ಭೂ ಸುಧಾರಣಾ ಕಾಯ್ದೆ ವಿರುದ್ದ ಚಿಕ್ಕೋಡಿಯಲ್ಲಿ ರಸ್ತೆಗಿಳಿದ ರೈತರು ; ಗಾಂಜಾ, ಅಫೀಮು ಬೆಳೆಯುವ ಕಾಯ್ದೆಗೆ ರೈತರ ಆಗ್ರಹ
ರೈತರು ಸದಾಕಾಲ ಬೆಲೆ ಇಲ್ಲದ ಬೆಳೆಗಳನ್ನ ಬೆಳೆದು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾನೆ. ಆದರೆ, ರಾಜಕೀಯ ನಾಯಕರು ಮಾತ್ರ ರೈತರಿಗೆ ಮಾರಕ ವಾಗುವಂತಹ ಕಾಯ್ದೆಗಳನ್ನ ರಚಿಸುತ್ತಿದ್ದಾರೆ. ಇದರಿಂದ ನಮಗೇನು ಲಾಭ ಇಲ್ಲಾ
ಚಿಕ್ಕೋಡಿ(ಸೆಪ್ಟೆಂಬರ್. 25): ಕೇಂದ್ರ ಸರ್ಕಾರ ತಂದಿರುವ ಭೂಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ಇಂದು ರಾಜ್ಯಾದ್ಯಂತ ರೈತ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಮೊದಲು ರಾಜ್ಯ ಬಂದ್ ಗೆ ಕರೆ ನೀಡಿದ್ದ ಸಂಘಟನೆಗಳು ಬಳಿಕ ಅಲ್ಲಲ್ಲಿ ಪ್ರತಿಭಟನೆ ನಡೆಸಿ ರಸ್ತಾ ರೋಕೊ ಚಳುವಳಿ ಮಾಡಿದ್ದಾರೆ. ಕೇಂದ್ರ ರಾಜ್ಯ ಸರ್ಕಾರಗಳು ಜಾರಿಗೆ ಮಾಡಲು ಹೊರಟಿರುವ ಎಪಿಎಂಸಿ ಖಾಯಿದೆ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಶ್ರೀಘ್ರವೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಇವತ್ತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಚಿಕ್ಕೋಡಿ, ಅಥಣಿ, ಹುಕ್ಕೇರಿ, ಮತ್ತು ರಾಯಭಾಗ ಭಾಗದ ರೈತರು ಪ್ರತಿಭಟನೆ ಮಾಡಿದರು. ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ರೈತರು ಕೂಡಲೇ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಈ ಕಾಯ್ದೆ ತರುವ ಮೂಲಕ ರೈತರ ದೀವಾಳಿ ಮಾಡಲು ಹೊರಟಿದೆ. ಕಾಯ್ದೆ ಬಂದರೆ ರೈತರು ತಮ್ಮ ಭೂಮಿಗಳನ್ನ ಮನಸ್ಸಿಲ್ಲದಿದ್ದರು ಒತ್ತಾಯ ಪೂರ್ವಕ ನೀಡುವಂತ ಅನಿವಾರ್ಯತೆ ಎದುರಾಗಲಿದೆ. ಕಾಯಿದೆ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ರೈತರ ಭೂಮಿಯನ್ನ ಸಿರಿವಂತರು ತಮ್ಮ ಕೆಲಸಕ್ಕೆ ವಶ ಪಡಿಸಿಕೊಳ್ಳುವಂತಹ ಸನ್ನಿವೇಶಗಳು ಬರಲಿವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಚಿವ ಬಿ.ಸಿ ಪಾಟೀಲ್ ವಿರುದ್ದ ವಾಗ್ದಾಳಿ:
ಕೃಷಿ ಸಚಿವ ಬಿ ಸಿ ಪಾಟೀಲ್ ವಿರುದ್ದ ರೈತರು ಹರಿಹಾಯ್ದಿದ್ದಾರೆ ರೈತರ ವಿಚಾರದಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡುವುದನ್ನ ಮೊದಲು ಬಿಡಬೇಕು. ಇಲ್ಲದಿದ್ದರೆ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಪ್ರಾರಂಭಿಸಬೇಕು. ಸಚಿವ ಬಿಸಿ ಪಾಟೀಲ್ ರೈತರ ಕ್ಷಮೆ ಕೇಳದೆ ಇದ್ದರೆ ಸಚಿವ ಬಿ ಸಿ ಪಾಟೀಲ್ ಅವರ ರಾಜೀನಾಮೆ ನೀಡುವಂತೆ ರಾಜ್ಯಾದ್ಯಂತ ರೈತ ಚಳುವಳಿ ನಡೆಸಲು ಮುಂದಾಗುತ್ತೇವೆ ಎಂದು ರೈತ ಮುಖಂಡ ತ್ಯಾಗರಾಜ ಕದಂ ಎಚ್ಚರಿಕೆ ನೀಡಿದ್ದಾರೆ.
ಗಾಂಜಾ ಹಾಗೂ ಅಫೀಮು ಬೆಳೆಯಲು ಅವಕಾಶ ನೀಡಿ
ರೈತರು ಸದಾಕಾಲ ಬೆಲೆ ಇಲ್ಲದ ಬೆಳೆಗಳನ್ನ ಬೆಳೆದು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾನೆ. ಆದರೆ, ರಾಜಕೀಯ ನಾಯಕರು ಮಾತ್ರ ರೈತರಿಗೆ ಮಾರಕ ವಾಗುವಂತಹ ಕಾಯ್ದೆಗಳನ್ನ ರಚಿಸುತ್ತಿದ್ದಾರೆ. ಇದರಿಂದ ನಮಗೇನು ಲಾಭ ಇಲ್ಲಾ. ಬದಲಾಗಿ ನಮಗೆ ಗಾಂಜಾ ಹಾಗೂ ಅಫೀಮು ಬೆಳೆಯಲು ಅವಕಾಶ ನೀಡುವಂತ ಕಾಯ್ದೆ ರಚನೆ ಮಾಡಲಿ.
ರೈತ ಸಂಕಷ್ಟದಲ್ಲಿ ಇದ್ದರೂ ಬೆಳೆ ಪರಿಹಾರ ಇಲ್ಲಾ ಕಬ್ಬಿನ ಬಾಕಿ ಬಿಲ್ಲ ಕೊಡುತ್ತಿಲ್ಲಾ. ರೈತರ ಸಾಲ ಮನ್ನಾವನ್ನು ಮಾಡುತ್ತಿಲ್ಲ. ನಾವೇ ಮುಂದೆ ಬಂದು ಅಫೀಮು ಮತ್ತು ಗಾಂಜಾ ಬೆಳೆಗಳನ್ನ ಬೆಳೆಯುತ್ತಿವೆ. ಇವರನ್ನ ಕೇಳುವುದು ಇಲ್ಲಾ ಎಂದು ರೈತ ರಾಜ್ಯ ಸಂಚಾಲಕ ಗಣೇಶ್ ಇಳೆಗೇರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಒಟ್ಟಿನಲ್ಲಿ ಬರುವ 28 ರಂದು ಮತ್ತೊಮ್ಮೆ ರಾಜ್ಯ ಬಂದ್ ಗೆ ರೈತ ಸಂಘಟನೆಗಳು ಕರೆ ಕೊಟ್ಟಿದ್ದು ರಾಜ್ಯದ ರೈತ ಹಾಗೂ ವಿವಿಧ ಸಂಘಟನೆಗಳು ಈ ಬಂದ್ ನಲ್ಲಿ ಭಾಗಿಯಾಗಲಿವೆ. 28 ರಂದು ರಾಜ್ಯದ ಎಲ್ಲಾ ಮೂಲೆಗಳಲ್ಲಿ ಪ್ರತಿಭಟನೆ ನಡೆಸಿ ಬಂದ್ ಮಾಡುವುದರ ಜೊತೆಗೆ ರಾಜ್ಯ ಹಾಗೂ ರಾಷ್ಟ್ರೀಯ ಹೇದ್ದಾರಿಗಳನ್ನ ಬಂದ್ ಮಾಡುವುದಾಗಿ ರೈತರು ತಿಳಿಸಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ