ದೇಶದ ಜನ ಕೊರೋನಾ ಆತಂಕದಲ್ಲಿ ; ಕರಾವಳಿ ರೈತ ಮಾತ್ರ ನಿರ್ಭಿಡೆಯಿಂದ ಕೃಷಿ ಕಾಯಕದಲ್ಲಿ

ಒಂದು ಎಕರೆ ಭತ್ತದ ಗದ್ದೆ ಉಳುಮೆ ಮಾಡಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತಿದ್ದ ರೈತರು ಈಗ 2 ಗಂಟೆಯಲ್ಲಿ ಗದ್ದೆಯನ್ನು ಹದ ಮಾಡುತ್ತಿದ್ದಾರೆ.

news18-kannada
Updated:June 30, 2020, 7:00 AM IST
ದೇಶದ ಜನ ಕೊರೋನಾ ಆತಂಕದಲ್ಲಿ ; ಕರಾವಳಿ ರೈತ ಮಾತ್ರ ನಿರ್ಭಿಡೆಯಿಂದ ಕೃಷಿ ಕಾಯಕದಲ್ಲಿ
ಸಾಂದರ್ಭಿಕ ಚಿತ್ರ
  • Share this:
ಮಂಗಳೂರು(ಜೂ.29): ಕೊರೋನಾ ಆತಂಕದಿಂದ ಇಡೀ ದೇಶದ ಜನರೇ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡುತ್ತಿದ್ದರೆ, ದೇಶಕ್ಕೆ ಅನ್ನವುಣಿಸುವ ರೈತ ಮಾತ್ರ ತನ್ನ‌ ಕಾಯಕದಲ್ಲಿ ಮುಂದುವರಿದಿದ್ದಾನೆ‌‌. ಮುಂಗಾರು ಬಿರುಸು ಪಡೆಯುತ್ತಿದ್ದಂತೇ ಕರಾವಳಿಯಲ್ಲಿ ಬೇಸಾಯ ಚಟುವಟಿಕೆಗಳು ಚುರುಕು ಪಡೆದುಕೊಂಡಿದೆ. ಗ್ರಾಮೀಣ ಭಾಗದ ರೈತರು ಗದ್ದೆಯಲ್ಲಿ ಬೇಸಾಯ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಕೊರೋನಾಗೆ ಉದ್ಯಮಿಗಳು ತತ್ತರಗೊಂಡು, ಮಹಾನಗರಗಳೇ ಮಕಾಡೆ ಮಲಗಿದ್ದರೂ, ರೈತ ಮಾತ್ರ ಇದು ಯಾವುದರ ಗೋಜಿಲ್ಲದೆ, ದೇಶದ ಜನರಿಗೆ ಅನ್ನ ನೀಡುವ ಸೇವಾಕಾರ್ಯದಲ್ಲಿ ಮುಂದುವರಿದಿದ್ದಾನೆ. ಮುಂಗಾರುಮಳೆ ಚುರುಕಾದ ಬೆನ್ನಲ್ಲೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಗದ್ದೆಗಳಲ್ಲಿ ಬೇಸಾಯದ ಚಟುವಟಿಕೆ ಬಿರುಸು ಪಡೆದುಕೊಂಡಿದೆ.

ಪಾತಿಗಳಲ್ಲಿ ನೇಜಿ ತಯಾರಿಸಿದ್ದ ರೈತರು ಮಳೆ ಬಿದ್ದ ಹಿನ್ನಲೆಯಲ್ಲಿ ಗದ್ದೆಗಳನ್ನು ಹದ ಮಾಡಿ ನೇಜಿ ನಾಟಿ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತಿ ಹೆಚ್ಚಾಗಿ ಭತ್ತ ಬೆಳೆಯುವ ಸುಳ್ಯ, ಪುತ್ತೂರು ತಾಲೂಕುಗಳಲ್ಲಿ ಕೃಷಿ ಇಲಾಖೆಯ ಪ್ರಕಾರ 650 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೇಸಾಯ ಇದೆ. ಈ ವರ್ಷ ಆ ಪ್ರಮಾಣ ಕೊಂಚ ಹೆಚ್ಚಾಗಲಿದೆ.

ಕೊರೋನಾ ಹಿನ್ನಲೆಯಲ್ಲಿ ಊರಿಗೆ ಬಂದಿರುವವರು ಭತ್ತದ ಗದ್ದೆಗೆ ಇಳಿದು ಪ್ರಯೋಗ ಮಾಡುವ ಪ್ರಯತ್ನ ಮಾಡಲಿದ್ದಾರೆ. ಪರಿಣಾಮ ಹಡೀಲು ಬಿದ್ದಿದ್ದ ಗದ್ದೆಗಳಿಗೂ ಬೇಸಾಯದ ಭಾಗ್ಯ ಕೂಡಿ ಬಂದಿದೆ. ಪುತ್ತೂರು ತಾಲೂಕಿನ ಸವಣೂರು,ಕಾಣಿಯೂರು, ಕೊಂಬಾರು ಹಾಗೂ ಸುಳ್ಯದ ಗ್ರಾಮೀಣ ಭಾಗಗಳಲ್ಲಿ ಹಡೀಲು ಗದ್ದೆಗಳಲ್ಲಿ ಬೇಸಾಯದ ಕೆಲಸ ಶುರುವಾಗಲಿದೆ.

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ, ಪ್ರಸ್ತುತ ಲಾಕ್ ಡೌನ್ ಬಳಿಕ ಊರಲ್ಲೇ ಇರುವ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಪ್ರಶಾಂತ್ ಹೇಳುವ ಪ್ರಕಾರ, ಲಾಕ್ ಡೌನ್ ನಿಂದ ಕಂಪನಿಯ ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ನೀಡಲಾಗಿದೆ‌. ಲಾಕ್ ಡೌನ್ ಬಳಿಕ ಮನೆಯಲ್ಲೇ ಕೆಲಸ ಮಾಡುತ್ತಿದ್ದೇನೆ. ಈ ಬಾರಿ ನಮ್ಮ ಗದ್ದೆಯಲ್ಲೇ ಕೆಲಸ ಮಾಡಲು ತೀರ್ಮಾನಿಸಿದ್ದೇನೆ. ಮನೆಯವರ ಜೊತೆಗೂಡಿ ಕೃಷಿ ಕೆಲಸ ಖುಷಿ ನೀಡುತ್ತಿದೆ ಎನ್ನುತ್ತಾರೆ.

ಇದನ್ನೂ ಓದಿ :  ಜುಲೈ 31ರ ವರೆಗೆ ಸವದತ್ತಿ ರೇಣುಕಾ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ..!

ಪಾತಿಗಳಲ್ಲಿ ಭತ್ತದ ನೇಜಿ ತಯಾರಿಸಿರುವ ರೈತರು ಗದ್ದೆಗಳನ್ನು ಹದಮಾಡಿ ನೇಜಿ ನಾಟಿ ಮಾಡುತ್ತಿದ್ದಾರೆ. ಏಣೇಲು ಬೆಳೆಗೆ ಜಯ, ಜ್ಯೋತಿ ಮತ್ತಿತರ ತಳಿಗಳನ್ನು ಆಯ್ಕೆ ಮಾಡಿಕೊಳ್ಳವ ರೈತರು ಯಂತ್ರಗಳ ಸಹಾಯ ಪಡೆದು ನಾಟಿಯನ್ನು ಮಾಡುತ್ತಿದ್ದಾರೆ. ಕೆಲವರು ಸಾಂಪ್ರದಾಯಿಕ ರೀತಿಯಲ್ಲಿ ಕಾರ್ಮಿಕರ ಮೂಲಕ ನಾಟಿಗಿಳಿದಿದ್ದಾರೆ.

ಒಂದು ಎಕರೆ ಭತ್ತದ ಗದ್ದೆ ಉಳುಮೆ ಮಾಡಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತಿದ್ದ ರೈತರು ಈಗ 2 ಗಂಟೆಯಲ್ಲಿ ಗದ್ದೆಯನ್ನು ಹದ ಮಾಡುತ್ತಿದ್ದಾರೆ. ಯಂತ್ರ ಬಳಕೆ ಹೆಚ್ಚಾಗುತ್ತಿದೆ. ಕೃಷಿ ಇಲಾಖೆಯ ಯಂತ್ರಧಾರಾ ರೈತರ ಪಾಲಿಗೆ ವರದಾನವಾಗಿದೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading