ಕಲಬುರ್ಗಿ ಜಿಮ್ಸ್ ಸಿಬ್ಬಂದಿ ಚೆಲ್ಲಾಟ ; ಚಿಕಿತ್ಸೆಗಾಗಿ ರೈತನ ಪರದಾಟ

ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಬೇಸತ್ತು ರೈತನೋರ್ವನ್ನು ಮನೆಗೆ ವಾಪಸ್ ಕರೆದುಕೊಂಡು ಹೋದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

news18-kannada
Updated:August 7, 2020, 1:17 PM IST
ಕಲಬುರ್ಗಿ ಜಿಮ್ಸ್ ಸಿಬ್ಬಂದಿ ಚೆಲ್ಲಾಟ ; ಚಿಕಿತ್ಸೆಗಾಗಿ ರೈತನ ಪರದಾಟ
ನೆಲಕ್ಕೆ ಮಲಗಿರುವ ರೈತ
  • Share this:
ಕಲಬುರ್ಗಿ(ಆಗಸ್ಟ್​. 07): ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ದಿನೇ ದಿನೇ ವ್ಯಾಪಕ ಸ್ವರೂಪ ಪಡೆದುಕೊಂಡಿದೆ. ಚಿಕಿತ್ಸೆಗಾಗಿ ಕೋವಿಡ್ ರೋಗಿಗಳ ಜೊತೆಗೆ ನಾನ್ ಕೋವಿಡ್ ರೋಗಿಗಲೂ ಪರದಾಡುವಂತಾಗಿದೆ. ನೆಗೆಡಿ, ಕೆಮ್ಮು ಜ್ವರ ಬಂದವರಿಗೆ ಎಲ್ಲಿಯೂ ದಾಖಲಿಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತನೋರ್ವ ನೆಲದ ಮೇಲೆ ಬಿದ್ದು ಒದ್ದಾಡಿದರೂ ಕ್ಯಾರೇ ಎನ್ನದ ಆರೋಗ್ಯ ಇಲಾಖೆ ಸಿಬ್ಬಂದಿ. ನೆಗೆಟಿವ್ ಎಂದು ವರದಿ ಬಂದರು ಚಿಕಿತ್ಸೆಗೆ ನಿರಾಕರಿಸಿ ಬೇರೆ ಕಡೆ ಹೋಗುವಂತೆ ಸಿಬ್ಬಂದಿ ಸೂಚಿಸಿದ್ದಾರೆ.

ಇದು ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯ ಕರ್ಮಕಾಂಡ. ಇಲ್ಲಿನ ಸಿಬ್ಬಂದಿ ತಮ್ಮ ಕಾರ್ಯವೈಖರಿ ಮೂಲಕವೇ ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. ಇದೀಗ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಬೇಸತ್ತು ರೈತನೋರ್ವನ್ನು ಮನೆಗೆ ವಾಪಸ್ ಕರೆದುಕೊಂಡು ಹೋದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಜಿಮ್ಸ್ ಆಸ್ಪತ್ರೆ ಒಂದು ರೀತಿಯಲ್ಲಿ ಅವ್ಯವಸ್ಥೆಯ ಆಗರವಾಗಿಯೇ ಮಾರ್ಪಟ್ಟಿದೆ. ಜಿಲ್ಲಾಡಳಿತ ಏನೆಲ್ಲ ಎಚ್ಚರಿಕೆ ನೀಡಿದರೂ ಈಗಲೂ ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ಮುಂದುವರೆದಿದೆ. ಜ್ವರದಿಂದ ಬಳಲುತ್ತಿದ್ದ ಯುವ ರೈತನೋರ್ವ ಚಿಕಿತ್ಸೆಗಾಗಿ ಗಂಟೆಗಟ್ಟಲೆ ಪರದಾಡುವಂತಾಗಿದೆ. ಕೊನೆಗೆ ಚಿಕಿತ್ಸೆ ನೀಡದೆಯೇ ಸಿಬ್ಬಂದಿ ವಾಪಸ್ ಕಳುಹಿಸಿದಾರೆ. ಕೋವಿಡ್ ರಿಪೋರ್ಟ್ ಬರುವವರೆಗೂ ನೆಲದ ಮೇಲೆಯೇ ಮಲಗಿಕೊಂಡಿದ್ದ ಯುವ ರೈತ. ನಾಲ್ಕು ತಾಸಿಗೂ ಹೆಚ್ಚು ಕಾಲ ಬಂಡೆಯ ಮೇಲೆ ಮಲಗಿದ್ದ ಯುವಕ. ನೆಗೆಟಿವ್ ಎಂದು ವರದಿ ಬಂದರು ದಾಖಲಿಸಿಕೊಳ್ಳದ ಸಿಬ್ಬಂದಿ. ಸತೀಶ್ ಮಾಲೀಬಿರಾದಾರ ಚಿಕಿತ್ಸೆಗಾಗಿ ಪರದಾಡಿದ ಯುವ ರೈತನಾಗಿದ್ದಾನೆ.

ಸತೀಶ್ ಆಳಂದ ತಾಲೂಕಿನ ಸಂಗೊಳಗಿ ಗ್ರಾಮದ ನಿವಾಸಿ. ಹೊಲದಲ್ಲಿ ಕೆಲಸ ಮಾಡುವಾಗ ಮಳೆಯಲ್ಲಿ ತೊಯ್ದಿದ್ದ ಸತೀಶ್ ಗೆ ನಂತರ ನೆಗಡಿ, ಕೆಮ್ಮು, ಜ್ವರ ಬಂದಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೇ ಇದ್ದಾಗ ಜಿಮ್ಸ್ ಗೆ ಬಂದಿದ್ದ ಸತೀಶ್ ಗೆ, ಇಲ್ಲಿಯೂ ದಾಖಲು ಮಾಡಿಕೊಳ್ಳಲು ನಿರಾಕರಣೆ ಮಾಡಿದ್ದಾರೆ. ಥ್ರೋಟ್ ಸ್ಯಾಂಪಲ್ ತೆಗೆದುಕೊಂಡು ಲ್ಯಾಬ್ ಗೆ ರವಾನೆ ಮಾಡಿದ್ದಾರೆ. ವರದಿ ಬರುವವರೆಗೂ ಆಸ್ಪತ್ರೆ ಆವರಣದಲ್ಲಿಯೇ ಮಲಗಿ ಯುವಕ ನರಳಾಟ ನಡೆಸಿದ್ದಾನೆ. ನಾಲ್ಕು ತಾಸಿನ ನಂತರ ವರದಿ ನೆಗೆಟಿವ್ ಎಂದು ಬಂದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

ವರದಿಯನ್ನು ಕೈಗೆ ಕೊಟ್ಟು ಬೇರೆ ಕಡೆ ಚಿಕಿತ್ಸೆ ಪಡೆಯುವಂತೆ ಹೇಳಿರುವ ಸಿಬ್ಬಂದಿ. ಜಿಮ್ಸ್ ನಲ್ಲಿ ಪಾಸಿಟಿವ್ ಬಂದವರಿಗೆ ಮಾತ್ರ ಚಿಕಿತ್ಸೆ ಎಂದು ಸಬೂಬು ನೀಡಿದ್ದಾರೆ. ಆತನನ್ನು ಮತ್ತೆ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದರೂ ಚಿಕಿತ್ಸೆ ನೀಡಲು ನಿರಾಕರಣೆ ಮಾಡಿದ್ದರಿಂದ, ಸತೀಶ್ ನನ್ನು ಪೋಷಕರು ಮನೆಗೆ ಕರೆದೊಯ್ದಿದ್ದಾರೆ. ಸತ್ತರೂ ಮನೆಯಲ್ಲಿಯೇ ಸಾಯಲಿ ಎಂದು ಅನಿವಾರ್ಯವಾಗಿ ಮನೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ : ಕ್ವಾರಂಟೈನ್ ನಿಯಮಗಳ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಟ ; ರಾಜ್ಯದಲ್ಲಿ ಎರಡು ಸಾವಿರ ಪ್ರಕರಣ ದಾಖಲು

ಆರೋಗ್ಯ ಇಲಾಖೆ ಸಿಬ್ಬಂದಿಯ ವರ್ತನೆಯಿಂದ ಬೇಸತ್ತು ಮನಗೆ ವಾಪಸ್ ಕರೆದೊಯ್ದಿದ್ದು, ಸಿಬ್ಬಂದಿಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ನಿರ್ಲಕ್ಷ್ಯ ತೋರುತ್ತಿರುವ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ್ ಒತ್ತಾಯಿಸಿದ್ದಾರೆ.

ಕಲಬುರ್ಗಿಯಲ್ಲಿ ಕೊರೋನಗೆ ಸ್ಟಾಫ್ ನರ್ಸ್ ಬಲಿಯಾಗಿದ್ದಾನೆ. ಮೃತ ದುರ್ದೈವಿಯನ್ನು ಶುಶ್ರೂಷಕ ರವಿಕುಮಾರ (40) ಎಂದು ಗುರುತಿಸಲಾಗಿದೆ. ಆಳಂದ ತಾಲೂಕಿನ ಯಳಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕನಾಗಿದ್ದ ರವಿಕುಮಾರ್ ಗೆ ವಾರದ ಹಿಂದೆ ರಾಂಡಮ್ ಟೆಸ್ಟ್ ಮಾಡಲಾಗಿತ್ತು. ತಪಾಸಣಾ ವೇಳೆ ಈತನಿಗೆ ಸೋಂಕು ಇರುವುದು ದೃಢಪಟ್ಟಿತ್ತು. ನಂತರ ಚಿಕಿತ್ಸೆಗಾಗಿ ಜಿಮ್ಸ್ ಗೆ ದಾಖಲು ಮಾಡಲಾಗಿತ್ತು. ತೀವ್ರ ಉಸಿರಾಟ ತೊಂದರೆಯಿಂದ ನಿನ್ನೆ ಜಿಮ್ಸ್ ನಲ್ಲಿ ನಿಧನ ಹೊಂದಿದ್ದಾನೆ. ಸ್ಟಾಫ್ ನರ್ಸ್ ಸಾವಿನಿಂದಾಗಿ ಆರೋಗ್ಯ ಇಲಾಖೆ ಉಳಿದ ಸಿಬ್ಬಂದಿಯಲ್ಲಿಯೂ ಆತಂಕ ಮನೆ ಮಾಡಿದೆ.
Published by: G Hareeshkumar
First published: August 7, 2020, 1:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading