• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಗೂಂಡಾಗಳಿರುವುದೆಲ್ಲ ಬಿಜೆಪಿಯಲ್ಲಿ, ಸುಳ್ಳು ಹೇಳದಿದ್ದರೆ ಅವರಿಗೆ ನಿದ್ರೆ ಬರಲ್ಲ ಊಟ ಸೇರಲ್ಲ; ರಾಮಲಿಂಗಾ ರೆಡ್ಡಿ

ಗೂಂಡಾಗಳಿರುವುದೆಲ್ಲ ಬಿಜೆಪಿಯಲ್ಲಿ, ಸುಳ್ಳು ಹೇಳದಿದ್ದರೆ ಅವರಿಗೆ ನಿದ್ರೆ ಬರಲ್ಲ ಊಟ ಸೇರಲ್ಲ; ರಾಮಲಿಂಗಾ ರೆಡ್ಡಿ

ಮಾಜಿ ಸಚಿವ ರಾಮಲಿಂಗಾರೆಡ್ಡಿ.

ಮಾಜಿ ಸಚಿವ ರಾಮಲಿಂಗಾರೆಡ್ಡಿ.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಹಿಟ್ಲರ್ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿದ್ದ ಗೋಬಲ್ಸ್ ವಂಶಸ್ಥರು ಇವರು. ಸುಳ್ಳನ್ನ ಹೇಳಿ ಹೇಳಿ‌ ಸತ್ಯ ಮಾಡುವುದೇ ಗೋಬಲ್ಸ್ ಪೋರ್ಟ್ ಪೊಲಿಯೋ ಹಾಗೆಯೇ ಬಿಜೆಪಿಯವರಿಗೆ ಸುಳ್ಳು ಹೇಳದಿದ್ದರೆ  ನಿದ್ರೆ ಬರಲ್ಲ, ಊಟ ಸೇರಲ್ಲ ಎಂದು ರಾಮಲಿಂಗಾ ರೆಡ್ಡಿ ಟಾಂಗ್ ನೀಡಿದ್ದಾರೆ.

ಮುಂದೆ ಓದಿ ...
  • Share this:

ಚಿತ್ರದುರ್ಗ: ಗೂಂಡಾಗಳು ಇರುವುದೆಲ್ಲಾ  ಬಿಜೆಪಿಯಲ್ಲಿ ಕಾಂಗ್ರೆಸ್​ ಪಕ್ಷ ಯಾಕೆ ಗುಂಡಾಗಿರಿ ಮಾಡಬೇಕು, ಕಲಸುಮೇಲೋಗರ ಅಂತಾರಲ್ಲ ಹಾಗೆ  ಬಿಜೆಪಿ ಪಕ್ಷದವರು ಯಾರೂ ಇಲ್ಲ.  ಜೆಡಿಎಸ್ ಕಾಂಗ್ರೆಸ್​ ಬೇರೆ ಬೇರೆ ಪಕ್ಷದವರನ್ನ ಕರೆದುಕೊಂಡು ಹೋಗಿ ಸೇರಿಸಿಕೊಂಡಿದ್ದಾರೆ. ಬಿಜೆಪಿಯವರು ಕೊರೋನಾ ಲಸಿಕೆಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಚಿತ್ರದುರ್ಗದಲ್ಲಿ ಮಾಜಿ‌ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದಾರೆ. ಪದವಿದರರ ಚುನಾವಣೆ ಹಿನ್ನಲೆ ಪ್ರಚಾರಕ್ಕಾಗಿ ಬಂದಿದ್ದ ಅವರು ಮಾದ್ಯಮಗಳ ಜೊತೆ ಮಾತನಾಡಿ,  "ಬಿಜೆಪಿಯವರು ಕೋವಿಡ್ ಲಸಿಕೆಯಲ್ಲೂ ರಾಜಕಾರಣ ಮಾಡಲು ಹೋಗುತ್ತಿದ್ದಾರೆ. ಲಸಿಕೆ ಇನ್ನೂ ತಯಾರಾಗಿಲ್ಲ, ಆದರೇ ಇನ್ನೇನು 15-20 ದಿನಗಳಲ್ಲಿ ನಡೆಯಲಿರು ಚುನಾವಣೆ ದೃಷ್ಟಿ ಇಟ್ಟುಕೊಂಡು ನಿರ್ಮಲಾ ಸೀತರಾಮನ್ ಬಿಜೆಪಿಯವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.


"ಅಲ್ಲದೆ ಕೊರೋನಾ ಲಸಿಕೆಯನ್ನ ಉಚಿತವಾಗಿ ಬಿಹಾರಕ್ಕೆ ಮಾತ್ರ ಯಾಕೆ ಕೊಡಬೇಕು ಇಡೀ ದೇಶಕ್ಕೇ ಕೊಡಬೇಕು. ಇನ್ನು ಈ ಕೊರೋನಾ ಬಂದಿದ್ದು ಜನರ ತಪ್ಪಿನಿಂದ ಅಲ್ಲ ನರೇಂದ್ರ ಮೋದಿಯವರ ತಪ್ಪಿನಿಂದ. ಜನವರಿಯಲ್ಲಿ ರೋಗ ಕಾಣಿಸಿಕೊಳ್ತು, ಆದರೇ ಮಾರ್ಚ್ 25 ವರೆಗೆ ಟ್ರಂಪ್ ಬರ್ತಾರೆ ಅಂತೇಳಿ,  ವಿದೇಶದಿಂದ ಲಕ್ಷಾಂತರ ಜನ ಬರ್ತಾ ಇದ್ದರೂ, ಅವರ್ಯಾರನ್ನೂ ಕ್ವಾರಂಟೈನ್ ಮಾಡಲಿಲ್ಲ.


ಆಗ ಕ್ವಾರಂಟೈನ್ ಮಾಡದೆ ಇದ್ದದ್ದರಿಂದ ಲಕ್ಷಾಂತರ ಜನರು  ಸೋಂಕಿನಿಂದ ನರಳುವಂತಾಗಿದೆ. ಈ ಲಕ್ಷ ಜನರ ಶಾಪ ಬಿಜೆಪಿಗೆ ಹಾಗೂ ನರೇಂದ್ರ ಮೋದಿಗೆ ತಟ್ಟುತ್ತದೆ. ಇದು ಯಾರಪ್ಪನ‌ ದುಡ್ಡಲ್ಲ  ನಮ್ಮ ದುಡ್ಡು ಇಡೀ ದೇಶಕ್ಕೆ ಲಸಿಕೆಯನ್ನ ಉಚಿತವಾಗಿ ಕೊಡಲಿ. ಕರ್ನಾಟಕದಲ್ಲಿ, ದೇಶದಲ್ಲಿ ಇರುವವರು ಮನುಷ್ಯರಲ್ಲವಾ? ಬಿಜೆಪಿ ದುಡ್ಡಿಂದ ಕೊಡಲ್ಲ, ನಮ್ಮ, ಸಾರ್ವಜನಿಕರ ದುಡ್ಡಿಂದ. ಉಚಿತವಾಗಿ ಇಡೀ ದೇಶಕ್ಕೆ ಕೊಡ್ತಿವಿ ಅಂತ ಹೇಳಿ" ಎಂದು ತಾಕೀತು ಮಾಡಿದ್ದಾರೆ.


ಇನ್ನೂ RR ನಗರ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಗೂಂಡಾಗಿರಿ ಮಾಡುತ್ತಿದ್ದಾರೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿರುವ ರಾಮಲಿಂಗಾ ರೆಡ್ಡಿ "ಗೂಂಡಾಗಳು ಇರುವುದೇ  ಬಿಜೆಪಿಯಲ್ಲಿ ಕಾಂಗ್ರೇಸ್ ಪಕ್ಷ ನಾವು ಯಾಕೆ ಗುಂಡಾಗಿರಿ ಮಾಡಬೇಕು. ಕಲಸುಮೇಲೋಗರ ಅಂತಾರಲ್ಲ ಹಾಗೆ  ಆ ಪಕ್ಷದವರು ಯಾರೂ ಇಲ್ಲ ಜೆಡಿಎಸ್ ಕಾಂಗ್ರೆಸ್ ಬೇರೆ ಬೇರೆ ಪಕ್ಷದವರನ್ನ ಕರೆದುಕೊಂಡು ಹೋಗಿ ಸೇರಿಸಿಕೊಂಡಿದ್ದಾರೆ. RR ನಗರದಲ್ಲಿ ಗೂಂಡಾಗಿರಿ ಮಾಡುತ್ತಾರೆ ಎಂದು ಹೇಳುವ ಶೋಭಾ ಕರಂದ್ಲಾಜೆ ಯವರು, ಹತ್ರಾಸ್ ಯುವತಿ ಅತ್ಯಾಚಾರದ ಬಗ್ಗೆ ಬಾಯಿ ಬಿಡಲಿಲ್ಲ.


ಇದನ್ನೂ ಓದಿ : ಬೆಂಗಳೂರು ಪಕ್ಕದಲ್ಲೇ ಮೈದುಂಬಿ ಧುಮ್ಮಿಕ್ಕುತ್ತಿದೆ ಮುತ್ಯಾಲ ಮಡು ಜಲಪಾತ


ಇವರು ಒಂದು ಹೆಣ್ಷಾಗಿ ಅದನ್ನ ಕುರಿತು ಹೇಳಿಕೆಯನ್ನೂ ಕೊಡಲಿಲ್ಲ. ಗೂಂಡಾಗಿರಿಯನ್ನ ನಾವು ಮಾಡಲ್ಲ, ಗೂಂಡಾಗಳೆಲ್ಲ ಬೆಜೆಪಿ ಪಕ್ಷದಲ್ಲಿಯೇ ಇದ್ದಾರೆ. ಶೋಭಾ ಕರಾಂದ್ಲಾಜೆ ಮಾತಿಗೆ ಏನೂ ಕಿಮ್ಮತ್ತಿಲ್ಲ. ಸಿಟಿ ರವಿ, ಅನಂತ್ ಕುಮಾರ್ ಹೆಗ್ಡೆ ಆಗಲೀ ಏನಿಲ್ಲ. ಬಿಜೆಪಿಯಲ್ಲಿ ಗೂಂಡಾಗಳು ಬಹಳಷ್ಟು ಜನರಿದ್ದಾರೆ, ಒಬ್ಬರು ಇಬ್ಬರು ಇದ್ದಿದ್ದರೆ ಅವರ ಹೆಸರು ಹೇಳಬಹುದು. ಡಿಕೆ ಶಿವಕುಮಾರ್ ಮೇಲೆ ಗೂಂಡಾಗಿ ಮಾಡುತ್ತಾರೆ ಎಂದು ಹೇಳುತ್ತಾರೆ ಎಲ್ಲಿ ಗೂಂಡಾಗಿರಿ ಮಾಡಿದ್ದಾರೆ ಎಂದು ಹೇಳಬೇಕಲ್ಲಾ?‌.


ಈ ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಹಿಟ್ಲರ್ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿದ್ದ ಗೋಬಲ್ಸ್ ವಂಶಸ್ಥರು ಇವರು. ಸುಳ್ಳನ್ನ ಹೇಳಿ ಹೇಳಿ‌ ಸತ್ಯ ಮಾಡುವುದೇ ಗೋಬಲ್ಸ್ ಪೋರ್ಟ್ ಪೊಲಿಯೋ ಹಾಗೆಯೇ ಬಿಜೆಪಿಯವರಿಗೆ ಸುಳ್ಳು ಹೇಳದಿದ್ದರೆ  ನಿದ್ರೆ ಬರಲ್ಲ, ಊಟ ಸೇರಲ್ಲ" ಎಂದು ಟಾಂಗ್ ನೀಡಿದ್ದಾರೆ.

Published by:MAshok Kumar
First published: