Ramesh Jarkiholi CD Case: ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿದ್ದರಾಮಯ್ಯರಿಂದ ದ್ವಂದ್ವ ನಿಲುವು; ಈಶ್ವರಪ್ಪ ಆರೋಪ

ಸಿಡಿ ಬಗ್ಗೆ ನಾನು ಮಾತನಾಡಲ್ಲ ಅಂತ ಸಿದ್ಧರಾಮಯ್ಯ ಹೆಳ್ತಾರೆ. ದಿನಕ್ಕೆ ಒಂದು ಹೇಳಿಕೆ ನೀಡ್ತಾರೆ. ಮತ್ತೊಂದು ಕಡೆ ಮುಖ್ಯಮಂತ್ರಿಗಳು ಸಿಡಿ ಪ್ರಕರಣದ ಬಗ್ಗೆ ಮಾತಾಡ್ತಾನೆ ಇಲ್ಲ ಅಂತಾ ಆರೋಪ ಮಾಡ್ತಾರೆ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.

ಕೆಎಸ್ ಈಶ್ವರಪ್ಪ.

ಕೆಎಸ್ ಈಶ್ವರಪ್ಪ.

  • Share this:
ಹುಬ್ಬಳ್ಳಿ (ಮಾರ್ಚ್​ 30); ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ದ್ವಂದ್ವ ನಿಲುವು ತಾಳುತ್ತಿದ್ದಾರೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಸಿಡಿ ಬಗ್ಗೆ ನಾನು ಮಾತನಾಡಲ್ಲ ಅಂತ ಸಿದ್ಧರಾಮಯ್ಯ ಹೆಳ್ತಾರೆ. ದಿನಕ್ಕೆ ಒಂದು ಹೇಳಿಕೆ ನೀಡ್ತಾರೆ. ಮತ್ತೊಂದು ಕಡೆ ಮುಖ್ಯಮಂತ್ರಿಗಳು ಸಿಡಿ ಪ್ರಕರಣದ ಬಗ್ಗೆ ಮಾತಾಡ್ತಾನೆ ಇಲ್ಲ ಅಂತಾ ಆರೋಪ ಮಾಡ್ತಾರೆ. ಎಲ್ಲಾನೂ ಸಿದ್ಧರಾಮಯ್ಯನೇ ಹೇಳ್ತಾರೆ. ಎಲ್ಲ ವಿಚಾರದಲ್ಲಿಯೂ ಸಿದ್ಧರಾಮಯ್ಯ ಹೀಗೇನೇ. ಚುನಾವಣೆಗೆ ನಿಲ್ಲಲ್ಲ ಅಂದ್ರು. ಎರಡೆರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತ್ರು. ಮುಂದಿನ ಚುನಾವಣೆಯಲ್ಲಿ ಬದಾಮಿಯಲ್ಲಿ ಸ್ಪರ್ಧೆ ಮಾಡ್ತೀನಿ ಅಂತ ಹೇಳಿದ್ದಾರೆ. ಆದ್ರೆ ಬದಾಮಿಯಲ್ಲಿ ಅವ್ರು ನಿಲ್ಲೋದೇ ಇಲ್ಲ. ಅಲ್ಲಿ ಸೋಲ್ತೀನಿ ಅನ್ನೋ ಗ್ಯಾರಂಟಿ ಇರೋದ್ರಿಂದ ಬೇರೆ ಕ್ಷೇತ್ರ ಹುಡುಕಿಕೊಳ್ತಾರೆ" ಎಂದು ಕಿಡಿಕಾರಿದ್ದಾರೆ.

"ಮುಂದಿನ ಮುಖ್ಯಮಂತ್ರಿ ನಾನೇ ಹೇಳುತ್ತಾ, ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗೋ ಹಗಲುಗನಸು ಕಾಣುತ್ತಿದ್ದಾರೆ. ಆದ್ರೆ ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗೋದೂ ಇಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದೂ ಇಲ್ಲ. ಸಿದ್ಧರಾಮಯ್ಯ ಹೇಳೋದು ಒಂದು, ಇರೋ ರೀತಿ ಮತ್ತೊಂದು. ಬರೀ ದ್ವಂದ್ವ ಹೇಳಿಕೆ ನೀಡೋದೆ ಅವರ ಕಲಸ. ಸಿಡಿ ಬಗ್ಗೆ ನಾನೇನೂ ಮಾತನಾಡಲ್ಲ. ಅದ್ನ ಬಿಟ್ಟು ಬೇರೆ ಕೇಳಿ" ಎಂದು ಈಶ್ವರಪ್ಪ ಸಿಡಿಮಿಡಿಗೊಂಡಿದ್ದಾರೆ.

ಉಪ ಚುನಾವಣೆಯಲ್ಲಿ ಗೆಲುವು ಬಿಜೆಪಿಯದ್ದೇ!:

ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಮೂರೂ ಸೀಟುಗಳಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಂತೆಂದರೆ ಬಿಜೆಪಿಯ ಗೆಲುವು ನಿಶ್ಚಿತ ಅನ್ನೋ ವಾತಾವರಣವಿದೆ. ಹೀಗಾಗಿಯೇ ಕೆಲವು ಕಡೆ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿದೆ. ಒಂದು ಕಾಲಕ್ಕೆ ಬಿಜೆಪಿ ಟಿಕೇಟ್ ಕೊಡ್ತೇವೆ ಅಂದ್ರೂ ತಗೊಳ್ಳೋರಿದ್ದಿಲ್ಲ. ಆದ್ರೆ ಈಗ ವಾತಾವರಣವೇ ಬದಲಾಗಿದೆ ಎಂದರು.

ಬಿಜೆಪಿಯಿಂದ ಸ್ಪರ್ಧೆ ಮಾಡಿದ್ರೆ ಗೆದ್ದೇ ಗೆಲ್ಲುತ್ತೇವೆಂಬ ನಂಬಿಕೆ ಇದೆ. ಹೀಗಾಗಿ ಬಿಜೆಪಿ ಟಿಕೇಟ್ ಗೆ ಎಲ್ಲಿಲ್ಲದ ಬೇಡಿಕೆ ಇದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬರಲಿಲ್ಲ. ಆದರೆ ಉಪ ಚುನಾವಣೆಗಳಲ್ಲಿ ಮತದಾರ ಬಿಜೆಪಿ ಪರವಾಗಿ ನಿಲ್ಲುತ್ತಿದ್ದಾನೆ. ಇದಕ್ಕೆ ಮುಖ್ಯ ಕಾರಣ ಮೋದಿಯವರ ಯೋಜನೆಗಳು, ರಾಜ್ಯ ಸರ್ಕಾರದ ಆಡಳಿತ ಮತ್ತು ಬಿಜೆಪಿಯ ಸಂಘಟನೆ. ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿ ಗೆಲ್ಲೋದಾಗಿ ಹೇಳ್ತಿವೆ.

ಆದ್ರೆ ಬಿಜೆಪಿ ಅಬ್ಬರದಲ್ಲಿ ಎರಡೂ ಪಕ್ಷಗಳಿಗೆ ದಿಕ್ಕೇ ತೋಚದಂತಾಗಿದೆ. ಉಪ ಚುನಾವಣೆಗಳಲ್ಲಿ ಬಿಜೆಪಿ ಮಾತ್ರ ಜಯಭೇರಿ ಬಾರಿಸಿರೋದು ಕಂಗಾಲಾಗುವಂತೆ ಮಾಡಿದೆ. ಈ ಉಪ ಚನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Ramesh Jarkiholi CD Case: ಬಂಧನದ ಭೀತಿ ಎದುರಿಸುತ್ತಿರುವ ಆರೋಪಿ ರಮೇಶ್​ ಜಾರಕಿಹೊಳಿ ನಡೆ ಇನ್ನೂ ನಿಗೂಢ!

ಬರವಿದ್ದ ಕಡೆ ಕುಡಿಯುವ ನೀರಿಗೆ 50 ಲಕ್ಷ:

ರಾಜ್ಯದಲ್ಲಿ ಬೇಸಿಗೆ ತೀವ್ರಗೊಳ್ತಿರೋ ಹಿನ್ನೆಲೆಯಲ್ಲಿ, ಎಲ್ಲೆಲ್ಲಿ ಬರವಿದೆಯೋ ಅಲ್ಲೆಲ್ಲಾ 50 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು. ಕುಡಿಯುವ ನೀರಿನ ತತ್ವಾರ ನೀಗಿಸಲು ಕ್ರಮ ಕೈಗೊಳ್ಳಲಾಗುವುದು.

ಮಳೆ ನೀರು ಸಮುದ್ರ ಪಾಲಾಗ್ತಿದೆ. ವ್ಯರ್ಥವಾಗಿ ಹೋಗ್ತಿರೋ ನೀರನ್ನು ಭೂಮಿಯಲ್ಲಿ ಇಂಗಿಸೋ ಕೆಲಸ ಮಾಡುತ್ತೇವೆ. ಪ್ರಧಾನಿ ಮೋದಿ ಅವರು ಕ್ಯಾಚ್ ದಿ ರೈನ್ ಅಂತ ಹೇಳಿದ್ದಾರೆ. ಪ್ರಧಾನಿಗಳ ಯೋಜನೆ ಪ್ರಕಾರ ರಾಜ್ಯದೆಲ್ಲಡೆ ಕೆರೆ ಕಟ್ಟೆ, ಗೋಕಟ್ಟೆ, ಕಲ್ಯಾಣಿ ಇತ್ಯಾದಿಗಳ ಪುನರುಜ್ಜೀವನ ಮಾಡಲಾಗುವುದು. ಉದ್ಯೋಗ ಖಾತ್ರಿ ಯೋಜನೆ ಅಡಿ ಮಳೆ ನೀರು ಇಂಗಿಸಲು ಯೋಜನೆ ಕಾರ್ಯಗತಕ್ಕೆ ಕ್ರಮ ಕೈಗೊಳ್ಳಲಾಗುವುದು. ಇಡೀ ರಾಜ್ಯದ ಯೋಜನೆ ಹುಬ್ಬಳ್ಳಿಯಲ್ಲಿ ಏಪ್ರಿಲ್ 9 ರಂದು ಉದ್ಘಾಟನೆ ಮಾಡಲಾಗುವುದು. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಯೋಜನೆ ಜಾರಿಗೊಳಿಸೋದಾಗಿ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by:MAshok Kumar
First published: