Video: ಮಗಳನ್ನು ಹೆಗಲ ಮೇಲೆ ಹೊತ್ತು 8 ಕಿ.ಮೀ. ನಡೆದು ಯಾದಗಿರಿ ಆಸ್ಪತ್ರೆಗೆ ಬಂದ ತಂದೆ....!

ಜ್ವರದಿಂದ ಬಳಲುತ್ತಿದ್ದ ತನ್ನ ಮಗಳಿಗೆ ಚಿಕಿತ್ಸೆ ಕೊಡಿಸಲು ತಂದೆ ಹರಸಾಹಸ ಪಟ್ಟಿದ್ದಾರೆ. ಪೊಲೀಸರು ಆಸ್ಪತ್ರೆಗೆ ತೆರಳಲು ಬಿಡುತ್ತಿದ್ದಾರೆ. ಆದರೆ, ಮರೇಪ್ಪ ಮಾತ್ರ ಪೊಲೀಸರಿಗೆ ಭಯಪಟ್ಟು ಪೊಲೀಸರ ಸಾಹಸವೇ ಬೇಡವೆಂದು ನಡೆದುಕೊಂಡು ಹೋಗಿ ಮಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಮಗಳನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಬಂದ ತಂದೆ.

ಮಗಳನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಬಂದ ತಂದೆ.

  • Share this:
ಯಾದಗಿರಿ: ರಾಜ್ಯ ಸರಕಾರ ಕೋವಿಡ್​ಗೆ ಕಡಿವಾಣ ಹಾಕಲು ಲಾಕ್ ಡೌನ್ ಜಾರಿಗೆ ತಂದಿದೆ. ಯಾದಗಿರಿ ಜಿಲ್ಲೆಯಲ್ಲಿ ಕೂಡ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಅವರು ನಿನ್ನೆಯಿಂದ ಮೂರು ದಿನಗಳ ಕಾಲ ಕಠಿಣ ಲಾಕ್ ಡೌನ್ ಜಾರಿ ಮಾಡಿದ್ದಾರೆ. ಯಾದಗಿರಿ ‌ಜಿಲ್ಲಾದ್ಯಂತ ಪೊಲೀಸರು ಕೂಡ ಕಠಿಣ ಕ್ರಮ ಕೈಗೊಂಡಿದ್ದಾರೆ. ಜನರು ಯಾದಗಿರಿ ನಗರದೊಳಗೆ ಪ್ರವೇಶ ಮಾಡಲು ಪೊಲೀಸರು ನಿರ್ಬಂಧ ಹಾಕಿದ್ದಾರೆ. ತುರ್ತು ಕೆಲಸ, ಆಸ್ಪತ್ರೆಗೆ ಮಾತ್ರ ತೆರಳಲು ಅವಕಾಶ ಕೊಟ್ಟಿದ್ದಾರೆ. ಆದರೆ, ವ್ಯಕ್ತಿಯೊರ್ವ ದೂರದ ಊರಿಂದ ತನ್ನ ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ತೋರಿಸಲು 8 ಕಿ.ಮೀ ನಡೆದುಕೊಂಡು ಬಂದ ಘಟನೆ ನಡೆದಿದೆ.

ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದ ನಿವಾಸಿ ಮರೇಪ್ಪ ಜ್ವರದಿಂದ ಬಳಲುತ್ತಿದ್ದ ತನ್ನ ಮಗಳನ್ನು ಆಸ್ಪತ್ರೆಗೆ ತೋರಿಸಲು ಪಗಲಾಪುರ ಗ್ರಾಮದಿಂದ ಯಾದಗಿರಿವರೆಗೆ ಹೆಗಲ ಮೇಲೆ ಹೊತ್ತುಕೊಂಡು ನಡೆದುಕೊಂಡು ಬಂದಿದ್ದಾರೆ. ಬಿಸಿಲನ್ನು ‌ಲೆಕ್ಕಿಸದೆ ಪುತ್ರಿ ಅನುಶಾಳನ್ನು ಯಾದಗಿರಿಗೆ ಕರೆದುಕೊಂಡು ಬಂದು‌ ಖಾಸಗಿ ಆಸ್ಪತ್ರೆ ವೈದ್ಯರಿಗೆ ತೋರಿಸಿದ್ದಾರೆ.

ಇದನ್ನು ಓದಿ: ಚಾಮರಾಜನಗರ ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಹರಡಿದ ಕೊರೋನಾ

ಲಾಕ್ ಡೌನ್ ಅವಧಿಯಲ್ಲಿ ಪೊಲೀಸರು ಯಾರನ್ನು ಬಿಡುತ್ತಿಲ್ಲ. ವಾಹನಗಳನ್ನು ಜಪ್ತಿ ಮಾಡುತ್ತಿರುವ ಜೊತೆ ಪೊಲೀಸರು ಲಾಠಿಯಿಂದ ಹೊಡೆಯುತ್ತಿರುವ ಸುದ್ದಿ ಅರಿತು ಬೈಕ್ ತೆಗೆದುಕೊಂಡು ಬರಲು ತಂದೆ ಮರೇಪ್ಪ ಭಯ ಪಟ್ಟಿದ್ದಾರೆ. ಬಳಿಕ ಪುತ್ರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕರೆದುಕೊಂಡು ಬಂದಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ತಂದೆ ಮರೇಪ್ಪ, ಬೈಕ್ ತೆಗೆದುಕೊಂಡು ಬರಲು ಪೊಲೀಸರ ಭಯವಾಗಿದೆ. ಪೊಲೀಸರು ಬೈಕ್ ಹಿಡಿಯುತ್ತಾರೆಂದು ನಾನು  ಪಗಲಾಪುರ ಗ್ರಾಮದಿಂದ 8 ಕಿ.ಮೀ. ಮಗಳನ್ನು ಯಾದಗಿರಿಗೆ ಹೊತ್ತುಕೊಂಡು ಕರೆದುಕೊಂಡು ಬಂದಿದ್ದೇನೆ. ದವಾಖಾನೆಗೆ ತೋರಿಸಿ ವಾಪಸ್ ಊರಿಗೆ ಹೋಗುತ್ತೇನೆ ಎಂದು ಹೇಳಿದರು.

ನಂತರ ವೈದ್ಯರ ಹತ್ತಿರ ಮಗಳಿಗೆ ಚಿಕಿತ್ಸೆ ಕೊಡಿಸಿ ಮರೇಪ್ಪ ನಗರದ ಹೊಸಳ್ಳಿ ಕ್ರಾಸ್ ವರೆಗೆ ಮಗಳನ್ನು ಮತ್ತೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಹೊಸಳ್ಳಿ ಕ್ರಾಸ್ ಕೌಳೂರುಗೆ ತೆರಳುವ ಆಟೋ ನಿಂತಿದ್ದನು ಕಂಡು ಮಗಳಿಗೆ ಅಟೋದಲ್ಲಿ ಕುಳಿರಿಸಿಕೊಂಡು ಕೌಳುರುವರೆಗೆ ತೆರಳಿದ್ದಾರೆ. ನಂತರ ಕೌಳೂರುನಿಂದ ಪುತ್ರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಮನೆಗೆ ಹೋಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ತನ್ನ ಮಗಳಿಗೆ ಚಿಕಿತ್ಸೆ ಕೊಡಿಸಲು ತಂದೆ ಹರಸಾಹಸ ಪಟ್ಟಿದ್ದಾರೆ. ಪೊಲೀಸರು ಆಸ್ಪತ್ರೆಗೆ ತೆರಳಲು ಬಿಡುತ್ತಿದ್ದಾರೆ. ಆದರೆ, ಮರೇಪ್ಪ ಮಾತ್ರ ಪೊಲೀಸರಿಗೆ ಭಯಪಟ್ಟು ಪೊಲೀಸರ ಸಾಹಸವೇ ಬೇಡವೆಂದು ನಡೆದುಕೊಂಡು ಹೋಗಿ ಮಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.
Published by:HR Ramesh
First published: