ಬೆಳೆಗಳಿಗೆ ಬಣ್ಣ ಬಣ್ಣದ ಸೀರೆಗಳ ಬೇಲಿ.. ಫಸಲನ್ನು ಉಳಿಸಿಕೊಳ್ಳಲು ಅನ್ನದಾತರ ಮಾಸ್ಟರ್​ಪ್ಲಾನ್​

ರಾತ್ರಿ ಕಾಡು ಹಂದಿ, ತೋಳ, ನರಿ, ಮೊಲ, ಜಿಂಕೆಗಳು ಬಿತ್ತಿದ ಬೀಜವನ್ನೇ ಅಗೆದು ತಿನ್ನುತ್ತವೆ, ಕಾಡುಹಂದಿಗಳಂತೂ ಬಿತ್ತಿದ ಸಾಲುಗುಂಟ ಮುಖದಲ್ಲಿ ಗುದ್ದುತ್ತ ಎಲ್ಲವನ್ನು ತಿಂದು ಹಾಕುತ್ತವೆ. ಇನ್ನು ಬೆಳೆದ ಪೈರನ್ನು ಕೂಡಾ ಜಮೀನಿಗೆ ನುಗ್ಗಿ ನಾಶ ಮಾಡಿ ರೈತರಿಗೆ ತೊಂದರೆ ಉಂಟು ಮಾಡುತ್ತವೆ, ಹೀಗಾಗಿ ಜಮೀನು ಸುತ್ತಲೂ ಸೀರೆ ಸಿಂಗಾರ ಮಾಡಿದ್ದಾರೆ.

ಬೆಳೆಗಳಿಗೆ ಸೀರೆಗಳ ಬೇಲಿ

ಬೆಳೆಗಳಿಗೆ ಸೀರೆಗಳ ಬೇಲಿ

 • Share this:
  ಬೀದರ್ ‌: ಭೂ ತಾಯಿಗೆ ಕಲರ್ ಕಲರ್ ಸೀರೆಗಳಿಂದ ಅಲಂಕಾರ ಗೊಳಿಸಲಾಗಿದೆ.ಭೂ ತಾಯಿಗೆ ಸೀರೆ  ಉಡಸಿ ರೈತರು ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಅದ್ಯಾಕೋ ಗೋತ್ತಿಲ್ಲ ಸಂಕಷ್ಟಗಳು ನಮ್ಮ ರೈತರನ್ನೇ ಬೆಂಬಿಡದೆ ಕಾಡ್ತಾಯಿವೆ. ಸಂಕಷ್ಟದಲ್ಲೂ ಕೆಲ ರೈತರು ಒಳ್ಳೆಯ ಬೆಳೆ ಬೆಳೆದಿದ್ದಾರೆ. ಆದ್ರೆ ಈ ಬೆಳೆಗೆ ಈಗ ಕಾಡು ಪ್ರಾಣಿಗಳ ಕಿರಿಕ್ ಶುರುವಾಗಿದೆ. ರೈತರ ಜಮೀನುಗಳಿಗೆ ದಾಳಿ ಮಾಡಿ ಕಾಡು ಪ್ರಾಣಿಗಳು ಹಾಳು ಮಾಡುತ್ತಿವೆ. ಹೀಗಾಗಿ ರೈತರೇ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

  ಔರಾದ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡ್ಡಗಾಡು ಪ್ರದೇಶವಿರೋದರಿಂದ ಔರಾದ ತಾಲೂಕಿನ ರೈತರು ಬೆಳೆ ತೆಗೆಯುವಷ್ಟರಲ್ಲಿ ಹತ್ತಾರು ಕುತ್ತುಗಳನ್ನು ಎದುರಿಸಬೇಕಾದ ಸ್ಥಿತಿ ಇದೆ. ಮಳೆ ಬರೆದೇ ಇದ್ದರೆ ಒಂದು ಚಿಂತೆ, ಮಳೆ ಬಂದು ಬೆಳೆ ಬಂದರೆ ಮತ್ತೊಂದು ಚಿಂತೆ, ನೀರಾವರಿ ಮಾಡಿ ಕೈಗೆ ಫಸಲು ಬರುವಷ್ಟರಲ್ಲಿ ರೋಗಗಳ ಹಾವಳಿ. ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುವ ಅನೇಕ ಗ್ರಾಮದ ರೈತರು ಕಾಡುಪ್ರಾಣಿಗಳ ಹಾವಳಿ ಎದುರಿಸುವಂತಾಗಿದೆ.

  ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಬೇಸತ್ತು  ಔರಾದ ತಾಲೂಕಿನ ಹಲವು ಗ್ರಾಮಗಳ ರೈತರು ಬೆಳೆ ರಕ್ಷಣೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಜಮೀನುಗಳ ಸುತ್ತಲೂ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲು ಇಡೀ ಜಮೀನು ಸುತ್ತಲೂ ಬೇಲಿಯಂತೆ ಕಲರ್ ಕಲರ್ ಸೀರೆಗಳನ್ನು ಹಾಕುವ ವಿನೂತನ ಪ್ರಯೋಗ ಮಾಡಿದ್ದಾರೆ. ಈ ಮೂಲಕ ರೈತರು ವರ್ಷವಿಡೀ ಕಷ್ಟ ಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳಲು ಹರಸಹಾಸ ಮಾಡ್ತಾಯಿದ್ದಾರೆ.

  ಜಮೀನುಗಳಲ್ಲಿ ಎಲ್ಲೆಂದರಲ್ಲಿ ಬೆಳೆಗಳ ಸುತ್ತಲೂ ಬದುವಿನಲ್ಲಿ ಸೀರೆಗಳಿಂದ ಸಿಂಗಾರ ಮಾಡಿರುವುದು ಕಾಣುತ್ತದೆ. ಇದೇನು ಭೂತಾಯಿಗೆ ವಿಶೇಷ ಪೂಜೆ ಏರ್ಪಡಿಸಲಾಗಿದೆ ಏನೋ ಎಂಬ ಅನುಮಾನ ಬರುವದು ಸಹಜ. ಆದರೆ ಜಮೀನುಗಳಿಗೆ ಜನಸಂಚಾರ ದಟ್ಟನೆ ಕಡಿಮೆಯಾದ ಮೇಲೆ ರಾತ್ರಿ ಕಾಡು ಹಂದಿ, ತೋಳ, ನರಿ, ಮೊಲ, ಜಿಂಕೆಗಳು ಬಿತ್ತಿದ ಬೀಜವನ್ನೇ ಅಗೆದು ತಿನ್ನುತ್ತವೆ, ಕಾಡುಹಂದಿಗಳಂತೂ ಬಿತ್ತಿದ ಸಾಲುಗುಂಟ ಮುಖದಲ್ಲಿ ಗುದ್ದುತ್ತ ಎಲ್ಲವನ್ನು ತಿಂದು ಹಾಕುತ್ತವೆ. ಇನ್ನು ಬೆಳೆದ ಪೈರನ್ನು ಕೂಡಾ ಜಮೀನಿಗೆ ನುಗ್ಗಿ ನಾಶ ಮಾಡಿ ರೈತರಿಗೆ ತೊಂದರೆ ಉಂಟು ಮಾಡುತ್ತವೆ, ಹೀಗಾಗಿ ಜಮೀನು ಸುತ್ತಲೂ ಸೀರೆ ಸಿಂಗಾರ ಮಾಡಿದ್ದಾರೆ.

  ಇದನ್ನೂ ಓದಿ: ಬೀದರ್​​ನಲ್ಲಿ ನಿತ್ಯ ಕೋತಿಗಳ ಕಾಟಕ್ಕೆ ಬೆಳೆಗಳು ಹಾಳು..ರೈತರು ಕಂಗಾಲು!

  ರೈತರ ‌ಮಾಸ್ಟರ್ ಪ್ಲಾನ್ ಭಾರಿ ಎಫೆಕ್ಟ್ ಆಗಿದೆ. ಸೀರೆ ಶೃಂಗಾರ ದಿಂದ ಕಾಡು ಪ್ರಾಣಿಗಳ ಉಪಟಳ ತಪ್ಪಿದೆ. ಜೋರಾದ ಗಾಳಿಗೆ ಪಟ ಪಟನೆ ಸದ್ದು ಮತ್ತು ಮನುಷ್ಯರು ಇರುವ ಬಗ್ಗೆ ಪ್ರಾಣಿಗಳಿಗೆ ಸಂದೇಹ ಉಂಟಾಗಿ ಸೀರೆ ಹಾಕಿದರೊಂದ ಜಮೀನುಗಳತ್ತ ಕಾಡು ಪ್ರಾಣಿಗಳು ಸುಳಿಯುತ್ತಿಲ್ಲ. ಹೀಗಾಗಿ ಬೆಳೆದ ನಿಂತ ಕಬ್ಬು ರೈತರ ಕೈಗೆ ಬರುವ ಹಂತದಲ್ಲಿದೆ, ಇಲ್ಲವಾದರೆ ಯಾವ ಬೆಳೆಯೂ ರೈತರಿಗೆ ಸರಿಯಾಗಿ ಬರುತ್ತಿರಲಿಲ್ಲ, ಬೆಳೆ ಹಾಕಿಯೂ ಹಾಕದಂತಾಗುತ್ತಿತ್ತು,  ಬೆಳೆಗಳ ರಕ್ಷಣೆಗೆ ರೈತರೇ ಕಂಡು ಕೊಂಡ ವಿನೂತನ ಪ್ರಯೋಗ...

  ರೈತರು ತಮ್ಮ ಮನೆಯ ಹೆಣ್ಣು ಮಕ್ಕಳ ಹಳೆಯ ಸೀರೆಗಳನ್ನು ತಂದು ಸುತ್ತಲೂ ಹಾಕಿದ್ದಾರೆ.ಇದರಿಂದ ಲಕ್ಷಾಂತರ ರೂಪಾಯಿ ಬೆಳೆಗಳು ಕೈಗೆ ಬರುವದಿಲ್ಲ. ಹೀಗಾಗಿ ಈ ಸೀರೆಗಳನ್ನು ತಂದು ಹಾಕಿದ್ದಾರೆ. ಅರಣ್ಯ ಇಲಾಖೆಯ ಕೂಡಲೆ ರೈತರಿಗೆ ಕೈ ಜೋಡಿಸಬೇಕೆಂದು ರೈತರ ಒತ್ತಾಸೆ .

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  ವರದಿ: ಚಮನ್​ ಹೊಸಮನಿ
  Published by:Kavya V
  First published: