ಬೀದರ್: ಸಾಲ, ಶೂಲ ಬಿತ್ತನೆ ಮಾಡಿದ ರೈತನ ಬೆಳೆಗಳಿಗೆ ಸದ್ಯ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದ್ದು, ಬೆಳೆ ಕಾಪಾಡಲು ಅನ್ನದಾತರು ಹರಸಹಾಸ ಪಡುವಂತಾಗಿದೆ. ಜಿಂಕೆ, ಕೃಷ್ಣಮೃಗಗಳು ಬೆಳೆಗಳನ್ನು ಸ್ವಹಾ ಮಾಡುವುದರಿಂದ ಕೈಗೆ ಬರುವ ತುತ್ತು ಬಾಯಿಗೆ ಬರದ ದುಸ್ಥಿತಿ ನಿರ್ಮಾಣವಾಗಿದೆ.ರೈತರ ಕಣ್ತಪ್ಪಿಸಿ ಹೊಲಕ್ಕೆ ನುಗ್ಗುವ ಜಿಂಕೆಗಳು ಬೆಳೆ ತಿಂದು ನಾಶಮಾಡುತ್ತಿವೆ. ಜಿಂಕೆಗಳ ಕಾಟದಿಂದ ಬೆಸತ್ತಿರುವ ರೈತರು ತಮ್ಮ ಬೆಳೆಯನ್ನು ಉಳಿಸಿಕೊಳ್ಳಲು ಪಡಬಾರದ ಕಷ್ಟ ಪಡುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಜಿಂಕೆ ಹಾಗೂ ಕೃಷ್ಣ ಮೃಗಗಳ ಸಂಖ್ಯೆ ಹೆಚ್ಚಾಗಿದೆ, ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 20 ಸಾವಿರಕ್ಕೂ ಅಧಿಕ ಜಿಂಕೆಗಳಿರಬಹುದೆಂದು ಅರಣ್ಯ ಇಲಾಖೆಯ ಅಕಾರಿಗಳು ಅಭಿಪ್ರಯವಾಗಿದೆ. ಇಂದು ಜಿಂಕೆಗಳು ರೈತರ ಪಾಲಿನ ಶಾಪವಾಗಿ ಪರಿಣಮಿಸಿವೆ ಹಿಂಡು ಹಿಂಡಾಗಿ ಹೊಲಗಳಿಗೆ ನುಗ್ಗುವ ಈ ಕಾಡು ಪ್ರಾಣಿಗಳು ಎಕರೆಗಟ್ಟಲೇ ಬೆಳೆಯನ್ನ ತಿಂದು ನಾಶ ಮಾಡಿಹೋಗುತ್ತಿವೆ. ಆದರೇ ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಅರಣ್ಯ ಇಲಾಖೆಯ ಅಕಾರಿಗಳು ಕೂಡಾ ಕಂಡು ಕಾಣದಂತೆ ಕುಳಿತುಬಿಟ್ಟಿದ್ದಾರೆ. ನಮ್ಮ ನೋವನ್ನ ಯಾರಿಗೆ ಹೇಳಬೇಕೆಂದು ಇಲ್ಲಿನ ರೈತರ ಅಳಲಾಗಿದೆ.
ಜಿಂಕೆಯನ್ನು ಹೊಡೆಯಲು ಬಾರದು, ಅವುಗಳನ್ನ ಹೆದರಿಸಲು ಬಾರದಂತಾ ಸ್ಥಿತಿ ನಮ್ಮಲ್ಲಿದೆ. ಒಂದು ವೇಳೆ ಏನಾದರೂ ನಾವೂ ಜಿಂಕೆಯನ್ನು ಹೊಡೆದರೇ ಇಲ್ಲವೋ ಅದು ಆಕಸ್ಮಿಕವಾಗಿಯೂ ಅದು ಮರಣಹೊಂದಿದರೂ ನಮ್ಮ ಮೇಲೆ ಕೇಸ್ ಹಾಕುವ ಬೆದರಿಕೆಯನ್ನ ಅರಣ್ಯ ಇಲಾಖೆಯವರು ಮಾಡುತ್ತಿದ್ದಾರೆ. ಜೊತೆಗೆ ಜಿಂಕೆಗಳು ನಮ್ಮ ಬೆಳೆಯನ್ನ ತಿಂದರೂ ಪರವಾಗಿಲ್ಲ ನಮ್ಮ ಬೆಳೆನಾಶವಾದರೇ ಅದಕ್ಕೆ ಅರಣ್ಯ ಇಲಾಖೆಯವರು ಪರಿಹಾರ ಕೊಡಬೇಕು ಎಂದು ಇಲ್ಲಿನ ರೈತರು ಕೇಳಿಕೊಳ್ಳುತ್ತಿದ್ದಾರೆ. ನಮ್ಮ ಬೆಳೆಯನ್ನ ಜಿಂಕೆಗಳಿಂದ ರಕ್ಷಿಸಿ ಎಂದು ಇಲ್ಲಿನ ರೈತರು ಅರಣ್ಯ ಇಲಾಖೆಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
Gold Price Discount: ಚಿನ್ನ ಕೊಳ್ಳುವವರಿಗೆ ಗುಡ್ ನ್ಯೂಸ್, ಭಾರೀ ಡಿಸ್ಕೌಂಟ್ನಲ್ಲಿ ಮಾರಾಟವಾಗ್ತಿದೆ ಬಂಗಾರ !
ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದು ಉದ್ದು, ಸೋಯಾ, ಬೆಳೆ ಚನ್ನಾಗಿ ಬಂದಿದೆ. ಪ್ರತಿಶತ 95 ರಷ್ಟು ಬೆಳೆ ಉತ್ತಮವಾಗಿ ಬಂದಿದ್ದು ಆ ಬೆಳೆಯನ್ನ ಉಳಿಸಿಕೊಳ್ಳಲು ರೈತರು ಕಷ್ಟ ಪಡುತ್ತಿದ್ದಾರೆ. ಉದ್ದು ಹೆಸರಿನ ಹೊಲಕ್ಕೆ ಗುಂಪಾಗಿ ದಾಳಿ ಮಾಡೋ ಜಿಂಕೆಗಳು ಬೆಳೆಯನ್ನ ತಿಂದು ಖಾಲಿ ಮಾಡುತ್ತಿವೆ. ಇನ್ನೂ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಾಳ, ರಾಜನಾಳ, ನಿಟ್ಟೂರು, ಗ್ರಾಮದಲ್ಲಂತೂ ಜಿಂಕೆಯ ಹಾವಳಿಯಿಂದ ರೈತರ ಕಂಗಾಲಾಗಿ ಹೋಗಿದ್ದಾರೆ.
ಈ ಗ್ರಾಮದ ಸುತ್ತಮುತ್ತ ಏನಿಲ್ಲವೆಂದರು ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಜಿಂಕೆಗಳು ಗ್ರಾಮದ ಹೊಲದಲ್ಲಿ ಹಾಕಿದ ಬೆಳೆಯನ್ನೇಲ್ಲ ತಿಂದು ನಾಶಮಾಡುತ್ತಿವೆ. ಕಳೆದ ಐದು ವರ್ಷದಿಂದ ಬರಗಾಲದಿಂದ ತತ್ತರಿಸಿಹೋಗಿದ್ದ ನಾವು ಈ ವರ್ಷ ಉತ್ತಮವಾಗಿ ಮಳೆಯಾಗಿದ್ರಿಂದ ಬೆಳೆ ಚನ್ನಾಗಿ ಬಂದಿದೆ. ಆದರೆ ಜಿಂಕೆಗಳ ಕಾಟ ಜಾಸ್ತಿಯಾಗಿದೆ ಎಂದು ರೈತರು ತಮ್ಮ ಅಸಮಾದಾನ ತೋಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಹೊಲಕ್ಕೆ ಹೋದ್ರೆ ಸಾಕು ಜಿಂಕೆಗಳನ್ನ ಓಡಿಸುವುದೆ ಡ್ಯೂಟಿಯಾಗಿ ಪರಿಣಮಿಸಿದೆ. ರೈತರು ಸಾಲ ಶೂಲ ಮಾಡಿ ಬಿತ್ತಿದ್ದ ಬೆಳೆಯನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ಹಾಗು ಅರಣ್ಯ ಇಲಾಖೆ ರೈತರ ಸಮಸ್ಯೆಗೆ ಸ್ಫಂದಿಸಿ ರೈತರ ಬೆಳೆಯನ್ನ ಜಿಂಕೆಯಿಂದ ಕಾಪಾಡಿ ಎಂದು ರೈತರ ಸರಕಾರಕ್ಕೆ ವಿನಂತಿಸಿದ್ದಾರೆ. ಸಾವಿರಾರು ರೂಪಾಯಿ ಹಣವನ್ನ ಖುರ್ಚುಮಾಡಿ ಬಿತ್ತನೆ ಮಾಡಿದ್ದೇವೆ ಬೆಳೆ ಕೈಗೆ ಬರುವಷ್ಠರಲ್ಲಿ ಜಿಂಕೆಗಳು ತಿನ್ನುತ್ತಿದ್ದು ಬೆಳೆ ನಾಶಮಾಡುತ್ತಿವೆ ನಮ್ಮ ಸಮಸ್ಯೆಯನ್ನ ಯಾರಿಗೆ ಹೇಳಬೇಕೆಂದು ಇಲ್ಲಿನ ರೈತರು ಹಲಬುತ್ತಿದ್ದಾರೆ.
(ವರದಿ: ಚಮನ್ ಹೊಸಮನಿ, ಬೀದರ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ