HOME » NEWS » District » EX CM SIDDARAMAIAH RAMASTRA AGAINST BJP PMTV MAK

ಬಿಜೆಪಿ ವಿರುದ್ದ ಸಿದ್ದರಾಮಯ್ಯ ರಾಮಾಸ್ತ್ರ ಹೂಡಲು ಸಿದ್ದತೆ : ಹೇಗಿದೆ ಗೊತ್ತಾ ಸಿದ್ದರಾಮನಹುಂಡಿ ರಾಮ ಮಂದಿರ?

2023ರ ಚುನಾವಣೆಯಲ್ಲಿ ಬಿಜೆಪಿ ಮೇಲೆ ರಾಮಾಸ್ತ್ರ ಪ್ರಯೋಗಿಸಲು ಸಿದ್ದರಾಮನಹುಂಡಿ ರಾಮಮಂದಿರಕ್ಕೆ ಅಪಾರ ದೇಣಿಗೆ ನೀಡಿರುವ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ, ಚುನಾವಣೆಗೆ ಈಗೀನಿಂದಲೇ ತಯಾರಿ ನಡೆಸಿಕೊಂಡಿದ್ದಾರೆ.

news18-kannada
Updated:February 21, 2021, 5:35 PM IST
ಬಿಜೆಪಿ ವಿರುದ್ದ ಸಿದ್ದರಾಮಯ್ಯ ರಾಮಾಸ್ತ್ರ ಹೂಡಲು ಸಿದ್ದತೆ : ಹೇಗಿದೆ ಗೊತ್ತಾ ಸಿದ್ದರಾಮನಹುಂಡಿ ರಾಮ ಮಂದಿರ?
ಸಿದ್ದರಾಮನ ಹುಂಡಿಯಲ್ಲಿ ಸಿದ್ಧವಾಗುತ್ತಿರುವ ರಾಮ ಮಂದಿರ.
  • Share this:
ಮೈಸೂರು: ಬಿಜೆಪಿ ಮೇಲೆ ರಾಮಾಸ್ತ್ರ ಸಿದ್ದಪಡಿಸಿರುವ  ಮಾಜಿ ಸಿಎಂ ಸಿದ್ದರಾಮಯ್ಯ, ರಾಮಮಂದಿರ ವಿಚಾರ ಪ್ರತಿಪಾದಿಸಲು ಸ್ವಗ್ರಾಮದಲ್ಲೆ ರಾಮಮಂದಿರಕ್ಕೆ ನಿರ್ಮಿಸುತ್ತಿದ್ದಾರೆ. ಈ ವಿಚಾರವನ್ನ ಸ್ವತಃ ಸಿದ್ದರಾಮಯ್ಯನವೇ ಹೇಳಿದ್ರು. ಆದರೆ, ಇದು ಹಿಂದಿನ ಉದ್ದೇಶ ಬೇರೆಯೇ ಇದ್ದಂತೆ ಕಾಣುತ್ತಿದೆ. ಸಿದ್ದರಾಮನಹುಂಡಿಯಲ್ಲಿ ಉದ್ಘಾಟನೆಗೆ ಸಜ್ಜಾಗುತ್ತಿರುವ ರಾಮಮಂದಿರದ ವಿಚಾರವಾಗಿ ಸಿದ್ದರಾಮಯ್ಯ ಹೊಸ ರಾಜಕೀಯ ಅಸ್ತ್ರವೊಂದನ್ನ ಸಿದ್ದಪಡಿಸಿಕೊಂಡಂತೆ ಕಾಣುತ್ತಿದೆ. ತನ್ನೂರಿನಲ್ಲಿ ರಾಮಮಂದಿರ ನಿರ್ಮಿಸಿ ಹೊಸ ಟ್ರಂಪ್ ಕಾರ್ಡ್ ಕೈಗೆತ್ತಿಕೊಂಡ ಟಗರು ಸಿದ್ದು, ಕಳೆದೊಂದು ವಾರದಿಂದ ಹಲವು ವೇದಿಕೆಗಳಲ್ಲಿ ಮುಂದಿನ ಬಾರಿ ನಮ್ಮದೆ ಸರ್ಕಾರ ಬರುತ್ತೆ ಎಂದು ವಿಶ್ವಾಸದಿಂದ ಭಾಷಣ ಮಾಡುತ್ತಿದ್ದಾರೆ. ಆದ್ರೆ ಮುಂದಿನ ದಿನಗಳಲ್ಲಿ ತಮ್ಮ ಭಾಷಣದ ಟ್ರಂಪ್ ಕಾರ್ಡ್ ವಿಷಯವಾಗಿ ಸಿದ್ದರಾಮನಹುಂಡಿ ರಾಮಮಂದಿರ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. 

ಹೌದು ಅಯೋಧ್ಯೆ ರಾಮಮಂದಿರಕ್ಕೆ ನಿಧಿ ಸಮರ್ಪಣಾ ಅಭಿಯಾನ ಮಾಡುತ್ತಿರುವ ರಾಜ್ಯದ ಆರ್‌ಎಸ್ಎಸ್‌ ಮುಖಂಡರು ಹಾಗೂ ಬಿಜೆಪಿ ಕಾರ್ಯಕರು, ರಾಜ್ಯ ‌ಪ್ರತಿ ಹಳ್ಳಿಗಳಲ್ಲು ಸಂಚಾರ ಮಾಡುತ್ತಿದ್ದಾರೆ. ಈ ನಡುವೆ ನಿಧಿ ಸಂಗ್ರಹಣ ಬಗ್ಗೆ ಆಕ್ಷೇಪಗಳನ್ನ ಕೆಲ ರಾಜಕೀಯ ಮುಖಂಡರು ಎತ್ತಿರೋದ್ರಿಂದ ಇನ್ನೆರಡು ತಿಂಗಳಲ್ಲಿ ಎಷ್ಟು ಬರುತ್ತೋ ಅಷ್ಟು ಹಣ ಸಂಗ್ರಹಿಸಿ ರಾಜ್ಯದಿಂದ ಬೃಹತ್‌ ಮೊತ್ತವನ್ನ ಅಯೋಧ್ಯೆಯ ಟ್ರಸ್ಟ್ ಗೆ ನೀಡಲು ನಿರ್ಧರಿಸಲಾಗಿದೆ.

ಈ ಎಲ್ಲಾ ಪ್ರಕ್ರಿಯೆಗಳು ಮುಂದಿನ ಏಪ್ರೀಲ್‌ ಹಂತಕ್ಕೆ ಮುಕ್ತಾಯ ಆಗಬಹುದು. ಆ ಎರಡು ತಿಂಗಳ ಅವಧಿಯಲ್ಲಿ ಸಿದ್ದರಾಮನಹುಂಡಿಯಲ್ಲಿ ಉದ್ಘಾಟನೆಗೆ ಸಜ್ಜಾಗಲಿರುವ ರಾಮಮಂದಿರ ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಹೊಸ ಅಸ್ತ್ರ ಸಿಕ್ಕಂತಾಗಲಿದೆ.  ರಾಮಮಂದಿರಕ್ಕೆ ಸಂಗ್ರಹಿಸಿದ ಹಣದ ಲೆಕ್ಕ ಕೊಡಿ ಆಗ್ರಹದ ಜೊತೆ ನಮ್ಮೂರಿನಲ್ಲು ರಾಮಮಂದಿರ ಕಟ್ಟಿದ್ದೇನೆ ಎಂದು ಪ್ರತಿಪಾದಿಸಲಿರುವ ಸಿದ್ದರಾಮಯ್ಯ, ನನ್ನ‌ ಹೆಸರಿನಲ್ಲು ರಾಮನಿದ್ದಾನೆ, ನಮ್ಮೂರಿನಲ್ಲು ರಾಮಮಂದಿರವಿದೆ ಎಂಬ ಟ್ರಂಪ್ ಕಾರ್ಡ್ ಪ್ಲೇ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

2023ರ ಚುನಾವಣೆಯಲ್ಲಿ ಬಿಜೆಪಿ ಮೇಲೆ ರಾಮಾಸ್ತ್ರ ಪ್ರಯೋಗಿಸಲು ಸಿದ್ದರಾಮನಹುಂಡಿ ರಾಮಮಂದಿರಕ್ಕೆ ಅಪಾರ ದೇಣಿಗೆ ನೀಡಿರುವ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ, ಚುನಾವಣೆಗೆ ಈಗೀನಿಂದಲೇ ತಯಾರಿ ನಡೆಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅಣ್ಣನ ಮಗನಿಂದಲೇ ದೇವಾಲಯ ಕಾಮಗಾರಿ ಪರಿವೀಕ್ಷಣೆ ನಡೆಯುತ್ತಿದ್ದು,  ತನ್ನೂರಿನ ರಾಮಮಂದಿರದ ಸಂಪೂರ್ಣ  ಮಾಹಿತಿ ಪಡೆದುಕೊಳ್ಳುತ್ತಿರುವ ಸಿದ್ದರಾಮಯ್ಯ ಬಿಜೆಪಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Bird Flu: ಮನುಷ್ಯರಿಗೂ ಹರಡುತ್ತೆ ಹಕ್ಕಿ ಜ್ವರ; ರಷ್ಯಾದ 7 ಜನರಲ್ಲಿ ವಿಶ್ವದ ಮೊದಲ H5N8 ವೈರಸ್ ಪತ್ತೆ

ಸಿದ್ದು ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಸುಮಾರು 45 ಲಕ್ಷ ಅಂದಾಜು ವೆಚ್ಚ ಇರಲಿದೆ. 120 ಅಡಿ ಉದ್ದ 45 ಅಡಿ ಅಗಲದ ನಿವೇಶನದಲ್ಲಿ, 40x60 ಅಡಿ ಅಗಲದಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ. ಗರ್ಭಗುಡಿ, ಪಾರಾಂಗಣ, ಹೊರಾಂಗಣ ಕಟ್ಟಡ ನಿರ್ಮಿಸಲಾಗಿದೆ. ಗರ್ಭಗುಡಿಯ ಸುತ್ತ 10 ದೇವರುಗಳ ಸ್ಥಾಪನೆಗೆ ಪ್ರಭಾವಳಿಗಳ ನಿರ್ಮಾಣ ಮಾಡಲಿದ್ದು, ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಶೇ.80 ರಷ್ಟು ಕಾಮಗಾರಿ ಪೂರ್ಣವಾಗಿದ್ದು, ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಈ ಹಿನ್ನಲೆಯಲ್ಲಿ ಈ ಭಾರಿ‌ ವಿಜೃಂಭಣೆಯಿಂದ ರಾಮನವಮಿ ಆಚರಿಸಲು ನಿರ್ಧರಿಸಿರುವ ಗ್ರಾಮಸ್ಥರು.  ವಂತಿಕೆ ನೀಡಿ  ದೇಣಿಗೆ ನೀಡಿದ್ದಾರೆ. ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಹಾಯದ ನೇರವಿನೊಂದಿಗೆ ರಾಮಮಂದಿರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಈ ಮೊದಲು ಈ ಜಾಗದಲ್ಲಿ ಹೆಂಚಿನ ಮನೆಯಲ್ಲಿದ್ದ ರಾಮಮಂದಿರವನ್ನ ಇದೀಗ ಸಿದ್ದರಾಮಯ್ಯ ತನ್ನದೆ ಮುತುವರ್ಜಿ ವಹಿಸಿ ಜೀರ್ಣೋದ್ಧಾರ ಮಾಡುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
Published by: MAshok Kumar
First published: February 21, 2021, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories