ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಪತ್ತೆ

ಭಾನುವಾರ ನಡೆದ ಕೆಎಸ್ಆರ್​ಪಿ/ಐಆರ್​ಬಿ ಕಾನ್ಸ್​ಟೆಬಲ್​ಗಳ ನೇಮಕಾತಿ ಪರೀಕ್ಷೆಯ ವೇಳೆ ಬೆಂಗಳೂರನಲ್ಲಿ ಇಬ್ಬರು ನಕಲಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಒಬ್ಬ ಪೊಲೀಸ್ ಕಾನ್ಸ್​ಟೆಬಲ್ ಆಗಿರುವುದು ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ನ. 23): KSRP/IRB ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ‌ ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿಗಳನ್ನ ಬೆಂಗಳೂರು ಪಶ್ಚಿಮ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಸಹ ಪಾಲ್ಗೊಂಡಿದ್ದು ಆತನನ್ನ ಸಹ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 

ಪರೀಕ್ಷೆಗೆ ಆಭ್ಯರ್ಥಿಗಳಲ್ಲದೆ ಇದ್ದರೂ ಬೇರೆಯವರ ಹೆಸರಿನಲ್ಲಿ ಆರು ಜನ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಪರೀಕ್ಷಾ ಮೇಲ್ವಿಚಾರಕರ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾರೆ. ನಿನ್ನೆ ರಾಜ್ಯಾದ್ಯಂತ KSRP/IRB ಕಾನ್ಸ್‌ಟೇಬಲ್​ಗಳ ನೇಮಕಾತಿ ಪರೀಕ್ಷೆ ಆಯೋಜಿಸಲಾಗಿತ್ತು. ನಗರದಲ್ಲಿ 36 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು ಸುಮಾರು 17.940 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದ್ರೆ ಈ ವೇಳೆ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ನಕಲಿ‌ ಅಭ್ಯರ್ಥಿಗಳು ಪತ್ತೆಯಾಗಿದ್ದು ಪಶ್ಚಿಮ ವಿಭಾಗ ಪೊಲೀಸರು ಇಬ್ಬರು, ದಕ್ಷಿಣ ವಿಭಾಗದಲ್ಲಿ ಎರಡು ಮತ್ತು ಪೂರ್ವ ವಿಭಾಗದಲ್ಲಿ ಇಬ್ಬರು ವ್ಯಕ್ತಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ನಕಲಿ ಅಭ್ಯರ್ಥಿಗಳಲ್ಲಿ ಶೃಂಗೇರಿ ಠಾಣೆಯ ಕಾನ್ಸ್‌ಟೇಬಲ್ ನಾಗಪ್ಪ ಪವೆಡಪ್ಪ ಎಂಬಾತ ಸಹ ಇದ್ದು ಈತನನ್ನು ಸಹ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ‌. ಬಂಧಿತ ವ್ಯಕ್ತಿಯು ಹಾಲಪ್ಪ ನಾರಾಯಣ್ ಹಲ್ಲೂರ್ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ಎನ್ನಲಾಗಿದೆ. ಇನ್ನು, ಬಂಧಿತ ಕಾನ್ಸ್‌ಟೇಬಲ್ ನಾಗಪ್ಪ ಪವೆಡಪ್ಪ ಆಗಸ್ಟ್ 24 ರಿಂದ ಸಿಕ್ ಲೀವ್​ನಲ್ಲಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಕೋವಿಡ್ ಸೆಂಟರ್​ಗಳಾಗಿದ್ದ ಹಾಸ್ಟೆಲ್​ಗಳಿಗೆ ತೆರಳಲು ವಿದ್ಯಾರ್ಥಿಗಳ ಹಿಂದೇಟು; ಬೆಂಗಳೂರು ವಿವಿ ವಸತಿ ನಿಲಯ ಖಾಲಿ ಖಾಲಿ

ಕೆಂಗೇರಿಯ ಜೆಎಸ್ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದ್ದ ಪರೀಕ್ಷೆಯಲ್ಲಿ ನಾಗಪ್ಪ ಸಿಕ್ಕಿ ಬಿದ್ದಿದ್ದಾರೆ. ಅದೇ ರೀತಿ ರಾಜಾಜಿನಗರದ SJRC ಮಹಿಳಾ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನ ಬಂಧಿಸಲಾಗಿದೆ. ಮಲ್ಲಿಕಾರ್ಜುನ ಬಾಬಲಣ್ಣವರ್ ಎಂಬಾತನ ಬಂಧಿಸಲಾಗಿದ್ದು, ಈತ ಹನುಮಂತ್ ವಾಘಣ್ಣವರ್ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ಎನ್ನಲಾಗಿದೆ.

ವರದಿ: ಮುನಿರಾಜು ಹೊಸಕೋಟೆ
Published by:Vijayasarthy SN
First published: