HOME » NEWS » District » FAMILY DISPUTE KODAGU SOLDIER COMMIT TO SUICIDE RSK MAK

ಕೌಟುಂಬಿಕ ಕಲಹದಿಂದ ಬೇಸತ್ತು ಕರ್ತವ್ಯ ನಿರತ ಕೊಡಗಿನ ಯೋಧ ಆತ್ಮಹತ್ಯೆ 

ಕುಶಾಲನಗರದ ಸಮೀಪದ ಮುಳ್ಳುಸೋಗೆಯ ನವ್ಯ ಎಂಬುವವರನ್ನು ಕಳೆದ 12 ವರ್ಷಗಳ ಹಿಂದೆ ಪ್ರಜ್ಜು ವಿವಾಹವಾಗಿದ್ದರು. ಮದುವೆಯಾಗಿ ಮುದ್ದಿನ ಇಬ್ಬರು ಮಕ್ಕಳನ್ನು ಪಡೆದ ಆರೇಳು ವರ್ಷದ ನಂತರ ಅದೇಕೋ ಆತನಿಗೆ ಪತ್ನಿಯ ಮೇಲೆ ಇನ್ನಿಲ್ಲದ ಅನುಮಾನ ಶುರುವಾಗಿದೆ.

news18-kannada
Updated:March 29, 2021, 7:30 AM IST
ಕೌಟುಂಬಿಕ ಕಲಹದಿಂದ ಬೇಸತ್ತು ಕರ್ತವ್ಯ ನಿರತ ಕೊಡಗಿನ ಯೋಧ ಆತ್ಮಹತ್ಯೆ 
ಸಾಂದರ್ಭಿಕ ಚಿತ್ರ.
  • Share this:
ಕೊಡಗು : ನನಗೆ ತೀವ್ರ ತೊಂದರೆ ಕೊಡುತ್ತಿದ್ದೀಯಾ, ನನ್ನ ನೆಮ್ಮದಿಯನ್ನು ಹಾಳು ಮಾಡಿದ್ದೀಯ, ನಿನಗೆ ಹಣ ಅಷ್ಟೇ ಮುಖ್ಯವಲ್ಲವೇ ಎಂದು ಸೈನಿಕನೊಬ್ಬ ತನ್ನ ಪತ್ನಿ ವಿರುದ್ಧ ಆರೋಪ ಮಾಡಿ 25 ನಿಮಿಷಗಳ ಕಾಲ ವಿಡಿಯೋ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಕೊಡಗು ಜಿಲ್ಲೆಯ ಕುಶಾಲನಗರದ ಗೊಂದಿ ಬಸವನಹಳ್ಳಿ ಸಾಕ್ಷಿಯಾಗಿದೆ. ಗ್ರಾಮದ ನಾಗರಾಜು ಮತ್ತು ಜಗದಾಂಬ ಎಂಬ ದಂಪತಿಗಳ ಬಡಕುಟುಂಬದಲ್ಲಿ ಹುಟ್ಟಿ ಬೆಳೆದು ಸೈನ್ಯ ಸೇರಿ 16 ವರ್ಷ ಸೇವೆ ಸಲ್ಲಿಸಿದ್ದ ಪ್ರಜು 35 ವರ್ಷದ ಸೈನಿಕ ಉತ್ತರಾಖಂಡನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನು ಉತ್ತರಾಾಖಂಡದಲ್ಲಿ ಕುಳಿತು ನೀನು ಹಣಕ್ಕಾಗಿ ನನ್ನನ್ನು ಪೀಡಿಸುತ್ತಿದ್ದೀಯಾ. ನನ್ನ ನೆಮ್ಮದಿಯನ್ನು ಹಾಳು ಮಾಡಿದ್ದೀಯಾ ಎಂದು ನೊಂದು ನುಡಿಯುತ್ತಾ ತನ್ನ ಪತ್ನಿ ವಿರುದ್ಧ ಆರೋಪದ ಸುರಿಮಳೆಗೈಯುತ್ತಾ ವಿಡಿಯೋ ಮಾಡಿ ಬಳಿಕ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕುಶಾಲನಗರದ ಸಮೀಪದ ಮುಳ್ಳುಸೋಗೆಯ ನವ್ಯ ಎಂಬುವವರನ್ನು ಕಳೆದ 12 ವರ್ಷಗಳ ಹಿಂದೆ ಪ್ರಜ್ಜು ವಿವಾಹವಾಗಿದ್ದರು. ಮದುವೆಯಾಗಿ ಮುದ್ದಿನ ಇಬ್ಬರು ಮಕ್ಕಳನ್ನು ಪಡೆದ ಆರೇಳು ವರ್ಷದ ನಂತರ ಅದೇಕೋ ಆತನಿಗೆ ಪತ್ನಿಯ ಮೇಲೆ ಇನ್ನಿಲ್ಲದ ಅನುಮಾನ ಶುರುವಾಗಿದೆ. ಹೀಗಾಗಿ ಪತ್ನಿ ನವ್ಯ ಅವರಿಗೆ ಯಾವಾಗ ಫೋನ್ ಮಾಡಿದರೂ ತುಂಬಾ ಟಾರ್ಚರ್ ಕೊಡುತ್ತಿದ್ದರಂತೆ. ಜೊತೆಗೆ ರಜೆ ಮೇಲೆ ಊರಿಗೆ ಬಂದಾಗಲೆಲ್ಲಾ ನವ್ಯ ಅವರಿಗೆ ದೈಹಿಕ ಹಲ್ಲೆ ನಡೆಸುತ್ತಿದ್ದರಿಂದ ಬೇಸತ್ತಿದ್ದ ನವ್ಯ ತನಗೆ ರಕ್ಷಣೆ ಕೊಡುವಂತೆ ಕುಶಾಲನಗರ ಪಟ್ಟಣ ಪೊಲೀರ ಮೊರೆ ಹೋಗಿದ್ದರಂತೆ.

ಕಳೆದ ಒಂದು ವರ್ಷದ ಹಿಂದೆ ಬಂದಾಗ ನವ್ಯ ಅವರ ಕೈಯನ್ನು ಬೆಂಕಿಯಿಂದ ಸುಟ್ಟಿದ್ದರಂತೆ. ಈ ಘಟನೆ ನಂತರ ನವ್ಯ ತನಗೆ ಪತಿಯೇ ಬೇಡವೆಂಬ ನಿರ್ಧಾರಕ್ಕೆ ಬಂದು ಮಹಿಳಾ ಆಯೋಗಕ್ಕೂ ದೂರು ನೀಡಿದ್ದರಂತೆ. ನಂತರ ಮನಸ್ಸು ಬದಲಾಯಿಸಿಕೊಂಡು ತಾನು ನೀಡಿದ್ದ ದೂರನ್ನು ವಾಪಸ್ ಪಡೆದಿದ್ದರಂತೆ. ಈ ದೂರನ್ನು ವಾಪಸ್ ಪಡೆದು ಮನೆಗೆ ಬರುವಾಗಲೇ ಮಾರ್ಗಮಧ್ಯೆದಲ್ಲೇ ಪ್ರಜ್ಜು ನವ್ಯ ಮೇಲೆ ಹಲ್ಲೆ ಮಾಡಿದ್ದರಂತೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬಳಿ ಯಡಿಯೂರಪ್ಪ ಸಿಡಿ ಇದೆ; ಕೆಪಿಸಿಸಿ ವಕ್ತಾರ ಎಂ. ಲಕ್ಷಣ್‌ ಹೊಸ ಬಾಂಬ್

ಕಳೆದ ತಿಂಗಳಷ್ಟೇ ಊರಿಗೆ ಬಂದಿದ್ದ ಪ್ರಜ್ಜು ನವ್ಯ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರಂತೆ. ನೀನು ಯಾರೊಂದಿಗೆ ಫೋನ್ ನಲ್ಲಿ ತುಂಬಾ ಮಾತನಾಡುತ್ತಿದ್ದೀಯ. ನಿನೆಗೆ ಆಸಿಡ್ ಹಾಕುತ್ತೇನೆ ಎಂದು ಬೆದಿರಿಕೆ ಹಾಕಿದ್ದರಂತೆ. ಹೀಗಾಗಿ 2021 ಫೆಬ್ರವರಿಯಲ್ಲೂ ಪೊಲೀಸರಿಗೆ ಮತ್ತೆ ದೂರು ನೀಡಿದ್ದರಂತೆ. ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಜ್ಜು ಅವರು ಇದ್ದಕ್ಕಿದ್ದಂತೆ ನಾನು ಡ್ಯೂಟಿಗೆ ಹೋಗಬೇಕಿದೆ ಎಂದು ಎಸ್ಕೇಪ್ ಆಗಿದ್ದರು ಎಂದು ನವ್ಯ ಆರೋಪಿಸಿದ್ದಾರೆ.

ಹೀಗೆ ಹೋದವರು ಶುಕ್ರವಾರ ಸಂಜೆ ಉತ್ತರಾಖಂಡನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಪತ್ನಿ ನವ್ಯ ಮಾತ್ರ ನಮ್ಮ ಸಂಸಾರ ಹಾಳಾಗುವುದಕ್ಕೆ ನನ್ನ ಪತಿಯ ಸ್ನೇಹಿತರಾದ ಕೆಲವರು ನೇರ ಕಾರಣ ಎಂದು ಮೂರು ಜನರ ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಇವರೆಲ್ಲರೂ ನನ್ನ ವಿರುದ್ಧ ಇಲ್ಲ ಸಲ್ಲದ ವಿಷಯಗಳನ್ನು ನನ್ನ ಪತಿಗೆ ಹೇಳಿ ಸಂಸಾರವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Published by: MAshok Kumar
First published: March 29, 2021, 7:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories