ಚಿಕ್ಕೋಡಿ(ನವೆಂಬರ್. 11): ಇತ್ತೀಚಿನ ದಿನಗಳಲ್ಲಿ ಗೋವುಗಳ ಸಂಖ್ಯೆ ತೀರ ಕಡಿಮೆ ಆಗುತ್ತಿದೆ. ಅದರಲ್ಲೂ ದೇಶಿ ತಳಿಗಳ ಗೋವು ಸಾಕಾಣಿಕೆ ಮಾಡುವುದು ತೀರ ಬೆರಳೆಣಿಕೆ ಮಾತ್ರ. ಗೋವುಗಳಿಗೆ ಸ್ವಲ್ಪ ವಯಸ್ಸಾದರೆ ಸಾಕು ಅವುಗಳನ್ನ ಕಸಾಯಿಖಾನೆಗೆ ಹೊಡೆದು ಕೈ ತೊಳೆದುಕೊಳ್ಳುವವರೆ ಜಾಸ್ತಿ. ಆದರೆ ಇಲ್ಲೊಬ್ಬ ಯುವ ರೈತ ಕಸಾಯಿ ಖಾನೆಗೆ ಕಳಿಸುವ ಗೋವುಗಳಿಂದ ಉಪ ಉತ್ಪನ್ನ ಮಾಡಿ ಪ್ರತಿ ವರ್ಷ ಸರಿ ಸುಮಾರು 14 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಡಬಾಳ ಗ್ರಾಮದ ನಿವಾಸಿ ಶೀತಲ ಪಾಟೀಲ್ ಕಳೆದ ಐದು ವರ್ಷಗಳಿಂದ ಕೃಷಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಐಟಿಐ ಓದಿರುವ ಶೀತಲ ಆರ್ಯುವೇದದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅದೆ ಕಾರಣಕ್ಕೆ ನೌಕರಿಗಾಗಿ ಅಲೆದಾಡದೇ ಆಯುರ್ವೇದದ ಪಂಚಗೌವ್ಯ ತರಬೇತಿ ಪಡೆದು ಕೃಷಿಯತ್ತ ಮುಖ ಮಾಡಿ ಈಗ ಅಪ್ಪಟ ಕೃಷಿಕರಾಗಿದ್ದಾರೆ. ತಂದೆಯ 5 ಎಕರೆ ಜಮೀನಿನಲ್ಲಿ ರಸಾಯನ ಉಪಯೋಗಿಸದೆ ಸಾವಯವ ಕೃಷಿಯ ಜೋತೆಗೆ ಗೋವುಗಳನ್ನ ಸಾಕಿ ಗೋವಿನ ಉಪ ಉತ್ಪಾದನೆಗಳನ್ನ ಮಾಡಿ ಯಶಸ್ಸು ಕಂಡಿದ್ದಾರೆ.
ಈ ಮೋದಲು ಶೀತಲ ಅವರ ತಂದೆ ಅಣ್ಣಾಸಾಬ ಪಾಟೀಲ್ ರಾಸಾಯನಿಕ ಬಳಸಿಕೊಂಡು ಕಬ್ಬು ಮತ್ತು ಅರಶಿಣ ಬೆಳೆಗಳನ್ನ ಮಾಡುತ್ತಿದ್ದರು. ಆದರೆ, ಶೀತಲ ಒಳ್ಳೆಯ ಆರೋಗ್ಯದ ದೃಷ್ಟಿಯಿಂದ ತಂದೆಯ ಜಮೀನು ಪಡೆದು ರಸಾಯ ನಗಳಿಗೆ ಗುಡ ಬೈ ಹೇಳಿದ್ದಾರೆ. ಇವರ ಪ್ರಮುಖ ಸಾಧನೆ ಅಂದ್ರೆ ಸಾಮಾನ್ಯವಾಗಿ ಸಾಕಷ್ಟು ಜನ ತಮ್ಮ ಗೋವುಗಳನ್ನ ನೋಡಿಕೊಳ್ಳಲಾಗದೆ ಹಾಲು ಕೊಡುವುದನ್ನ ಬಂದ ಮಾಡಿದ ತಕ್ಷಣ ಕಸಾಯಿ ಖಾನೆಗೆ ಮಾರಾಟ ಮಾಡುತ್ತಾರೆ ಅಂತಹ ಗೋವುಗಳನ್ನ ಇವರು ತಂದು ಅವುಗಳನ್ನ ಸಾಕಿ ದೇಶಿ ಗೋವುಗಳಿಂದ ವಿವಿಧ ಬಗೆಯ ಉತ್ಪನ್ನಗಳನ್ನ ತಾಯಾರಿಸುತ್ತಿದ್ದಾರೆ.
ತಮ್ಮ ಹೊಲದಲ್ಲಿ 14 ದೇಶಿ ಗೋವುಗಳನ್ನ ಸಾಕಾಣಿಕೆ ಮಾಡಿ ಗೋವುಗಳಿಂದ ಬರುವ ಗೋಮುತ್ರ, ಶಗಣಿ ಉಪಯೋಗಿಸಿಕೊಂಡು ಇಂದು ಮಾರುಕಟ್ಟೆಯಲ್ಲಿ ಸಿಗುವ ಗೋಮೂತ್ರ ಅರ್ಕ, ದೂಪ, ಘನ ಜೀವಾಮೃತ, ದಂತ ಮಂಜನ, ಸ್ನಾನ ಚೋರ್ನ, ಅಮೃತ ಜಲ, ಅಗ್ನಿಹೋತ್ರಕ್ಕೆ ಬೇಕಾಗುವ ಕುಳ್ಳು, ವಿಭೂತಿ, ಸೊಳ್ಳೆ ಬತ್ತಿ, ಗಳನ್ನ ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.
ಇದನ್ನು ಓದಿ : ಬಸವನಾಡಿನಲ್ಲಿ ತಾಂಡಾಗಳೆಲ್ಲ ಖಾಲಿ ಖಾಲಿ: ಶಾಲೆ ಬಿಡಿಸಿ ಮಕ್ಕಳೊಂದಿಗೆ ಗುಳೆ ಹೋದ ಜನ ಯಾಕೆ ಗೊತ್ತಾ?
ಇನ್ನು ಗೋವಿನಿಂದ ಸಿಗುವ ಗೋಮೂತ್ರವನ್ನ ಬಳಸಿಕೊಂಡೆ ಘನ ಜೀವಾಮೃತ ಹಾಗೂ ಜೀವಾಮೃತ ತಯಾರಿಸಿ ತಮ್ಮ ಹೊಲದಲ್ಲಿ ಕೃಷಿ ಮಾಡುತ್ತಾರೆ. ಯಾವುದೇ ರಾಸಾಯನಿಕ ಬಳಸದೆ ಶುದ್ದ ಸಾವಯವ ಕೃಷಿಯನ್ನೆ ಇವರು ಮಾಡುತ್ತಿದ್ದಾರೆ. ಇನ್ನು ಗೋವುಗಳ ಉಪ ಉತ್ಪಾದನೆಗಳನ್ನ ಮಾರಾಟ ಮಾಡಲು ತಮ್ಮದೆ ಒಂದು ಗುಂಪನ್ನ ಶೀತಲ ಕಟ್ಟಿಕೊಂಡಿದ್ದಾರೆ. ತಮ್ಮ ಜೊತೆ ಇದ್ದ ಐದು ಜನ ಸ್ನೇಹಿತರ ಜೊತೆಗೆ ಉಪ ಉತ್ಪನ್ನಗಳನ್ನ ಮಾರಾಟ ಮಾಡುತ್ತಾರೆ. ತಮ್ಮ ಅಂಗಡಿ ಹಾಗೂ ಇತರೆ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ