• Home
  • »
  • News
  • »
  • district
  • »
  • ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರದ ನೈಜತೆ ಪರೀಕ್ಷೆ ; ತಜ್ಞರ ಸಮಿತಿ ರಚನೆ

ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರದ ನೈಜತೆ ಪರೀಕ್ಷೆ ; ತಜ್ಞರ ಸಮಿತಿ ರಚನೆ

ಚೆನ್ನಮ್ಮಳ ಭಾವಚಿತ್ರದ  ಬಗ್ಗೆ ಪರೀಕ್ಷಿಸಲು ನಡೆದ  ಸಭೆ

ಚೆನ್ನಮ್ಮಳ ಭಾವಚಿತ್ರದ ಬಗ್ಗೆ ಪರೀಕ್ಷಿಸಲು ನಡೆದ ಸಭೆ

ಇನ್ನು ಸಾಹಿತಿಗಳ ಮಹತ್ವ ಸಭೆಯಲ್ಲಿ ಸುದೀರ್ಘ ಚರ್ಚೆ ನಂತರ ಒಟ್ಟು ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ರಾಣಿ ಚೆನ್ನಮ್ಮ ಭಾವಚಿತ್ರ ಸಂಶೋಧನೆಗೆ ಸ್ಥಳೀಯ ಸಮಿತಿ ರಚನೆ, ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧಾರ ಮಾಡಲಾಯಿತು

  • Share this:

ಬೆಳಗಾವಿ(ನವೆಂಬರ್.22): ರಾಣಿ ಚೆನ್ನಮ್ಮ ಭಾವಚಿತ್ರದ ನೈಜತೆ ಪರೀಕ್ಷೆಗಿಳಿದಿರುವ ಕುಂದಾನಗರಿ ಬೆಳಗಾವಿಯ ಸಾಹಿತಿಗಳು. ಸಂಶೋಧಕರು ಕುರಿತು ಇತ್ತೀಚೆಗೆ ಮಹತ್ವದ ಸಭೆ ನಡೆಸಿದರು.‌ ಸಭೆಯಲ್ಲಿ ಸ್ಥಳೀಯ ತಜ್ಞರ ಸಮಿತಿಯೊಂದನ್ನು ರಚಿಸಿಕೊಂಡು ಭಾವಚಿತ್ರ ಹಾಗೂ ಹುಟ್ಟಿದ ದಿನಾಂಕ ಶೋಧ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಈ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಪೋಟೋಗಳ ಕುರಿತು ಪರ ವಿರೋಧ ಚರ್ಚೆ ನಡೆಯಿತು. ಈಗಿರುವ ಕೆಲವು ಪೋಟೋಗಳು ಅಂತಿಮವಲ್ಲ. ಪ್ರತಿ ರಾಜಮನೆತನದಲ್ಲಿ ಕಲಾವಿದರನ್ನು ಇಟ್ಟುಕೊಳ್ಳುತ್ತಿದ್ದರು. ಹಾಗಾಗಿ ಕಿತ್ತೂರು ಸಂಸ್ಥಾನದಲ್ಲೂ ಕಲಾವಿದರನ್ನ ನೇಮಿಸಿಕೊಂಡಿರಬಹುದು. ಕಲಾವಿದರ ಪೇಟಿಂಗ್ ಮಾಡಿರಬಹುದು. ಛತ್ರಪತಿ ಶಿವಾಜಿ, ರಾಣಾ ಪ್ರತಾಪ ಸಿಂಹ, ಝಾನ್ಸಿ ರಾಣಿ, ಟಿಪ್ಪು ಸುಲ್ತಾನ್ ಪೋಟೋ ಇರಬೇಕಾದ್ರೆ ಚನ್ನಮ್ಮಳ ಪೋಟೋ ಇರಬಹುದು. ಇದರ ಸತ್ಯ ಶೋಧನಗೆ ಸಮೀತಿ ರಚನೆ ಮಾಡಬೇಕೆಂಬ ಸಲಹೆಗಳು ಕೇಳಿ ಬಂದವು.


ಪ್ರತಿ ರಾಜಮನೆಗಳ ಆಸ್ಥಾನ ಕಲಾವಿದರ ಇರುತ್ತಿದ್ದರು. ಸಂದರ್ಭದಲ್ಲಿ ಫೋಟೋ ಗ್ರಾಫಿ‌ ಇರಲಿಲ್ಲ. ಸದ್ಯಕ್ಕೆ ಇರುವ ಕೆಲವು ಫೋಟೋ ಸತ್ಯಕ್ಕೆ ಹತ್ತಿರ ಇರಬಹುದೇ ಹೊರತು ಇದೇ ನಿಜ ಅಂತ ಹೇಳಲು ಸಾಧ್ಯವಿಲ್ಲ. ಆ ಬಗ್ಗೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ.ಕೆಲವು ಶ್ರೀಮಂತ ರಾಜಮನೆತನಗಳು ತಮ್ಮ ಆಸ್ಥಾನದಲ್ಲಿನ ಕಲಾವಿದರಿಂದ ಛಾಯಾಚಿತ್ರ ಬಿಡಿಸುತ್ತಿದ್ದರು.ಆದರೆ ಕಿತ್ತೂರು ಸಂಸ್ಥಾನ ಅಷ್ಟೊಂದು ಶ್ರೀಮಂತವಲ್ಲದ ಸಂಸ್ಥಾನವಾಗಿದ್ದರಿಂದ ಇಲ್ಲಿ ಮಾಡದೇ ಇರಬಹುದು.


ಈಗಿರುವ ಛಾಯಾಚಿತ್ರಗಳ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ, ಇನ್ನೂ ಶೋಧ ಮಾಡಬೇಕಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಇನ್ನು ಸಾಹಿತಿಗಳ ಮಹತ್ವ ಸಭೆಯಲ್ಲಿ ಸುದೀರ್ಘ ಚರ್ಚೆ ನಂತರ ಒಟ್ಟು ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ರಾಣಿ ಚೆನ್ನಮ್ಮಳ ನೈಜ್ ಭಾವಚಿತ್ರ ಸಂಶೋಧನೆಗೆ ಸ್ಥಳೀಯ ಸಮಿತಿ ರಚನೆ, ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧಾರ. ರಾಣಿ ಚನ್ನಮ್ಮಳ ಹುಟ್ಟಿದ ದಿನಾಂಕದ ಬಗ್ಗೆ ಗೊಂದಲಗಳಿದ್ದು, ಸರ್ಕಾರ ಅದನ್ನ ಸರಿಪಡಿಸಿ ಚೆನ್ನಮ್ಮ ಹುಟ್ಟಿದ ದಿನಾಂಕ ನವೆಂಬರ್ 14ರಂದು ಆಚರಿಸಬೇಕು. ಇದಕ್ಕೆ ಸಂಬಂಧಿಸಿದ ದಾಖಲೆ ಸಂಗ್ರಹಿಸಿ ಸರ್ಕಾರಕ್ಕೆ‌ ನೀಡಲು ನಿರ್ಧಾರ. ಇನ್ನೂ ಚನ್ನಮ್ಮಳಿಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಪ್ರಾಧಿಕಾರ ರಚಿಸಿ ಶೋಧ ಕಾರ್ಯಕ್ಕೆ ಮುಂದಾಗುವುದು ಎಂದು ನಿರ್ಧಾರಕ್ಕೆ ಬರಲಾಗಿದೆ.


ಈ ಬಗ್ಗೆ ಮಾಹಿತಿ ನೀಡಿದ ಸಾಹಿತಿ ಡಾ. ಸರಜೂ ಕಾಟ್ಕರ್, ಈಗ ಸಿಕ್ಕಿರುವ ಎರಡನೇ ಪೋಟೋ ಚೆನ್ನಮ್ಮಳ ಹೋಲಿಕೆ ಬರುತ್ತಿರುವುದರಿಂದ ಅದರ ಬಗ್ಗೆ ತನಿಖೆ ಮಾಡಲು ತೀರ್ಮಾನ  ಕೈಗೊಳ್ಳಲಾಗಿದೆ ಎಂದರು.


ಇದನ್ನೂ ಓದಿ : ಅಧಿವೇಶನದ ನಂತರ ನೋಡೋಣ: ರಾಜ್ಯ ಸಂಪುಟ ವಿಸ್ತರಣೆಗೆ ಪೂರಕವಾಗಿ ಸ್ಪಂದಿಸದ ಹೈಕಮಾಂಡ್


ಶೀಘ್ರದಲ್ಲೇ ಮತ್ತೊಂದು ಸಭೆ ಕರೆದು ಅಲ್ಲಿ ಸಂಶೋಧನಾ ಕುರಿತು ಚರ್ಚೆ ‌ಮಾಡಲಾಗುತ್ತದೆ. ರಾಜ್ಯ ಮನೆತನದ ಕುರಿತು ಮತ್ತು ಪೋಟೊಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲಾಗುತ್ತದೆ ಅಂತಾ ಕಾದಂಬರಿಕಾರ ಯ.ರು ಪಾಟೀಲ್ ಹೇಳಿದರು.


ಚೆನ್ನಮ್ಮಳ ನೈಜ ಭಾವಚಿತ್ರದ ಹಿಂದೆ ಬಿದ್ದಿರುವ ಸಾಹಿತಿಗಳು, ಇತಿಹಾಸ ತಜ್ಞರ ಒಳಗೊಂಡ ಸಭೆ ಉತ್ತಮ ಮುನ್ನುಡಿಯನ್ನು  ಬರೆದಿದ್ದು, ಎಲ್ಲ ನಿಟ್ಟಿನಲ್ಲಿ ಶೋಧ ನಡೆಸಿ ಚನ್ನಮ್ಮಳ ನೈಜ ಭಾವಚಿತ್ರವನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ನೀಡಲು ನಿರ್ಧರಿಸಲಾಯಿತು.

Published by:G Hareeshkumar
First published: