ಅಧಿಕೃತವಾಗಿ ಮರಳು ತೆಗೆಯಲು ಅವಕಾಶ ಕೊಟ್ಟಿದ್ದೆ ಇಲ್ಲಿ ಶಾಪವಾಯ್ತು; ರೈತರ ಬದುಕಿಗೆ ಮುಳುವಾದ ಮರಳುಗಾರಿಕೆ

ಜೀವನಾಡಿಯಾಗಿದ್ದ ಗಂಗಾವಳಿ ನದಿ ಒಡಲಿನಲ್ಲಿ ಎಗ್ಗಿಲ್ಲದೆ ಮರಳುಗಾರಿಕೆ ನಡೆಸುತ್ತಿರುವುದರಿಂದ ಕೃಷಿ ಭೂಮಿ ನದಿಪಾಲಾಗುವ ಆತಂಕ ಎದುರಾಗಿದ್ದು, ಇನ್ನಾದರು ಅಧಿಕಾರಿಗಳು ಇಂತಹ ಅಕ್ರಮಕ್ಕೆ ಬ್ರೇಕ್ ಹಾಕಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕಿದು. ಜತೆಗೆ ಅಧಿಕೃತವಾಗಿಯೇ ಸಂಬಂಧಿಸಿದ ಇಲಾಖೆ ಮರಳುಗಾರಿಕೆ ನಡೆಸಲು ಅವಕಾಶ ಕೊಟ್ಟಿದ್ದು, ಇಲ್ಲಿನ ಬಡವರ ಬದುಕಿಗೆ ಬರೆ ಎಳೆದಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೊಡ್ಸಣಿಯ ಗಂಗಾವಳಿ ನದಿಯಲ್ಲಿ ಮರಳುಗಾರಿಕೆ ನಡೆಸುತ್ತಿರುವುದು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೊಡ್ಸಣಿಯ ಗಂಗಾವಳಿ ನದಿಯಲ್ಲಿ ಮರಳುಗಾರಿಕೆ ನಡೆಸುತ್ತಿರುವುದು.

  • Share this:
ಕಾರವಾರ; ತಲೆ ತಲಾಂತರಗಳಿಂದ ನದಿ ತೀರದಲ್ಲಿ ಬದುಕು ಕಟ್ಟಿಕೊಂಡು ನದಿ ನೀರನ್ನೇ ಆಶ್ರಯಿಸಿಕೊಂಡು ಕೃಷಿ ಮಾಡಿ ಜೀವನ ನಡೆಸುತ್ತಿದ್ದವರಿಗೆ ಇದೀಗ ನದಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಶಾಪವಾಗಿ ಪರಿಣಮಿಸಿದೆ. ಮರಳುಗಾರಿಕೆಯಿಂದ ಇದ್ದ ಕೃಷಿ ಭೂಮಿಯೂ ನದಿಪಾಲಾಗುವ ಆತಂಕ ಕಾಡತೊಡಗಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೊಡ್ಸಣಿ ಭಾಗದ ರೈತರಿಗೆ ಶಾಪವಾಗಿ ಪರಿಣಮಿಸಿದೆ.

ಅಂಕೋಲಾ ತಾಲ್ಲೂಕಿನ ಕೋಡ್ಸಣಿ ಗ್ರಾಮದ ನೂರಾರು ಕುಟುಂಬಗಳಿಗೆ ಕೃಷಿಯೇ ಜೀವನಾಧಾರ. ಇಲ್ಲಿ ಹರಿಯುವ ಗಂಗಾವಳಿ ನದಿಯೂ ಕೃಷಿ ಭೂಮಿಗೆ ನೀರುಣಿಸುವುದರ ಜೊತೆಗೆ ಈ ಭಾಗದ ಜನರಿಗೆ ಜೀವನಾಡಿಯಾಗಿದೆ. ಆದರೆ ಕಳೆದ ಕೆಲ ತಿಂಗಳುಗಳಿಂದ ನದಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಮರಳು ಗಣಿಗಾರಿಕೆ ಗ್ರಾಮದ ಜನರಿಗೆ ದೊಡ್ಡ ತಲೆನೋವಾಗಿದೆ. ನದಿಯಲ್ಲಿ ಮರಳು ದಿಬ್ಬಗಳನ್ನು ಗುರುತಿಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಾಲ್ಕು ಬೋಟ್ ಗಳಿಗೆ ಹಾಗೂ ನಾಲ್ಕು ಲಾರಿಗಳಿಗೆ ಮರಳು ಗಣಿಗಾರಿಕೆಗೆ ಪರವಾನಗಿ ನೀಡಿದೆ. ಆದರೆ ಅಲ್ಲಿ 10ಕ್ಕೂ ಹೆಚ್ಚು ಬೋಟ್ ಮತ್ತು 30ಕ್ಕೂ ಹೆಚ್ಚು ಲಾರಿಗಳ ಮೂಲಕ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ. ಪರಿಣಾಮ ನದಿ ಒಡಲು ಖಾಲಿಯಾಗಿ ದಿಬ್ಬದ ಮಣ್ಣು ಕುಸಿಯುತ್ತಿರುವ ಕಾರಣ ಕೃಷಿ ಭೂಮಿ ನದಿ ಪಾಲಾಗುವ ಆತಂಕ ಎದುರಾಗಿದೆ.‌‌

ಇದನ್ನು ಓದಿ: ಬಿಎಸ್​ಎನ್​ಎಲ್​, ಅಂಚೆ ಕಚೇರಿ ಸಾರ್ವಜನಿಕರಿಗೆ ಉತ್ತಮ ಸೇವೆ ಕಲ್ಪಿಸಲಿ: ಸಂಸದ ಪ್ರಜ್ವಲ್ ರೇವಣ್ಣ

ಗ್ರಾಮದಲ್ಲಿ 130ಕ್ಕೂ ಹೆಚ್ಚು ಮನೆಗಳಿದ್ದು, ಇರುವ ಅಲ್ಪ ಸ್ವಲ್ಪ ಜಮೀನಿನ ಮೂಲಕವೇ ಜೀವನ ಕಟ್ಟಿಕೊಂಡಿದ್ದಾರೆ. ಆದರೆ ಅಕ್ರಮ ಮರಳುಗಾರಿಕೆಯಿಂದಾಗಿ ಈ ಭಾಗದ ಬಾವಿಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಪ್ರತಿ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇನ್ನು ಎರಡು ವರ್ಷಗಳಿಂದ ಮಳೆಗಾಲದಲ್ಲಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ಮನೆ, ಕೃಷಿ ಭೂಮಿಗೆ ಸಾಕಷ್ಟು ಹಾನಿಯಾಗಿದೆ. ಆದರೆ ಇಂತಹ ಸಂಕಷ್ಟದ ವೇಳೆ ಒಂದು ಬೋಟ್ ಗಳು ಕೂಡ ಸಹಾಯಕ್ಕೆ ಬರಲಿಲ್ಲ. ಇದೀಗ 30 ಕ್ಕೂ ಹೆಚ್ಚು ಬೋಟ್ ಗಳು ಹಗಲು ರಾತ್ರಿ ಎನ್ನದೇ ಅಕ್ರಮ ಮರಳುಗಾರಿಕೆ ನಡೆಸುತ್ತಿವೆ. ಇದರಿಂದ ಕೃಷಿ ಭೂಮಿ ನದಿ ಪಾಲಾಗುವ ಆತಂಕ ಇದ್ದು ಕೂಡಲೇ ಇಂತಹ ಅಕ್ರಮ ತಡೆಯಲು ಅಧಿಕಾರಿಗಳು ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಜೀವನಾಡಿಯಾಗಿದ್ದ ಗಂಗಾವಳಿ ನದಿ ಒಡಲಿನಲ್ಲಿ ಎಗ್ಗಿಲ್ಲದೆ ಮರಳುಗಾರಿಕೆ ನಡೆಸುತ್ತಿರುವುದರಿಂದ ಕೃಷಿ ಭೂಮಿ ನದಿಪಾಲಾಗುವ ಆತಂಕ ಎದುರಾಗಿದ್ದು, ಇನ್ನಾದರು ಅಧಿಕಾರಿಗಳು ಇಂತಹ ಅಕ್ರಮಕ್ಕೆ ಬ್ರೇಕ್ ಹಾಕಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕಿದು. ಜತೆಗೆ ಅಧಿಕೃತವಾಗಿಯೇ ಸಂಬಂಧಿಸಿದ ಇಲಾಖೆ ಮರಳುಗಾರಿಕೆ ನಡೆಸಲು ಅವಕಾಶ ಕೊಟ್ಟಿದ್ದು, ಇಲ್ಲಿನ ಬಡವರ ಬದುಕಿಗೆ ಬರೆ ಎಳೆದಂತಾಗಿದೆ.
Published by:HR Ramesh
First published: