ಕಾಂಗ್ರೆಸ್ ಪಕ್ಷ ಗರಿಕೆ ಇದ್ದಂತೆ, ಮಳೆ ಬಂದರೆ ಮತ್ತೆ ಚಿಗುರುತ್ತೆ; ಕೆ.ಹೆಚ್‌. ಮುನಿಯಪ್ಪ

ಕಾಂಗ್ರೆಸ್ ಪಕ್ಷಕ್ಕೆ ಈಗ ಹಿನ್ನಡೆ ಆಗಿರಬಹುದು ಆದರೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರು ಪ್ರಾಣತ್ಯಾಗ ಮಾಡಿದ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಒಂಥರಾ ಗರಿಕೆ ಹುಲ್ಲು ಇದ್ದಂತೆ, ಬಿಸಿಲು ಇದ್ದಾಗ ಒಣಗಿ, ಮಳೆಬಂದಾಗ ಮತ್ತೆ ಚಿಗುರುತ್ತೆ  ಎಂದು ಕೆ.ಹೆಚ್‌. ಮುನಿಯಪ್ಪ ತಿಳಿಸಿದ್ದಾರೆ.

ಕೆ.ಎಚ್.ಮುನಿಯಪ್ಪ

ಕೆ.ಎಚ್.ಮುನಿಯಪ್ಪ

  • Share this:
ಕೋಲಾರ (ಸೆಪ್ಟೆಂಬರ್‌ 19); ಕೋವಿಡ್ ಸಮಯವನ್ನು ನಿರ್ವಹಣೆ  ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೋಲಾರದಲ್ಲಿ ಮಾಜಿ ಸಂಸದ ಕೆಎಚ್ ಮುನಿಯಪ್ಪ ವಾಗ್ದಾಳಿ ನಡೆಸಿದ್ದಾರೆ, ಎಐಸಿಸಿ ಕಾರ್ಯಕಾರಿ ಸಮಿತಿಯ ಆಹ್ವಾನಿತ ಖಾಯಂ ಸದಸ್ಯರಾಗಿ ಕೆಎಚ್ ಮುನಿಯಪ್ಪ ರನ್ನ ಪಕ್ಷ ನೇಮಿಸಿದ್ದು, ಪಕ್ಷದ ಜಿಲ್ಲಾಧ್ಯಕ್ಷ್ಯರು ಹಾಗು  ಮುಖಂಡರು ಇಂದು ಅವರ ನಿವಾಸಕ್ಕೆ ಆಗಮಿಸಿ ಅಭಿಮಾನಿಸಿ ಸನ್ಮಾನಿಸಿದರು, ಬಳಿಕ  ಕೋಲಾರದ ತಮ್ಮ‌ ನಿವಾಸದ ಬಳಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುನಿಯಪ್ಪ, "ದೇಶದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 12 ಕೋಟಿ ಜನರು ಮತ ನೀಡಿದ್ದಾರೆ, ಬಿಜೆಪಿಗೆ 17 ಕೋಟಿ ಜನರು ಮತಹಾಕಿದ್ದಾರೆ, ಕಾಂಗ್ರೆಸ್ ಪಕ್ಷವನ್ನ ರಾಜ್ಯಾದ್ಯಂತ ಕಟ್ಟಿಬೆಳೆಸಲು ಸನ್ನದ್ದರಾಗಿದ್ದು, ಮುಂದಿನ ಗ್ರಾಮ ಪಂಚಾಯತಿ, ತಾಲೂಕು, ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವೇ ಅತ್ಯಧಿಕ ಸ್ತಾನ ಗೆಲ್ಲಲಿದೆ" ಎಂದು ಭವಿಷ್ಯ ನುಡಿದರು.

"ಕಾಂಗ್ರೆಸ್ ಪಕ್ಷಕ್ಕೆ ಈಗ ಹಿನ್ನಡೆ ಆಗಿರಬಹುದು ಆದರೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರು ಪ್ರಾಣತ್ಯಾಗ ಮಾಡಿದ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಒಂಥರಾ ಗರಿಕೆ ಹುಲ್ಲು ಇದ್ದಂತೆ, ಬಿಸಿಲು ಇದ್ದಾಗ ಒಣಗಿ, ಮಳೆಬಂದಾಗ ಮತ್ತೆ ಚಿಗುರುತ್ತೆ  ಎಂದರು. ಮುಂದಿನ ಎಲ್ಲಾ ಚುನಾವಣೆ ಕುರಿತು ಯೋಜನೆ ರೂಪಿಸಲು,  ಎಲ್ಲಾ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚೆ ಮಾಡಲಾಗುವುದು" ಎಂದು ಮುನಿಯಪ್ಪ ತಿಳಿಸಿದರು.

ಇನ್ನು ಕೋವಿಡ್ ಸಮಯದಲ್ಲಿ  ಕೆಮ್ಮು ನೆಗಡಿ ಇದ್ದರು ಕೊರೋನಾ ಇದೆಯೆಂದು ಸರ್ಕಾರ ಹೇಳುತ್ತಿದ್ದು,  ಆದರೆ ಕೊರೋನಾ ಇಲ್ಲದಿದ್ದರು ಅಕ್ರಮವಾಗಿ ಬಿಲ್ ಮಾಡ್ತಿದ್ದಾರೆ. ಅದರಿಂದಲೆ, ಕೊರೋನಾ ವೇಳೆಯಲ್ಲು 4 ಸಾವಿರ ಕೋಟಿ ದುರ್ಬಳಕೆ ಆಗಿದೆ, ಮನುಷ್ಯರ ಜೀವದಲ್ಲು ಸರ್ಕಾರ ದುಡ್ಡು ಗಳಿಸುತ್ತಿದೆ ಇದು ದುರ್ದೈವ ಎಂದು ಕಿಡಿಕಾರಿದರು, ಇನ್ನು ದೇಶದಲ್ಲಿ ಜಿಡಿಪಿ ದಾಖಲೆಯ ಕುಸಿತ ಕಂಡಿದೆ, ಧರ್ಮಗಳ ಮಧ್ಯೆ ವಿಷಬೀಜವನ್ನ ಬಿತ್ತಿ‌ ರಾಜಕೀಯ ಮಾಡಲು ಬಿಜೆಪಿ ಮುಂದಾಗಿದೆ ಎಂದು ಕಿಡಿಕಾರಿದರು,

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೊಧಿ ಚಟುವಟಿಕೆ ಮಾಡಿದ್ದಾರೆಂದು ಶಾಸಕರಾದ ರಮೇಶ್ ಕುಮಾರ್, ನಾರಾಯಣಸ್ವಾಮಿ, ನಾಸಿರ್ ಅಹಮದ್ ಸೇರಿದಂತೆ ಹಲವರನ್ನ ಪಕ್ಷದಿಂದ ಉಚ್ವಾಟನೆ ಮಾಡಲು ಮುನಿಯಪ್ಪ ಸೋನಿಯಾರಿಗೆ ಪತ್ರ ಬರೆದು ಆಗ್ರಹಿಸಿದ್ದರು, ಆದರೆ ಈ ಕುರಿತ ಪ್ರಶ್ನೆಗೆ ಉತ್ತರ ನೀಡಲು ಕೆಎಚ್ ಮುನಿಯಪ್ಪ ಹಿಂದೇಟು ಹಾಕಿದರು. ಬದಲಾಗಿ ಎಲ್ಲರನ್ನ ಒಗ್ಗೂಡಿಸಿಕೊಂಡು ಮುಂದೆ ಹೋಗುತ್ತೇವೆ ಎನ್ನುವ ಮೂಲಕ, ಹೊಂದಾಣಿಕೆ ಮಾಡಿಕೊಂಡು ಮುಂದೆ ಹೋಗುವ ಮಾತನ್ನಾಡಿದರು, ಮುಂದೆ ಎಐಸಿಸಿ ಅಧ್ಯಕ್ಷ್ಯರಾಗಿ ರಾಹುಲ್ ಗಾಂಧಿಯವರೆ ಆಯ್ಕೆಯಾಗಲಿದ್ದಾರೆ.

ಇದನ್ನೂ ಓದಿ : ಕೊಡಗಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ; ಜನರಲ್ಲಿ ಮತ್ತೆ ಮನೆಮಾಡಿದ ಆತಂಕ

ಆ ಸ್ತಾನಕ್ಕೆ ಅವರೇ ಸೂಕ್ತ ಎಂದರು, ಪಕ್ಷದಲ್ಲಿ ನಾಯಕತ್ವವನ್ನ ಯಾರು  ಪ್ರಶ್ನೆ ಮಾಡಿಲ್ಲ,‌ ಆದರೆ ಪಕ್ಷದಲ್ಲಿನ ಸಾಂಸ್ಥಿಕ ಚುನಾವಣೆ ಕುರಿತು 23 ಜನ ನಾಯಕರು ಸೋನಿಯಾರಿಗೆ ಪತ್ರ ಬರೆದಿದ್ದರು,  ಆದರೆ ಅವರು ಪತ್ರದ ಮೂಲಕ ಕೇಳಬಾರದಿತ್ತು, ಯಾಕೆಂದರೆ ಕಪಿಲ್ ಸಿಬಲ್, ಗುಲಾಂನಬಿ ಆಜಾದ್ ಹಲವರು, ಸೋನಿಯಾ ಅವರ ಕುಟುಂಬದ ಜೊತೆಗೆ ಉತ್ತಮ ಬಾಂದವ್ಯ ಹೊಂದಿದ್ದಾರೆ, ಪೋನ್ ಮುಖಾಂತರ ಚರ್ಚೆ ಮಾಡಬಹುದಿತ್ತು, ಇದರಿಂದ ಪಕ್ಷದ‌ ಬೆಳವಣಿಗೆಗೆ ಹಿನ್ನಡೆ ಆಗಿದೆ ಎಂದು  ಬೇಸರ ಹೊರಹಾಕಿದರು.

ಸದಾಶಿವ ಆಯೋಗ ಜಾರಿ ವಿಚಾರ, ಸಿಎಂ ಭೇಟಿ ಮಾಡಲು ನಿರ್ಧಾರ‌

ರಾಜ್ಯದಲ್ಲಿ ಸದಾಶಿವ ಆಯೋಗ ಜಾರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆಎಚ್ ಮುನಿಯಪ್ಪ, ಸಮುದಾಯದ ಮುಖಂಡರ ಜೊತೆಗೂಡಿ ಸಿಎಂ ಭೇಟಿ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು, ಆಯೋಗದ ವರದಿ ಜಾರಿಯಿಂದ ಪರಿಶಿಷ್ಟ ಜಾತಿಯ ಒಳಪಂಗಡದ ಕೆಲ ಉಪಜಾತಿಗಳಿಗೆ ಸಮಸ್ಯೆಯಾಗುವ ಭೀತಿಯು ಹಲವರಿಗೆ ಇದೆ,  ಆದರೆ ಸದಾಶಿವ ಆಯೋಗದಿಂದ ಯಾವುದೆ ಉಪಜಾತಿಗೂ ಸಮಸ್ಯೆಯಾಗಲ್ಲ, ನಾನು ಒಂದು ಪಕ್ಷದಲ್ಲಿ ಇರುವ ಕಾರಣ, ಮುಖಂಡರನ್ನ ಸಹಕಾರಕ್ಕೆ ತೆಗೆದುಕೊಂಡು ಸಿಎಂ ರನ್ನ ಭೇಟಿ ಮಾಡಿ ಚರ್ಚೆ ನಡೆಸುವವುದಾಗಿ ತಿಳಿಸಿದರು.
Published by:MAshok Kumar
First published: