ಸಾಲ ಮರುಪಾವತಿಗೆ ಬ್ಯಾಂಕುಗಳು ಒತ್ತಡ ; ಒಡವೆ ಅಡವಿಟ್ಟು ಕಂತು ಕಟ್ಟುತ್ತಿರುವ ಕೃಷಿಕರು

ಬ್ಯಾಂಕುಗಳ ನಿರಂತರ ಕಿರುಕುಳ ತಾಳಲಾರದೆ ಹಲವು ಕೃಷಿಕರು ತಮ್ಮ ಬಳಿಯಿದ್ದ ಒಡವೆಗಳನ್ನು ಅಡವಿಟ್ಟು ಕಂತು ಕಟ್ಟಲಾರಂಭಿಸಿದ್ದಾರೆ.

news18-kannada
Updated:June 30, 2020, 3:01 PM IST
ಸಾಲ ಮರುಪಾವತಿಗೆ ಬ್ಯಾಂಕುಗಳು ಒತ್ತಡ ; ಒಡವೆ ಅಡವಿಟ್ಟು ಕಂತು ಕಟ್ಟುತ್ತಿರುವ ಕೃಷಿಕರು
ನೋಟೀಸ್ ಪ್ರತಿ
  • Share this:
ಪುತ್ತೂರು(ಜೂ.30): ದೇಶದಲ್ಲಿ ಕೊರೋನಾ ಲಾಕ್ ಡೌನ್ ಘೋಷಣೆಯಾದ ಬಳಿಕ ಬಹುತೇಕ ಎಲ್ಲಾ ವ್ಯವಹಾರಗಳೂ ಸ್ಥಬ್ದಗೊಂಡಿವೆ. ಇದೇ ಕಾರಣಕ್ಕಾಗಿ ಕೇಂದ್ರ ಸರಕಾರ ಮುಂದಿನ ಆರು ತಿಂಗಳುಗಳ ಕಾಲ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ ಜನ ಸಾಲದ ಕಂತುಗಳನ್ನು ಕಟ್ಟಬೇಕಾಗಿಲ್ಲ ಎನ್ನುವ ಆದೇಶವನ್ನೂ ಹೊರಡಿಸಿದೆ. ಅಲ್ಲದೆ ಯಾವ ಬ್ಯಾಂಕುಗಳೂ ಸಾಲ ಮರುಪಾವತಿಸುವಂತೆ ಒತ್ತಡ ಹೇರುವಂತಿಲ್ಲ ಎನ್ನುವ ಎಚ್ಚರಿಕೆಯನ್ನೂ ನೀಡಿದೆ. ಆದರೆ, ಸರಕಾರದ ಯಾವ ಕಾನೂನುಗಳೂ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲವೇ ಎನ್ನುವ ಅನುಮಾನ ಕಾಡಲಾರಂಭಿಸಿದೆ.

ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕುಗಳು ಕೃಷಿಗಾಗಿ ತೆಗೆದ ಸಾಲವನ್ನು ಮರುಪಾವತಿ ಮಾಡುವಂತೆ ಒತ್ತಡ ಹೇರಲಾರಂಭಿಸಿದೆ. ಬೇರೆ ದಾರಿಯಿಲ್ಲದೆ ಜನ ತಮ್ಮ ಮನೆಯ ಒಡವೆಗಳನ್ನು ಅಡವಿಟ್ಟು ಕಂತು ಭರಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ವಿಶ್ವಕ್ಕೇ ಮಾರಿಯಂತೆ ಅಪ್ಪಳಿಸಿರುವ ಕೊರೋನಾ ದೇಶದಲ್ಲಿ ಹಲವಾರು ಸಮಸ್ಯೆಗಳನ್ನು ತಂದೊಡ್ಡಿದೆ. ಕೊರೊನಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಸುಧೀರ್ಘ ಕಾಲದಿಂದ ಲಾಕ್ ಡೌನ್ ನಿಯಮಗಳು ಜಾರಿಯಲ್ಲಿದೆ. ಇದರಿಂದಾಗಿ ದೇಶದ ಬಹುತೇಕ ಎಲ್ಲಾ ವ್ಯವಹಾರಗಳೂ ಮುಚ್ಚಿದ ಕಾರಣ ಜೀವನ ಸಾಗಿಸುವುದೂ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ ಕೇಂದ್ರ ಸರಕಾರ ಸಾಲದ ಕಂತು ಸೇರಿದಂತೆ ಎಲ್ಲಾ ರೀತಿಯ ತಿಂಗಳ ಮರುಪಾವತಿಗೆ ಆರು ತಿಂಗಳ ವಿನಾಯತಿಯನ್ನು ಘೋಷಿಸಿದೆ.

ಆಗಸ್ಟ ತಿಂಗಳವರೆಗೆ ಈ ವಿನಾಯತಿಯು ಜಾರಿಯಲ್ಲಿರಲಿದ್ದು, ಯಾವುದೇ ಬ್ಯಾಂಕ್ ಅಥವಾ ಸಂಸ್ಥೆ ಜನರಲ್ಲಿ ಸಾಲ ಮರುಪಾವತಿಸುವಂತೆ ಒತ್ತಡ ಹೇರುವಂತಿಲ್ಲ ಎನ್ನುವ ಆದೇಶವನ್ನೂ ನೀಡಿದೆ. ಆದರೆ, ಈ ಆದೇಶಗಳು ಕೆಲವು ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ ಎನ್ನುವ ಆರೋಪ ಕೇಳಿ ಬರಲಾರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಹಲವು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಕೃಷಿಕರು ಕೃಷಿ ಸಾಲವನ್ನು ಮಾಡಿದ್ದು, ಈ ಸಾಲವನ್ನು ಮರುಪಾವತಿ ಮಾಡುವಂತೆ ಕೃಷಿಕರ ಮೇಲೆ ಒತ್ತಡ ಹೇರುವ ಪ್ರಕ್ರಿಯೆ ಆರಂಭಗೊಂಡಿದೆ.

ತಿಂಗಳ ಕಂತು, ಸಾಲದ ಮರುಪಾವತಿ ಮಾಡದ ಕೃಷಿಕರಿಗೆ ಸಾಲ ನೀಡುವುದಿಲ್ಲ ಎನ್ನುವ ಎಚ್ಚರಿಕೆಯನ್ನೂ ಕೆಲವು ಬ್ಯಾಂಕುಗಳು ನೀಡಲಾರಂಭಿಸಿದೆ ಎಂದು  ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಆರೋಪಿಸುತ್ತಾರೆ.

ದಕ್ಷಿಣಕನ್ನಡ ಜಿಲ್ಲೆಯ ನೆಲ್ಯಾಡಿ ವ್ಯಾಪ್ತಿಯಲ್ಲೇ ಇಂಥಹ ನೂರಾರು ನಿದರ್ಶನಗಳಿದ್ದು, ಯಾವ ಸಂಘಟನೆಯೂ, ಜನಪ್ರತಿನಿಧಿಯೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಬ್ಯಾಂಕುಗಳ ನಿರಂತರ ಕಿರುಕುಳ ತಾಳಲಾರದೆ ಹಲವು ಕೃಷಿಕರು ತಮ್ಮ ಬಳಿಯಿದ್ದ ಒಡವೆಗಳನ್ನು ಅಡವಿಟ್ಟು ಬ್ಯಾಂಕುಗಳ ಕಂತು ಕಟ್ಟಲಾರಂಭಿಸಿದ್ದಾರೆ. ಕೆಲವು ಕೃಷಿಕರಿಗೆ ತಿಂಗಳ ಕಂತು ಕಟ್ಟುವ ಸಮಸ್ಯೆಯಾದರೆ, ಇನ್ನು ಕೆಲವರಿಗೆ ತೆಗೆದ ಸಾಲವನ್ನು ಅವಧಿಯೊಳಗೆ ಕಟ್ಟುವ ಸಮಸ್ಯೆಗಳಿವೆ.

ಇದನ್ನೂ ಓದಿ : ದೇಶದ ಜನ ಕೊರೋನಾ ಆತಂಕದಲ್ಲಿ ; ಕರಾವಳಿ ರೈತ ಮಾತ್ರ ನಿರ್ಭಿಡೆಯಿಂದ ಕೃಷಿ ಕಾಯಕದಲ್ಲಿಲಾಕ್ ಡೌನ್ ನಿಂದಾಗಿ ಕೃಷಿ ಸೇರಿದಂತೆ ಹಲವು ವಲಯಗಳು ಸಂಕಷ್ಟದಲ್ಲಿದ್ದು, ಈ ಸಮಯದಲ್ಲೂ ಬ್ಯಾಂಕ್ ಗಳು ಸಾಲ ಮರುಪಾವತಿಯ ಒತ್ತಡ ಹೇರುತ್ತಿರುವುದರ ವಿರುದ್ಧ ಪ್ರತಿಭಟನೆಯನ್ನೂ ನಡೆಸಲು ವೇದಿಕೆ ಚಿಂತನೆ ನಡೆಸಿದೆ .

ಮರುಪಾವತಿ, ವಿವಿಧ ಪ್ರಕಾರದ ಕಂತುಗಳ ಪಾವತಿಗೆ ಜನರನ್ನು ಒತ್ತಾಯಿಸುವಂತಿಲ್ಲ ಎನ್ನುವ ಸರಕಾರದ ಆದೇಶದ ನಡುವೆಯೇ ಬ್ಯಾಂಕುಗಳು ಜನರನ್ನು ಪೀಡಿಸಲಾರಂಭಿಸಿದೆ. ಈ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವ್ಯಾಪ್ತಿಗೆ ಬರುವುದಿಲ್ಲವೇ ಎನ್ನುವ ಸಂಶಯವೂ ಮೂಡಲಾರಂಭಿಸಿದೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading