ತಾಕತ್ತಿದ್ದರೆ ಭೂ ಹಿಡುವಳಿ ಮಿತಿ ಕಾಯ್ದೆ ಜಾರಿಗೆ ತರಲಿ; ಸಿಎಂ ಗೆ ಸವಾಲು ಹಾಕಿದ ಕಾಗೋಡು ತಿಮ್ಮಪ್ಪ

ಭೂ ಸುಧಾರಣೆ ಕಾಯ್ದೆ ಮೂಲಕ ಶ್ರೀಮಂತರು, ರಿಯಲ್ ಎಸ್ಟೇಟ್ ನವರಿಗೆ ರಾಜ್ಯ ಸರ್ಕಾರ ಅನುಕೂಲ ಮಾಡಿಕೊಡಲು ಹೊರಟಿದೆ. ಇದರಿಂದ ಬಡ ರೈತರಿಗೆ ಅನಾನುಕೂಲಗಳೇ ಹೆಚ್ಚು. ಶ್ರೀಮಂತರ ಭೂಮಿ ಹೊಂದುವ‌ ಮಿತಿಯನ್ನು  108 ಎಕರೆ ಮಾಡಲಾಗಿದೆ. ಇದು ತಪ್ಪು‌ ನಿರ್ಧಾರ ಎಂದು ಕಾಗೋಡು ತಿಮ್ಮಪ್ಪ ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ರೈತರು ಹಮ್ಮಿಕೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡ ಕಾಗೋಡು ತಿಮ್ಮಪ್ಪ.

ರಾಜ್ಯ ಸರ್ಕಾರದ ವಿರುದ್ಧ ರೈತರು ಹಮ್ಮಿಕೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡ ಕಾಗೋಡು ತಿಮ್ಮಪ್ಪ.

  • Share this:
ಶಿವಮೊಗ್ಗ; ಭೂ ಸುಧಾರಣೆ ಕಾಯ್ದೆ ಗೆ ತಿದ್ದುಪಡಿ ತರುವ ಮೂಲಕ ಶ್ರೀಮಂತರ ರಿಯಲ್ ಎಸ್ಟೇಟ್  ವ್ಯವಹಾರ ಮಾಡುವವರ ಪರವಾಗಿ ರಾಜ್ಯ ಸರ್ಕಾರ ನಿಂತಿದೆ. ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ಕಾಯ್ದೆ ಜಾರಿಗೆ ತರಲಾಗಿದೆ. ಇವರಿಗೆ ತಾಕತ್ತಿದ್ದರೆ ಭೂ ಹಿಡುವಳಿ ಮಿತಿ ಕಾಯ್ದೆ ಜಾರಿಗೆ ತರಲಿ ಎಂದು ಕಾಗೋಡು ಚಳುವಳಿಯ ಹೋರಾಟಗಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸವಾಲು ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾತನಾಡಿರುವ ಅವರು, "ಭೂ ಸುಧಾರಣೆ ಕಾಯ್ದೆ ಮೂಲಕ ಶ್ರೀಮಂತರು, ರಿಯಲ್ ಎಸ್ಟೇಟ್ ನವರಿಗೆ ರಾಜ್ಯ ಸರ್ಕಾರ ಅನುಕೂಲ ಮಾಡಿಕೊಡಲು ಹೊರಟಿದೆ. ಇದರಿಂದ ಬಡ ರೈತರಿಗೆ ಅನಾನುಕೂಲಗಳೇ ಹೆಚ್ಚು. ಶ್ರೀಮಂತರ ಭೂಮಿ ಹೊಂದುವ‌ ಮಿತಿಯನ್ನು  108 ಎಕರೆ ಮಾಡಲಾಗಿದೆ. ಇದು ತಪ್ಪು‌ ನಿರ್ಧಾರ" ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಒಂದೇ ದಿನ 442 ಮಂದಿಗೆ ಸೋಂಕು; ರಾಜ್ಯದಲ್ಲಿ ಈಗ ಕೊರೋನಾ ಪ್ರಕರಣ 10,560ಕ್ಕೆ ಏರಿಕೆ

"ಶ್ರೀಮಂತರು ಭೂಮಿ ಹೊಂದುವ ಹಕ್ಕನ್ನು ಕೆಲ ಏಕರೆಗಳಿಗೆ ಸೀಮಿತ ಮಾಡಲಿ. ಇಲ್ಲದೇ ಹೋದರೆ ಭೂಮಿ ಶ್ರೀಮಂತರು, ರೀಯಲ್ ಎಸ್ಟೇಟ್ ನವರ ಪಾಲಾಗಲಿದೆ. ಎಲ್ಲಿಯ ಉಳುವವನೆ‌ ಭೂ ಒಡೆಯ ಕಾನೂನು, ಎಲ್ಲಿಯಾ  ಹಣ ಉಳ್ಳವವನೆ ಭೂ ಒಡೆಯ ಕಾನೂನು‌. ಬಿಜೆಪಿ ಶ್ರೀಮಂತರ ಪರ ಎಂಬುದು ಸಾಬೀತಾಗುತ್ತಿದೆ. ಹೀಗಾಗಿ ಜನ ಶೀಘ್ರದಲ್ಲೇ ಸರ್ಕಾರದ ಈ ನೀತಿಯ ವಿರುದ್ಧ ಹೋರಾಟ ರೂಪಿಸಲಿದ್ದಾರೆ" ಎಂದು ಗುಡುಗಿದ್ದಾರೆ.

 
First published: