• Home
  • »
  • News
  • »
  • district
  • »
  • ತನಗೆ ಕೊರೋನಾ ಇದೆ ಎಂದ ರೈತ : ಬೆಚ್ಚಿಬಿದ್ದ ಕೊಳ್ಳೇಗಾಲದ ರೇಷ್ಮೆಗೂಡಿನ ಮಾರುಕಟ್ಟೆ

ತನಗೆ ಕೊರೋನಾ ಇದೆ ಎಂದ ರೈತ : ಬೆಚ್ಚಿಬಿದ್ದ ಕೊಳ್ಳೇಗಾಲದ ರೇಷ್ಮೆಗೂಡಿನ ಮಾರುಕಟ್ಟೆ

ರೇಷ್ಮೆ ಮಾರುಕಟ್ಟೆ ಎದುರು ಸೇರಿರುವ ಜನರು

ರೇಷ್ಮೆ ಮಾರುಕಟ್ಟೆ ಎದುರು ಸೇರಿರುವ ಜನರು

ಸ್ಥಳಕ್ಕೆ ತಹಶೀಲ್ದಾರ್ ಕುನಾಲ್ ಆಗಮಿಸಿ ವಿಚಾರಣೆ ನಡೆಸಿದಾಗ ರೈತ ತಮಾಷೆಗೆ ಈ‌ ರೀತಿ ಮಾತನಾಡಿರುವುದು ತಿಳಿದು ಬಂದ ನಂತರ‌ ಆತನನ್ನು ವಾಪಸ್ ಊರಿಗೆ ಕಳುಹಿಸಿದ್ದಾರೆ

  • Share this:

ಚಾಮರಾಜನಗರ(ಜೂ.21) : ಜಿಲ್ಲೆಯ ಕೊಳ್ಳೇಗಾಲದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಗೆ ಬಂದಿದ್ದ ರೈತನೊಬ್ಬ ಪದೇ ಪದೇ ಕೆಮ್ಮುವ ಮೂಲಕ ಇಡೀ ಮಾರುಕಟ್ಟೆಯಲ್ಲಿ ಕೆಲಕಾಲ ಕೊರೋನಾ ಆತಂಕ ಮೂಡಿಸಿದ ಘಟನೆ ನಡೆದಿದೆ.


ರೇಷ್ಮೆ ಮಾರುಕಟ್ಟೆಯಲ್ಲಿ ಮೇಲಿಂದ ಮೇಲೆ ಕೆಮ್ಮುತ್ತಿದ್ದವನನ್ನು ನೋಡಿದವರು ನಿನಗೆ ಕೊರೋನಾ ಬಂದಿದೆಯಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಹೌದು ನನಗೂ ಬಂದಿದೆ, ನಮ್ಮಣ್ಣನಿಗೂ ಬಂದಿದೆ ಎಂದು ಕೆಮ್ಮುತ್ತಿದ್ದ ವ್ಯಕ್ತಿ  ಉತ್ತರ ಕೊಟ್ಟ. ಇದನ್ನು ಕೇಳಿಸಿಕೊಂಡಿದ್ದೇ ತಡ  ಅಲ್ಲಿದ್ದವರೆಲ್ಲಾ ಬೆಚ್ಚಿಬಿದ್ದರು.


ಕೊಳ್ಳೇಗಾಲ ತಾಲೂಕಿನ ಮುಡಿಗುಂಡ‌ಂನಲ್ಲಿರುವ ಸರ್ಕಾರಿ ರೇಷ್ಮೆ‌ಗೂಡು ಮಾರುಕಟ್ಟೆಗೆ ಕನಕಪುರದ ಅಚ್ಚಲು ಗ್ರಾಮದಿಂದ ಗೂಡು ತಂದಿದ್ದ ರೈತನೊಬ್ಬ ಕೊರೋನಾ ವಿಚಾರದಲ್ಲಿ ತಮಾಷೆ ಮಾಡಿದ್ದ. ಇದನ್ನು ಕೇಳಿಸಿಕೊಂಡ‌ ಇಲ್ಲಿನ‌ ರೀಲರ್ಸ್ ಗಳು ತಕ್ಷಣ ಅಧಿಕಾರಿಗಳ ಗಮನಕ್ಕೆ ತಂದರು. ಕೊರೋನಾ ಇದೆ ಎಂದಿದ್ದ ರೈತನನ್ನು ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಿದರು. ಕನಕಪುರದ ವೈದ್ಯಾಧಿಕಾರಿಗಳಿಗೂ ಕರೆ ಮಾಡಿ ಆತನ ಬಗ್ಗೆ ವಿಚಾರಿಸಿದರು.


ಇದನ್ನೂ ಓದಿ :  ಅಮವಾಸ್ಯೆ, ಗ್ರಹಣ ಎಂಬ ಮೌಢ್ಯಕ್ಕೆ ಸೆಡ್ಡು ಹೊಡೆದು ದಿನವಿಡೀ ಅಧಿಕಾರಿಗಳ ಸಭೆ ನಡೆಸಿದ ಎಂ. ಬಿ. ಪಾಟೀಲ


ಸ್ಥಳಕ್ಕೆ ತಹಶೀಲ್ದಾರ್ ಕುನಾಲ್ ಆಗಮಿಸಿ ವಿಚಾರಣೆ ನಡೆಸಿದಾಗ ರೈತ ತಮಾಷೆಗೆ ಈ‌ ರೀತಿ ಮಾತನಾಡಿರುವುದು ತಿಳಿದು ಬಂದ ನಂತರ‌ ಆತನನ್ನು ವಾಪಸ್ ಊರಿಗೆ ಕಳುಹಿಸಿದ್ದಾರೆ. ನಂತರ ರೈತ ಮತ್ತು ಆತನ ಕಡೆಯವರು ತಂದಿದ್ದ ರೇಷ್ಮೆಗೂಡನ್ನು ಒಂದೆಡೆ ಪ್ರತ್ಯೇಕವಾಗಿ ಇಡಲಾಯಿತು.


ರೇಷ್ಮೆಗೂಡಿನ ಮಾರುಕಟ್ಟೆಗೆ ಬೇರೆ ಬೇರೆ ಜಿಲ್ಲೆಗಳಿಂದ  ರೈತರು ಪ್ರತಿನಿತ್ಯ ಬರುತ್ತಾರೆ. ಆದರೆ ಅಧಿಕಾರಿಗಳು ಯಾರಿಗೂ ಸರಿಯಾಗಿ ಸ್ಕ್ರೀನಿಂಗ್ ಮಾಡುವುದಾಗಲಿ, ತಪಾಸಣೆ ಮಾಡುತ್ತಿಲ್ಲ ಎಂದು ರೇಷ್ಮೆ ರೀಲರ್ಸ್ ಗಳು ಆರೋಪಿಸಿದ್ದಾರೆ.

Published by:G Hareeshkumar
First published: