ಮೈಸೂರು ಮೇಯರ್ ಚುನಾವಣೆ ಮೈತ್ರಿಯ ಮೆಸೇಜ್ ರಹಸ್ಯ ಬಿಚ್ಚಿಟ್ಟ ಸಾ.ರಾ. ಮಹೇಶ್‌

ಸಾರಾ ಮಹೇಶ್​ ಪತ್ರಿಕಾಗೋಷ್ಠಿ.

ಸಾರಾ ಮಹೇಶ್​ ಪತ್ರಿಕಾಗೋಷ್ಠಿ.

ಮುಂದಿನ ಸಾರಿ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ನೀಡುತ್ತೇವೆ. ಅವರು ಕೇಳಲಿ ಕೇಳದೆ ಇರಲಿ ಮೇಯರ್ ಸ್ಥಾನ ಗ್ಯಾರೆಂಟಿ. ಆದರೆ ಮಾತಿನ ಮೇಲೆ ಹಿಡಿತವಿರಬೇಕು ಯಾವುದೇ ಡ್ರಾಮಾ ಗೊಂದಲಗಳಿಲ್ಲದೆ ಮೇಯರ್ ಸ್ಥಾನ‌ ನೀಡಲಾಗುವುದು ಎಂದು ಸಾರಾ ಮಹೇಶ್​ ತಿಳಿಸಿದ್ದಾರೆ.

  • Share this:

ಮೈಸೂರು; ಅರಮನೆ ನಗರಿ ಮೈಸೂರು ಪಾಲಿಕೆ ಮೇಯರ್​ ಚುನಾವಣೆ ದಿನ ನಡೆದಿದ್ದೇನು ಅಂತ ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್‌ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದ ಶಾಸಕ ಸಾ.ರಾ. ಮಹೇಶ್‌, "ನಾವು ಸ್ವತಂತ್ರವಾಗಿ ಗೆಲ್ಲುತ್ತೇವೆ ಅಂತಲೇ ರೆಡಿಯಾಗಿದ್ದೆವು. ಕಾಂಗ್ರೆಸ್, ಬಿಜೆಪಿ ನಡುವೆ ಸಮಾನಾಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದೆವು‌. ಇದಾದ ನಂತರ ನಮಗೆ ಮೆಸೇಜ್ ಬಂತು. ತನ್ವೀರ್ ಅವರು ರಾತ್ರಿ 12.41ಕ್ಕೆ ಮೆಸೇಜ್ ಕಳುಹಿಸಿದ್ದರು. ಜಿ.ಟಿ.ದೇವೇಗೌಡ, ಸಂದೇಶ್ ನಾಗರಾಜ್ ಜತೆ ಬಿಜೆಪಿಯವರು ಮಾತನಾಡಿದ್ದಾರೆ. ಅವರಿಬ್ಬರೂ ಚುನಾವಣೆಗೆ ಬರಲ್ಲ ಅಂತ ಮೆಸೇಜ್ ಹಾಕಿದ್ದರು. ಬಿಎಸ್‌ಪಿ ಪಲ್ಲವಿ ಕೂಡ ಬಿಜೆಪಿ ಬೆಂಬಲಕ್ಕೆ ಇದ್ದಾರೆ ಅಂತ ಮತ್ತೊಂದು ಮೆಸೇಜ್ ಕಳುಹಿಸಿದ್ದರು. ಬೆಳಗ್ಗೆ 11 ಗಂಟೆಗೆ ಮೊದಲ ಬಾರಿಗೆ ಬಿಜೆಪಿ ಮೇಯರ್ ಆಗಿಬಿಡುತ್ತೆ, ಅದಕ್ಕೆ ಅವಕಾಶ ಕೊಡೋದು ಬೇಡ ಅಂತ ಮತ್ತೆ ಮೆಸೆಜ್ ಮಾಡಿದರು.


ಮೇಯರ್ ಹುದ್ದೆ ನೀವೇ ಇಟ್ಟುಕೊಳ್ಳಿ, ಉಪಮೇಯರ್ ನಮಗೆ ಕೊಡಿ ಅಂತ ತನ್ವೀರ್ ಸೇಠ್ ಆಫರ್ ಸಹ ನೀಡಿದರು. 11.30ಕ್ಕೆ ಡಿ.ಕೆ.ಶಿವಕುಮಾರ್ ಕಾಲ್ ಮಾಡಿದ್ದರು, ನಮ್ಮ ಫೋನ್ ಅನ್ನು ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ಕೊಟ್ಟೆ, ಆಗಲೂ ಡಿ.ಕೆ.ಶಿವಕುಮಾರ್ ಮೇಯರ್ ಹುದ್ದೆ ಕೇಳಿದ್ದರು.  11.41ಕ್ಕೆ ನಮ್ಮಿಬ್ಬರು ಶಾಸಕರ ಲೊಕೇಶನ್ ಕೇಳಿದೆವು ಸಂದೇಶ್ ನಾಗರಾಜ್ ಮತ್ತು ಜಿ.ಟಿ.ದೇವೇಗೌಡ ಅವರು ಆಬ್ಸೆಂಟ್ ಅಂತ ಗೊತ್ತಾಯ್ತು.  ಈ ಹಂತದಲ್ಲಿ ಮೇಯರ್ ನಮಗೆ, ಉಪಮೇಯರ್ ಅಂತ ತೀರ್ಮಾನ ಆಯ್ತು.‌  ಇದಾಗಿದ್ದು ಚುನಾವಣೆ ದಿನ ಬೆ. 11.49ರಲ್ಲಿ ಇದ್ಯಾವುದೂ ಪೂರ್ವ ನಿರ್ಧಾರಿತ ತೀರ್ಮಾನ ಅಲ್ಲ" ಎಂದು ಶಾಸಕ ಸಾ.ರಾ.ಮಹೇಶ್ ಸ್ಪಷ್ಟನೆ ನೀಡಿದರು.


ಮೈಸೂರು ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ, ಜನತಾದಳದ ಶಕ್ತಿಯನ್ನು ಸಿದ್ದರಾಮಯ್ಯ ಅವರಿಗೆ ತೋರಿಸಿದ್ದೇವೆ. ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಿಂದಲೇ ನಮ್ಮ ಶಕ್ತಿ ತೋರಿಸಿದ್ದೇವೆ. ತಾವೇ ಬೆಳೆದ ಪ್ರಾದೇಶಿಕ ಪಕ್ಷವನ್ನು ಹಗುರವಾಗಿ ನೋಡಬೇಡಿ ಚಿಕ್ಕದಾಗಿ ನೋಡಬೇಡಿ ಕೊನೆ ಕ್ಷಣದಲ್ಲಿ ಕೈ ಮೈತ್ರಿ ಆಗಲು ಜಿ ಟಿ ದೇವೇಗೌಡ ಸಂದೇಶ್ ನಾಗರಾಜ್ ಗೈರು ಕಾರಣ ಅವರು ಬಂದಿದ್ದೆ ನಾವು ಮೈತ್ರಿ‌ ಮಾಡಿಕೊಳ್ಳುತ್ತಿರಲಿಲ್ಲ. ಬದಲಿಗೆ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದೆವು. ಇದೇಲ್ಲವು ಸ್ಥಳದಲ್ಲಿ ನಿರ್ಧಾರ ಆಗಿದೆ. ಆದ್ರೆ ಮುಂದೆ ನಮ್ಮ ಮಾತಿನಂತೆ ಒಂದು ಬಾರಿ ಕೈಗೆ ಮೇಯರ್ ಸ್ಥಾನ ಕೊಡ್ತಿವಿ.


ಮುಂದಿನ ಸಾರಿ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ನೀಡುತ್ತೇವೆ. ಅವರು ಕೇಳಲಿ ಕೇಳದೆ ಇರಲಿ ಮೇಯರ್ ಸ್ಥಾನ ಗ್ಯಾರೆಂಟಿ. ಆದರೆ ಮಾತಿನ ಮೇಲೆ ಹಿಡಿತವಿರಬೇಕು ಯಾವುದೇ ಡ್ರಾಮಾ ಗೊಂದಲಗಳಿಲ್ಲದೆ ಮೇಯರ್ ಸ್ಥಾನ‌ ನೀಡಲಾಗುವುದು.  ಈ ಬಾರಿಯೇ ಕೊಡುತ್ತಿದ್ದೆವು ಆದರೆ ಹೀನಾಯವಾಗಿ ಮಾತನಾಡಿದ್ದರಿಂದ ಕೊಡಲಿಲ್ಲ ಶಕ್ತಿ ತೋರಿಸಲು ಅಭ್ಯರ್ಥಿ ಹಾಕಿದೆವು ಅಷ್ಟೇ. ಮುಂದಿನ ಬಾರಿಯೂ ನಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡದಿದ್ದರೆ ಮೈತ್ರಿ ಆಗುತ್ತೇವೆ ಅಂತ  ಸಾ.ರಾ.ಮಹೇಶ್ ಶಾಸಕ ಹೇಳಿದರು.


ಇದನ್ನೂ ಓದಿ: ಕೊನೆಗೂ ದೋಸ್ತಿಯಲ್ಲಿ ಮುಗಿದ ಮೈಸೂರು ಪಾಲಿಕೆ ಮೇಯರ್​ ಸ್ಥಾನ; ಡಿ.ಕೆ. ಶಿವಕುಮಾರ್​ ಎಂಟ್ರಿಯಿಂದ ಮೆಗಾ ಟ್ವಿಸ್ಟ್​!


ಇನ್ನು ಈ ಎಲ್ಲ ಘಟನೆಗೆ ಕಾರಣವಾದ ತನ್ವೀರ್ ಸೇಠ್ ಜೆಡಿಎಸ್‌ಗೆ ಬಂದ್ರೆ ಸ್ವಾಗತ ಅಂತ ಬಹಿರಂಗವಾಗಿ ತನ್ವೀರ್ ಸೇಠ್‌ರನ್ನ ಪಕ್ಷಕ್ಕೆ ಆಹ್ವಾನಿಸಿದ ಶಾಸಕ ಸಾ.ರಾ.ಮಹೇಶ್,  ಕಾಂಗ್ರೆಸ್‌ನಲ್ಲಿ ಅವರಿಗೆ ಸಮಸ್ಯೆ ಆದ್ರೆ ಜೆಡಿಎಸ್‌ ಅವರನ್ನ ಸ್ವಾಗತಿಸುತ್ತದೆ. ನಾವು ಯಾರ ಪಕ್ಷದಲ್ಲು ಬೆಂಕಿ ಹಚ್ಚಿಲ್ಲ ಎಲ್ಲವು ಆ ಕ್ಷಣದಲ್ಲಿ ಆದ ನಿರ್ಧಾರ ಅಷ್ಟೆ, ಇದರಿಂದ ತನ್ವೀರ್ ಸೇಠ್ ಗೆ ಸಮಸ್ಯೆ ಆದ್ರೆ ಅವರು ಜೆಡಿಎಸ್‌‌ಗೆ ಬರಲಿ. ಅವರ ವಿರುದ್ದ ಸ್ಪರ್ಧಿಸಿದ್ದ ಅಬ್ದುಲ್ಲ ಅವರೇ ಅವರನ್ನು ಸ್ವಾಗತ ಮಾಡ್ತಾರೆ. ಅವರೇನಾದ್ರು ಪಕ್ಷಕ್ಕೆ ಬಂದ್ರೆ ಟಿಕೆಟ್ ಕೊಡುದು ಬಿಡೋದು ಆಗ ನೋಡೋಣ. ಒಬ್ಬ ಅಲ್ಪ ಸಂಖ್ಯಾತ ನಾಯಕನನ್ನ ನಾವೇಲ್ಲ ಗೌರವಿಸುತ್ತೇವೆ ಅಂತ ಹೇಳಿದರು.


ಜೆಡಿಎಸ್‌ನಿಂದ ಜಿಟಿಡಿ, ಸಂದೇಶ್ ನಾಗರಾಜ್‌ ಉಚ್ಛಾಟನೆ ವಿಚಾರಕ್ಕು ಲೇವಡಿಯಾಗಿ ಮಾತನಾಡಿದ ಸಾ.ರಾ.ಮಹೇಶ್‌. ಜಿಲ್ಲಾ ಘಟಕದ ಅಧ್ಯಕ್ಷರ ಸಲಹೆಗೆ ವರಿಷ್ಠರು ತೀರ್ಮಾನ ಮಾಡ್ತಾರೆ ನಾನೋಬ್ಬ ಸಾಮಾನ್ಯ ಕಾರ್ಯಕರ್ತ. ಇದರಲ್ಲಿ ನನ್ನ ಸಲಹೆ ಏನು ಇಲ್ಲ.   ಯಾರು ಇರಲಿ ಬಿಡಲಿ, ಯಾರನ್ನ ಉಚ್ಛಾಟಿಸುತ್ತಾರೋ ಬಿಡ್ತಾರೋ ನಾನಂತು ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿಯುತ್ತೇನೆ. ಮೇಯರ್‌ ಚುನಾವಣೆಯ ಎಲ್ಲ ಬೆಳವಣಿಗೆಗೆ ಜಿಟಿಡಿ, ಸಂದೇಶ್‌ ಕಾರಣ ಅಲ್ಲ, ನಮ್ಮ ಪಕ್ಷದ ಸ್ವತಂತ್ರ ಅಭ್ಯರ್ಥಿ ಗೆಲ್ಲದೆ ಇರಲು ಜಿಟಿಡಿ ಸಂದೇಶ್‌ ಕಾರಣ ಆಗಿದ್ದಾರೆ. ಹಾಗಾಗಿ ಎಲ್ಲ ಬೆಳವಣಿಗೆ ನೋಡಿದ ರಾಷ್ಟ್ರಾಧ್ಯಕ್ಷರು ಏನು ತೀರ್ಮಾನ ಮಾಡ್ತಾರೆ ನೋಡೋಣ ಅಂತ ಹೇಳಿದರು.

Published by:MAshok Kumar
First published: