HOME » NEWS » District » EX CM SIDDARAMAIAH SAYS AFTER TWO YEARS CONGRESS WILL FORM THE GOVERNMENT RBK MAK

Siddaramaiah: ಮತ್ತೆ ಸಿಎಂ ಆಗುವ ಇಂಗಿತ, ಎರಡು ವರ್ಷ ಕಾಯಿರಿ ನಮ್ಮದೇ ಸರ್ಕಾರ ಬರುತ್ತೆ ಎಂದ ಸಿದ್ದರಾಮಯ್ಯ

ತಪ್ಪು ತಿಳಕೊಬೇಡಿ ಈ ಸರಕಾರದಲ್ಲಿ ದುಡ್ಡು ಇಲ್ಲ. ನಾನು ಸಿಎಂ ಇದ್ದಾಗ ಒಂದು ದಿನ ದುಡ್ಡು ಕಡಿಮೆ ಆಗಿರಲಿಲ್ಲ. ಈಗ ಏನೆ ಕೇಳಿದರೂ ದುಡ್ಡಿಲ್ಲ ಅಂತಾರೆ. ಮಾತೆತ್ತಿದರೆ ಕೊರೋನಾ ಅಂತಾರೆ. ಈ ಬಾರಿ ಹೆಚ್ಚುವರಿ 35 ಸಾವಿರ ಕೋಟಿ ಸಾಲ ಪಡೆಯುತ್ತಿದ್ದಾರೆ.

news18-kannada
Updated:February 11, 2021, 6:30 PM IST
Siddaramaiah: ಮತ್ತೆ ಸಿಎಂ ಆಗುವ ಇಂಗಿತ, ಎರಡು ವರ್ಷ ಕಾಯಿರಿ ನಮ್ಮದೇ ಸರ್ಕಾರ ಬರುತ್ತೆ ಎಂದ ಸಿದ್ದರಾಮಯ್ಯ
ಬಾಗಲಕೋಟೆ ಸಮಾವೇಶದಲ್ಲಿ ಸಿದ್ದರಾಮಯ್ಯ.
  • Share this:
ಬಾಗಲಕೋಟೆ (ಫೆಬ್ರವರಿ 11): ನಾನೇನಾದ್ರು ಮತ್ತೆ ಸಿಎಂ ಆಗಿದ್ರೆ ಬಾದಾಮಿ ತಾಲೂಕು ಇಡೀ ರಾಜ್ಯಕ್ಕೆ ನಂಬರ್ ಒನ್ ಆಗಿರ್ತಿತ್ತು. ಅಷ್ಟೊಂದು ಹಣವನ್ನು ಅನುದಾನವಾಗಿ ನೀಡುತ್ತಿದ್ದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಮತ್ತೇ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬಾದಾಮಿ ಮತಕ್ಷೇತ್ರದ ಖಾನಾಪುರ ಎಸ್ ಕೆ ಗ್ರಾಮದಲ್ಲಿ , ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿ ಸಿದ್ದರಾಮಯ್ಯ ಮಾತನಾಡಿದರು. ಈ ವೇಳೆ ಮುಂದಿನ ಮುಖ್ಯಮಂತ್ರಿ ನೀವು ಆಗ್ಬೇಕು ಎಂದು  ಜನರು ಕೂಗಿದರು. "ನೋಡೋಣ, ಮುಂದೆ ಏನು ಆಗ್ತದೆ ಗೊತ್ತಿಲ್ಲ. ಜನರು ಆಶೀರ್ವಾದ ಮಾಡಿದ್ರೆ ನೋಡೋಣ. ಬಟ್, ನಾನು ಮತ್ತೆ ಸಿಎಂ ಆಗಿದ್ರೆ ಅದರ ಕಥೆನೇ ಬೇರೆ ಆಗಿರ್ತಿತ್ತು. ನಾವು ಮತ್ತೆ ಅಧಿಕಾರಕ್ಕೆ ಬರಲೇಬೇಕು. ನಾನು ಅಧಿಕಾರ ಮಜಾ ಮಾಡಲು ಅಲ್ಲ. ನಾನು ಅಧಿಕಾರ ಸಿಕ್ಕಾಗ ಜನರ ಸೇವೆ ಮಾಡಿದ್ದೇನೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನಾನು ಸಿಎಂ ಆಗುವ ಮೊದಲು, ಸಿಎಂ ಆದಾಗ, ಈಗಲೂ ಹಾಗೆಯೇ ಇದ್ದೇನೆ. 1994ರಲ್ಲಿ ಪಂಚೆ ಹಾಕಲು ಶುರು ಮಾಡಿದೆ. ಪಂಚೆ, ಕುರ್ತಾ ಬಿಟ್ಟು ಇನ್ನೇನು ಗೊತ್ತಿಲ್ಲ ನನಗೆ. ನಾನು ಮುಖ್ಯಮಂತ್ರಿ ಇದ್ರು ಒಂದೇ ಇಲ್ದಿದ್ರು ಒಂದೇ. ನಾನು ಎಂಎಲ್ಎ ಇದ್ರು ಒಂದೇ, ಇಲ್ದಿದ್ರು ಒಂದೇ. ನಮಗೆ ಜನ ಓಟು ಕೊಟ್ಟಿದ್ದಾರೆ.  ಸಾಧ್ಯವಾದ ಮಟ್ಟಿಗೆ ಕೆಲಸ ಮಾಡಬೇಕು. ಮತ್ತೇ ನಮ್ಮ ಸಕಾ೯ರ ಬರುತ್ತೇ ಅಂತ ಹೇಳಿದ್ದೀನಿ, ನಾನು ಅಂತಲ್ಲ. ಮತ್ತೇ ನಾನು ಸಿಎಂ ಆಗೋ ವಿಚಾರವನ್ನು ಹೈಕಮಾಂಡ್ ನಿಧಾ೯ರ ಮಾಡುತ್ತೆ.

ಮುಂದೆ ಜನ ಮತ್ತು ಹೈಕಮಾಂಡ್, ಎಂಎಲ್ಎ ಗಳು ಏನು ತೀಮಾ೯ನ ಮಾಡ್ತಾರೆ ಅಂತ ನೋಡೋಣ. ನಾನೇ ಚೀಪ್ ಮಿನಿಸ್ಟರ್ ಅಂತ ತಿರುಗಾಡೋಕೆ ಆಗುತ್ತಾ. ಜನ ತೀಮಾ೯ನ ಮಾಡಿ, ಶಾಸಕರು, ಹೈಕಮಾಂಡ್ ತೀಮಾ೯ಣ ಮಾಡೋ ಪ್ರೋಸಸ್ ಇದೆ ನೋಡೋಣ" ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಜೈಶ್ರೀರಾಮ್ ಘೋಷಣೆ ಕೂಗಲು ಮಮತಾ ಬ್ಯಾನರ್ಜಿಗೆ ಅವಮಾನ ಏಕೆ?; ಗೃಹ ಸಚಿವ ಅಮಿತ್​ ಶಾ ಚಾಟಿ

ಎರಡು ವರ್ಷ ಕಾಯಿರಿ ನಮ್ಮದೇ ಸರ್ಕಾರ ಬರುತ್ತೆ- ಸಿದ್ದರಾಮಯ್ಯ

ತಪ್ಪು ತಿಳಕೊಬೇಡಿ ಈ ಸರಕಾರದಲ್ಲಿ ದುಡ್ಡು ಇಲ್ಲ. ನಾನು ಸಿಎಂ ಇದ್ದಾಗ ಒಂದು ದಿನ ದುಡ್ಡು ಕಡಿಮೆ ಆಗಿರಲಿಲ್ಲ. ಈಗ ಏನೆ ಕೇಳಿದರೂ ದುಡ್ಡಿಲ್ಲ ಅಂತಾರೆ. ಮಾತೆತ್ತಿದರೆ ಕೊರೋನಾ ಅಂತಾರೆ. ಈ ಬಾರಿ ಹೆಚ್ಚುವರಿ 35 ಸಾವಿರ ಕೋಟಿ ಸಾಲ ಪಡೆಯುತ್ತಿದ್ದಾರೆ. ನಾನು  ಸಚಿವರಿಗೆ ಕೆರೂರು ಪಟ್ಟಣದಲ್ಲಿ ಕಾಲೇಜು ಬಿಲ್ಡಿಂಗ್ ಗೆ ಹಣ ಕೇಳಿದರೆ. ಆ ಸಚಿವ ಹಣ ಇಲ್ಲ ಅಂತಾರೆ. ಮತ್ತೆ ಯಾಕಪ್ಪಾ ಮಿನಿಸ್ಟರ್ ಆಗಿದ್ದಿಯಾ ಅಂದೆ ನಾನು. ಸರಕಾರದ ಪಂಚೇಂದ್ರಿಯಗಳು ಕೆಲಸವನ್ನೇ ಮಾಡುತ್ತಿಲ್ಲ. ನಾನು ಹೀಗೆ ಹೇಳಿದರೆ ಬೈತಿನಿ ಅಂತಾರೆ. ನಾನೇನಾದರೂ ಬೈದೆನಾ ಇವಾಗ. ಪಂಚೇಂದ್ರಿಯಗಳಿಲ್ಲ ಅಂದೆ ಅಷ್ಟೇ ಎಂದರು.
ಮಂತ್ರಿಗಳನ್ನು ನಂಬಿಕೊಂಡ್ರೆ ಮೂರು ಕಾಸಿನದು ಆಗೋಲ್ಲ. ಏನೇ ಆಗಲಿ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದೀನಿ‌. ಅಧಿಕಾರಿಗಳನ್ನು ಹಿಡಿದುಕೊಂಡು ಕೆಲಸ ಮಾಡಿಸ್ತೀದ್ದೀನಿ. ಇನ್ನು ಎರಡು ವರ್ಷವಾದ ಮೇಲೆ ನಾವೇ ಅಧಿಕಾರಕ್ಕೆ ಬರ್ತೀವಿ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. ನಾವು ಅಧಿಕಾರಕ್ಕೆ ಬಂದ ನಾಳೆಗೇನೆ ಗೋವನಕೊಪ್ಪ ಗ್ರಾಮ ಪಂಚಾಯಿತಿ ಮಾಡುತ್ತೇನೆ ಎಂದು ಗ್ರಾಮಸ್ಥರಿಗೆ ಸಿದ್ದರಾಮಯ್ಯ ಆಶ್ವಾಸನೆ ಕೊಟ್ಟಿದ್ದಾರೆ.
Published by: MAshok Kumar
First published: February 11, 2021, 6:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories