Yadagiri- ಅನುದಾನಕ್ಕಾಗಿ ಸುಸಜ್ಜಿತ ಕಟ್ಟಡವನ್ನೇ ನೆಲಸಮ ಮಾಡಿದ ಮಾಜಿ ಎಸ್​ಡಿಎಂಸಿ ಅಧ್ಯಕ್ಷ

ಅಡುಗೆ ಕೋಣೆ ನಿರ್ಮಾಣಕ್ಕೆ ಸರ್ಕಾರ ಅನುದಾನ ಮಂಜೂರು ಮಾಡಿತ್ತು. ಆದರೆ, ಕಟ್ಟಡ ಸುಸಜ್ಜಿತವಾದ್ದರಿಂದ ತೆರವುಗೊಳಿಸಲು ಎಂಜಿನಿಯರ್ ಅನುಮತಿಸಿರಲಿಲ್ಲ. ಅನುದಾನ ವಾಪಸ್ ಹೋಗುತ್ತದೆಂದು ಮಾಜಿ ಎಸ್ಡಿಎಂಸಿ ಅಧ್ಯಕ್ಷ ತಾನೇ ಕೋಣೆಯನ್ನ ಜೆಸಿಬಿ ಮೂಲಕ ಕೆಡವಿದ್ದಾರೆ.

ನೆಲಸಮ ಮಾಡಲಾದ ಕಟ್ಟಡ

ನೆಲಸಮ ಮಾಡಲಾದ ಕಟ್ಟಡ

  • Share this:
ಯಾದಗಿರಿ: ಸರಕಾರ ಅಡುಗೆ ಕೋಣೆ ನಿರ್ಮಾಣ ಮಾಡಲು ಮಂಜೂರು ಮಾಡಿದ ಅನುದಾನ ವಾಪಸ್ ಹೋಗುತ್ತದೆಂಬ ಆತಂಕದಿಂದ ಮಾಜಿ ಎಸ್​ಡಿಎಂಸಿ ಅಧ್ಯಕ್ಷ ಕಿಶಾನ್ ರಾಠೋಡ (Ex SDMC President Kishan Rathod) ಸುಸಜ್ಜಿತ ಅಡುಗೆ ಕೋಣೆಯನ್ನೇ ಡೆಮಾಲಿಷ್ ಮಾಡಿ ತನ್ನ ದರ್ಪ ತೊರಿದ್ದಾನೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಪುಟ್ ಪಾಕ್ ತಾಂಡಾದಲ್ಲಿ ಈ ಘಟನೆ ಜರುಗಿದೆ. ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯನ್ನು ಯಾವುದೇ ಮಾಹಿತಿ ಇಲ್ಲದೇ ಏಕಾಏಕಿ ಜೆಸಿಬಿ ಮೂಲಕ ನೆಲಸಮ ಮಾಡಿ ದರ್ಪ ಮೆರೆದಿದ್ದಾನೆ. ಮಾಜಿ ಎಸ್​ಡಿಎಂಸಿ ಅಧ್ಯಕ್ಷನಾದರೂ ತಾನೇ ಹಾಲಿ ಎಸ್​ಡಿಎಂಸಿ ಅಧ್ಯಕ್ಷನೆಂದು ದರ್ಪ ಮೆರೆದು ಯಾವುದೇ ಅನುಮತಿ ಇಲ್ಲದೇ ಶಾಲೆಯ ಅಡುಗೆ ಕೋಣೆಯನ್ನ ಜೆಸಿಬಿ‌ ಮೂಲಕ ಡೆಮಾಲಿಷ್ ಮಾಡಿದ್ದಾನೆ.

ಶಿಕ್ಷಣ ಇಲಾಖೆಯು ಅಡುಗೆ ಕೊಣೆ ನಿರ್ಮಾಣ ಮಾಡಲು 4 ಲಕ್ಷ ರೂ ಅನುದಾನ ಮಂಜೂರು ಮಾಡಿತ್ತು. ಆದರೆ, ಹಳೆ ಅಡುಗೆ ಕೊಣೆಯು 2009 ರ ಸಾಲಿನಲ್ಲಿ ನಿರ್ಮಾಣ ಮಾಡಲಾಗಿತ್ತು. ಕಟ್ಟಡ ಸುಸಜ್ಜಿತವಾಗಿದ್ದ ಹಿನ್ನೆಲೆ ತಾಲೂಕು ಪಂಚಾಯತ್ ಎಂಜಿನಿಯರ್ ಅಧಿಕಾರಿ ಅವರು ಹಳೆ ಅಡುಗೆ ಕೋಣೆ ತೆರವು ಮಾಡಲು ಯಾವುದೇ ಅನುಮತಿ ನೀಡಿರಲಿಲ್ಲ. ಇದರಿಂದ ಕೊಪಗೊಂಡ ಕಿಶಾನ್ ರಾಠೋಡ ಅಡುಗೆ ಕೊಣೆಯನ್ನೇ ಡೆಮಾಲಿಷನ್ ಮಾಡಿದ್ಧಾನೆ. ಕೋಣೆ ನೆಲಸಮಗೊಳಿಸಲು ಯಾವುದೇ ಅನುಮತಿ ನೀಡದಿದ್ದರೂ ಏಕಾಏಕಿ ಜೆಸಿಬಿ ಮೂಲಕ ಈ ಕೃತ್ಯ ಎಸಗಿದ್ಧಾನೆ. ಅಡುಗೆ ಕೋಣೆ ಡೆಮಾಲಿಷನ್ ಮಾಡಿದ ಈತನ ಕಾರ್ಯಕ್ಕೆ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ನಿವಾಸಿ ಸಂಜು ಮಾತನಾಡಿ, ಅಡುಗೆ ಕೋಣೆ ಡೆಮಾಲಿಷನ್ ಮಾಡಲು ಯಾವುದೇ ಅನುಮತಿ ನೀಡಿಲ್ಲ. ಆದರೆ, ಮಾಜಿ ಎಸ್​ಡಿಎಂಸಿ ಅಧ್ಯಕ್ಷ ಕಿಶಾನ್ ರಾಠೋಡ ಅವರು ಏಕಾಏಕಿ ಅಡುಗೆ ಕೋಣೆ ಡೆಮಾಲಿಷ್ ಮಾಡಿ ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಸುಸಜ್ಜಿತ ಅಡುಗೆ ಕೋಣೆಯನ್ನು ಧ್ವಂಸ ಮಾಡಲಾಗಿದೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಮ್ಮೂರಿಗೆ ಬಾರ್ ಬೇಡವೇ ಬೇಡ.. ಬಾರ್ ಮಾಲೀಕನ ವಿರುದ್ಧ ಮುಸ್ಲಾಪುರ ಮಹಿಳೆಯರು ಕೆಂಡಾಮಂಡಲ!

ತಾನು ಎಸ್​ಡಿಎಂಸಿ ಅಧ್ಯಕ್ಷನಿಲ್ಲದಿದ್ದರೂ ತಾನೆ ಎಸ್​ಡಿಎಂಸಿ ಅಧ್ಯಕ್ಷನೆಂದು ಸರಕಾರ ಬಿಡುಗಡೆ ಮಾಡಿದ ಅನುದಾನದ ಮೇಲೆ ಕಣ್ಣು ಹಾಕಿ ಸುಸಜ್ಜಿತ ಅಡುಗೆ ಕೊಣೆ ತೆರವು ಮಾಡಿ ದರ್ಪ ಮೆರೆದಿದ್ದಾನೆ. ಇದು ಗ್ರಾಮಸ್ಥರ ಅಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಾಲೆಯ ಪ್ರಾಂಶುಪಾಲಕಿ ಸುನಂದಾ ಮಾತನಾಡಿ, ಸರ್ ಅಡುಗೆ ಕೊಣೆ ಡೆಮಾಲಿಷ್ ಮಾಡಲು ಇಂಜಿನಿಯರ್ ಅವರು ಅನುಮತಿ ನೀಡಿಲ್ಲ. ಅಡುಗೆ ಕೊಣೆಯು 2009 ರ ಸಾಲಿನಲ್ಲಿ ನಿರ್ಮಾಣ ಮಾಡಲಾಗಿದೆ. ಮಾಜಿ ಎಸ್ ಡಿಎಂಸಿ ಅಧ್ಯಕ್ಷರು ನಾವು ಯಾರೂ ಇಲ್ಲದಿರುವಾಗ ಜೆಸಿಬಿ ತರಿಸಿ ಅಡುಗೆ ಕೋಣೆ ಡೆಮಾಲಿಷ್ ಮಾಡಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಗಮನಕ್ಕೆ ತರಲಾಗುತ್ತದೆ ಎಂದರು.

ಇದನ್ನೂ ಓದಿ: Son Killed by Father: 2 ವರ್ಷದ ಮಗನನ್ನೇ ಕೊಂದು ನಾಟಕವಾಡಿದ ಪಾಪಿ ತಂದೆ ಸಿಕ್ಕಿಬಿದ್ದಿದ್ದೇ ರೋಚಕ!

ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಗಮನಕ್ಕೂ ಸಹಿತ ಕಿಶಾನ್ ರಾಠೋಡ ತಂದಿಲ್ಲ. ಅನುದಾನ ಹಣದ ಮೇಲೆ ಕಣ್ಣು ಹಾಕಿ ಅಡುಗೆ ಕೋಣೆ ಡೆಮಾಲಿಷ್ ಮಾಡಿ ತಾನೆ ಅನುದಾನ ಹಣದಲ್ಲಿ ಅಡುಗೆ ಕೊಣೆ ನಿರ್ಮಾಣ ಮಾಡಲು ಈ ಹುಚ್ಚಾಟ ಮೆರೆದಿರುವುದು ಎಲ್ಲರ ಅಕ್ರೋಶಕ್ಕೆ ಕಾರಣವಾಗಿದೆ.

ವರದಿ: ನಾಗಪ್ಪ ಮಾಲಿಪಾಟೀಲ
Published by:Vijayasarthy SN
First published: