HOME » NEWS » District » FARMERS OF GADAG WARY OF DUPLICATE SEEDS ALLEGEDLY IMPORTED FROM CHINA SNVS

ಚೀನಾದಿಂದ ನಕಲಿ ಬಿತ್ತನೆ ಬೀಜ ಮನೆಮನೆಗೆ ಪಾರ್ಸಲ್ ಬರಬಹುದು ಹುಷಾರ್..! ಕೃಷಿ ಇಲಾಖೆ ಎಚ್ಚರದಿಂದ ರೈತರು ಕಂಗಾಲು

ಚೀನಾದಿಂದ ಬಂದಿದೆಯಾ ನಕಲಿ ಬಿತ್ತನೆ ಬೀಜ..? ಮನೆಮನೆಗೆ ಪಾರ್ಸಲ್ ಬರುತ್ತಂತೆ ಬೀಜ...! ಎಚ್ಚರವಾಗಿರುವಂತೆ ರೈತರಿಗೆ ಅಧಿಕಾರಿಗಳ ಸೂಚನೆ..! ಈ ಬಗೆಯ ಮಾತುಗಳೀಗ ಗದಗ ಜಿಲ್ಲಾದ್ಯಂತ ಓಡಾಡುತ್ತಿದೆ.

news18-kannada
Updated:August 26, 2020, 2:49 PM IST
ಚೀನಾದಿಂದ ನಕಲಿ ಬಿತ್ತನೆ ಬೀಜ ಮನೆಮನೆಗೆ ಪಾರ್ಸಲ್ ಬರಬಹುದು ಹುಷಾರ್..! ಕೃಷಿ ಇಲಾಖೆ ಎಚ್ಚರದಿಂದ ರೈತರು ಕಂಗಾಲು
ಗದಗ್​ನ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ
  • Share this:
ಗದಗ: ಸಂಕಷ್ಟದಲ್ಲಿರೋ ಅನ್ನದಾತನಿಗಿಗ ಮತ್ತೊಂದು ತೊಂದರೆ ಎದುರಾಗಿದೆ. ಮಾರುಕಟ್ಟೆಗೆ ನಕಲಿ ಬಿತ್ತನೆ ಬೀಜ ಲಗ್ಗಯಿಟ್ಟಿದೆ ಎನ್ನೋ ಮಾತುಗಳು ರೈತಾಪಿ ವರ್ಗವನ್ನೀಗ ಕಾಡ್ತಿದೆ. ಚೀನಾದಿಂದ ಅಕ್ರಮವಾಗಿ ನಕಲಿ ಜೈವಿಕ ಬಿತ್ತನೆ ಬೀಜಗಳು ಆಮದಾಗಿದ್ದು, ಜನರು ಎಚ್ಚರದಿಂದಿರಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿರುವುದು ಹಾಗೂ ಕೃಷಿ ಇಲಾಖೆ ಕೂಡ ಎಚ್ಚರಿಸಿರುವುದು ರೈತರ ನಿದ್ದೆಗೆಡಿಸಿದೆ.

ಕೊರೋನಾದಂತ ರೋಗವನ್ನು ಇಡೀ ಪ್ರಪಂಚಕ್ಕೆ ಹರಡುವಂತೆ ಮಾಡಿರೋ ಚೀನಾ ಈಗ ಜೈವಿಕ ಬಿತ್ತನೆ ಬೀಜಗಳನ್ನು ಭಾರತೀಯ ರೈತರ ಮನೆಗೆ ಪಾರ್ಸಲ್ ಕಳಿಸುತ್ತಿದೆಯಂತೆ. ಹೀಗಾಗಿ ರೈತ ವರ್ಗ ಎಚ್ಚರಿಕೆಯಿಂದಿರಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಚೀನಾದ ಈ ಕೃತ್ಯವನ್ನೀಗ ಗದಗ ಜಿಲ್ಲೆಯ ರೈತರು ಖಂಡಿಸ್ತಿದ್ದಾರೆ. ಯಾವುದೇ ರೈತರು ಈ ಬಗೆಯ ಬಿತ್ತನೆ ಬೀಜಗಳ ವಿಚಾರದಲ್ಲಿ ಎಚ್ಚರಿಕೆಯಿಂದಿರಲು ಮನವಿ ಮಾಡಿದ್ದಾರೆ. ಜೊತೆಗೆ ಇಂತಹ ಬಿತ್ತನೆ ಬೀಜಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯ ರಾಯಬಾಗದ ನಿರಾಶ್ರಿತರ ಕಾಲೊನಿಯಲ್ಲಿ ಮೂಲಸೌಕರ್ಯವಿಲ್ಲದೆ ಜನರ ಪರದಾಟ, ಪ್ರತಿಭಟನೆ

ಕೃಷಿ ಇಲಾಖೆ ಅಧಿಕಾರಿಗಳೂ ಸಹ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಮಗೂ ಸಹ ಈ‌ ಬಗ್ಗೆ ಎಚ್ಚರಿಕೆ ನೋಟಿಸ್ ಬಂದಿದೆ. ಯಾವುದೇ ರೈತರು ಅನಾಮಧೇಯ ವ್ಯಕ್ತಿಗಳಿಂದ ಬಿತ್ತನೆ ಬೀಜಗಳ ಪಾರ್ಸಲ್ ಬಂದರೆ ಕೃಷಿ ಇಲಾಖೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ವಿನಂತಿಸಿದ್ದಾರೆ. ಈ ಬಗೆಯ ಜೈವಿಕ ಬಿತ್ತನೆ‌ ಬೀಜಗಳಿಂದ ಹಲವು ಬಗೆಯ ತೊಂದರೆಯುಂಟಾಗಬಹುದು. ವೈರಲ್ ರೋಗಗಳೂ ಸಹ ಹರಡುವ ಸಾಧ್ಯತೆಗಳು ಇರುವ ಹಿನ್ನೆಲೆ ಇವುಗಳಿಂದ ಎಚ್ಚರಿಕೆಯಿಂದಿರಲು ವಿನಂತಿಸಿದ್ದಾರೆ.

Youtube Video


ಮೊದಲೇ ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೀಗ ಈ ಡೂಪ್ಲಿಕೇಟ್ ಬಿತ್ತನೆ ಬೀಜದ ಮಾಹಿತಿ ಆತಂಕಕ್ಕೀಡುಮಾಡಿದೆ. ಏನೇ ಆಗಲಿ ರೈತಾಪಿ ವರ್ಗ ಈ ನಕಲಿ ಜೈವಿಕ ಬಿತ್ತನೆ ಬೀಜದ ವಿಚಾರದಲ್ಲಿ ಎಚ್ಚರಿಕೆಯಿಂದಿರುವ ಅವಶ್ಯಕತೆ ಇದೆ.

ವರದಿ: ಸಂತೋಷ ಕೊಣ್ಣೂರ
Published by: Vijayasarthy SN
First published: August 26, 2020, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories