Avocado: ಬೆಣ್ಣೆ ಹಣ್ಣಿನಿಂದ ಚಿನ್ನ ಬೆಳೆಯುತ್ತಿರುವ ಕೋಲಾರದ ರೈತರ, ಎಲ್ಲಾ ಬೆಳೆಗಳಿಗಿಂತ ಇದೇ ಹೆಚ್ಚು ಲಾಭವಂತೆ

ಒಂದು ಗ್ಲಾಸ್ ಬಟರ್ ಪ್ರೂಟ್ ಜ್ಯೂಸ್ ಬೆಲೆ 60 ರೂಪಾಯಿ ಇದ್ದು ಒಂದು ಕೆಜಿ ಹಣ್ಣು 150 ರೂಪಾಯಿಗು ಹೆಚ್ಚಿದೆ, ಇವೆಲ್ಲ ಅಂಶಗಳನ್ನು ಅರಿತುಕೊಂಡು, ಜಿಲ್ಲೆಯ ಮಟ್ಟಿಗೆ ವಾಣಿಜ್ಯ ಬೆಳೆಯಾಗಿರುವ ಅವಕಾಡೊ ಗಿಡಗಳನ್ನ ಬೆಳೆಯುತ್ತಿದ್ದಾರೆ

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

  • Share this:
ಕೋಲಾರ: ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ರೈತರು ಬೇರೆ ದೇಶದ ಹಣ್ಣುಗಳನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ,  ಇದೀಗ ನಮ್ಮ ರಾಜ್ಯದ  ಮಲೆನಾಡು ಭಾಗದಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಬಟರ್ ಪ್ರೂಟ್ (AVOVCADO) ಹಣ್ಣಿನ ಗಿಡಗಳನ್ನ ಕೋಲಾರದ ರೈತರು ಬೆಳೆಸುತ್ತಿದ್ದಾರೆ,  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಾಡುದೇವಂಡಹಳ್ಳಿ ಗ್ರಾಮದ, ರೈತ ವೆಂಕಟೇಶಪ್ಪ ಎನ್ನುವರು, 60 ವರ್ಷ ವಯಸ್ಸಿನಲ್ಲು ಹೊಸ ಬೆಳೆ ಹಾಕಿ ಇತರರಿಗು ಮಾದರಿಯಾಗಿದ್ದಾರೆ, ತಮ್ಮ ಒಂದೂವರೆ ಎಕರೆ ಪ್ರದೇಶದಲ್ಲಿ ಕೇರಳದಿಂದ ಖರೀದಿಸಿ ತಂದಿರುವ 200 ಬಟರ್ ಪ್ರೂಟ್ ಹಣ್ಣಿನ ಗಿಡಗಳನ್ನ ಬೆಳೆಸುತ್ತಿದ್ದು, ಈಗಾಗಲೇ ಒಂದು ವರ್ಷ ಕಳೆದಿದೆ,  ಕೋಲಾರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅವಕಾಡೋ ಗಿಡಗಳನ್ನ ಬೆಳೆಯುತ್ತಿರುವ ರೈತನೆಂದು ವೆಂಕಟೇಶಪ್ಪ ಅವರು ಹೆಗ್ಗಳಿಕೆ ಪಾತ್ರವಾಗಿದ್ದು, ಕಳೆದೊಂದು ವರ್ಷದಿಂದ ರೈತ ವೆಂಕಟೇಶಪ್ಪ ಹಾಗು ಪತ್ನಿ ಮುನಿವೆಂಕಟಮ್ಮ ವೈಜ್ಞಾನಿಕ ಹಾಗು ಸಾವಯವ ರೀತಿಯಲ್ಲಿ ಗಿಡಗಳನ್ನ ಆರೈಕೆ ಮಾಡ್ತಿದ್ದಾರೆ, ಈಗಾಗಲೇ ಒಂದೆರಡು ಗಿಡಗಳಲ್ಲಿ ಕಾಯಿ ಬಿಡಲು ಆರಂಭವಾಗಿದ್ದು,  ಮೂರು ವರ್ಷಗಳ ನಂತರ ಗಿಡಗಳಲ್ಲಿ ಸಂಪೂರ್ಣವಾಗಿ ಪಸಲು ಬಿಡಲು ಆರಂಭವಾಗಲಿದೆ.

ಮುಂದೆ  ಮಾವಿನ ಮರಗಳಂತೆ ಪ್ರತಿ ವರ್ಷವೂ ನೂರಾರು ಕೆಜಿಗಳಷ್ಟು ಪಸಲು ರೈತರಿಗೆ ಸಿಗಲಿದ್ದು, ಸದ್ಯಕ್ಕಿರುವ ಬೇಡಿಕೆಯಂತೆ ಭರ್ಜರಿ ಲಾಭವು ರೈತರು ಸಿಗುವ ಸಾಧ್ಯತೆಯಿದೆ. ಕೋಲಾರ ಜಿಲ್ಲೆಗೆ ಅವಕಾಡೊ ಹಣ್ಣಿನ ಗಿಡಗಳು ಹೊಸ ಬೆಳೆಯಾಗಿದ್ದು, ಸ್ತಳೀಯ ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತ ವೆಂಕಟೇಶಪ್ಪ ಅವರಿಗೆ ಸಾಕಷ್ಟು   ಪ್ರೋತ್ಸಾಹ ನೀಡಿದ್ದಾರೆ.

ವೆಂಕಟೇಶಪ್ಪ ಅವರ ಮಗ ಚಲಪತಿ ಸಹಾಯದಿಂದ  ಕೇರಳ ರಾಜ್ಯದಿಂದ   ಕಸಿ ಮಾಡಿರುವ ಅವಕಾಡೊ ತಳಿಯ ಗಿಡಗಳನ್ನ ತಂದು ಬೆಳೆಸಲು ಸಹಾಯವಾಗಿದೆ, ಇನ್ನು ಗಿಡಗಳನ್ನ ಆರೈಕೆ ಮಾಡುವ ವಿಧಾನವನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಲೇ ತರಬೇತಿಯನ್ನ ರೈತ ವೆಂಕಟೇಶಪ್ಪರಿಗೆ ನೀಡಿದ್ದು, ಅಧಿಕಾರಿಗಳ ಮಾರ್ಗದರ್ಶನದಿಂದ  ಮೊದಲ ವರ್ಷ ಯಶಸ್ವಿಯಾಗಿ ಗಿಡಗಳು ಬೆಳೆಸಿದು ನಿಂತಿದೆ, ಎಲ್ಲರಿಗು ತಿಳಿದಿರುವ ಹಾಗೆ ಅರೋಗ್ಯಕ್ಕೆ ಅವಶ್ಯವಿರುವ ಹೆಚ್ಚು ಪೋಷಕಾಂಶಗಳನ್ನ ಅವಕಾಡೊ ಹಣ್ಣು ಹೊಂದಿದ್ದು, ಬೇಡಿಕೆಯು ಹೆಚ್ಚಿದೆ.

ಇದನ್ನೂ ಓದಿ: ಇನ್ಮೇಲೆ ಬೆಂಗಳೂರಿನ ಕೆರೆಗಳ ಬಳಿ ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗಬಹುದು, ಆದ್ರೆ ಒಂದಷ್ಟು ರೂಲ್ಸ್ ಇದೆ

ಕೋಲಾರ ನಗರದಲ್ಲಿ ಒಂದು ಗ್ಲಾಸ್ ಬಟರ್ ಪ್ರೂಟ್ ಜ್ಯೂಸ್ ಬೆಲೆ 60 ರೂಪಾಯಿ ಇದ್ದು ಒಂದು ಕೆಜಿ ಹಣ್ಣು 150 ರೂಪಾಯಿಗು ಹೆಚ್ಚಿದೆ, ಇವೆಲ್ಲ ಅಂಶಗಳನ್ನು ಅರಿತುಕೊಂಡು, ಜಿಲ್ಲೆಯ ಮಟ್ಟಿಗೆ ವಾಣಿಜ್ಯ ಬೆಳೆಯಾಗಿರುವ ಅವಕಾಡೊ ಗಿಡಗಳನ್ನ ಬೆಳೆಯುತ್ತಿದ್ದಾರೆ, ವೆಂಕಟೇಶಪ್ಪ ಹಾಗು ಮುನಿವೆಂಕಟಮ್ಮ ರೈತ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಬೇರೆಡೆ ಕೆಲಸ ಮಾಡುತ್ತಿದ್ದಾರೆ, ಇಳಿ ವಯಸ್ಸಿ‌ಲ್ಲು ಮನೆಯಲ್ಲಿ ಕುಳಿತು ಕಾಲಹರಣ ಮಾಡುವ ಮನಸ್ಸಿಲ್ಲಿದೆ, ದಿನದ ಪೂರ್ಣ ಅವಧಿಯನ್ನು ತೋಟದಲ್ಲೆ ಕೆಲಸ ಮಾಡುವ ಮೂಲಕ ಕಳೆಯುತ್ತಿದ್ದಾರೆ, ಬಟರ್ ಪ್ರೂಟ್ ಹಣ್ಣಿನ ಗಿಡಗಳನ್ನ ಮೊದಲ ಬಾರಿಗೆ ಜಿಲ್ಲೆಯಲ್ಲಿ  ಬೆಳೆಯುತ್ತಿರುವ ಹೆಗ್ಗಳಿಕೆಯು ವೆಂಕಟೇಶಪ್ಪ ಅವರಿಗಿದ್ದು,  ಈ ಬಗ್ಗೆ ಮಾತನಾಡಿದ ಅವರು ಸಾಂಪ್ರದಾಯಿಕ ಬೆಳೆಗಳನ್ನ ಅಲ್ಲದೇ, ಬೇರೆ ಕೃಷಿ ಮಾಡಬೇಕೆನ್ನುವ ಹುಮ್ಮಸ್ಸಿನಿಂದ ಅವಕಾಡೋ ಹಣ್ಣಿನ ಗಿಡ ಬೆಳೆಸುತ್ತಿರುವುದಾಗಿ ತಿಳಿಸಿದ್ದಾರೆ.

ಅವಕಾಡೊ ಗಿಡಗಳನ್ನ ಬೆಳೆಸುವುದು ಇತರೆ ಗಿಡಗಳನ್ನ ಬೆಳೆಸಿದಂತೆ ಅಲ್ಲ, ವಾತಾವರಣ ಏರುಪೇರಾದಾಗ ರೋಗ ಬಾದೆ ಬೇಗನೆ ಕಾಣಿಸಿಕೊಳ್ಳಲಿದ್ದು, ಔಷದಿ ಸಿಂಪಡನೆ ಮಾಡಬೇಕಿದೆ, ಹೆಚ್ಚಿನ ಗಾಳಿಯು ಆರಂಭವಾದರು ಗಿಡಗಳಲ್ಲಿನ ಎಲೆಗಳಲ್ಲು ರೋಗಗಳನ್ನ ಬೇಗನೇ ಕಾಣಬಹುದಾಗಿದೆ, ಆದರೆ ವೆಂಕಟೇಶಪ್ಪ ದಂಪತಿಗಳು ಗೊಬ್ಬರ ಸಿಂಪಡನೆ, ಔಷಧಿ ಸಿಂಪಡನೆಯನ್ನ ಸರಿಯಾದ ಸಮಯದಲ್ಲಿ ಮಾಡುವ ಮೂಲಕ ಗಿಡಗಳನ್ನ ಉತ್ತಮ ಗುಣಮಟ್ಟದಲ್ಲಿ ಕಾಪಾಡಿಕೊಂಡಿದ್ದಾರೆ, ಒಟ್ಟಿನಲ್ಲಿ ಕೋಲಾರ ರೈತರು  ಕಡಿಮೆ ನೀರಿನಲ್ಲೆ, ಹೆಚ್ಚು ಬೆಳೆ ಬೆಳೆಯುವ ಕಾರ್ಯವನ್ನ ಮೊದಲಿಂದಲು ಮಾಡುತ್ತಿದ್ದಾರೆ, ಇದರ ಜೊತೆಗೆ ಹೊಸ ಹೊಸ ರೀತಿಯ ಹಣ್ಣಿನ ತಳಿಗಳನ್ನು ರೈತರು ಧೈರ್ಯದಿಂದ ಬೆಳೆಯುತ್ತಿದ್ದು, ಬೇಡಿಕೆಯಿರುವ ತೋಟಗಾರಿಕಾ ಬೆಳೆಗಳನ್ನು ಬೇರೆಯ ರೈತರು ಅನುಸರಿಸುತ್ತಾ ಉತ್ತಮ ಲಾಭ ಪಡೆದುಕೊಳ್ಳಲು ಸಹಾಯಕಾರಿ ಎಂದು ರೈತ ವೆಂಕಟೇಶಪ್ಪ ತಿಳಿಸಿದ್ದಾರೆ.
Published by:Soumya KN
First published: