ಏಕ ಕಾಲಕ್ಕೆ ಪಿಎಚ್.ಡಿ ಪೂರೈಸಿದ ಅಪ್ಪ-ಮಗ : ಅಪರೂಪಕ್ಕೆ ಸಾಕ್ಷಿಯಾಗಲಿದೆ ಮೈಸೂರು ವಿವಿ ಘಟಿಕೋತ್ಸವ
ಒಂದೇ ವಿಶ್ವವಿದ್ಯಾಲಯದಲ್ಲಿ ಅಪ್ಪ-ಮಗ ಇಬ್ಬರೂ ಪಿಎಚ್.ಡಿ ಪೂರೈಸಿರುವುದು ಮೈಸೂರು ವಿವಿ ಇತಿಹಾಸದಲ್ಲೇ ಅಪರೂಪ ಎನ್ನಬಹುದು. ನಾಗಕೃಷ್ಣ ರಾಜೇ ಅರಸ್ ತಮ್ಮ ಅನುಭವ ಮೇಲೆ ಪಿಎಚ್.ಡಿ ಮಾಡಿದರು. ಮಗ ಪ್ರಚಲಿತ ವಿದ್ಯಮಾನವನ್ನು ಪ್ರಬಂಧದ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು
news18-kannada Updated:October 1, 2020, 7:11 AM IST

ಪಿಎಚ್.ಡಿ ಪೂರೈಸಿದ ಅಪ್ಪ-ಮಗ
- News18 Kannada
- Last Updated: October 1, 2020, 7:11 AM IST
ಮೈಸೂರು(ಅಕ್ಟೋಬರ್. 01): ಮೈಸೂರು ವಿವಿಯು ನೂರನೇ ವರ್ಷದ ಘಟಿಕೋತ್ಸವದ ಸಂಭ್ರಮದಲ್ಲಿದೆ. ವಿಶೇಷ ಎನ್ನುವಂತೆ ತಂದೆ ಮಗ ಇಬ್ಬರು ಒಟ್ಟಿಗೆ ಪಿಎಚ್.ಡಿ ಪದವಿ ಮುಕ್ತಾಯಗೊಳಿಸಿದ್ದು, ಈ ಬಾರಿಯ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಪಡೆಯಲು ಸಿದ್ಧರಾಗಿದ್ದಾರೆ. ಮಕ್ಕಳು ಅನುಕರಣೆ ಮಾಡುವುದು ಸಾಮಾನ್ಯ. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಗ ಓದುವುದನ್ನು ಕಂಡು ತಾವು ಅದರಿಂದ ಸ್ಪೂರ್ತಿಯಾಗಿ ಮಗನೊಂದಿಗೆ ಎಂಬಿಎ ಪದವಿ ಪಡೆಯುವ ಜತೆಗೆ ಪಿಎಚ್.ಡಿ ಪದವಿಯನ್ನೂ ಪೂರೈಸಿರುವುದು ಅಚ್ಚರಿ ಮೂಡಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ನಾಗಕೃಷ್ಣ ರಾಜೆ ಅರಸ್ (63 ವರ್ಷ) ಹಾಗೂ ಪ್ರಮು ಕುಮಾರ್ ರಾಜೇ ಅರಸ್ ಎಂ.ಎನ್. (35 ವರ್ಷ) ಒಟ್ಟಿಗೆ ಪಿಎಚ್.ಡಿ ಪೂರೈಸಿರುವ ತಂದೆ-ಮಗ. ಇವರಿಬ್ಬರಿಗೂ ಮ್ಯಾನೇಜ್‌ಮೆಂಟ್ (ಆಡಳಿತ) ವಿಷಯದಲ್ಲಿ ಡಾ.ವಿ.ಎಸ್.ಸೋಮನಾಥ್ ಮಾರ್ಗದರ್ಶನ ಮಾಡಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಇಬ್ಬರಿಗೂ ಪಿಎಚ್.ಡಿ ಪ್ರದಾನವಾಗಲಿದೆ.
ತಂದೆ, ಮಗ ಬೇರೆ ಬೇರೆ ವಿಷಯದಲ್ಲಿ ಮಂಡಿಸಿದ ಪಿಎಚ್.ಡಿ ಮಹಾ ಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿದೆ. ಅಕ್ಟೋಬರ್‌ನಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಇಬ್ಬರೂ ಪಿಎಚ್.ಡಿ ಅವಾರ್ಡ್ ತೆಗೆದುಕೊಳ್ಳುವ ಅಪರೂಪದ ದೃಶ್ಯಕ್ಕೆ ಮೈಸೂರು ವಿಶ್ವವಿದ್ಯಾಲಯ ಸಾಕ್ಷಿಯಾಗಲಿದೆ. ವಿಶೇಷವೆಂದರೆ ಅಪ್ಪ ಎಂಎಸ್ಸಿ ಹಾಗೂ ಮಗ ಎಂಬಿಎ ಓದುವಾಗ ಚಿನ್ನದ ಪದಕ ಪಡೆದಿದ್ದಾರೆ. ಮೈಸೂರು ವಿವಿ ಇತಿಹಾಸದಲ್ಲೇ ಅಪರೂಪ
ಒಂದೇ ವಿಶ್ವವಿದ್ಯಾಲಯದಲ್ಲಿ ಅಪ್ಪ-ಮಗ ಇಬ್ಬರೂ ಪಿಎಚ್.ಡಿ ಪೂರೈಸಿರುವುದು ಮೈಸೂರು ವಿವಿ ಇತಿಹಾಸದಲ್ಲೇ ಅಪರೂಪ ಎನ್ನಬಹುದು. ನಾಗಕೃಷ್ಣ ರಾಜೇ ಅರಸ್ ತಮ್ಮ ಅನುಭವ ಮೇಲೆ ಪಿಎಚ್.ಡಿ ಮಾಡಿದರು. ಮಗ ಪ್ರಚಲಿತ ವಿದ್ಯಮಾನವನ್ನು ಪ್ರಬಂಧದ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಇಬ್ಬರೂ ಬುದ್ಧಿವಂತರು. ನನ್ನ ವೃತ್ತಿ ಜೀವನದಲ್ಲಿ ಇದು ಸಂತೋಷದ ಸಂಗತಿ ಎಂದು ಡಾ.ವಿ.ಎಸ್.ಸೋಮನಾಥ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕೊರೋನಾ ಎಫೆಕ್ಟ್ : ಕೆಲಸವಿಲ್ಲದೇ ಹೋಟೆಲ್ ಆರಂಭಿಸಿದ ಯುವ ನಿರ್ದೇಶಕ ಪುನಿತ್ ಆರ್ಯ
ನಾಗಕೃಷ್ಣ ರಾಜೆ ಅರಸ್ ಅವರು 1980ರಲ್ಲೇ ಎಂಎಸ್ಸಿ ಸ್ನಾತಕೊತ್ತರ ಪದವಿಯನ್ನು ಪೂರೈಸಿದ್ದರು. ನಂತರ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜಂಟ್ ಲಿಮಿಟೆಡ್ಗೆ ಸೇರಿಕೊಂಡು 2017ರ ನವೆಂಬರ್‌ನಲ್ಲಿ ನಿವೃತ್ತರಾದರು. ಆರ್ಥಿಕ ಕಾರಣಕ್ಕೆ ಮುಂದೆ ಉನ್ನತ ಶಿಕ್ಷಣ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ದೂರ ಶಿಕ್ಷಣದ ಮೂಲಕ ಎಂಬಿಎ ಪ್ರವೇಶ ಪಡೆದರು.
2015ರಲ್ಲಿ ಮೈಸೂರು ವಿಶ್ವವಿದ್ಯಾಲಯ ವತಿಯಿಂದ ನಡೆದ ಪಿಎಚ್.ಡಿ ಸಾಮಾನ್ಯ ಪರೀಕ್ಷೆಯನ್ನು ಎದುರಿಸಿ ಪಾಸಾದರು. ನಂತರ ಐದು ವರ್ಷ ಸಂಶೋಧನೆ ನಡೆಸಿ, ಇದೀಗ ಪಿಎಚ್.ಡಿ ಪ್ರಬಂಧ ಮಂಡಿಸಿದ್ದು, ಮೈಸೂರು ವಿಶ್ವವಿದ್ಯಾಲಯ ಅದನ್ನು ಅಂಗೀಕರಿಸಿದೆ.
ತಂದೆ, ಮಗ ಬೇರೆ ಬೇರೆ ವಿಷಯದಲ್ಲಿ ಮಂಡಿಸಿದ ಪಿಎಚ್.ಡಿ ಮಹಾ ಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿದೆ. ಅಕ್ಟೋಬರ್‌ನಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಇಬ್ಬರೂ ಪಿಎಚ್.ಡಿ ಅವಾರ್ಡ್ ತೆಗೆದುಕೊಳ್ಳುವ ಅಪರೂಪದ ದೃಶ್ಯಕ್ಕೆ ಮೈಸೂರು ವಿಶ್ವವಿದ್ಯಾಲಯ ಸಾಕ್ಷಿಯಾಗಲಿದೆ. ವಿಶೇಷವೆಂದರೆ ಅಪ್ಪ ಎಂಎಸ್ಸಿ ಹಾಗೂ ಮಗ ಎಂಬಿಎ ಓದುವಾಗ ಚಿನ್ನದ ಪದಕ ಪಡೆದಿದ್ದಾರೆ.