ಕೇಂದ್ರ ಸರ್ಕಾರ ಅಭಿವೃದ್ಧಿಯನ್ನು ಬದಿಗಿಟ್ಟು ಜನರಿಗೆ ಧರ್ಮದ ಅಫೀಮನ್ನು ತುಂಬುತ್ತಿದೆ; ರಾಕೇಶ್ ಟಿಕಾಯತ್ ಆರೋಪ

ಭಾರತದ ಕೃಷಿ ಕ್ಷೇತ್ರದಲ್ಲಿ ಅನೇಕ ಕಂಪನಿಗಳು ನುಗ್ತಿವೆ. ಈ ಮೂರು ಕಾನೂನಿನ ತಿರುಳು ಕೂಡ ಅದೆ ಆಗಿದೆ. ಈ ಮೂರು ಕೃಷಿ ಕಾನೂನುಗಳನ್ನು ನಾವು ತಡೆದು ನಿಲ್ಲಿಸಬೇಕಿದೆ ಎಂದು ರಾಕೇಶ್ ಟಿಕಾಯತ್​ ತಿಳಿಸಿದ್ದಾರೆ.

ಹಾವೇರಿಯ ರೈತ ಮಹಾ ಪಂಚಾಯತ್​.

ಹಾವೇರಿಯ ರೈತ ಮಹಾ ಪಂಚಾಯತ್​.

  • Share this:
ಹಾವೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನ ವಿರೋಧಿಸಿ ಹಾವೇರಿಯಲ್ಲಿ ರೈತರ ಮಹಾ ಪಂಚಾಯತ್ ಸಮಾವೇಶ ನಡೆಯಿತು. ಹಾವೇರಿ ಮುನಿಸಿಪಲ್ ಮೈದಾನದಲ್ಲಿ ನಡೆದ ರೈತ ಮಹಾ ಪಂಚಾಯತ್ ಸಮಾವೇಶವನ್ನ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಕಾರ್ಯದರ್ಶಿ ಯುದ್ಧವೀರ ಸಿಂಗ್ ದೀಪ ಬೆಳಗುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಸಮಾವೇಶದಲ್ಲಿ ದೆಹಲಿ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಮಾತನಾಡಿದ ರಾಷ್ಟ್ರೀಯ ರೈತ ನಾಯಕ ಯುದ್ದವೀರ್ ಸಿಂಗ್, "ಮೂರು ಕಾನೂನುಗಳು ಜಾರಿಯಾದರೆ ರೈತರು ನಾಶ ಆಗುತ್ತಾರೆ. ರೈತರು ನಾಶವಾದರೆ ಕೂಲಿ ಕಾರ್ಮಿಕರು ನಾಶವಾಗುತ್ತಾರೆ. ಇದರ ಜೊತೆಗೆ ಸಣ್ಣ ಅನೇಕ ವರ್ಗದ ಜನರು ನಾಶವಾಗುತ್ತಾರೆ.‌ ದೇಶದಲ್ಲಿ ದುಡಿಯುವ ಮತ್ತು ಲೂಟಿಕೋರರ ವರ್ಗ ಎರಡೆ ಇದೆ. ಈಗ ಈ ಎರಡೂ ವರ್ಗಗಳ‌ ನಡುವೆ ಸಂಘರ್ಷ ನಡೆದಿದೆ. ಕೇಂದ್ರದ ಈ ಸರಕಾರ ಈಡಿ ದೇಶವನ್ನೆ ಮಾರಾಟ ಮಾಡಲು ಹೊರಟಿದೆ" ಎಂದು ಆರೋಪಿಸಿದ್ದಾರೆ.

"ಕೇಂದ್ರ ಸರ್ಕಾರ ಧರ್ಮದ ಅಫೀಮಿನ‌ ಬಗ್ಗೆ ಮಾತನಾಡ್ತಿದ್ದಾರೆ. ರೈತರ ರಾಮ ಅವರ ಕಾಯಕ, ಅವರ ಮನೆ ಮತ್ತು ಮನಸ್ಸಿನಲ್ಲಿದ್ದಾನೆ. ಈಡಿ ದೇಶದಾದ್ಯಂತ ಆಂದೋಲನ ಮಾಡಬೇಕಿದೆ. ದೆಹಲಿಯಂತೆ ಬೆಂಗಳೂರು ಸುತ್ತುವರೆದು ಎಲ್ಲ ಕಡೆ ಹೋರಾಟ‌ ಮಾಡಬೇಕು. ರೈತರ ಹೋರಾಟಕ್ಕೆ ಸರಕಾರ ಮಣಿಯಲೇಬೇಕು. ಆ ರೀತಿ ಹೋರಾಟ ಮಾಡಬೇಕು" ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ರಾಕೇಶ್ ತಿಕಾಯಿತ್ ಮಾತನಾಡಿ, "ದೆಹಲಿಯಲ್ಲಿ ನಡಿತಿರೋ ಹೋರಾಟ ಎಷ್ಟು ಕಾಲ ಮುಂದುವರೆಸಬೇಕು ಎಂಬುದು ಗೊತ್ತಿಲ್ಲ. ಸರಕಾರ ರೈತರ ಜೊತೆಗೆ ಮಾತನಾಡುತ್ತಿಲ್ಲ. ಹೆಸರಿಗೆ ಮಾತ್ರ ಒಂದು ಪಕ್ಷದ ಸರಕಾರ ಇದೆ. ವಾಸ್ತವವಾಗಿ ಈ ಸರಕಾರ ಬಂಡವಾಳದಾರರ ಕೈಯಲ್ಲಿ ಸಿಲುಕಿದೆ. ಕಿಸಾನ್ ಕ್ರಾಂತಿ ಗೇಟ್ ನಲ್ಲಿ ನಾವು ಕುಳಿತಿರೋ ಜಾಗದಲ್ಲಿ ಶಸ್ತ್ರಾಸ್ತ್ರಗಳನ್ನ ತಯಾರು ಮಾಡೋ ಕಂಪನಿ ಇದೆ. ಸರಕಾರದ ಅಧೀನದಲ್ಲಿರೋ ಆ ಕಂಪನಿಯನ್ನ ಸರಕಾರ ಮಾರಲು ಹೊರಟಿದೆ. ಇದರ ವಿರುದ್ಧ ಹೋರಾಟ ಮಾಡಿ ಕಂಪನಿ ರಕ್ಷಣೆ ಮಾಡೋ ಕೆಲಸ ನಾವು ಮಾಡುತ್ತಿದ್ದೇವೆ.

ಇದನ್ನೂ ಓದಿ: ಚಾಮರಾಜನಗರ: ಬೀಸಾಡಿದ ಬಾಟಲಿಗಳಲ್ಲಿ ನೀರು, ಆಹಾರಧಾನ್ಯ ಇಟ್ಟು ವಿಶ್ವ ಅರಣ್ಯ ದಿನಾಚರಣೆ

ಭಾರತದ ಕೃಷಿ ಕ್ಷೇತ್ರದಲ್ಲಿ ಅನೇಕ ಕಂಪನಿಗಳು ನುಗ್ತಿವೆ. ಈ ಮೂರು ಕಾನೂನಿನ ತಿರುಳು ಕೂಡ ಅದೆ ಆಗಿದೆ. ಈ ಮೂರು ಕಾನೂನುಗಳನ್ನು ನಾವು ತಡೆದು ನಿಲ್ಲಿಸಬೇಕಿದೆ. ನಾವೆಲ್ಲರೂ ನಮ್ಮ ನಮ್ಮಲ್ಲಿರೋ ಟ್ರ್ಯಾಕ್ಟರ್ ಗಳನ್ನ ಅಸ್ತ್ರಗಳನ್ನಾಗಿ ಬಳಸಬೇಕು. ಟ್ರ್ಯಾಕ್ಟರ್ ಗಳನ್ನ ನಾವು ಈಗ ಹೊರಗೆ ತರಬೇಕಾಗಿದೆ. ಟ್ರ್ಯಾಕ್ಟರ್ ಪ್ರತಿಭಟನೆ ಸಮಯದಲ್ಲಿ ಮಲಗೋಕೆ, ಬ್ಯಾರಿಕೇಡ್ ಗಳನ್ನ ಮುರಿಯೋಕೂ ಆಗುತ್ತೆ. ನಾವೆಲ್ಲರೂ ಈ ಕೆಲಸವನ್ನ ದೆಹಲಿಯಲ್ಲಿ ಮಾಡಿದರೆ, ನೀವು ಈ ಕೆಲಸವನ್ನ ಬೆಂಗಳೂರಲ್ಲಿ ಮಾಡಬೇಕು.

ಪ್ರಧಾನಿ ಹೇಳ್ತಿದ್ದಾರೆ ನಮ್ಮ ದೇಶದಲ್ಲಿರೋದು ಮುಕ್ತ ಮಾರುಕಟ್ಟೆ ಅಂತಾ, ನಮಗೆ ಮುಕ್ತ ಮಾರುಕಟ್ಟೆ ಇದೆ ಅನ್ನೋದಾದರೆ ನಾವು ಡಿಸಿ, ತಹಶೀಲ್ದಾರ ಕಚೇರಿಯಲ್ಲಿ ಮಾರಾಟ ಮಾಡೋ ಕೆಲಸ ಮಾಡಬೇಕಿದೆ. ನೀವೆ ಹೇಳಿದಂತೆ ನಾವು ಮುಕ್ತ ಮಾರುಕಟ್ಟೆಗೆ ತಂದಿದ್ದೇವೆ ಖರೀದಿಸಿ ಅಂತಾ ಹೇಳಬೇಕಿದೆ" ಎಂದು ವಾಗ್ದಾಳಿ ನಡೆಸಿದರು.
Published by:MAshok Kumar
First published: