ಲಾಕ್​​ಡೌನ್​ನಿಂದ ಕೊಳೆಯುತ್ತಿವೆ ರುಚಿಕರ ಮಾವು: ಫೇಮಸ್ ಹುಲಕೋಟಿ ಮಾವನ್ನು ಕೇಳೋರಿಲ್ಲ!

ಲಾಕ್ ಡೌನ್ ನಿಂದಾಗಿ ಮಾವು ಮಾರಾಟವಾಗದೆ ಮನೆಯಲ್ಲೇ ಕೊಳೆತ ಹೋಗುತ್ತಿದೆ. ಕೊರೊನಾದಿಂದ ಖರೀದಿ ಮಾಡಲು ವ್ಯಾಪಾರಸ್ಥರು ಬರುತ್ತಿಲ್ಲ ಹೀಗಾಗಿ ಮಾವು ಬೆಳೆದ ರೈತರು ಕಂಗಾಲಾಗಿದ್ದಾರೆ.

ಕೊಳೆಯುತ್ತಿರುವ ಮಾವು

ಕೊಳೆಯುತ್ತಿರುವ ಮಾವು

 • Share this:
  ಗದಗ: ಹೆಮ್ಮಾರಿ ಕೊರೊನಾ ನಿಯಂತ್ರಣ ಮಾಡಲು ಲಾಕ್ ಡೌನ್ ಅಸ್ತ್ರವನ್ನು ಪ್ರಯೋಗ ಮಾಡಲಾಗಿತ್ತು. ಆದ್ರೆ, ಈ ಲಾಕ್ ಡೌನ್ ನಿಂದಾಗಿ ಅನ್ನದಾತರ ಬಾಳು ಮೂರಾಬಟ್ಟೆಯಾಗಿದೆ. ಮಾವು ಬೆಳೆದ ರೈತರು ಅಕ್ಷರಶಃ ಕಂಗಲಾಗಿದ್ದಾರೆ. ಲಾಕ್ ಡೌನ್ ನಿಂದಾಗಿ ಮಾವು ಮಾರಾಟವಾಗದೆ ಕೊಳೆತು ಹೋಗುತ್ತಿದೆ. ಹೀಗಾಗಿ ನಮಗೆ ಸೂಕ್ತವಾದ ಪರಿಹಾರ ನೀಡುವಂತೆ ಅನ್ನದಾತರು ಒತ್ತಾಯ ಮಾಡಿದ್ದಾರೆ. ಕ್ರೂರಿ ಕೊರೊನಾ ಪ್ರತಿಯೊಬ್ಬರ ಜೀವ ಹಿಂಡಿ ಹಿಪ್ಪೆ ಮಾಡುತ್ತಿದೆ. ಜನ್ರ ನೆಮ್ಮದಿ ಹಾಳು ಮಾಡಿದೆ. ಅದೇಷ್ಟೋ ಮಕ್ಕಳನ್ನು ಅನಾಥವಾಗಿ ಮಾಡಿದೆ. ಇಷ್ಟಾದ್ರೂ ಈ ಕ್ರೂರಿಯ ಅಟ್ಟಹಾಸ ನಿಂತಿಲ್ಲ. ಈ ಹೆಮ್ಮಾರಿಯ ಹೊಡೆತಕ್ಕೆ ಈಗ ರೈತ ಸಮೂಹದ ಬೆನ್ನು ಮೂಳೆಯೇ ಮುರಿದಂತಾಗಿದೆ.

  ಭರ್ಜರಿ ಫಸಲು ಬಂದ್ರೂ ರೈತರು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ಹೌದು ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಬೆಳೆಯುವ ಮಾವಿಗೆ ಎಲ್ಲಿಲ್ಲದ ಬೇಡಿಕೆ. ಆದ್ರೆ ಲಾಕ್ ಡೌನ್ ನಿಂದಾಗಿ ಇದುವರಿಗೆ ಮಾವು ಮಾರಾಟವಾಗದೆ ಮನೆಯಲ್ಲಿ ಕೊಳೆತ ಹೋಗುತ್ತಿದೆ. ಅಂದಹಾಗೇ ಹುಲಕೋಟಿ ಗ್ರಾಮದ ರೈತ ಕರಿಯಪ್ಪ ರವಳೋಜಿ ಕುಟುಂಬ ಮಾವು ಬೆಳೆದು ವಿಲವಿಲ ಎಂತಿದೆ. ಮಾವು ಕಟಾವು ಮಾಡಿಕೊಂಡು ಬಂದು, ಮನೆಯಲ್ಲಿ ರಾಶಿ ಒಟ್ಟಿದ್ದಾರೆ. ಹೀಗಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಮಗೆ ಸರ್ಕಾರ ಪರಿಹಾರ ನೀಡಬೇಕು ಅಂತಾ ಒತ್ತಾಯ ಮಾಡಿದ್ದಾರೆ..

  ಮನೆಯಲ್ಲಿ ಕೊಳೆಯುತ್ತಿರುವ ಮಾವು!

  ಹುಲಕೋಟಿ, ಕುರ್ತಕೋಟಿ, ಅಸುಂಡಿ, ಸೇರಿದಂತೆ ಗದಗ ಜಿಲ್ಲೆಯಾದ್ಯಂತ 500 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಮಾವು ಬೆಳೆಯಲಾಗುತ್ತದೆ. ಆದ್ರೆ ಸೂಕ್ತವಾದ ಬೆಲೆ ಸಿಗದೆ ಮಾವು ಮಾರಾಟವಾಗದೆ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ಒಂದು ಡಜನ್ ಗೆ 400 ರೂಪಾಯಿ ರೆಟ್ ಇತ್ತು. ಆದ್ರೆ, ಲಾಕ್ ಡೌನ್ ಜಾರಿಯಾಗಿ ಮಾವು ಮಾರುಕಟ್ಟೆಗೆ ಬರದಂತಾಗಿದೆ. ಬಂದ್ರೂ ಜನ್ರೂ ಕೂಡ ಖರೀದಿಗೆ ಮನೆಬಿಟ್ಟು ಬರ್ತಾಯಿಲ್ಲ ಅಂತ ರೈತ ಗೋಳಾಡುತ್ತಿದ್ದಾನೆ. ಹೀಗಾಗಿ ಈಗ 100-150 ರೂಪಾಯಿಗೆ ಡಜನ್ ಕೊಟ್ರೂ ಮಾವು ಖರೀದಿ ಮಾಡ್ತಾಯಿಲ್ಲಾ. ಇಲ್ಲಿನ ಮಾವು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಕೊರೊನಾದಿಂದ ಖರೀದಿ ಮಾಡಲು ವ್ಯಾಪಾರಸ್ಥರು ಬರ್ತಾಯಿಲ್ಲಾ ಹೀಗಾಗಿ ಮಾವು ಬೆಳೆದ ರೈತರು ಕಂಗಾಲಾಗಿದ್ದಾರೆ.

  ಇದನ್ನೂ ಓದಿ: Darshan-Vijay: ಸಂಚಾರಿ ವಿಜಯ್ ಮೂಲಕ ವಿಜಯ ಸೇತುಪತಿಗೆ ಟಕ್ಕರ್ ಕೊಟ್ಟಿದ್ದ ಡಿಬಾಸ್ ದರ್ಶನ್!

  ಮಾವು ಬೆಳೆಯಲು ಖರ್ಚು ಮಾಡಿದ ಹಣವು ಕೂಡಾ ವಾಪಾಸ್ಸ್ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಇಡೀ ವರ್ಷ‌ ಘೋಷಣೆ ಮಾಡಿ, ಬೆಳೆದ ಹಣ್ಣು ಮಾರಾಟವಾಗದೆ ಉಳಿದುಕೊಂಡಿದೆ, ಹೀಗಾಗಿ ಸರ್ಕಾರ ನಮಗೆ ಸೂಕ್ತವಾದ ಪರಿಹಾರ ನೀಡಬೇಕು ಅಂತಾ ಮಾವು ಬೆಳೆಗಾರರು ಒತ್ತಾಯ ಮಾಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್​​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  ವರದಿ: ಸಂತೋಷ್​ ಕಣ್ಣೋರು
  Published by:Kavya V
  First published: