ಕೋಲಾರ; ಬಾರ್ ಗಳ ಲೈಸೆನ್ಸ್ ನವೀಕರಣ ವಿಚಾರದಲ್ಲಿ ಮುಳಬಾಗಿಲು ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಮುಳಬಾಗಿಲು ಶಾಸಕರಾಗಿರೋ ಸಚಿವ ಹೆಚ್. ನಾಗೇಶ್ ಅವರ ಭ್ರಷ್ಟಾಚಾರ ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಹೆಚ್. ನಾಗೇಶ್ ಸಚಿವರಾದ ನಂತರ ಎಲ್ಲಾ ವಿಭಾಗದಲ್ಲೂ ಲಂಚ ಅಧಿಕವಾಗಿದೆ, ಕಮಿಷನ್ ಕಾಮನ್ ಆಗಿದೆ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕಿಡಿಕಾರಿದ್ದಾರೆ. ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರಿದೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿತ 45 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಳಬಾಗಿಲು ಪಟ್ಟಣದಲ್ಲಿ ಬೆಂಬಲಗರ ಜೊತೆಗೂಡಿ, ಅವಿರೋಧವಾಗಿ ಆಯ್ಕೆಯಾದ ಎಲ್ಲಾ ಸದಸ್ಯರನ್ನ ಅಭಿನಂದಿಸಿ ಮಾತನಾಡಿರುವ ಕೊತ್ತೂರು ಮಂಜುನಾಥ್,
"ತಾಲೂಕಿನಲ್ಲಿ ಎಲ್ಲಾ ಪಂಚಾಯಿತಿಯಲ್ಲಿ ನಾನು ಶಾಸಕನಾಗಿದ್ದಾಗ ಏನಾದರು ಒಂದು ಅಭಿವೃದ್ದಿ ಕೆಲಸ ಮಾಡಿರುವೆ. ಇಲ್ಲವಾದರೆ ನನ್ನ ಸ್ವಂತ ನೆರವು ನೀಡಿ ಜನರ ಸಂಕಷ್ಟಕ್ಕೆ ಸ್ಪಂಧಿಸಿರುವೆ. ಹೀಗಾಗಿ ನಾನು ಜನರ ಬಳಿ ಮತ ಕೇಳಲು ಹೊರಟಿದ್ದೇನೆ. ಮುಂದೆಯೂ ಇದೇ ಕ್ಷೇತ್ರದಲ್ಲಿ ಇರುವೆ. ನನಗೆ ಕ್ಷೇತ್ರದ ಜನತೆಯೆ ದೇವರುಗಳು, ನಂತರ ನಮ್ಮ ನಾಯಕರು ಕ್ಷೇತ್ರವನ್ನ ಬಿಡುವ ಮಾತೇ ಇಲ್ಲ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ತಮಿಳುನಾಡು ಸರ್ಕಾರದಿಂದ ಭರ್ಜರಿ ಪೊಂಗಲ್ ಗಿಫ್ಟ್; ಜನರಿಗೆ 2500 ರೂ ನಗದು ಹಾಗೂ ಬಟ್ಟೆ ವಿತರಣೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ