Protests in Hubli - ಕೇಂದ್ರದ ರೈತ ವಿರೋಧಿ ಕಾಯ್ದೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ಜನಜಾಗೃತಿ ಜಾಥಾ

ಕೇಂದ್ರದ ಕೃಷಿ ಕಾನೂನುಗಳಿಂದ ಕೃಷಿ ಮಾರುಕಟ್ಟೆಗಳು ಮುಚ್ಚಿ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿ ಹುಬ್ಬಳ್ಳಿಯಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳ ಸಂಘಟನೆಗಳು ಜನಜಾಗೃತಿ ಜಾಥಾ ನಡೆಸಿದರು.

ಹುಬ್ಬಳ್ಳಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ

  • Share this:
ಹುಬ್ಬಳ್ಳಿ: ಕೇಂದ್ರದ ನೂತನ ಕೃಷಿ ಮತ್ತು ಎಪಿಎಮ್‌ಸಿ ಕಾಯ್ದೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ಜನಜಾಗೃತಿ ಜಾಥಾ ನಡೆಯಿತು. ರೈತ, ಕಾರ್ಮಿಕ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಹುಬ್ಬಳ್ಳಿಯ ಎಪಿಎಮ್‌ಸಿ ‌ಮಾರುಕಟ್ಟೆಯಲ್ಲಿ ಜಾಥಾ ಆಯೋಜಿಸಿದ್ದವು. ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ‌ ಮಸೂದೆಗಳಿಂದ ಕೋಟ್ಯಂತರ ರೈತರು ತಮ್ಮ ಕೈಯಲ್ಲಿರುವ ಕೃಷಿ ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ. ಕೃಷಿ‌ ಮಾರುಕಟ್ಟೆಗಳು ಮುಚ್ಚಿ ಲಕ್ಷಾಂತರ ‌ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಈ ಮಸೂದೆಗಳನ್ನು ದೇಶದ ಹಿತದೃಷ್ಟಿಯಿಂದ ವಾಪಸ್ ಪಡೆಯಬೇಕೆಂದು ಕಾರ್ಮಿಕ ಮುಖಂಡರು ಆಗ್ರಹಿಸಿದ್ರು.‌ ಕಾಯ್ದೆಯ ಕರಾಳ ಮುಖದ ಕುರಿತು ಹಾಡುಗಳನ್ನು ಹಾಡಿದ್ರು. ಕ್ರಾಂತಿ ಗೀತೆಗಳ ಮೂಲಕ ಜನರಿಗೆ ಅರಿವು ಮೂಡಿಸಿದರು.

ಪ್ರಧಾನ ಮಂತ್ರಿಗಳಿಗೆ ದೆಹಲಿ ಸುತ್ತಲು ಕಳೆದ ಎರಡು ತಿಂಗಳಿಂದ ಹೋರಾಟದಲ್ಲಿರುವ ರೈತರನ್ನು ಭೇಟಿ ‌ಮಾಡಲು ವ್ಯವದಾನ ಇಲ್ಲದಿರುವುದು ದುರಂತದ ಸಂಗತಿಯಾಗಿದೆ ಎಂದು ಇದೇ ವೇಳೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ವ್ಯಂಗ್ಯ ಮಾಡಿದರು. ಕೇಂದ್ರದ ಮೂರು‌ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ಕಾರ್ಮಿಕ ವಿದ್ಯಾರ್ಥಿ ಯುವಜನ ಸಂಘಟನೆಗಳು ಹುಬ್ಬಳ್ಳಿ ಎಪಿಎಂಸಿ ‌ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಜಾತಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದನ್ನೂ ಓದಿ: ನಾವು ಮುಂಬೈ ಕರ್ನಾಟಕದವರು; ಮುಂಬೈ ನಮ್ಮದು – ಡಿಸಿಎಂ ಹೇಳಿಕೆಯಿಂದ ಗರಿಗೆದರಿದ ಹೋರಾಟಗಾರರ ಹುಮ್ಮಸ್ಸು

ಕೇಂದ್ರ ಸರಕಾರ ಜಾರಿ ಮಾಡಿದ ಕೃಷಿ ‌ಮಸೂದೆಗಳು ಜಾರಿಯಾದರೆ ಕೋಟ್ಯಂತರ ರೈತರು ತಮ್ಮ ಕೈಯಲ್ಲಿರುವ ಕೃಷಿ ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ. ಕೃಷಿ‌ ಮಾರುಕಟ್ಟೆಗಳು ಮುಚ್ಚಿ ಲಕ್ಷಾಂತರ ‌ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಈ ಮಸೂದೆಗಳನ್ನು ದೇಶದ ಹಿತದೃಷ್ಟಿಯಿಂದ ವಾಪಸ್ ಆಗಲೇಬೇಕಿರುವುದು ಇವತ್ತಿನ ಒಕ್ಕೂರಲಿನ ಆಗ್ರಹವಾಗಿದೆ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಎಸ್. ಸೊಪ್ದಿನ್, ಮಹಾದಾಯಿ‌ ನೀರಾವರಿ ಹೋರಾಟ ‌ಸಮಿತಿ ‌ಮುಖಂಡ ಅಮೃತ ಇಜಾರಿ,‌ ಸಿಐಟಿಯು‌ ಜಿಲ್ಲಾ ಕಾರ್ಯದರ್ಶಿ ‌ಮಹೇಶ ಪತ್ತಾರ್, ಜಾತಾದ ‌ಮುಖಂಡರಾದ ಮಹೇಶ ಹಿರೇಮಠ,‌ ಪೀರು ರಾಥೋಡ್, ಗಣೇಶ ರಾಥೋಡ್ ಹಮಾಲಿ ಕಾರ್ಮಿಕ ‌ಸಂಘದ ಮುಖಂಡ ಗುರುಸಿದ್ದ ಅಂಬಿಗೇರ, ಬಸಣ್ಣ ನೀರಲಿಗಿ ಮೊದಲಾದವರು ಭಾಗವಹಿಸಿದ್ದರು.

ಸಂವಿಧಾನ ರಕ್ಷಣೆ ಜನತೆಯ ಹೊಣೆ:

ಕೇಂದ್ರದ ನರೇಂದ್ರ‌ ಮೋದಿ‌ ಸರಕಾರ ಸಂವಿಧಾನಿಕ ಎಲ್ಲ‌‌ ಸಂಸ್ಥೆಗಳನ್ನು ನಾಶಪಡಿಸಲು ವ್ಯವಸ್ಥಿತ ಪ್ರಯತ್ನ ನಡೆಸುತ್ತಿದ್ದಾರೆ. ಅಂತಹ ಎಲ್ಲ ‌ಪ್ರಯತ್ನಗಳನ್ನು ದೇಶದ ಜನತೆ ಒಂದಾಗಿ ತಡೆಗಟ್ಟಬೇಕು ಎಂದು ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮೀ ಅವರು ಕರೆ ನೀಡಿದರು.

ಇದನ್ನೂ ಓದಿ: ಸಚಿವ ಸುಧಾಕರ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಾಸಕ ರೇಣುಕಾಚಾರ್ಯ

ಕೇಂದ್ರದ ರೈತ ಮಸೂದೆ ವಿರೋಧಿಸಿ ಹುಬ್ಬಳ್ಳಿಗೆ ಆಗಮಿಸಿದ ಜಾಥಾದ ಸಭೆಯನ್ನು ಸಂಗೊಳ್ಳಿ ರಾಯಣ್ಣ ವೃತ ದಲ್ಲಿ ಉದ್ದೇಶಿಸಿ‌ ಮಾತನಾಡಿದ ಅವರು, ಕಾರ್ಪೋರೆಟ್ ಕಂಪನಿಗಳಿಗೆ ಸಾವಿರಾರು ‌ಕೋಟಿ‌ ರೂ ತೆರಿಗೆ‌ ರಿಯಾಯಿತಿ ನೀಡುವ ಸರಕಾರ ಕೋಟ್ಯಂತರ ದುಡಿಯುವ ಜನರಿಗೆ ಮಾತ್ರ ಬಿಡಿಗಾಸು ನೀಡದೇ‌ ದ್ರೋಹ ‌ಮಾಡಲಾಗುತ್ತಿದೆ. ಕೇಂದ್ರ ಸರಕಾರ‌ ಇಂತಹ‌ ಬಡವರ ವಿರೋಧಿ‌ ನೀತಿಗಳ ವಿರುದ್ದ ‌ಈ‌ ಜಾಥಾ ನಡೆಯುತ್ತಿದೆ ‌ಎಂದು ಅವರು ಟೀಕಿಸಿದರು.

ಜಾಥಾದಲ್ಲಿ ಬಿ ಐ ಈಳಿಗೇರ, ಕೆ ವಿ‌ ರಾಯಚೂರ, ಮಾಜಿ ಶಾಸಕಿ ಸಾವಿತ್ರಿ ಗುಂಡಿ, ಶ್ರೀಶೈಲಗೌಡ ಪಾಟೀಲ, ಶಿವಣ್ಣ ಹುಬ್ಬಳ್ಳಿ, ಮಹೇಶ ಹುಲಕೋಡ, ಬೀದಿಬದಿ ವ್ಯಾಪಾರಿಗಳ ಸಂಘದ ಅನ್ನಪೂರ್ಣ ಕುಂಕುರಮಠ, ಕಸ್ತೂರಿ ದಾಸರ ಬಸವರಾಜ ಕೋರಿಮಾಠ ಮುಂತಾದವರು ಪಾಲ್ಗೊಂಡಿದ್ದರು.

ವರದಿ: ಪರಶುರಾಮ ತಹಶೀಲ್ದಾರ
Published by:Vijayasarthy SN
First published: