ಮಂಗಳೂರು ಏರ್ ಪೋರ್ಟ್ ಗೆ ಹುಸಿ ಬಾಂಬ್ ಕರೆ; ಕಾರ್ಕಳ ಯುವಕನ ಬಂಧನ

ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಅವರಿಗೆ ಹೊರಿಸಲಾಗಿದೆ. ಕರೆ ಬಂದ ಮೊಬೈಲ್ ಸಂಖ್ಯೆ, ನೆಟ್ ವರ್ಕ್ ಆಧಾರದಲ್ಲಿ ಹೆಬ್ರಿ ಮೂಲದ ವ್ಯಕ್ತಿಯ ಬಂಧನವಾಗಿದೆ. ಹುಸಿ ಕರೆ ಮಾಡಿದರ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

news18-kannada
Updated:August 20, 2020, 9:04 AM IST
ಮಂಗಳೂರು ಏರ್ ಪೋರ್ಟ್ ಗೆ ಹುಸಿ ಬಾಂಬ್ ಕರೆ; ಕಾರ್ಕಳ ಯುವಕನ ಬಂಧನ
ಮಂಗಳೂರು ವಿಮಾನ ನಿಲ್ದಾಣ.
  • Share this:
ಮಂಗಳೂರು; ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರೋದಾಗಿ ವ್ಯಕ್ತಿಯೋರ್ವ ಹುಸಿ ಬೆದರಿಕೆ ಕರೆ ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಆದರೆ, ಸಂಪೂರ್ಣ ತಪಾಸಣೆಯ ಬಳಿಕ  ಹುಸಿ ಕರೆ ಎಂದು ತಿಳಿದುಬಂದಿದ್ದು, ಬೆದರಿಕೆ ಕರೆ ಮಾಡಿದ ಆರೋಪಿಯನ್ನೂ ಬಂಧಿಸಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣದ ಮಾಜಿ ನಿರ್ದೇಶಕ ಎಂ.ಆರ್. ವಾಸುದೇವ ರಾವ್ ಅವರಿಗೆ ಉಡುಪಿ ಜಿಲ್ಲೆಯ ಹೆಬ್ರಿ ನಿವಾಸಿ ಈ ಕರೆ ಬಂದಿದ್ದು, ವಿಮಾನ ನಿಲ್ದಾಣ ದಲ್ಲಿ ಬಾಂಬ್ ಇರಿಸಿದ್ದಾಗಿ ಓರ್ವ ವ್ಯಕ್ತಿ ಬೆದರಿಕೆ ಕರೆ ಮಾಡಿದ್ದ. ತಕ್ಷಣ ವಾಸುದೇವ ಅವರು ವಿಮಾನ ನಿಲ್ದಾಾಣದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾಾರೆ.

ಕೂಡಲೆ ಕಾರ್ಯಾಚರಣೆಗಿಳಿದ ಸಿಐಎಸ್‌ಎಫ್ ಸಿಬ್ಬಂದಿ ಹಾಗೂ ಪೊಲೀಸರು ಇಡೀ ನಿಲ್ದಾಣ ಪೂರ್ತಿ ತಪಾಸಣೆ ನಡೆಸಿದ್ದಾಾರೆ. ಆದರೆ, ಎಲ್ಲೂ ಬಾಂಬ್ ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ಹುಸಿ ಕರೆ ಅಂತಾ ಧೃಡವಾಗಿದೆ. ಹೀಗಾಗಿ ಹುಸಿ ಕರೆಯ ಹಿನ್ನಲೆ ವಿಮಾನ ನಿಲ್ದಾಣ ದ ಅಧಿಕಾರಿಗಳು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಾರೆ.

ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಅವರಿಗೆ ಹೊರಿಸಲಾಗಿದೆ. ಕರೆ ಬಂದ ಮೊಬೈಲ್ ಸಂಖ್ಯೆ, ನೆಟ್ ವರ್ಕ್ ಆಧಾರದಲ್ಲಿ ಕಾರ್ಕಳ ಮೂಲಕ ವ್ಯಕ್ತಿಯ ಬಂಧನವಾಗಿದೆ. ಬಂಧಿತ ವ್ಯಕ್ತಿಯನ್ನು ತುಂಡುಗುಡ್ಡೆ ವಸಂತ (33) ಎಂದು ಗುರುತಿಸಲಾಗಿದೆ. ಹುಸಿ ಕರೆ ಮಾಡಿದರ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : CoronaVirus Update: ದೆಹಲಿಯಲ್ಲಿ ಇಂದು 1,398 ಕೊರೋನಾ ಪ್ರಕರಣಗಳ ಪತ್ತೆ

ಹುಸಿ ಕೆರೆಯಿಂದ ವಿಮಾನ ನಿಲ್ದಾಣದ ಅಧಿಕಾರಿಗಳು ನಿರಾಳರಾಗಿದ್ರೂ ಇದೇ ವರ್ಷದ ಜನವರಿ 20ರಂದು ಆದಿತ್ಯ ರಾವ್ ಎಂಬಾತ ಮಂಗಳೂರು ಏರ್‌ಪೋರ್ಟ್‌ನ ಹೊರಗಡೆ ಬಾಂಬ್ ಇಟ್ಟದ್ದು ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಹೀಗಾಗಿ ಮುಂದಕ್ಕೆ ಈ ಘಟನೆ ಮತ್ತೆ ಮರುಕಳಿಸದಂತೆ ಭಾರೀ ಮುನ್ನೆಚ್ಚರಿಕೆ ವಹಿಸಲಾಗಿದೆ
Published by: MAshok Kumar
First published: August 20, 2020, 7:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading