HOME » NEWS » District » FAMOUS DAVANAGERE MASK IS ALSO SOLD IN ABROAD SHM MAK

Corona Mask: ವಿದೇಶ ಹಾಗೂ ಹೊರ ರಾಜ್ಯದಲ್ಲೂ ಫೇಮಸ್ ಈ ದಾವಣಗೆರೆ ಮಾಸ್ಕ್

ಕಲರ್ ಪುಲ್ ಮಾಸ್ಕ್ ತಯಾರಿಸಿದ್ದು ಜನರಿಗೂ ಆಕರ್ಷಕವಾಗಿ ಕಾಣುತ್ತೆ. ಈ ಮಾಸ್ಕ್ ಗಳನ್ನ ನೋಡಿಯೇ ಜನ ಮಾಸ್ಕ್ ಧರಿಸಬೇಕು ಅನ್ನೋ ರೀತಿಯಲ್ಲಿ ಇದನ್ನು ಸಿದ್ದಪಡಿಸಲಾಗಿದೆ.

news18-kannada
Updated:May 12, 2021, 12:33 PM IST
Corona Mask: ವಿದೇಶ ಹಾಗೂ ಹೊರ ರಾಜ್ಯದಲ್ಲೂ ಫೇಮಸ್ ಈ ದಾವಣಗೆರೆ ಮಾಸ್ಕ್
ದಾವಣಗೆರೆ ಮಾಸ್ಕ್.
  • Share this:
ದಾವಣಗೆರೆ: ಜನರಿಗೆ ಇತ್ತೀಚಿಗೆ ಮಾಸ್ಕ್ ಹಾಕಿಕೊಳ್ಳೊದೆ ಸಾಕಷ್ಟು ಕಿರಿಕಿರಿ ಅನಿಸುತ್ತಿದೆ. ಸತತ ಅರ್ಧಗಂಟೆ ಮಾಸ್ಕ್ ಹಾಕಿಕೊಂಡರೆ ಎಲ್ಲರೂ ಒದ್ದಾಡುವಂತ ಪರಿಸ್ಥಿತಿ ಇದೆ. ಹೀಗಾಗಿ ಸಾಕಷ್ಟು ಜನ ಜೇಬಿನಲ್ಲಿ ಮಾಸ್ಕ್ ಇಟ್ಟುಕೊಂಡು ಓಡಾಡುತ್ತಾರೆ. ಯಾರಾದ್ರೂ ಇದ್ದಾಗ ಮಾತ್ರ ಜನ ಮಾಸ್ಕ್ ಧರಿಸುತ್ತಾರೆ..ಇನ್ನೂ ಮಕ್ಕಳಂತು ಮಾಸ್ಕ್ ಹಾಕಲು ಒಪ್ಪೊದೆ ಇಲ್ಲ ಇದನ್ನ ಮನಗಂಡ ಕುಟುಂಬ ವೊಂದು ಎಲ್ಲರೂ ಮೆಚ್ಚುವಂತ ಮಾಸ್ಕ್ ತಯಾರಿಸಿ, ಎಲ್ಲರೂ ಮೆಚ್ಚಿ ಮಾಸ್ಕ್ ಧರಿಸುವಂತೆ ಮಾಡಿದ್ದಾರೆ.‌‌ ಕೊರೋನಾ ಎರಡನೇ ಅಲೆ ಬಂದು ಎಲ್ಲರಿಗೂ ಮಾಸ್ಕ್ ಕಡ್ಡಾಯವಾಗಿದೆ. ಹೀಗಾಗಿ ಕೆಲ ಮಾಸ್ಕ್ ಧರಿಸಿ ಜನ ಕಿರಿಕಿರಿ ಅನುಭವಿಸುತ್ತಾರೆ.

ಮಾಸ್ಕ್ ಅನ್ನು ಧರಿಸೋದು ಬಿಟ್ಟರೆ ಸೋಂಕು ಹರಡುತ್ತೆ ಅನ್ನೋ ಭಯ ಕೆಲವು ಮಾಸ್ಕ್ ಗಳನ್ನ ಧರಿಸಿ ಮಾತಾನಾಡಲು, ಉಸಿರಾಡಲು ಕಿರಿಕಿರಿ ಅನುಭವಿಸುತ್ತಾರೆ. ಅಂತವರಿಗೆ ಅಂತಲೆ ದಾವಣಗೆರೆಯ ಎಂಸಿಸಿ "ಬಿ" ಬ್ಲಾಕ್ ನ ಕೆಪಿ ವಿವೇಕಾನಂದ ಅವರ ಕುಟುಂಬ ವಿನೂತನ ರೀತಿಯ ಮಾಸ್ಕ್ ನ್ನ ತಯಾರಿಸುತ್ತೆ. ಎರಡನೇ ಅಲೆಯ ವೈರಸ್ ಮಾಸ್ಕ್ ನಿಂದ ಒಳಗೆ ಪ್ರವೇಶ ಆಗದಂತೆ ತ್ರೀಲೇಯರ್ ಮಾಸ್ಕ್ ನ್ನ ತಯಾರಿಸಲಾಗಿದ್ದು, ಇದು ಮೂಗು ಮತ್ತೆ ಬಾಯಿ ಮಧ್ಯ ಗ್ಯಾಪ್ ಇದೆ ಇದರಿಂದ ಮಾತನಾಡಲು ಅನುಕೂಲವಾಗುತ್ತೆ.

ಜೊತೆಗೆ ಕಲರ್ ಪುಲ್ ಮಾಸ್ಕ್ ತಯಾರಿಸಿದ್ದು ಜನರಿಗೂ ಆಕರ್ಷಕವಾಗಿ ಕಾಣುತ್ತೆ. ಈ ಮಾಸ್ಕ್ ಗಳನ್ನ ನೋಡಿಯೇ ಜನ ಮಾಸ್ಕ್ ಧರಿಸಬೇಕು ಅನ್ನೋ ರೀತಿಯಲ್ಲಿ ಇದನ್ನು ಸಿದ್ದಪಡಿಸಲಾಗಿದೆ. ಇನ್ನೂ ಮಕ್ಕಳಿಗೂ ಕಿಟ್ಟೂ ಮಾಸ್ಕ್ ಅಂತ ಮಾಡಿದ್ದು ಅದರ ಮೇಲಿನ ಚಿತ್ರದಿಂದಲೂ ಕೂಡ ಮಕ್ಕಳಿಗೆ ಆಕರ್ಷವಾಗಿ ಮಕ್ಕಳು ಕೂಡ ಲವಲವಿಕೆಯಿಂದ ಈ ಮಾಸ್ಕ್ ಧರಿಸುತಿದ್ದಾರೆ.

ಇನ್ನೂ  ಈ ಮಾಸ್ಕ್ ನ್ನ ಜನರ ಸೇವೆ ಮಾಡುತಿದ್ದಾರೆ ಅಂತ ಪ್ರಧಾನಿ ಮೋದಿಯವರಿಗೂ ಕಳುಹಿಸಿದ್ದು, ಮೋದಿಯವರು ಕೂಡ ಮಾಸ್ಕ್ ಧರಿಸಿ ಮಾಸ್ಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಮೇರಿಕ ಅಧ್ಯಕ್ಷ ಜೋ ಬೈಡನ್, ಭಾರತದ ರಾಷ್ಟಪತಿ ರಾಮ್ ನಾಥ್ ಕೋವಿಂದ್, ರಾಜ್ಯಪಾಲ ವಜುಬಾಯಿವಾಲಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯದ ಸಿಎಂ ಬಿಎಸ್ ಯಡಿಯೂಪ್ಪ ಅವರಿಗೂ ಕೂಡ ಮಾಸ್ಕ್ ಅನ್ನು ಪೋಸ್ಟ್ ಮೂಲಕ ನೀಡಲಾಗಿದೆ .

ಈ ರಾಜ್ಯವಷ್ಟೆ ಅಲ್ಲದೆ ಹೊರ ರಾಜ್ಯವಾದ ,ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಆಂದ್ರ,ಕೇರಳ, ರಾಜ್ಯಗಳಿಗು ಸಹ ಪೊಸ್ಟ್ ಮೂಲಕ ಕಳಿಸಿ ಕೊಡಲಾಗುತ್ತದೆ. ಇನ್ನೂ, ಈ  ಹಿಂದೆ ಲಾಕ್ ಡೌನ್ ಆಗಿದ್ದಾಗ ಖಾಸಗಿ ಅಂಗಡಿಯೊಂದರಲ್ಲಿ ಕೆಲಸ ಮಾಡುತಿದ್ದ ಕೆ.ಪಿ. ವಿವೇಕಾನಂದ ಅವರು ಕೆಲಸ ಬಿಟ್ಟಿದ್ದರು. ಹೀಗಾಗಿಯೇ ಇದೀಗ ಅವರ ಪತ್ನಿ ಮತ್ತು ಮಕ್ಕಳು ಮಾಸ್ಕ್ ನ್ನ ತಯಾರು ಮಾಡೋದ್ರಲ್ಲೆ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಹಾರ: ಕೋವಿಡ್ ಚಿಕಿತ್ಸೆಗಾಗಿ ಗಂಡನನ್ನ ದಾಖಲಿಸಿದ್ದ ಆಸ್ಪತ್ರೆಯಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ!

ಕ್ವಾಲಿಟಿ ಬಟ್ಟೆಯ ಮೂಲಕ ಕ್ಯಾನ್ವಾಸ್ ಹಾಕಿ ಮಾಸ್ಕ್ ಮಾಡ್ತಾ ಇರೋದು ಎಲ್ಲರನ್ನ ಆಕರ್ಷಿಸಿಸುತ್ತಿದೆ. ಅದ್ರಲ್ಲೂ ಕಲರ್ ಪುಲ್ ಮಾಸ್ಕ್ ನ್ನ ಫ್ಯಾಷನ್ ಅಂತಲೂ ಜನ ಕೊಂಡುಕೊಳ್ತಾ ಇದ್ದಾರೆ. ಒಂದು ಮಾಸ್ಕ್ ಬೆಲೆ 80 ರೂಪಾಯಿ ಆಗಿದ್ದು ಇನ್ನೂ ಈ ಮಾಸ್ಕ್ ವಾಶ್ ಬೇಲ್ ಆಗಿರೋದ್ರಿಂದ ಬಟ್ಟೆ ಮಾಸೋವರೆಗೂ ಇದನ್ನ ಧರಿಸಬಹುದಾಗಿದೆ‌‌.
Youtube Video

ಇನ್ನೂ ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದವರು ಕೂಡ ಇದೇ ರೀತಿ ಮನೆಯಲ್ಲೆ ಸ್ವಯಂ ಉದ್ಯೋಗ ಮಾಡಬಹುದಾಗಿದೆ. ಒಟ್ಟಿನಲ್ಲಿ ಕೆಪಿ ವಿವೇಕಾನಂದರ ಕೆಲಸ ಪ್ರಧಾನಿಯವರು ಗುರುತಿಸುವಂತಾಗಿದ್ದು, ಜಿಲ್ಲೆಯ ಜನರಿಗೆ ಹೆಮ್ಮೆ ಅನಿಸಿದೆ. ಜನರು ಕೂಡ ಮಾಸ್ಕ್  ಧರಿಸಿ ಸಾಮಾಜಿಕ ಅಂತರದ ಮೂಲಕ ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಬೇಕಿದೆ.

(ವರದಿ: ಸಂಜಯ್ ಎ.ಪಿ. ಕುಂದುವಾಡ)
Published by: MAshok Kumar
First published: May 12, 2021, 6:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories