ಶಿವಮೊಗ್ಗದ ಬಡ ಕೃಷಿಕನ ಮಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಂ. 3
ಸಾಗರ ಸರ್ಕಾರಿ ಪದವಿ ಪೂರ್ಣ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಸಿಂಧು ವ್ಯಾಸಂಗದ ಮಾಡಿದ್ದಾರೆ. ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಲ್ಲಿ ಮೂರನೇಯರಾಗಿದ್ದಾರೆ.
ಶಿವಮೊಗ್ಗ: ಸಣ್ಣ ಹಿಡುವಳಿ ಕೃಷಿಕನ ಮಗಳು ದ್ವೀತಿಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಿಂಧೂ ಅವರು ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಮೂರನೇ ಶ್ರೇಯಾಂಕ ಗಳಿಸಿದ್ದಾರೆ. ಈ ಮೂಲಕ ಸರ್ಕಾರಿ ಕಾಲೇಜುಗಳಲ್ಲಿ ಸಹ ಚೆನ್ನಾಗಿ ವ್ಯಾಸಂಗ ಮಾಡಬಹುದು ಎಂಬುದನ್ನು ಈ ಹುಡುಗಿ ತೋರಿಸಿಕೊಟ್ಟಿದ್ದಾರೆ.
ಸಿಂಧು ಜಿ.ಎಂ. ಅವರು ಸಾಗರ ತಾಲೂಕಿನ ಗೀಜಗಾರು ಗ್ರಾಮದ ನಿವಾಸಿ. ಅಪ್ಪ ಮಂಜುನಾಥ್ ಮತ್ತು ತಾಯಿ ಶಾರದ, ಇವರದ್ದು ಕೃಷಿ ಕುಟುಂಬ. ಹತ್ತಾರು ಎಕರೆ ಜಮೀನು ಇರುವ ಕೃಷಿಕರಲ್ಲ ಇವರು. ಇರೋ ಮೂರ್ನಾಲ್ಕು ಎಕರೆ ಜಮೀನಿನಲ್ಲಿ ಅಡಿಕೆ ಕೃಷಿ ಮಾಡಿದ್ದಾರೆ. ಶಾರದಾ ಮಂಜುನಾಥ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಲ್ಲಿ ಸಿಂಧೂ ಮೊದಲನೆಯವರು.
ಸಾಗರ ಸರ್ಕಾರಿ ಪದವಿ ಪೂರ್ಣ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಸಿಂಧು ವ್ಯಾಸಂಗದ ಮಾಡಿದ್ದಾರೆ. ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಲ್ಲಿ ಮೂರನೇಯರಾಗಿದ್ದಾರೆ. 595 ಅಂಕ ಗಳಿಸುವ ಮೂಲಕ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾರೆ. ಈ ಮೂಲಕ ಸಾಗರ ಸರ್ಕಾರಿ ಪದವಿ ಪೂರ್ಣ ಕಾಲೇಜಿಗೂ ಹೆಸರು ತಂದಿದ್ದಾರೆ. ಸರ್ಕಾರಿ ಕಾಲೇಜು ಅದರೂ ಪಾಠ ಪ್ರವಚನ ಹೆಚ್ಚಾಗಿ ಮಾಡುತ್ತಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸಿಂಧೂ.
ತಂದೆ ತಾಯಿ ಬಡತನದಲ್ಲಿ ಇದ್ದರೂ ನಮ್ಮ ವ್ಯಾಸಂಗದ ವಿಚಾರದಲ್ಲಿ ತುಂಬ ಮುತವರ್ಜಿ ವಹಿಸುತ್ತಾರೆ. ಪರೀಕ್ಷೆ ಎರಡು ತಿಂಗಳು ಇದೆ ಎಂಬ ಸಮಯದಲ್ಲಿ ಪರೀಕ್ಷೆಗೆ ತಯಾರಿ ಮಾಡಲು ಆರಂಭಿಸಿದ ಸಿಂಧೂ ಪ್ರತಿ ನಿತ್ಯ 3 ಗಂಟೆ ವ್ಯಾಸಂಗ ಮಾಡಿದ್ದಾರೆ. ಶೇಕಡಾ 90 ರಷ್ಟು ಅಂಕ ಬರಬಹುದು ಎಂದುಕೊಂಡಿದ್ದ ಸಿಂಧೂ ಅವರಿಗೆ ಅದಕ್ಕಿಂತ ಹೆಚ್ಚು ಅಂಕ ಬಂದಿರುವುದು ಖುಷಿ ತಂದಿದೆ. ಕೊರೋನಾ ಸಮಯದಲ್ಲಿ ಇಂಗ್ಲೀಷ್ ಪರೀಕ್ಷೆ ಬರೆಯುವಾಗ ಸ್ಪಲ್ವ ಮಟ್ಟಿನ ಭಯ ಇತ್ತು. ಅದರೂ ಪರೀಕ್ಷೆ ಚೆನ್ನಾಗಿ ಬರೆದೆ. ಇಂಗ್ಲೀಷ್ನಲ್ಲಿ 100 ಕ್ಕೆ 100 ಅಂಕ ಬರೋದು ಕಷ್ಟ ಎಂದು ಗೊತ್ತಿತ್ತು ಎನ್ನುತ್ತಾರೆ ಸಿಂಧೂ.
ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಮೂರನೇ ಸ್ಥಾನ ಗಳಿಸುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇಂಗ್ಲಿಷ್- 95, ಸಂಸ್ಕೃತ - 100, ಅರ್ಥಶಾಸ್ತ್ರ - 100, ಬ್ಯುಸಿನೆಸ್ ಸ್ಟಡೀಸ್ - 100, ಅಕೌಂಟೆನ್ಸಿ - 100, ಕಂಪ್ಯೂಟರ್ ಸೈನ್ಸ್ – 100 ಅಂಕ ಗಳಿಸಿದ್ದಾರೆ. ಮುಂದೆ ಬಿಕಾಂ ಜೊತೆಗೆ ಸಿಎ ಮಾಡಬೇಕು ಎಂಬ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸಿದ್ದತೆ ಸಹ ಮಾಡಿಕೊಳ್ಳುತ್ತಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ