HOME » NEWS » District » EX MLA K RAJU DEMAND INSERT VOKKALIGA COMMUNITY INTO 2A RH

ಒಕ್ಕಲಿಗ ಸಮಾಜವನ್ನು 2ಎ ಗೆ ಸೇರಿಸಿ; ಜೆಡಿಎಸ್ ಮಾಜಿ ಶಾಸಕ ಕೆ.ರಾಜು ಒತ್ತಾಯ

ಲಿಂಗಾಯತ ಸಮಾಜಕ್ಕಿಂತ ಒಂದೆರಡು ಪರ್ಸೆಂಟ್ ಒಕ್ಕಲಿಗರ ಜನಸಂಖ್ಯೆ ಕಡಿಮೆ ಇದೇ ಅಷ್ಟೇ. ಹಾಗಾಗಿ ಸಿಎಂ ಯಡಿಯೂರಪ್ಪ ಅವರು ಈ ಬಗ್ಗೆ ಸೂಕ್ತ ತೀರ್ಮಾನ ಮಾಡಲಿ ಎಂದು ಹೇಳಿದರು.

news18-kannada
Updated:November 27, 2020, 2:48 PM IST
ಒಕ್ಕಲಿಗ ಸಮಾಜವನ್ನು 2ಎ ಗೆ ಸೇರಿಸಿ; ಜೆಡಿಎಸ್ ಮಾಜಿ ಶಾಸಕ ಕೆ.ರಾಜು ಒತ್ತಾಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ರಾಜು.
  • Share this:
ರಾಮನಗರ; ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸಲು ಇಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿರುವ ಬೆನ್ನಲ್ಲೇ ಒಕ್ಕಲಿಗ ಸಮುದಾಯವನ್ನು 3  ಎ ಯಿಂದ 2 ಎ ಗೆ ಸೇರಿಸಿ ಎಂಬ ಒತ್ತಾಯವೂ ಕೇಳಿಬಂದಿದೆ. ಒಕ್ಕಲಿಗ ಸಮಾಜವನ್ನು 2A ಗೆ ಸೇರಿಸಬೇಕು ಎಂದು ರಾಮನಗರದ ಮಾಜಿ ಜೆಡಿಎಸ್ ಶಾಸಕ ಕೆ.ರಾಜು ಅವರು ಸಿಎಂ ಯಡಿಯೂರಪ್ಪ ಅವರಿಗೆ ಒತ್ತಾಯಿಸಿದ್ದಾರೆ.

ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ರಾಜು ಅವರು ಒಕ್ಕಲಿಗ ಸಮಾಜದಲ್ಲಿಯೂ ಕಡುಬಡವರಿದ್ದಾರೆ. ಲಿಂಗಾಯುತ ಸಮಾಜವನ್ನು ಒಬಿಸಿಗೆ ಸೇರಿಸಲು ಸಿಎಂ ಒಲವು ತೋರಿದ್ದಾರೆ. ಆ ಸಮಾಜಕ್ಕೆ ನಿಗಮ ಕೂಡ ರಚನೆ ಮಾಡಿದ್ದಾರೆ. ಆದರೆ ಅದಕ್ಕೆ ನಮ್ಮ ವಿರೋಧ ಇಲ್ಲ. ಲಿಂಗಾಯತ ಸಮಾಜದಂತೆ ಒಕ್ಕಲಿಗ ಸಮಾಜಕ್ಕೂ ನ್ಯಾಯ ಕೊಡಲಿ. ರೈತರ ಸಮಾಜ ಅಂದರೆ ಅದು ಒಕ್ಕಲಿಗ ಸಮಾಜ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಪಂಜಾಬ್ ರೈತರ ‘ದಿಲ್ಲಿ ಚಲೋ’ಗೆ ಕೈಜೋಡಿಸಿದ ಹರಿಯಾಣ ರೈತರು; ದೆಹಲಿ ಗಡಿಭಾಗದಲ್ಲಿ ಲಾಠಿ ಚಾರ್ಜ್, ಟಿಯರ್ ಗ್ಯಾಸ್, ಟ್ರಾಫಿಕ್ ಜಾಮ್

ಇನ್ನು ಲಿಂಗಾಯತ ಸಮಾಜಕ್ಕಿಂತ ಒಂದೆರಡು ಪರ್ಸೆಂಟ್ ಒಕ್ಕಲಿಗರ ಜನಸಂಖ್ಯೆ ಕಡಿಮೆ ಇದೇ ಅಷ್ಟೇ. ಹಾಗಾಗಿ ಸಿಎಂ ಯಡಿಯೂರಪ್ಪ ಅವರು ಈ ಬಗ್ಗೆ ಸೂಕ್ತ ತೀರ್ಮಾನ ಮಾಡಲಿ. ಈ ಬಗ್ಗೆ ಒಕ್ಕಲಿಗ ಸಮಾಜದ ರಾಜಕೀಯ ನಾಯಕರು ಧ್ವನಿ ಎತ್ತಲಿ ಎಂದು ಆಗ್ರಹಿಸಿದರು. ಈ ವಿಚಾರವಾಗಿ ಸೂಕ್ತ ನಿರ್ಧಾರ ಮಾಡದಿದ್ದರೆ ಹೋರಾಟ ಅಗತ್ಯ ಎಂದು ಎಚ್ಚರಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಹೆಚ್.ಎನ್.ಅಶೋಕ್, ಕಾಂಗ್ರೆಸ್ ಮುಖಂಡ ಗಾಣಕಲ್ ನಟರಾಜ್ ಉಪಸ್ಥಿತಿ ಇದ್ದರು.

ವರದಿ : ಎ.ಟಿ.ವೆಂಕಟೇಶ್ 
Published by: HR Ramesh
First published: November 27, 2020, 2:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading