HOME » NEWS » District » FARMERS LOAN WAIVER PLAN STOPPED BECAUSE OF CORONA LOCK DOWN EFFECT LG

ಲಾಕ್​ಡೌನ್​ ಸಂಕಷ್ಟದಿಂದ ಸ್ಥಗಿತಗೊಂಡ ರೈತರ ಸಾಲಮನ್ನಾ ಯೋಜನೆ

ಇಲ್ಲಿಯವರೆಗೂ 63,442 ರೈತರಿಗೆ 455.44 ಕೋಟಿ ರೂಪಾಯಿ ರೈತರ ಖಾತೆಗೆ ಜಮಾ ಆಗಿದೆ. ಇನ್ನೂ 2451 ರೈತರಿಗೆ ಸಾಲಮನ್ನಾ ಆಗಿಲ್ಲ. ಹಿಂದಿನ ಸರಕಾರದ ಸಾಲಮನ್ನಾ ಯೋಜನೆಯನ್ನು ಮುಂದುವರಿಸುವುದಾಗಿ ಯಡಿಯೂರಪ್ಪ ಹೇಳಿದ್ದರೂ, ಅರ್ಹತೆ ಹೊಂದಿರುವ ರೈತರಿಗೆ ಸಾಲಮನ್ನಾವಾಗದೆ ಇರುವುದರಿಂದ ರೈತರು ಸಾಲಮನ್ನಾಕ್ಕಾಗಿ ಆಗ್ರಹಿಸುತ್ತಿದ್ದಾರೆ.

news18-kannada
Updated:July 17, 2020, 5:54 PM IST
ಲಾಕ್​ಡೌನ್​ ಸಂಕಷ್ಟದಿಂದ ಸ್ಥಗಿತಗೊಂಡ ರೈತರ ಸಾಲಮನ್ನಾ ಯೋಜನೆ
ಸಾಂದರ್ಭಿಕ ಚಿತ್ರ
  • Share this:
ರಾಯಚೂರು(ಜು.17): ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ರೈತರ ಸಾಲಮನ್ನಾ ಮಾಡುವ ಘೋಷಣೆ ಬಗ್ಗೆ ತೀವ್ರ ಚರ್ಚೆಯಾಗಿತ್ತು. ಕುಮಾರಸ್ವಾಮಿ ಸರಕಾರ ಹೋಗಿ ಈಗ ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತಾ ಬಂತು ಆದರೂ ಸಾಲಮನ್ನಾಕ್ಕೆ ಅರ್ಹತೆ ಹೊಂದಿದ ಅರ್ಹ ರೈತರ  ಸಾಲಮನ್ನಾವಾಗಿಲ್ಲ. ಈ ಮಧ್ಯೆ ಕೊರೋನಾ ತಡೆ ಹಾಗೂ ಲಾಕ್ ಡೌನ್ ಸಂಕಷ್ಟ ಹಿನ್ನಲೆಯಲ್ಲಿ ಸದ್ಯ ಸಾಲಮನ್ನಾ ಯೋಜನೆ ಸ್ಥಗಿತಗೊಂಡಿದೆ.

2017-18ನೇ ಸಾಲಿನಲ್ಲಿ ರಾಜ್ಯ ಸರಕಾರವನ್ನು ಮುನ್ನಡೆ ಸಿದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ರೈತರ ಸಾಲಮನ್ನಾ ಮಾಡುವ ಯೋಜನೆ ತೀವ್ರ ಚರ್ಚೆಯಾಗಿತ್ತು. 2009 ರಿಂದ 2018ರೊಳಗಿನ ಸಹಕಾರಿ ಹಾಗೂ 2 ಲಕ್ಷ ರೂಪಾಯಿಯವರೆಗಿನ‌ ವಾಣಿಜ್ಯ ಬ್ಯಾಂಕುಗಳಲ್ಲಿಯ ರೈತರ ಸಾಲವನ್ನು ಮನ್ನಾ ಮಾಡುವ ಯೋಜನೆ ಘೋಷಣೆ ಮಾಡಿದರು. 2019ರಲ್ಲಿ ಕುಮಾರಸ್ವಾಮಿ ಸರಕಾರ ಹೋಗಿ ಈಗ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿದ್ದು ಅಂದಿನ ಸಾಲಮನ್ನಾ ಯೋಜನೆ ಇನ್ನೂ ಪೂರ್ಣವಾಗಿಲ್ಲ.

ರಾಯಚೂರು ಜಿಲ್ಲೆಯಲ್ಲಿ ಒಟ್ಟು 190 ಬ್ಯಾಂಕುಗಳಿಂದ 91,939 ರೈತರು ಒಟ್ಟು 1471 ಕೋಟಿ ರೂಪಾಯಿಯ ವಿವಿಧ ರೀತಿಯ ಸಾಲವನ್ನು ಪಡೆದಿದ್ದಾರೆ. ಸಹಕಾರಿ ಬ್ಯಾಂಕುಗಳಲ್ಲಿ ಸಾಲಮನ್ನಾ ಆಗಿದ್ದರಿಂದ ಸಹಕಾರಿ ಬ್ಯಾಂಕು ಜಿಲ್ಲೆಯಲ್ಲಿ 73951  ರೈತರಿಗೆ 568 ಕೋಟಿ ರೂಪಾಯಿ ಸಾಲಮನ್ನಾ ಯೋಜನೆಯ ವ್ಯಾಪ್ತಿಯಲ್ಲಿತ್ತು. ಆದರೆ ಸರಕಾರ ಬೆಳೆಸಾಲ ಮನ್ನಾ ಮಾತ್ರ ಮಾಡಿದ್ದರಿಂದ ಜಿಲ್ಲೆಯಲ್ಲಿ ಬೆಳೆಸಾಲ ಪಡೆದ 65,923 ರೈತರಿಗೆ 512 ಕೋಟಿ ರೂಪಾಯಿ ಸಾಲಮನ್ನಾ ಮಾಡಲು ಮುಂದಾಗಿದೆ.

ಬುಡಕಟ್ಟು ಜನಾಂಗದ ಮಕ್ಕಳಿಗೆ ಆನ್​ಲೈನ್​ ಇಂಗ್ಲಿಷ್​ ಪಾಠ; ಮೈಸೂರಿನ ಶಿಕ್ಷಕಿಯ ಧ್ವನಿಗೆ ಕಿವಿಯಾಗುತ್ತಾರೆ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು

ಅದರಲ್ಲಿ ರೈತರ ಬ್ಯಾಂಕ್ ಖಾತೆ, ಪಹಣಿಯಲ್ಲಿ ಹೆಸರು ಬೇರೆ ಬೇರೆಯಾಗಿರುವುದು, ಬ್ಯಾಂಕು ಖಾತೆಗೆ ಆಧಾರ ಲಿಂಕ್ ಆಗದೆ ಇರುವುದು, ಕೆಲವು ರೈತರು ಬೇರೆಡೆ ಹೋಗಿರುವುದು, ಹೀಗೆ ಹಲವಾರು ಕಾರಣಕ್ಕಾಗಿ ಈ ಇಲ್ಲಿಯವರೆಗೂ 63,442 ರೈತರಿಗೆ 455.44 ಕೋಟಿ ರೂಪಾಯಿ ರೈತರ ಖಾತೆಗೆ ಜಮಾ ಆಗಿದೆ. ಇನ್ನೂ 2451 ರೈತರಿಗೆ ಸಾಲಮನ್ನಾ ಆಗಿಲ್ಲ. ಹಿಂದಿನ ಸರಕಾರದ ಸಾಲಮನ್ನಾ ಯೋಜನೆಯನ್ನು ಮುಂದುವರಿಸುವುದಾಗಿ ಯಡಿಯೂರಪ್ಪ ಹೇಳಿದ್ದರೂ, ಅರ್ಹತೆ ಹೊಂದಿರುವ ರೈತರಿಗೆ ಸಾಲಮನ್ನಾವಾಗದೆ ಇರುವುದರಿಂದ ರೈತರು ಸಾಲಮನ್ನಾಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ ಬಾಬು ಬಳಗಾನೂರರನ್ನು  ಕೇಳಿದರೆ ಸಾಲಮನ್ನಾ ಯೋಜನೆ ಇನ್ನೂ ಚಾಲ್ತಿಯಲ್ಲಿದೆ. ರೈತರ ಪಹಣಿ, ಆಧಾರ ಸಂಖ್ಯೆ ಬ್ಯಾಂಕಿನಲ್ಲಿ ಜೋಡಣೆಯಾಗದೆ ಇರುವುದರಿಂದ ಉಳಿದ ರೈತರಿಗೆ ಸಾಲಮನ್ನಾವಾಗಿಲ್ಲ. ಈಗ ಕೊರೋನಾ ತಡೆಗಾಗಿ ಸರಕಾರ ಬ್ಯುಸಿಯಾಗಿರುವದರಿಂದ ಉಳಿದ ಹಣ ಬಿಡುಗಡೆಯಾಗಿಲ್ಲ. ಕೊರೋನಾ ಗೊಂದಲ ಮುಗಿದ ನಂತರ ಮತ್ತೆ ಸಾಲಮನ್ನಾ ಹಣವನ್ನು ರೈತರಿಗೆ ನೀಡಬಹುದಾಗಿದೆ ಎಂದು ಹೇಳಿದ್ದಾರೆ.
ಕೊರೋನಾ ಲಾಕ್ ಡೌನ್ ನಂತರ ಸರಕಾರ ಆರ್ಥಿಕ ಮುಗ್ಗಟ್ಟಿನಲ್ಲಿದ್ದು, ಈ ಸಂದರ್ಭದಲ್ಲಿ ಹಿಂದಿನ‌ ಸರಕಾರದ ಯೋಜನೆಯನ್ನು ಮುಂದುವರಿಸುವುದು ಕಷ್ಟ ಎನ್ನಲಾಗುತ್ತಿದೆ. ಈಗಾಗಲೇ ಸಾಲಮನ್ನಾವಾದ ರೈತರು ಖುಷಿಪಡುತ್ತಿದ್ದಾರೆ. ನಾನಾ ಕಾರಣಕ್ಕಾಗಿ ಸಾಲಮನ್ನಾವಾಗದೆ ಇರುವ ರೈತರು ನಿರಾಸೆಯಾಗುತ್ತಿದ್ದಾರೆ.
Published by: Latha CG
First published: July 17, 2020, 5:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories