• Home
  • »
  • News
  • »
  • district
  • »
  • ಮೂಲ ಅಸ್ಪೃಶ್ಯರು ನಾವು, ಸಾವಿನ ಅಂಚಿನಲ್ಲಿರುವ ನಮ್ಮ ಸಮುದಾಯವನ್ನ ಕಾಪಾಡಿ: ಮಾಜಿ ಸಚಿವ ಹೆಚ್.ಆಂಜನೇಯ

ಮೂಲ ಅಸ್ಪೃಶ್ಯರು ನಾವು, ಸಾವಿನ ಅಂಚಿನಲ್ಲಿರುವ ನಮ್ಮ ಸಮುದಾಯವನ್ನ ಕಾಪಾಡಿ: ಮಾಜಿ ಸಚಿವ ಹೆಚ್.ಆಂಜನೇಯ

ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಸಂಸದ ಎ ನಾರಾಯಣಸ್ವಾಮಿ

ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಸಂಸದ ಎ ನಾರಾಯಣಸ್ವಾಮಿ

ಸಮಾಜದ ಮೂಲ ಅಸ್ಪೃಶ್ಯರು ನಾವು, ಅವಮಾನ, ಅಸ್ಫೃಶ್ಯತೆಯನ್ನ ಮಡಿಲಿನಲ್ಲೆ ಹಾಕಿಕೊಂಡು ಹುಟ್ಟಿದ್ದೇವೆ. ಹಾಗಾಗಿ ನಮ್ಮ ಬಿಡುಗಡೆಗೆ ಸಾಮಾಜಿಕ ನ್ಯಾಯ ಕೊಡುವಂತ ಹೃದಯ ಶ್ರೀಮಂತಿಕೆಯನ್ನ ಸರ್ಕಾರ ಮಾಡಬೇಕು

  • Share this:

ಚಿತ್ರದುರ್ಗ(ಸೆಪ್ಟೆಂಬರ್​ 03 ): ನಾವು ಮೂಲ ಅಸ್ಪೃಶ್ಯರು, ಅವಮಾನ ಅಸ್ಪೃಶ್ಯತೆ ಯನ್ನು ಮಡಿಲಲ್ಲೇ ಹಾಕಿಕೊಂಡು ಹುಟ್ಟಿದವರು. ನಮ್ಮ ಬಿಡುಗಡೆಗೆ ಹೃದಯ ಶ್ರೀಮಂತಿಕೆಯಿಂದ ಸಾಮಾಜಿಕ ನ್ಯಾಯ ಕೊಡಿ  ಎಂದು ಸರ್ಕಾರಕ್ಕೆ ಮಾಜಿ ಸಚಿವ ಹೆಚ್. ಆಂಜನೇಯ ಮನವಿ ಮಾಡಿದ್ದಾರೆ.  ಸಂಸದ ಎ.ನಾರಾಯಣಸ್ವಾಮಿ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಹೆಚ್.ಆಂಜನೇಯ ಒಳ ಮೀಸಲಾತಿಗಾಗಿ ಸರ್ವ ಪಕ್ಷದ ಮಾದಿಗ ಜನ ಪ್ರತಿನಿಧಿಗಳನ್ನ ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದರು.


ಎಲ್ಲರೂ ನಮ್ಮ ಸಮಾಜದ ಹಿತಾಸಕ್ತಿ ಕಾಪಾಡಬೇಕು ಎಂಬ ನಿರ್ಧಾರ ಮಾಡಿದ್ದೇವೆ. ಇದರಲ್ಲಿ ನಮ್ಮ  ರಾಜಕೀಯ ಬೇರೆ ಸಮಾಜದ ಹಿತದೃಷ್ಠಿ ಬೇರೆ ಹಾಗಾಗಿ ನಾವು ಜೊತೆ ಸೇರಿದ್ದೇವೆ. ಒಳ‌ಮೀಸಲಾತಿಗಾಗಿ ಇಪ್ಪತೈದು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ, ಎಲ್ಲರಿಗೂ ನಮ್ಮ ಸಮುದಾಯದ ಬಗ್ಗೆ ಕನಿಕರ ಇದೆ, ಈಗ ಅಧಿಕಾರದಲ್ಲಿರುವ ಮುಂಖ್ಯಮಂತ್ರಿ ಬಿಎಸ್ ಯಡಯೂರಪ್ಪನವರು ನಮ್ಮ ಜನಾಂಗದ ಮೇಲೆ ಕನಿಕರ ತೋರಬೇಕು ಎಂದು ತಿಳಿಸಿದರು.


ಸಂತೋಷ್ ಹೆಗ್ಡೆಯವರ ಪೀಠದ ತೀರ್ಪನ ಬಳಿಕ ಈಗ ಬಂದಿರುವ ತೀರ್ಪು ನಮಗೆ ಸಮಾದಾನ ತಂದಿದೆ. ಇರುವ ಮೀಸಲಾತಿಯಲ್ಲಿ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹಂಚಿಕೆ ಮಾಡಿ ಎಂದು ಕೇಳುತ್ತಿದ್ದೇವೆಯೇ ಹೊರತು, ಮೀಸಲಾತಿ ಹೆಚ್ಚು ಮಾಡಿ ಎಂದಲ್ಲ, ಅಸ್ಪೃಶ್ಯರನ್ನ ತೆಗೆಯುವ, ಸಹೋದರ ಜಾತಿಗಳನ್ನು ಕೈ ಬಿಡುವ ಬೇಡಿಕೆ ಅಲ್ಲ, ಇದರಲ್ಲಿ ಯಾವುದೆ ಗೊಂದಲ ಬೇಡ, ನಮ್ಮ ಸಮಾಜಕ್ಕೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ ಹಾಗಾಗಿ ನ್ಯಾಯ ಕೇಳುತ್ತಿದ್ದೇವೆ ಎಂದಿದ್ದಾರೆ.


ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾನು ಸಚಿವನಾಗಿದ್ದಾಗ ಜಿಲ್ಲಾ ಪಂಚಾಯತ್ ಚುನಾವಣೆ ಆಗಲಿ ಎಂದು ಸಿದ್ದರಾಮಯ್ಯ ಮುಂದಕ್ಕೆ ಹಾಕಿದರು. ಬಳಿಕ ಇನ್ನೊಂದು ಬಾರಿ ವಿಧಾನ ಸಭೆ ಚುನಾವಣೆ ಬಂತು. ಒಳ ಮೀಸಲಾತಿ ಕುರಿತು ಸಿದ್ದರಾಮಯ್ಯಗೆ ಅದರ ಬಗ್ಗೆ ಒಲವಿತ್ತು, ಕೆಲವರು ಅಡ್ಡಿಪಡಿಸಿದರು. ನಮಗೆ ಚುನಾವಣೆಗಳಲ್ಲಿ ಜನಾಂಗದ ಪ್ರತಿನಿಧಿ ಎಂದು ಸ್ಥಾನಮಾನ ಕೊಡುತ್ತಾರೆ. ಹಾಗಾಗಿ ಜನಾಂಗದ ಹಿತಾಸಕ್ತಿ ಕಾಪಾಡದೇ ಇದ್ದರೆ ನಾವು ಯಾವ ಪ್ರತಿನಿಧಿಗಳು. ಆದ್ದರಿಂದ ಐತಿಹಾಸಿಕ ಒಗ್ಗಟ್ಟು ಮೂಡಿಸುವ ಕೆಲಸ ಆಗಬೇಕಿದೆ ಎಂದರು.


ಈ ಕುರಿತು ಬಿಜೆಪಿ, ಕಾಂಗ್ರೇಸ್, ಜೆಡಿಎಸ್, ಮೂರು ಪಕ್ಷದವರಿಗೂ ಈ ಜನಾಂಗಕ್ಕೆ ಅನ್ಯಾಯವಾಗಿದೆ ನ್ಯಾಯ ಸಿಗಬೇಕೆಂಬ ಎಂಬ ಒಲವಿದೆ. ಸಮಾಜದ ಮೂಲ ಅಸ್ಪೃಶ್ಯರು ನಾವು, ಅವಮಾನ, ಅಸ್ಫೃಶ್ಯತೆಯನ್ನ ಮಡಿಲಿನಲ್ಲೆ ಹಾಕಿಕೊಂಡು ಹುಟ್ಟಿದ್ದೇವೆ. ಹಾಗಾಗಿ ನಮ್ಮ ಬಿಡುಗಡೆಗೆ ಸಾಮಾಜಿಕ ನ್ಯಾಯ ಕೊಡುವಂತ ಹೃದಯ ಶ್ರೀಮಂತಿಕೆಯನ್ನ ಸರ್ಕಾರ ಮಾಡಬೇಕು, ಸಾವಿನ ಅಂಚಿನಲ್ಲಿರುವ ನಮ್ಮ ಸಮುದಾಯವನ್ನ ಕಾಪಾಡಿ ಜೀವ ತುಂಬಬೇಕು, ಒಳ ಮೀಸಲಾತಿ ಕಲ್ಪಿಸಬೇಕು  ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


ಬಳಿಕ ಮಾತನಾಡಿದ ಸಂಸದ ಎ. ನಾರಾಯಣಸ್ವಾಮಿ, ಒಳ ಮೀಸಲಾತಿ ಜಾರಿಗೆ ಮೂರು ಪಕ್ಷಗಳೂ ಈ ವರೆಗೆ ಸಂಕಲ್ಪ ಮಾಡಿರಲಿಲ್ಲ, ಚುನಾವಣೆ ಸಂದರ್ಭದಲ್ಲಿ ನಿಮ್ಮ ಪರವಾಗಿದ್ದೇವೆ ಎಂದು ಹೇಳುತ್ತಿದ್ದರು. ಆದರೇ ಅಧಿಕಾರ ಬಂದಾಗ ಯಾವುದೇ ಪಕ್ಷ ಒಳ ಮೀಸಲಾತಿ  ಮಂಡನೆಗೆ ಒಲವು ತೋರಿಸಲಿಲ್ಲ, ನಾವು ಬಹಳಷ್ಟು ವರ್ಷಗಳ ಕಾಲ ಸಮಾಜದ ಪ್ರತಿನಿಧಿಗಳಾಗಿ ಕೆಲಸ ಮಾಡಿದ್ದೇವೆ, ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿಗಳ ಹೋರಾಟದ‌ ಫಲವಾಗಿ ಕೋರ್ಟ್ ಈಗ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತಮಿಳುನಾಡು, ಪಂಜಾಬ್ ಮತ್ತಿತರೆ ರಾಜ್ಯಗಳಲ್ಲಿ ಮೀಸಲಾತಿ ಕೊಟ್ಟಿದ್ದಾರೆ, ಅಸ್ಪೃಶ್ಯರಿಗೆ ಮೀಸಲಾತಿ ತೆಗೆದಿದೆ ಎಂದು ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾಗಳಲ್ಲಿ ತಪ್ಪು ಸಂದೇಶ ಹರಡಿದ್ದು ನೋವಾಗಿತ್ತು ಎಂದರು.


ಇದನ್ನೂ ಓದಿ : ಡ್ರಗ್ ಕೇಸ್​ನಲ್ಲಿ ಸಂಜನಾ ಆಪ್ತ ರಾಹುಲ್; ವಿಚಾರಣೆ ವೇಳೆ ಪೊಲೀಸರಿಗೆ ಮಹತ್ವದ ಸುಳಿವು?


ಯಾವುದೇ ಸಮಾಜದ ಮೀಸಲಾತಿ ವಿರುದ್ಧ ನಾವು ಇಲ್ಲ, ಸದಾಶಿವ ಆಯೋಗದ ವರದಿ ಅವೈಜ್ಞಾನಿಕ, ಅದರಲ್ಲಿ ಲಂಬಾಣಿ, ಭೋವಿ ಸಮುದಾಯದ ಮೀಸಲಾತಿ ಕೈ ಬಿಡಲಾಗಿದೆ‌ ಎಂಬ ಚರ್ಚೆ ಕೂಡಾ ನಡೆದಿತ್ತು. ವರದಿ ಮಂಡನೆಯೇ ಆಗದೆ ಯುವ ಸಮುದಾಯದ ದಿಕ್ಕು ತಪ್ಪಿಸುವ ಕೆಲಸ ನಡೆದಿತ್ತು. 7 ಜನ ನ್ಯಾಯಾಧೀಶರ ಪೀಠದ ಆದೇಶ ಆಗಬೇಕು. ಮೀಸಲಾತಿ ವಂಚಿತ ಸಮುದಾಯ ದೇಶದಲ್ಕಿದೆ ಎಂದು ಸುಪ್ರೀಂ ಕೋರ್ಟ್ ಗೆ ಗೊತ್ತಾಗಿದೆ.1999 ರಲ್ಲಿ ಯೋಜನಾ ಆಯೋಗ ವರದಿ ಮಂಡಿಸಿದೆ. ಯಾವುದೇ ಯೋಜನೆ ರೂಪಿಸುವಾಗ ಜನಸಂಖ್ಯೆ ಆಧಾರದಲ್ಲಿ ಮಾಡಬೇಕು ಎಂದು ಹೇಳಿದೆ. ಶೇ.7 ಎಸ್ಟಿ, 17 ಎಸ್ಸಿ ಗಳಿಗೆ ಎಂದು ನಾಗಮೋಹನದಾಸ್ ವರದಿ ಹೇಳಿದೆ. ಅಧಿಕಾರ ಇದ್ದಾಗ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನವರು ವರದಿ ಮಂಡನೆ ಮಾಡಲಿಲ್ಲ. ಹೀಗಾಗಿ ನಮ್ಮ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದರು.


ಸಿಎಂ, ಮಾಜಿ ಸಿಎಂ, ವಿಪಕ್ಷ ನಾಯಕರನ್ನು ಸಮಿತಿ ಮಾಡಿಕೊಂಡು ಭೇಟಿ ಮಾಡಲು ತೀರ್ಮಾನಿಸಿದ್ದೇವೆ. ಎಡಗೈ ಸಮುದಾಯಕ್ಕೆ 6 ಬಲಗೈ 5,ಭೋವಿ, ಲಂಬಾಣಿ ಸಮುದಾಯಗಳಿಗೆ ಶೇ. 3, ಮೀಸಲಾತಿ ವಂಚಿತರಿಗೆ ಶೇ.1ರಷ್ಟು ಮೀಸಲಾತಿ ನೀಡಿ ಎಂದು ಕೇಳುತ್ತಿದ್ದೇವೆ ಎಂದಿದ್ದಾರೆ.

Published by:G Hareeshkumar
First published: