಿಮ್ಮಯ್ಯನ ಹೆಂಡತಿಯ ಜೊತೆಗೆ ಕೊಲೆಯಾದ ಮಹಾದೇವ ಅಕ್ರಮವಾಗಿ ಸಂಬಂಧ ಬೆಳೆಸಿದ್ದ. ಈ ವಿಚಾರ ತಿಳಿದ ಚಿಕ್ಕತಿಮ್ಮಯ್ಯ ರಮೇಶ ಎಂಬುವನ ಜೊತೆಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಈ ಪ್ರಕರಣದ ವಿಚಾರವಾಗಿ ಇನ್ನು ಹೆಚ್ಚಿನ ತನಿಖೆ ನಡೆಸಲಾಗುತ್ತೆ ಎಂದು ತಿಳಿಸಿದರು.


ವರದಿ : ಎ.ಟಿ.ವೆಂಕಟೇಶ್

top videos
    First published: