ಸುಂದರ ಸಂಸಾರ ರೂಪಿಸಲು ಹೋದ ಕುಟುಂಬ ಬಾಲ್ಯ ವಿವಾಹ ಕುಣಿಕೆಯಲ್ಲಿ ; ಅಧಿಕಾರಿಗಳ ಸಮ್ಮತಿಗೆ ಮದುವೆ ನಿಲ್ಲಿಸಿದ ಕುಟುಂಬ

ಮದುವೆ ಸಂಭ್ರಮಕ್ಕೆ ಸಾಕ್ಷಿ ಆಗಬೇಕಿದ್ದ ಕಲ್ಯಾಣಮಂಟಪ ಅಧಿಕಾರಿಗಳು ಮತ್ತು ಮದುವೆ  ಕುಟುಂಬಸ್ಥರ ಚರ್ಚೆಯ ವೇದಿಕೆ ಆಗಿ ಮಾತಿನ‌ ಚಕಮಕಿ ನಡೆಯಿತು

news18-kannada
Updated:June 30, 2020, 8:23 PM IST
ಸುಂದರ ಸಂಸಾರ ರೂಪಿಸಲು ಹೋದ ಕುಟುಂಬ ಬಾಲ್ಯ ವಿವಾಹ ಕುಣಿಕೆಯಲ್ಲಿ ; ಅಧಿಕಾರಿಗಳ ಸಮ್ಮತಿಗೆ ಮದುವೆ ನಿಲ್ಲಿಸಿದ ಕುಟುಂಬ
ಕುಟುಂಬದವರೊಂದಿಗೆ ಚರ್ಚಿಸುತ್ತಿರುವ ಅಧಿಕಾರಿಗಳು
  • Share this:
ಕಾರವಾರ(ಜೂ.30): ಆಧಾರ್ ಕಾರ್ಡ್​​ನಲ್ಲಿನ ಹುಟ್ಟಿದ ದಿನಾಂಕ ನಂಬಿ ತಮ್ಮ ಮಗಳನ್ನ ಮದುವೆ ಮಾಡಲು ಹೋದ ಕುಟುಂಬ ಬಾಲ್ಯ ವಿವಾಹದ ಕುಣಿಕೆಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಕೊನೆಗೆ ಅಧಿಕಾರಿಗಳ ಮಾತಿಗೆ ಸಮ್ಮತಿಸಿದ ಕುಟುಂಬ ಮದುವೆ ನಿಲ್ಲಿಸಿದರು.

ಜಿಲ್ಲೆಯ ಕಾರವಾರದ ತಾಲೂಕಿ ಶೇಜವಾಡದ ಶೆಜ್ಜೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ವಿವಾಹ ಸಿದ್ದತೆ ನಡೆದಿತ್ತು, ಕಾರವಾರದ ನಂದನಗದ್ದಾ ಮೂಲದ ಗಂಡು ಶಿರವಾಡ ಮೂಲದ ಹೆಣ್ಣು ಹೀಗೆ ಗಂಡು ಮತ್ತು ಹೆಣ್ಣಿನ ಎರಡು ಕುಟುಂಬದವರು ಒಪ್ಪಿ ತಮ್ಮ ಮಕ್ಕಳ ಮದುವೆ ಸಿದ್ದತೆ ಮಾಡಿಕೊಂಡಿದರು. ಆದರೆ, ಇಲ್ಲಿ ವಧು 17ನೇ ವಯಸ್ಸಿನವಳಾಗಿರುವುದರಿಂದ ಇದೊಂದು ಬಾಲ್ಯ ವಿವಾಹ ಎಂಬ ದೂರು ಮಕ್ಕಳ ರಕ್ಷಣಾ ಘಟಕಕ್ಕೆ ಬಂದಿದ್ದು ಕೂಡಲೆ ಮದುವೆ ಕಲ್ಯಾಣ ಮಂಟಪಕ್ಕೆ ಬಂದಿದ್ದ ಅಧಿಕಾರಿಗಳು ಮದುವೆ ನಿಲ್ಲಿಸಿದರು.

ಮದುವೆ ಮಾಡುವುದಾದರೇ ವಧುವಿನ ಹುಟ್ಟಿದ ದಾಖಲೆ ಪತ್ರ ನೀಡಿ ಮದುವೆ ಮುಂದುವರೆಸಿ ಎಂದರು, ಆದರೆ, ಬಾಲ್ಯವಿವಾಹದ ಬಗ್ಗೆ ಅರಿವೇ ಇಲ್ಲದ ವಧುವಿನ ಕುಟುಂಬ ತಬ್ಬಿಬ್ಬಾಗಿ ಆಧಾರ ಕಾರ್ಡ್ ತಂದು ಕೊಟ್ಟರು. ಬಳಿಕ ಹುಟ್ಟಿದ ದಾಖಲೆ ಪ್ರಮಾಣ ಪತ್ರ ದಲ್ಲಿ ವಧುವಿನ ವಯಸ್ಸು 17 ಎಂಬ ಸತ್ಯಾಸತ್ಯತೆ ತಿಳಿದು ಇಲಾಖೆಯ ಮಾತಿಗೆ ಸಮ್ಮತಿಸಿದ ವಧುವಿನ ಕುಟುಂಬದವರು ಮದುವೆ ಸದ್ಯಕ್ಕೆ ರದ್ದು ಪಡಿಸಿದರು.

ಇನ್ನೂ ವಧುವಿನ ಕಡೆಯವರು ಆಧಾರ್​ ಕಾರ್ಡ್​​ ನಲ್ಲಿನ ವಯಸ್ಸನ್ನು ನಂಬಿ ತಮ್ಮ ಮಗಳಿಗೆ 18 ವರ್ಷ ಆಗಿದೆ ಒಳ್ಳೆಯ ಸಂಬಂಧ ಸಿಕ್ಕಿರುವ ಕಾರಣಕ್ಕೆ ಮದುವೆ ಮಾಡಲು ಹೊರಟಿದ್ರಂತೆ. ಆದರೆ, ಬಾಲ್ಯವಿವಾಹ ನಡೆಯುತ್ತಿದೆ ಎಂಬ ದೂರಿನನ್ವಯ ಮದುವೆ ಮಂಟಪಕ್ಕೆ ಬಂದಿದ್ದ ಅಧಿಕಾರಿಗಳು ಇಲ್ಲಿ ಕೇಳಿದ್ದು, ಆಧಾರ ಕಾರ್ಡ್ ಬದಲಾಗಿ ಹುಟ್ಟಿದ ದಿನಾಂಕದ ದಾಖಲೆ ಪತ್ರ. ಆದರೆ, ಹುಟ್ಟಿದ ದಾಖಲೆ ಪತ್ರದಲ್ಲಿ ವಧುವಿಗೆ 17 ನೇ ವಯಸ್ಸು ಮಾತ್ರ ಇದರಿಂದ ಸಾಕಷ್ಟು ಗೊಂದಲು ಉಂಟಾಯಿತು.

ಇದನ್ನೂ ಓದಿ : ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಚಿರತೆ ಪ್ರತ್ಯಕ್ಷ ; ನಾಯಿ, ಆಕಳುಗಳನ್ನು ತಿಂದ ಚಿರತೆ

ಬಾಲ್ಯವಿವಾಹದ ಅರಿವಿಲ್ಲದ  ವಧುವಿನ ಕಡೆಯವರು ಮಗಳ ಮದುವೆ ನಿಂತಿತಲ್ಲ ಎಂದು ಕಣ್ಣಿರು ಇಟ್ಟು ದೂರು ಕೊಟ್ಟವರಿಗೆ ಒಂದಿಷ್ಟು ಹಿಡಿ ಶಾಪ ಹಾಕಿದರು. ಆದರೆ, ಇದೆ ಸಂಬಂಧ ಮುಂದೆ ನಡೆಯಲಿದೆ ಎಂಬ ಭರವಸೆಯಲ್ಲಿ ಮದುವೆ ನಿಲ್ಲಿಸಲಾಯಿತು. ಆದರೆ ಈ ಸಂದರ್ಭ ದಲ್ಲಿ ಕೆಲಹೊತ್ತು ಗೊಂದಲ ‌ಉಂಟಾಯಿತು, ಮದುವೆ ಸಂಭ್ರಮಕ್ಕೆ ಸಾಕ್ಷಿ ಆಗಬೇಕಿದ್ದ ಕಲ್ಯಾಣಮಂಟಪ ಅಧಿಕಾರಿಗಳು ಮತ್ತು ಮದುವೆ ಕುಟುಂಬಸ್ಥರ ಚರ್ಚೆಯ ವೇದಿಕೆ ಆಗಿ ಮಾತಿನ‌ ಚಕಮಕಿ ನಡೆಯಿತು.
ಬಾಲ್ಯ ವಿವಾಹದ ಅರಿವಿಲ್ಲದೆ ಒಂದು ಸುಂದರ ಸಂಸಾರ ರೂಪಿಸಲು ಮುಂದಾದ ಕುಟುಂಬ ಒಂದು ಅನಾಮಿಕ ದೂರಿಗೆ ಮದುವೆ ನಿಲ್ಲಿಸುವಂತಾಯಿತು.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading