Corona Effect: ಬೆಳೆಗಾರರ ಬದುಕಿನಲ್ಲಿ ಕಂಪು ಸೂಸದ ಮಲ್ಲಿಗೆ, ಪರಿಹಾರಕ್ಕಾಗಿ ಕಾದು ಹೂಗಳೆಲ್ಲಾ ಬಾಡಿಯೇ ಹೋದವು !

ಅದು ಮಲ್ಲಿಗೆ ಹೂ ಬೆಳೆಯೋಕೆ ಹೆಸರುವಾಸಿಯಾಗಿರೋ ತಾಲೂಕು, ಆ ತಾಲೂಕಿನಲ್ಲಿ ಬರೋಬ್ಬರಿ ಐದುನೂರು ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಮಲ್ಲಿಗೆ ಹೂವನ್ನು ಬೆಳೆಯುತ್ತಾರೆ ರೈತರು, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಲ್ಲಿಗೆ ಬೆಳೆಗಾರರು ಕೊರೊನಾ ಎರಡನೇ ಅಲೆಗೆ ತತ್ತರಿಸಿ‌ ಹೋಗಿದ್ದಾರೆ. ಬೆಳೆಗೆ ಬೆಂಬಲ‌ ಬೆಲೆ‌‌ ಸಿಗದೇ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.

ಮಲ್ಲಿಗೆ ಬೆಳೆದ ರೈತ

ಮಲ್ಲಿಗೆ ಬೆಳೆದ ರೈತ

 • Share this:
  ಬಳ್ಳಾರಿ: ಮಲ್ಲಿಗೆ ಹೂವು ಅಂದ್ರೆ ಯಾರಿಗೆ ತಾನೇ ಇಷ್ಟವಾಗೋಲ್ಲಾ ಹೇಳಿ, ಘಮಘಮಿಸೋ ಹೂವಿನ ಸುವಾಸನೆ ಅದೇಷ್ಟೋ ಸುಮಧುರ, ಹೂ ನೋಡಲು ಅಂದ ಚೆಂದ. ಹೀಗೆ ಅಂದ, ಚೆಂದದ  ಘಮಘಮಿಸೋ ಮಲ್ಲಿಗೆ ಬೆಳೆಯೋ ರೈತರ ಬದುಕಲ್ಲಿ ಮಾತ್ರ ಮಲ್ಲಿಗೆ ಹೂವಿನ ಪರಿಮಳವೇ ಇಲ್ಲದಂತಾಗಿದೆ. ಅದು ಮಲ್ಲಿಗೆ ಹೂ ಬೆಳೆಯೋಕೆ ಹೆಸರುವಾಸಿಯಾಗಿರೋ ತಾಲೂಕು, ಆ ತಾಲೂಕಿನಲ್ಲಿ ಬರೋಬ್ಬರಿ ಐದುನೂರು ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಮಲ್ಲಿಗೆ ಹೂವನ್ನು ಬೆಳೆಯುತ್ತಾರೆ ರೈತರು, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಲ್ಲಿಗೆ ಬೆಳೆಗಾರರು ಕೊರೊನಾ ಎರಡನೇ ಅಲೆಗೆ ತತ್ತರಿಸಿ‌ ಹೋಗಿದ್ದಾರೆ. ಬೆಳೆಗೆ ಬೆಂಬಲ‌ ಬೆಲೆ‌‌ ಸಿಗದೇ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.

  ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಆದ ನಷ್ಟವನ್ನು ರೈತರಿಗೆ ಇನ್ನು ಅರಿಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೈ ಗೆ ಬಂದ ತುತ್ತು ಬಾಯಿಗೆ ಬಾರದಂಥಹ ಪರಿಸ್ಥಿತಿ ಇತ್ತು. ಹೊಲದಲ್ಲಿ ಅರಳಿದ್ದ ಮಲ್ಲಿಗೆ ಹೂ ದರವಿಲ್ಲದೇ ಬಾಡಿ ಹೋಗಿದ್ದವು. ಈಗಲೂ ರೈತರ ಪರಿಸ್ಥಿತಿ ಭಿನ್ನವಾಗಿಲ್ಲ. ಮಲ್ಲಿಗೆ ಈಗ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ 100 ರೂ. ದರವಿದೆ. ದರ ಕುಸಿತದಿಂದ ರೈತರು ಕಂಗಾಲಾಗಿ ಹೋಗಿದ್ದಾರೆ.

  ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಿರಾಕೊರನಹಳ್ಳಿ, ಮುದೇನೂರ, ಹನಕನಹಳ್ಳಿ ಗ್ರಾಮಗಳಲ್ಲಿ ಮಲ್ಲಿಗೆ ಬೆಳೆಯನ್ನು ಬೆಳೆಯಲಾಗುತ್ತದೆ. ಈಗ ನಿತ್ಯ ನೂರಾರು ಕ್ವಿಂಟಾಲ್ ಹೂ ಇಳುವರಿ ಬರುತ್ತಿದೆ. ಆದರೆ, ರೈತರಿಗೆ ಸಮರ್ಪಕ ಬೆಲೆ ಇಲ್ಲದೇ ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ. ಸಾಮಾನ್ಯವಾಗಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಮಲ್ಲಿಗೆಗೆ ಎಲ್ಲಿಲ್ಲದ ಬೇಡಿಕೆ ಇದೆ.  ಹುಬ್ಬಳ್ಳಿ, ದಾವಣಗೆರೆ, ಗದಗ, ಹಾವೇರಿ ಭಾಗಗಳಲ್ಲಿ  ಈ ಹೂವಿನ ಹಡಗಲಿಯ ಹೂವಿಗೆ  ಬೇಡಿಕೆ ಇದೆ. ಆದರೆ, ಕೊರೊನಾ‌ ಕರ್ಫ್ಯೂ ಹಿನ್ನೆಲೆ ವ್ಯಾಪಾರಸ್ಥರು‌ ಖರೀದಿಗೆ ಮುಂದೆ ಬರುತ್ತಿಲ್ಲ. ಹೀಗಾಗಿ ದರ ಸಂಪೂರ್ಣ ಕುಸಿತ ಕಂಡಿದೆ.

  ಈ‌ ಹಿಂದೆ ಮಲ್ಲಿಗೆಗೆ ಕೆಜಿಗೆ 300 ರಿಂದ 500 ರೂ, ದರವಿತ್ತು.  ಈಗ 100 ರೂ. ಇದ್ದು, ಹಾಕಿದ ಬಂಡವಾಳ ಬರದಂತ ಸ್ಥಿತಿ ನಿರ್ಮಾಣವಾಗಿದೆ. ಹೂವಿನಹಡಗಲಿ ತಾಲೂಕಿನ 500 ಎಕರೆ ಭೂಮಿಯಲ್ಲಿ ಮಲ್ಲಿಗೆ ಹೂ ಬೆಳೆಯಲಾಗುತ್ತದೆ. ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ಹೂವಿನ ಬೆಳೆಗಾರರಿಗೆ ಸರಕಾರ ಪರಿಹಾರ ಘೋಷಣೆ ಮಾಡಿತ್ತು. ಒಂದು ವರ್ಷದವಾದರೂ 300 ರೈತರಿಗೆ ಬಿಡಿಗಾಸು ದೊರೆತ್ತಿಲ್ಲ. ನೆಪ ಮಾತ್ರಕ್ಕೆ 64 ಜನ ರೈತರಿಗೆ ಪರಿಹಾರವನ್ನು ವಿತರಣೆ ಮಾಡಲಾಗಿದೆ ಎಂಬ ಆರೋಪವೂ ಇದೆ.

  ಈಗ ಹೂವಿನ ಬೆಳೆಗಾರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಹಾಕಿದ ಬಂಡವಾಳ ಮರಳಿ ಬರದಂತಾಗಿದೆ. ಕೂಡಲೇ ಸರಕಾರ ನೆರವಿಗೆ ಧಾವಿಸಬೇಕು ಎಂಬದು ಒತ್ತಾಯವಾದ್ರೆ, ಲಾಕ್ ಡೌನ್ ಸಂದರ್ಭದಲ್ಲಿ ರೈತರಿಗೆ ತೊಂದರೆಗೀಡಾಗುತ್ತಿದ್ದಾರೆ. ಸರಕಾರ ಕಳೆದ ವರ್ಷದ ಪರಿಹಾರ ಘೋಷಣೆ ಮಾಡಿತ್ತು. ಕೆಲ ರೈತರಿಗೆ ಮಾತ್ರ ಸಿಕ್ಕಿದೆ. ಬಹುತೇಕ ರೈತರಿಗೆ ಸಿಕ್ಕಿಲ್ಲ. ಅಧಿಕಾರಿಗಳು ಬೆಳೆ ನಷ್ಟದವನ್ನು ಜಿಪಿಎಸ್ ಮೂಲಕ ಸಂಗ್ರಹಿಸಿದ್ದಾರೆ. ಆದರೆ, ಇಲ್ಲಿವರೆಗೂ ರೈತರಿಗೆ ಪರಿಹಾರ ವಿತರಣೆ ಮಾಡುವಂತಹ ಕೆಲಸವಾಗಿಲ್ಲ, ಕೊರೊನಾ ಸಮಯದಲ್ಲಿ ಮಲ್ಲಿಗೆ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು ಅಂತಾರೆ ಮಲ್ಲಿಗೆ ಬೆಳೆಗಾರರು.

  (ವರದಿ: ವಿನಾಯಕ ಬಡಿಗೇರ)
  Published by:Soumya KN
  First published: