ಧಾರವಾಡದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ನಕಲಿ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲು

ಅಂದು ನಡೆದ ಘಟನೆಯಿಂದಾಗಿ ಇಂದು ನಡೆದ ಪರೀಕ್ಷೆಗೆ ಆ ಇಬ್ಬರು ಪರೀಕ್ಷಾರ್ಥಿಗಳಿಗೆ ಅವಕಾಶವನ್ನು ನಿರಾಕರಿಸಲಾಗಿದೆ. ಈ‌ ಕುರಿತು ಇದೀಗ ಇಬ್ಬರ ವಿರುದ್ದ ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ ಪರೀಕ್ಷಾರ್ಥಿಗಳ ಹೆಸರು ತಿಳಿದು ಬಂದಿಲ್ಲ.

news18-kannada
Updated:July 1, 2020, 2:37 PM IST
ಧಾರವಾಡದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ನಕಲಿ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲು
ಸಾಂದರ್ಭಿಕ ಚಿತ್ರ
  • Share this:
ಧಾರವಾಡ(ಜು.01) : ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಬೇಕಿದ್ದ ಮೂಲ ವಿದ್ಯಾರ್ಥಿಗಳ ಬದಲಿಗೆ ಬೇರೆ ಯುವಕರು ಪರೀಕ್ಷೆ ಬರೆದಿರುವ ಘಟನೆ ಧಾರವಾಡದಲ್ಲಿ ನಡೆದಿದ್ದು, ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.

ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೋಮವಾರ ನಡೆದ ಎಸ್.ಎಸ್.ಎಲ್.ಸಿ ವಿಜ್ಞಾನ ಪರೀಕ್ಷೆಯ ಎಕ್ಸ್‌ಟರ್ನಲ್ ಪತ್ರಿಕೆ ಬರೆಯಲು ಮೂಲ ವಿದ್ಯಾರ್ಥಿಗಳ ಬದಲು ಇಬ್ಬರು ನಕಲಿ ವಿದ್ಯಾರ್ಥಿಗಳು ಆಗಮಿಸಿದ್ದರು.  ಧಾರವಾಡ ನಗರದ ಬಾಸೆಲ್ ಮಿಷನ್ ಶಾಲೆಯಲ್ಲಿ‌ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಈ ಘಟನೆ ನಡೆದಿದೆ.

ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಕೊರೋನಾ ಸೋಂಕಿತ ಬಲಿ

ಪರೀಕ್ಷೆ ಬರೆಯಲು ಬಂದವರು ಹಾಗೂ ಹಾಲ್ ಟಿಕೆಟ್​ನಲ್ಲಿನ ಫೋಟೋದಲ್ಲಿರುವ ವ್ಯಕ್ತಿಗಳು ಬೇರೆ-ಬೇರೆ ಇರುವುದು ಮೇಲ್ವಿಚಾರಕರ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಅನುಮಾನದಿಂದ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪರೀಕ್ಷೆ ಬರೆಯಲು ಬಂದವರು ನಕಲಿ ವಿದ್ಯಾರ್ಥಿಗಳು ಎನ್ನುವುದು ಖಚಿತವಾಗಿದೆ.

ಹೀಗಾಗಿ ಅಂದು ನಡೆದ ಘಟನೆಯಿಂದಾಗಿ ಇಂದು ನಡೆದ ಪರೀಕ್ಷೆಗೆ ಆ ಇಬ್ಬರು ಪರೀಕ್ಷಾರ್ಥಿಗಳಿಗೆ ಅವಕಾಶವನ್ನು ನಿರಾಕರಿಸಲಾಗಿದೆ. ಈ‌ ಕುರಿತು ಇದೀಗ ಇಬ್ಬರ ವಿರುದ್ದ ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ ಪರೀಕ್ಷಾರ್ಥಿಗಳ ಹೆಸರು ತಿಳಿದು ಬಂದಿಲ್ಲ.

 
First published: July 1, 2020, 2:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading