ಜಿಟಿ ಜಿಟಿ ಮಳೆಗೆ ನೆಲ ಕಚ್ಚಿದ ಮುಂಗಾರು ಬೆಳೆ : ಸಂಕಷ್ಟಕ್ಕೆ ಸಿಲುಕಿದ ಬೀದರ್ ರೈತ

ಬೆಳೆ ಹಾಳಾಗಿರುವುದು

ಬೆಳೆ ಹಾಳಾಗಿರುವುದು

  • Share this:
ಬೀದರ್​(ಆಗಸ್ಟ್​. 27) : ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಜಿಟಿ ಜಿಟಿ ಮಳೆಯಿಂದಾಗಿ ಮುಂಗಾರು ಹಂಗಾಮಿನ ಬೆಳೆಗಳಾದ ಉದ್ದು, ಹೆಸರು ಬೆಳೆಗಳು ನೆಲಕಚ್ಚಿವೆ. ರೈತರು ಈ ಬಾರಿ ಸೊಯಾಬಿನ್ ಬೆಳೆಗೆ ಮಾತ್ರ ವಿಮೆ ಮಾಡಿಸಿದ್ದು, ಹೆಸರು, ಉದ್ದು ಬೆಳೆಗಳಿಗೆ ವಿಮೆ ಮಾಡಿಸಿಲ್ಲ. ಇದೀಗ ಸತತ ಮಳೆಯಿಂದಾಗಿ ಭೂಮಿಯಲ್ಲಿಯೆ ಬೆಳೆಗಳು ಮೊಳಕೆಯೊಡೆಯುತ್ತಿದ್ದು, ಇತ್ತ ಬೆಳೆಯೂ ಇಲ್ಲದೆ, ಅತ್ತ ಬೆಳೆ ವಿಮೆಯೂ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.  

ಮುಂಗಾರು ಹಂಗಾಮಿನ ಅಲ್ಪಾವಧಿಯ ಪ್ರಮುಖ ಬೆಳೆಗಳಾಗಿರುವ ಉದ್ದು, ಹೆಸರು ಸದ್ಯ ಭರಪುರ ಖಾಯಿ ಕಟ್ಟಿದ್ದು, ಕಟಾವು ಹಂತದಲ್ಲಿವೆ. ಈ ವೇಳೆಯಲ್ಲಿಯೇ ಕಳೆದೊಂದು ವಾರದಿಂದ ಸುರಿಯುತ್ತಿರುವ ಸಾಧಾರಣ ಮಳೆಯಿಂದಾಗಿ ಬೆಳೆಗಳು ಹೊಲದಲ್ಲಿಯೇ ಮೊಳೆಕೆಯೊಡೆಯುತ್ತಿರುವುದು ರೈತರನ್ನು ಕಂಗಾಲಾಗಿಸಿದೆ. ಜಿಲ್ಲೆಯಲ್ಲಿ ಹೆಸರು 25 ಸಾವಿರ ಹೆಕ್ಟೇರ್. ಉದ್ದು 25 ಸಾವಿರ ಹೆಕ್ಟರ್ ನಲ್ಲಿ ಬೆಳೆಯಾಗಿದೆ. ಜೂನ್ ಮೊದಲ ವಾರದಲ್ಲಿ ಉತ್ತಮವಾಗಿ ಮಳೆಯಾದ್ದರಿಂದ ಜೂನ್ ಮೊದಲವಾರದಲ್ಲಿಯೇ ರೈತರು ಹೆಚ್ಚಾಗಿ ಬಿತ್ತನೆ ಮಾಡಿದ್ದರು. ಆದರೆ ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಹೊಲಗಳಿಗೆ ಹೋಗಗದಂತಹ ಸ್ಥಿತಿ ಎದುರಾಗಿದೆ.

ಜಿಲ್ಲೆಯಲ್ಲಿ ವಾಡಿಕೆಗಿಂತ 75 ಪ್ರತಿಶತ ಹೆಚ್ಚು ಮಳೆಯಾಗಿದೆ. ಹೀಗಾಗಿ ಬಸವಕಲ್ಯಾಣ ತಾಲೂಕು ಒಂದರಲ್ಲಿಯೇ ಆರು ಸಾವಿರಕ್ಕೂ ಹೆಚ್ಚು ಹೆಕ್ಟರ್ ಪ್ರದೇಶದಲ್ಲಿನ ಹೆಸರು ಬೆಳೆ ನಾಶವಾಗಿದೆ. ಇದರ ಜೊತೆಗೆ ಸೋಯಾ, ಅವರೇ, ಉದ್ದು, ಗೋವಿನಜೋಳ, ಸಂಪೂರ್ಣವಾಗಿ ನೆಲ್ಲಕ್ಕುರಳಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಒಂದು ಎಕರೆಗೆ ಕನಿಷ್ಠ ಅಂದರೂ 3 ರಿಂದ 4 ಸಾವಿರ ರೂಪಾಯಿಯನ್ನು ಖರ್ಚು ಮಾಡಿ ಬಿತ್ತಿದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ನಮಗೆ ಸರಕಾರದಿಂದ ಸಹಾಯವಾದರೆ ನಮ್ಮ ಬದುಕು ಕಷ್ಟದಿಂದ ಮುಕ್ತವಾಗುತ್ತದೆ ಎಂಬುವುದು ರೈತರ ಅಳಲಾಗಿದೆ.

ಇದನ್ನೂ ಓದಿ : ಕೋವಿಡ್ ಚಿಕಿತ್ಸೆಗಾಗಿ ಹಣ ಪಾವತಿಸಿದ ಎಲ್ಲರ ಹಣವನ್ನು ಸರ್ಕಾರ ಮರು ಪಾವತಿಸಲಿ : ಮಾಜಿ ಸಚಿವ ಯು ಟಿ ಖಾದರ್

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಾಲ ಸೋಲ ಮಾಡಿ ಉದ್ದು, ಸೋಯಾ, ಹೆಸರು ಇನ್ನೂ ಕೆಲವರು ಬ್ಯಾಂಕ್ ಗಳಿಂದ ಸಾಲ ಮಾಡಿ ಬಿತ್ತನೆ ಮಾಡಿದ್ದರು. ಬೀದರ ಜಿಲ್ಲೆಯಲ್ಲಿ ಪದೇ ಪದೇ ಬರಗಾಲ ಎದುರಾಗುತ್ತದೆ. ಆದರೆ ಈ ವರ್ಷ ಸಕಾಲಕ್ಕೆ ಉತ್ತಮವಾದ ಮಳೆಯಾಗಿದ್ದು ರೈತನ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು. ಅಕಾಲಿಕ ಮಳೆ ಆ ನಗುವನ್ನು ಇದೀಗ ಕಿತ್ತುಕೊಂಡಿದೆ.

ಈ ಬಾರಿ ಬೀದರ್ ಜಿಲ್ಲೆಯ ರೈತರ ಸ್ಥಿತಿ ಶೋಚನೀಯವಾಗಿದೆ. ಸೋಯಾ, ಅವರೆ, ಉದ್ದು ಜೋಳ, ಬೆಳೆಗಾರರ ಪರಿಸ್ಥಿತಿ ಸಂಪೂರ್ನವಾಗಿ ಹದೆಗಿಟ್ಟಿದ್ದು ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತಾ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸೋಯಾ, ಉದ್ದು  ಬೆಳೆಯನ್ನೇ ನಂಬಿಕೊಂಡಿದ್ದ ರೈತರಿಗೆ ಈ ವರ್ಷದ ಮಳೆ ತಲೆ ಮೇಲೆ ಕೈಹೊತ್ತು ಕೂರುವಂತೆ ಮಾಡಿದೆ.
Published by:G Hareeshkumar
First published: