ಕಾಂಗ್ರೆಸ್‌ಗೆ ಪರ್ಸೆಂಟೇಜ್ ಸರಕಾರ ಎಂದು ಜರಿದಿದ್ದ ಮೋದಿಯವರದ್ದೂ ಅದೇ ವೃತ್ತಿನಾ?

ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗಂಗಾವತಿಗೆ ಬಂದಾಗ ಕಾಂಗ್ರೆಸ್ ಸರಕಾರಕ್ಕೆ ಪರ್ಸಂಟೇಜ್ ಸರಕಾರ ಎಂದಿದ್ದರು. ಹಾಗಾದರೆ ಅದು ಅವರ ಹಳೆಯ ವೃತ್ತಿಯಾ? ಕೊಪ್ಪಳಕ್ಕೆ ಬಂದಾಗ ಅದನ್ನು ನೆನಪು ಮಾಡಿಕೊಂಡರಾ? ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಲೇವಡಿ‌ ಮಾಡಿದ್ದಾರೆ.

news18-kannada
Updated:July 2, 2020, 9:16 PM IST
ಕಾಂಗ್ರೆಸ್‌ಗೆ ಪರ್ಸೆಂಟೇಜ್ ಸರಕಾರ ಎಂದು ಜರಿದಿದ್ದ ಮೋದಿಯವರದ್ದೂ ಅದೇ ವೃತ್ತಿನಾ?
ಮಾಜಿ ಸಚಿವ ಶಿವರಾಜ ತಂಗಡಗಿ.
  • Share this:
ಕೊಪ್ಪಳ: ಪ್ರಧಾನಿ‌ ಮೋದಿಯವರು ಕಳೆದ ಲೋಕಸಭಾ ಚುನಾವಣೆ ವೇಳೆ ಗಂಗಾವತಿಗೆ ಪ್ರಚಾರಕ್ಕೆಂದು ಬಂದಿದ್ದರು. ಈ ವೇಳೆ ಅಂದಿನ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಪರ್ಸಂಟೇಜ್ ಸರ್ಕಾರ ಎಂದು ಜರಿದಿದ್ದರು. ಹಾಗಾದರೆ ಅದು ಪ್ರಧಾನಿಯ ವೃತ್ತೀನಾ? ಕೊಪ್ಪಳಕ್ಕೆ ಬಂದಾಗ ಅವರಿಗೆ ಈ ವೃತ್ತಿ ನೆನಪಾಯ್ತಾ? ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಕೊಪ್ಪಳದ ಡಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ ತಂಗಡಗಿ, "ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಜಿಲ್ಲೆಗೆ ವಸೂಲಿಗಾಗಿ‌ ಬರ್ತಾರೆ ಎಂದು ತಂಗಡಗಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದರು. ಈ ವೇಳೆ ಪ್ರತಿಕ್ರಿಯಿಸಿದ್ದ ಸಂಸದ ಸಂಗಣ್ಣ ಕರಡಿ ಮತ್ತು ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿಯವರು ತಂಗಡಗಿ ತಮ್ಮ ಹಳೇ ವೃತ್ತಿ ನೆನಪು ಮಾಡಿಕೊಂಡಿದ್ದಾರೆ ಎಂದು ಹೀಗಳೆದಿದ್ದರು.

ಬಿಜೆಪಿ ನಾಯಕರ ಈ ಟೀಕೆಗೆ ಖಡಕ್‌ ಆಗಿಯೇ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಹಾಗೂ ಕೊಪ್ಪಳ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, "ಹಾಗಾದರೆ ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗಂಗಾವತಿಗೆ ಬಂದಾಗ ಕಾಂಗ್ರೆಸ್ ಸರಕಾರಕ್ಕೆ ಪರ್ಸಂಟೇಜ್ ಸರಕಾರ ಎಂದಿದ್ದರು. ಹಾಗಾದರೆ ಅದು ಅವರ ಹಳೆಯ ವೃತ್ತಿಯಾ? ಕೊಪ್ಪಳಕ್ಕೆ ಬಂದಾಗ ಅದನ್ನು ನೆನಪು ಮಾಡಿಕೊಂಡರಾ? ಎಂದು ಲೇವಡಿ‌ ಮಾಡಿದ್ದಾರೆ.

"ಗಂಗಾವತಿಯಲ್ಲಿ ನಡೆಯುತ್ತಿರುವ ಅಮೃತ್ ಸಿಟಿ ಯೋಜನೆಯಲ್ಲಿ ಅವ್ಯವಹಾರವಾಗಿದೆ, ಕಾಮಗಾರಿ ಕಳಪೆಯಾಗಿದೆ ಎಂದು ದೂರು ನೀಡಿದ್ದ ಸಂಸದರು, ನಗರಾಭಿವೃದ್ಧಿ ಸಚಿವರು ಬಂದಾಗ ಈ ವಿಷಯವನ್ನೇಕೆ ಪ್ರಸ್ತಾಪಿಸಲಿಲ್ಲ. ಈ ಕುರಿತ ಮಾಧ್ಯಮಗಳ ಪ್ರಶ್ನೆಗೆ ಮೌನವಾಗಿದ್ದೇಕೆ. ಗಂಗಾವತಿಯ ಶಾಸಕರು ಕಾಮಗಾರಿ ಚನ್ನಾಗಿದೆ ಎಂದರೆ, ಸಂಸದರು ಕಳಪೆ ಎನ್ನುತ್ತಾರೆ. ಬಹುಶಃ ಸಂಸದರಿಗೆ ಕಾಮಗಾರಿಯಲ್ಲಿ ಪಾಲು ಸಿಕ್ಕಿರಲಿಕ್ಕಿಲ್ಲ" ಎಂದು ಕಾಣಿಸುತ್ತದೆ ಎಂದು ಹರಿಹಾಯ್ದರು.

ಇದನ್ನೂ ಓದಿ : ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ‌ 7000 ಬೆಡ್‌ಗಳ ಕೋವಿಡ್‌ ಸೆಂಟರ್‌; ಜಂಟಿ ಆಯುಕ್ತ ನರಸಿಂಹಮೂರ್ತಿ

"ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 4 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಿ ದೂರು ನೀಡಿದಾಗ, ವೀರ-ಧೀರ-ಶೂರನಂತೆ ಮಾಧ್ಯಮಗಳ ಮುಂದೆ ಬಂದ ಕನಕಗಿರಿ ಶಾಸಕರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿದಾಗ ಗಪ್ ಚುಪ್ ಆಗಿರುವುದೇಕೆ? ಈಗ ಮಾತನಾಡಲಿ ನೋಡೋಣ" ಎಂದು ಶಿವರಾಜ ತಂಗಡಗಿ ಸವಾಲು ಹಾಕಿದ್ದಾರೆ
First published: July 2, 2020, 9:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading