• Home
  • »
  • News
  • »
  • district
  • »
  • ಯುಗಾದಿ ಹಬ್ಬದ ದಿನ ಚುನಾವಣಾ ಪ್ರಚಾರಕ್ಕೆ ಖ್ಯಾತ ಗಾಯಕಿ ಮಂಗ್ಲಿ ಎಂಟ್ರಿ

ಯುಗಾದಿ ಹಬ್ಬದ ದಿನ ಚುನಾವಣಾ ಪ್ರಚಾರಕ್ಕೆ ಖ್ಯಾತ ಗಾಯಕಿ ಮಂಗ್ಲಿ ಎಂಟ್ರಿ

ಚುನಾವಣಾ ಪ್ರಚಾರದಲ್ಲಿ ಮಂಗ್ಲಿ

ಚುನಾವಣಾ ಪ್ರಚಾರದಲ್ಲಿ ಮಂಗ್ಲಿ

ಬಿಜೆಪಿ ಪಕ್ಷದ ಅಭ್ಯರ್ಥಿ ಚುನಾವಣಾ ಪ್ರಚಾರಕ್ಕೆ ಗಾಯಕಿ ಮಂಗ್ಲಿಯನ್ನು ಕರೆಸಿದ್ದಾರೆ. ಲಂಬಾಣಿ ಜನಾಂಗಕ್ಕೆ ಸೇರಿರುವ ಸತ್ಯವತಿ ರಾಠೋಡ ಮೂಲತಃ ಜನಪದ ಗಾಯಕಿಯಾಗಿದ್ದು, ಇನ್ನೂ ಅವರು ತಮ್ಮ ಜನಾಂಗದ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. ಇದೇ ಹಿನ್ನಲೆಯಲ್ಲಿ ಲಂಬಾಣಿ ಜನಾಂಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈಗ ಸತ್ಯವತಿಯನ್ನು ಪ್ರಚಾರಕ್ಕೆ ಕರೆಸುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮುಂದೆ ಓದಿ ...
  • Share this:

By Election, ರಾಯಚೂರು (ಏಪ್ರಿಲ್ 13): ಕಳೆದ ತಿಂಗಳು ಬಿಡುಗಡೆಯಾದ ಕನ್ನಡ, ತೆಲುಗು ಭಾಷೆ ರಾಬರ್ಟ್ ಚಿತ್ರದ ಹಾಡು "ಕಣ್ಣೆ ಅದರಿಂದಿ" ಹಾಡು ತೆಲುಗಿನಲ್ಲಿ ಜನಪ್ರಿಯವಾಗಿದೆ. ಇದೇ ಧಾಟಿಯಲ್ಲಿ ಕನ್ನಡದಲ್ಲಿ ಶ್ರೇಯಾ ಘೋಶಾಲ್, " ಕಣ್ಣು ಹೊಡೆಯಾಕ" ಹಾಡು ಹಾಡಿದ್ದಾರೆ. ಕನ್ನಡ ಮತ್ತು ತೆಲುಗು ಹಾಡು ಒಂದೇ ಧಾಟಿಯಲ್ಲಿ ಒಂದೇ ಅರ್ಥದಲ್ಲಿ ಪದ್ಯವಿದೆ. ಆದರೆ ಕನ್ನಡಿಗರು ಮತ್ತು ತೆಲುಗು ಭಾಷಿಗರು ಫಿದಾ ಆಗಿದ್ದು ಮಂಗ್ಲಿ ಸತ್ಯವತಿ ರಾಠೋಡ ಹಾಡಿರುವ ತೆಲುಗು ಅವತರಣಿಕೆಗೆ. 


ಈ ಹಾಡು ಹಾಡಿರುವ ಗಾಯಕಿ ಈಗ ಕರ್ನಾಟಕದಲ್ಲಿ ಫುಲ್ ಫೇಮಸ್ ಆಗಿದ್ದಾರೆ. ಇದನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ಬಳಸಿಕೊಳ್ಳುತ್ತಿದ್ದು ಚುನಾವಣಾ ಪ್ರಚಾರಕ್ಕೆ ಮಂಗ್ಲಿಯನ್ನು ಕರೆಸಿದ್ದಾರೆ. ಲಂಬಾಣಿ ಜನಾಂಗಕ್ಕೆ ಸೇರಿರುವ ಸತ್ಯವತಿ ರಾಠೋಡ ಮೂಲತಃ ಜನಪದ ಗಾಯಕಿಯಾಗಿದ್ದು, ಇನ್ನೂ ಅವರು ತಮ್ಮ ಜನಾಂಗದ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. ಇದೇ ಹಿನ್ನಲೆಯಲ್ಲಿ ಲಂಬಾಣಿ ಜನಾಂಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈಗ ಸತ್ಯವತಿಯನ್ನು ಪ್ರಚಾರಕ್ಕೆ ಕರೆಸುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.


ಮಂಗಳವಾರ ಮಧ್ಯಾಹ್ನದ ವೇಳೆಗೆ ಮಸ್ಕಿಗೆ ಬರಲಿರುವ ಗಾಯಕಿ ಮಂಗಲಿ, 3 ಗಂಟೆಗೆ ಅಡವಿ ಬಾವಿ ತಾಂಡಾ, 4.30 ಕ್ಕೆ ಹಡಗಲಿ ತಾಂಡಾ ಹಾಗು 6.30ಕ್ಕೆ ಮಸ್ಕಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮಂಗ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರ ಪರವಾಗಿ ಪ್ರಚಾರಕ್ಕೆ ಆಗಮಿಸುತ್ತಿರುವದರಿಂದ ಕ್ಷೇತ್ರದ ಜನ ಮಂಗ್ಲಿ ನೋಡಲು, ಆಕೆಯ ಹಾಡು ಕೇಳಲು ಕಾತುರರಾಗಿದ್ದಾರೆ. ಅಕ್ಕ ಪಕ್ಕದ ಜಿಲ್ಲೆಗಳ ಜನರು ಸಹ ಮಂಗ್ಲಿ ಕರ್ನಾಟಕಕ್ಕೆ ಬರುತ್ತಿರುವ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ‌.


ಸಾಮಾನ್ಯವಾಗಿ ಚುನಾವಣೆಯ ಸಂದರ್ಭದಲ್ಲಿ ಚಲನಚಿತ್ರ ನಟ, ನಟಿಯರು ಅಭ್ಯರ್ಥಿಯ ಪರ ಬಂದು ರೋಡ್ ಶೋ ಮಾಡಿ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಾರೆ. ಈಗ ನಡೆಯುತ್ತಿರುವ ಉಪಚುನಾವಣೆಯಲ್ಲಿ ಇದೇ ಪ್ರಥಮ ಬಾರಿಗೆ ಗಾಯಕಿಯೊಬ್ಬರು ಅಭ್ಯರ್ಥಿಯ ಪರ ಪ್ರಚಾರಕ್ಕೆ ಬರುತ್ತಿರುವುದು ವಿಶೇಷವಾಗಿದೆ.


ಕಳೆದ ಹದಿನೈದು ದಿನಗಳಿಂದ‌ ಬಿಜೆಪಿ, ಕಾಂಗ್ರೆಸ್ಸಿನ ಘಟಾನುಘಟಿ ನಾಯಕರಾದ ಸಿಎಂ ಯಡಿಯೂರಪ್ಪ , ಡಿಸಿಎಂ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ, ರಾಜ್ಯ ಉಸ್ತುವಾರಿ ಅರುಣಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಸುಮಾರು ಡಜನ್​ಗೂ ಅಧಿಕ ಸಚಿವರು, ಕೊಪ್ಪಳ, ರಾಯಚೂರು ಯಾದಗಿರಿ ಜಿಲ್ಲೆಯ ಜನಪ್ರತಿನಿಧಿಗಳು ಒಂದು ಕಡೆಯಾದ್ರೆ, ಕಾಂಗ್ರೆಸ್ಸಿನಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗೈ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಶಾಸಕರು, ಶಾಸಕರು ಈಗ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಮತದಾರರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ.


ಈ ಮಧ್ಯೆ ಅಭ್ಯರ್ಥಿ ಪ್ರತಾಪಗೌಡರ ಪರ‌ ಪ್ರಚಾರಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ ಮಂಗ್ಲಿ ಸತ್ಯವತಿ ರಾಠೋಡರನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತದೆ. ಇದರಿಂದ ಮತಗಳ ಬದಲಾವಣೆಯಾಗುವುದಿಲ್ಲ ಎಂಬುವುದು ರಾಜಕಾರಣಿಗಳಿಗೆ ಗೊತ್ತಿದೆ.  ಆದರೂ ಒಂದಿಷ್ಟು ಆಸೆಯಿಂದ ಜನಪ್ರಿಯರನ್ನು ಕರೆಸಿ ಪ್ರಚಾರ ಮಾಡುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಮಂಗ್ಲಿ ಹಾಡಿಗಾಗಿ ಮಸ್ಕಿಯ ಜನ ಕಾತುರದಿಂದ ಕಾಯುತ್ತಿರುವುದಂತೂ ಸತ್ಯ.

Published by:Soumya KN
First published: