news18-kannada Updated:September 15, 2020, 5:05 PM IST
ಸಾಂದರ್ಭಿಕ ಚಿತ್ರ
ಕೊಡಗು (ಸೆಪ್ಟೆಂಬರ್ 15): 300 ವರ್ಷಗಳ ಕಾಲ ಕೊಡಗು ಜಿಲ್ಲೆಯನ್ನು ಆಳ್ವಿಕೆ ಮಾಡಿದ ಹಾಲೇರಿ ರಾಜವಂಶಸ್ಥರಿಗೆ ಅಪಮಾನ ಮಾಡಲಾಗಿದೆ ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಂದು ದೂರು ದಾಖಲಾಗಿದೆ. ಎಲ್ಲಿಂದಲೋ ಬೂದಿ ಬಳಿದುಕೊಂಡು ಬಂದವರಿಗೆ ಪಟ್ಟಕಟ್ಟಿ ಈಗ ಕೊಡಗಿನ ಜನರು ಪಡಬಾರದ ಕಷ್ಟ ಪಡುತ್ತಿದ್ದೇವೆ ಎಂದು ಪವನ್ ಪೆಮ್ಮಯ್ಯ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ಕೊಡಗು ಜಿಲ್ಲೆ ಪ್ರವಾಸೋದ್ಯಮದ ಮೇಲೆ ನಿಂತಿದೆ ಎಂದು ಹೇಳಿದ್ದರು. ಇದನ್ನು ಟೀಕಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಭರದಲ್ಲಿ ಪೆಮ್ಮಯ್ಯನವರು ಕೊಡಗಿನ ರಾಜವಂಶವನ್ನು ಹೀಯಾಳಿಸಿದ್ದಾರೆ ಎನ್ನಲಾಗಿದೆ.
ಹಾಲೇರಿ ರಾಜವಂಶಸ್ಥರು ಹೊರಗಿನಿಂದ ಬಂದವರು. ಅವರಿಗೆ ಅಂದು ಮಣೆ ಹಾಕಲಾಗಿತ್ತು. ಈಗ ಕೂಡ ಸಂಸದ ಪ್ರತಾಪ್ ಸಿಂಹ ಕೂಡ ಹೊರಗಿನಿಂದ ಬಂದವರು. ಅವರಿಗೆ ಹೇಗೆ ಕೊಡಗಿನ ಜನರ ಸಮಸ್ಯೆ ಅರ್ಥವಾಗುತ್ತೆ ಎಂದು ಪೆಮ್ಮಯ್ಯ ಫೇಸ್ ಬುಕ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ : ದೆಹಲಿ ಗಲಭೆಯ ತನಿಖೆ ಪಕ್ಷಪಾತಿಯಾಗಿದೆ, ನ್ಯಾಯಯುತ ತನಿಖೆ ನಡೆಸಿ; ಮಾಜಿ IPS ಅಧಿಕಾರಿಗಳಿಂದ ಕೇಂದ್ರಕ್ಕೆ ಪತ್ರ
ಸಂಸದ ಪ್ರತಾಪ್ ಸಿಂಹ ಅವರನ್ನು ಟೀಕಿಸುವ ಬರದಲ್ಲಿ ಕೊಡಗಿನ ರಾಜವಂಶಸ್ಥರ ಅವಹೇಳನ ಮಾಡಲಾಗಿತ್ತು ಎಂದು ವೀರಶೈವ ಮಹಾಸಭಾ, ವೀರಶೈವ ಯುವ ವೇದಿಕೆ ಮತ್ತು ಅಖಿಲ ಭಾರತ ವೀರಶೈವ ಆರ್ಯ ಸಮಾಜ ಸೇರಿದಂತೆ ಹಲವು ಸಂಘಟನೆಗಳಿಂದ ದೂರು ನೀಡಲಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ, ಸೋಮವಾರಪೇಟೆ ಮತ್ತು ಕೊಡ್ಲಿಪೇಟೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಆದರೆ, ಯಾವಾಗ ಈ ಪೋಸ್ಟ್ ಗೆ ತೀವ್ರ ವಿರೋಧ ವ್ಯಕ್ತವಾಯಿತೋ ಆಗ ಪವನ್ ಪೆಮ್ಮಯ್ಯ "ಯಾವ ಸುಮುದಾಯದವರಿಗೂ ನೋವು ಉಂಟು ಮಾಡುವ ಉದ್ದೇಶ ನನಗೆ ಇರಲಿಲ್ಲ. ಪೋಸ್ಟ್ ನಿಂದ ಯಾರಿಗಾದರೂ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆ ಯೋಚಿಸುತ್ತೇನೆ" ಎಂದು ಕ್ಷಮೆ ಯಾಚಿಸಿದ್ದಾರೆ. ಆದರೂ ಅವರ ವಿರುದ್ಧ ಕೊಡಗಿನಲ್ಲಿ ಭುಗಿಲೆದ್ದಿರುವ ಅಸಮಾಧಾನವಂತು ಸದ್ಯಕ್ಕೆ ಶಮನವಾಗುವಂತೆ ಕಾಣುತ್ತಿಲ್ಲ.
Published by:
MAshok Kumar
First published:
September 15, 2020, 5:04 PM IST