HOME » NEWS » District » EXPERIMENTING WITH BRAND NEW FOR WILD PRODUCTS SUBRAMANYA CHARMADI IS HEADING UP THE MARKET AKP MAK

ಕಾಡು ಉತ್ಪನ್ನಗಳಿಗೆ ಹೊಸ ಬ್ರಾಂಡ್ ನೀಡುವ ಪ್ರಯೋಗ; ಸುಬ್ರಹ್ಮಣ್ಯ-ಚಾರ್ಮಾಡಿಯಲ್ಲಿ ತಲೆಎತ್ತಲಿದೆ ಮಾರುಕಟ್ಟೆ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಉತ್ತರ ಕರ್ನಾಟಕ, ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗದಿಂದ ಭಕ್ತಾಧಿಗಳು ಬರುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಯ ಈ ಕಾಡುತ್ಪನ್ನಗಳನ್ನು ಇಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬ್ರಾಂಡ್ ಆಗಿ ಪರಿಚಯಿಸುವ ಪ್ರಯತ್ನ ನಡೆಯಲಿದೆ ಎನ್ನುವ ಮಾಹಿತಿಯನ್ನು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ನೀಡುತ್ತಾರೆ.

news18-kannada
Updated:November 20, 2020, 7:33 PM IST
ಕಾಡು ಉತ್ಪನ್ನಗಳಿಗೆ ಹೊಸ ಬ್ರಾಂಡ್ ನೀಡುವ ಪ್ರಯೋಗ; ಸುಬ್ರಹ್ಮಣ್ಯ-ಚಾರ್ಮಾಡಿಯಲ್ಲಿ ತಲೆಎತ್ತಲಿದೆ ಮಾರುಕಟ್ಟೆ
ಕಾಡಿನ ಉತ್ಪನ್ನಗಳು.
  • Share this:
ದಕ್ಷಿಣ ಕನ್ನಡ; ಅರಣ್ಯದ ಒಳಗಿನ ಕಾಡುತ್ಪನ್ನಗಳು ಮುಂದಿನ ದಿನಗಳಲ್ಲಿ ಹೊಸ ಬ್ರಾಂಡ್ ರೂಪದಲ್ಲಿ ಜನರ ಕೈ ಸೇರುವ ಯೋಜನೆಯೊಂದನ್ನು ದಕ್ಷಿಣಕನ್ನಡ ಜಿಲ್ಲಾಡಳಿತ ರೂಪಿಸಿಕೊಂಡಿದೆ. ಪ್ರಧಾನಮಂತ್ರಿ ವನ್ ಧನ್ ಯೋಜನೆಯ ಮೂಲಕ ಈ ಮಾರುಕಟ್ಟೆಯನ್ನು ಆರಂಭಿಸಲು ದಕ್ಷಿಣಕನ್ನಡ ಜಿಲ್ಲೆಯು ಸುಬ್ರಹ್ಮಣ್ಯ ಹಾಗೂ ಚಾರ್ಮಾಡಿ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಕಾಡಿನಂಚಿನಲ್ಲಿ ವಾಸಿಸುವ ಕುಟುಂಬಗಳು ಕಾಡುತ್ಪತ್ತಿಗಳಾದ ರಾಮಪತ್ರೆ, ದಾಲ್ಚಿನ್ನಿ, ಜೇನು, ಮಸಾಲ ಉತ್ಪನ್ನಗಳು, ಕೆಲವು ಕಾಡಿನ ಹೂವುಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಈ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಇಂಥಹ ಉತ್ಪನ್ನಗಳನ್ನು ದಕ್ಷಿಣಕನ್ನಡ ಜಿಲ್ಲೆಯ ಹೊಸ ಬ್ರಾಂಡ್ ರೂಪದಲ್ಲಿ ಪರಿಚಯಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಪ್ರಧಾನಮಂತ್ರಿ ವನ್ ಧನ್ ಯೋಜನೆ ಮೂಲಕ 30 ಲಕ್ಷ ರೂಪಾಯಿಗಳ ಅನುದಾನ ಈ ಯೋಜನೆಗೆ ಸಿಗುತ್ತಿದ್ದು, ಜಿಲ್ಲೆಯ ಎರಡು ಕಡೆಗಳಲ್ಲಿ ಈ ಉತ್ಪನ್ನಗಳ ಮಾರುಕಟ್ಟೆ ಆರಂಭಿಸಲು ನಿರ್ಧರಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಹಾಗೂ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಈ ಕಾಡುತ್ಪತ್ತಿ ಮಾರುಕಟ್ಟೆಗಳು ಶೀಘ್ರವೇ ಆರಂಭಗೊಳ್ಳಲಿದೆ. ವನ್ ಧನ್ ಯೋಜನೆಯ ಅನುದಾನದ ಜೊತೆಗೆ ಸಿಎಸ್.ಆರ್ ಫಂಡ್, ಎನ್.ಆರ್.ಯು.ಎಂ ಸೇರಿದಂತೆ ಹಲವು ಯೋಜನೆಗಳಿಂದ ಇದಕ್ಕೆ ಅನುದಾನವನ್ನು ಕೊಡಿಸುವ ಪ್ರಯತ್ನವೂ ನಡೆಯಲಿದೆ.

ಸ್ವಸಹಾಯ ಗುಂಪುಗಳು, ಗ್ರಾಮ ಅರಣ್ಯ ಸಮಿತಿ, ಲ್ಯಾಂಪ್ಸ್ ಮೂಲಕ ಈ ಮಾರುಕಟ್ಟೆಯನ್ನು ನಿರ್ವಹಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಗ್ರಾಮ ಅರಣ್ಯ ಸಮಿತಿ ಸದಸ್ಯರು ಈ ಮಾರುಕಟ್ಟೆಯ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶವನ್ನು ನೀಡಲಾಗುವುದು. ಸುಬ್ರಹ್ಮಣ್ಯ ಹಾಗೂ ಚಾರ್ಮಾಡಿಯ ಈ ಎರಡೂ ಮಾರುಕಟ್ಟೆ ಘಟಕಗೆ ತಲಾ 15 ಲಕ್ಷ ವಿನಿಯೋಗಿಸಲಾಗುವುದು. ಸುಬ್ರಹ್ಮಣ್ಯದಲ್ಲಿ ಆರಂಭಗೊಳ್ಳುವ ಘಟಕಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದಲೂ ವ್ಯವಸ್ಥೆಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಉತ್ತರ ಕರ್ನಾಟಕ, ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗದಿಂದ ಭಕ್ತಾಧಿಗಳು ಬರುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಯ ಈ ಕಾಡುತ್ಪನ್ನಗಳನ್ನು ಇಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬ್ರಾಂಡ್ ಆಗಿ ಪರಿಚಯಿಸುವ ಪ್ರಯತ್ನ ನಡೆಯಲಿದೆ ಎನ್ನುವ ಮಾಹಿತಿಯನ್ನು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ನೀಡುತ್ತಾರೆ.

ಇದನ್ನೂ ಓದಿ : ಲವ್​ ಜಿಹಾದ್​ ಬಿಜೆಪಿ ಸೃಷ್ಟಿ; ಮದುವೆ ವೈಯಕ್ತಿಕ ಸ್ವಾತಂತ್ರ್ಯ; ಅಶೋಕ್​ ಗೆಹ್ಲೋಟ್​

ಅರಣ್ಯ ಬಿಟ್ಟು ಜನ ಜೀವನವಲ್ಲ, ಅರಣ್ಯದೊಂದಿಗೆ ಜನ ಜೀವನ ಎನ್ನುವ ಚಿಂತನೆಯಡಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದ್ದು, ಇದರಿಂದ ಕಾಡುತ್ಪನ್ನಗಳನ್ನೇ ಮಾರಾಟ ಮಾಡಿ ಜೀವನ ಸಾಗಿಸುವ ಹಲವು ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎನ್ನುವುದು ಜಿಲ್ಲಾಧಿಕಾರಿಗಳ ಅವರ ಅಭಿಪ್ರಾಯವಾಗಿದೆ.
Youtube Video
ಯಾವ ರೀತಿ ಉತ್ತರಕನ್ನಡ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಸಿಗುವ ಉತ್ಪನ್ನಗಳನ್ನು ಬ್ರಾಂಡ್ ಮೂಲಕ ಪರಿಚಯಿಸಲಾಗುತ್ತಿದೆಯೋ ಅದೇ ರೀತಿ ದಕ್ಷಿಣಕನ್ನಡ ಜಿಲ್ಲೆಯ ಬ್ರಾಂಡ್ ಅನ್ನು ಪರಿಚಯಿಸುವ ವ್ಯವಸ್ಥೆ ಈ ಮಾರುಕಟ್ಟೆ ಘಟಕಗಳ ಮೂಲಕ ನಡೆಯಲಿದೆ.
Published by: MAshok Kumar
First published: November 20, 2020, 7:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories