ಡೀಲ್ ಮಾಸ್ಟರ್ ಆಗಿ ಜೀವನ ಮಾಡೋ ಹೀನಾಯ ಪರಿಸ್ಥಿತಿಗೆ ಬಂದಿಲ್ಲ, ಮಾತನಾಡೊ ಮುನ್ನ ಎಚ್ಚರಿಕೆ ಇರಲಿ; ಕುಮಾರಸ್ವಾಮಿ

ಈ ನೂತನ ಭೂ ಸುಧಾರಣಾ ಮಸೂದೆಯಲ್ಲಿ 79 ಎ, 79 ಬಿ ಕೈ ಬಿಟ್ಟಿದ್ದಾರೆ. ಭೂ ಸುದಾರಣೆ ಮಸೂದೆ ತಂದಾಗ ನಾನು ಹಾಗೂ ದೇವೇಗೌಡರು ಬಿಲ್ ವಿರೊದಿಸಿದ್ದು ನಿಜ.  ಕಳೆದ ಅಧಿವೇಶನದಲ್ಲಿ ಕೆಲ ಬದಲಾವಣೆ ತರಲು ಸಲಹೆ ನೀಡಿದ್ದೆ, ಬಿಲ್ ನಲ್ಲಿ ನಾನು ನೀಡಿದ ಸಲಹೆಯಂತೆ ಬದಲಾವಣೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿ.

ಹೆಚ್​.ಡಿ. ಕುಮಾರಸ್ವಾಮಿ.

  • Share this:
ಕೋಲಾರ (ಡಿಸೆಂಬರ್​ 09); ರೈತರು, ಹಲವು ರೈತ ಮುಖಂಡರು ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್​ ವಿರೋಧದ ನಡುವೆಯೂ ರಾಜ್ಯ ಬಿಜೆಪಿ ಸರ್ಕಾರ ನಿನ್ನೆ ಸದನದಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020 ಅನ್ನು ಮಂಡಿಸಿ ಅಂಗೀಕಾರ ಪಡೆದಿತ್ತು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್​ ಶಾಸಕರು ರೈತ ವಿರೋಧಿ ಎನ್ನಲಾದ ಈ ಮಸೂದೆಯ ಪರ ಮತ ಚಲಾಯಿಸಿದ್ದರು. ಇದು ಸಾಮಾನ್ಯವಾಗಿ ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವೇಳೆ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​, "ಕುಮಾರಸ್ವಾಮಿ ಇರೋದೆ ಪುಟಗೋಸಿ ರಾಜಕಾರಣ ಮಾಡೋಕೆ, ಅವರೊಬ್ಬ ಡೀಲ್ ಮಾಸ್ಟರ್​" ಎಂದು ಹರಿಹಾಯ್ದಿದ್ದರು. ಆದರೆ, ಈ ಟೀಕೆಗೆ ಹೆಚ್​.ಡಿ. ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ 'ಡೀಲ್' ಎನ್ನುವ ಪದ  ಬಳಕೆಗೆ  ಕೋಲಾರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಂತರ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, "ಲಘುವಾಗಿ ಮಾತನಾಡೋ ಇವರಿಂದ ನಾನು ಪಾಠ ಕಳಿತುಕೊಳ್ಳಬೇಕಿಲ್ಲ. ಹೊಟ್ಟೆ ಪಾಡಿನ ರಾಜಕೀಯ ಅವರದು, ನನ್ನದಲ್ಲ. ನಾನು ಸ್ವಾಭಿಮಾನದಿಂದ ಬದುಕಿರುವವನು. ರಾಜಕೀಯದಲ್ಲಿ ಬೆಳಿಗ್ಗೆ ಒಂದು ರಾತ್ರಿ ಒಂದು ನಡೆಯುತ್ತೆ ಹೌದು. ಆದರೆ ನೀವು ಡೋಂಗಿ ರೈತರ ಹೆಸರಿನಲ್ಲಿ ಯಾಕೆ ಕೆಲಸ ಮಾಡುತ್ತಿದ್ದೀರಾ?

ಮೊದಲು ನಿಮ್ಮಲ್ಲಿರುವ ಹುಳುಕುಗಳನ್ನು ಮುಚ್ಚಿಕೊಳ್ಳಿ, ನನ್ನ ಬಳಿ ನಿಮ್ಮ ಆಟ ನಡೆಯೋದಿಲ್ಲ. ಬೆಳಿಗ್ಗೆ ನೀರು ಕೊಟ್ಟು ಆಮೇಲೆ ವಿಷ ಕೊಡೋ ಕೆಲಸ  ಮಾಡ್ತಾ ಇರೋದು ನೀವು,  ದೇವೇಗೌಡರಿಗೆ ವಿಷ ಹಾಕಿದವರು ಯಾರು?  ದೇವೇಗೌಡರು ರೈತರಿಗೆ ಏನು ಅನ್ಯಾಯ ಮಾಡಿದ್ದರು ? ಇವತ್ತು 30 ಟಿಎಂಸಿ ಹೆಚ್ಚಿಗೆ ಕಾವೇರಿ ನೀರು ತಂದಿದ್ದು ದೇವೇಗೌಡರು ಹೋರಾಟ ಮಾಡಿದ ಫಲವಾಗಿದೆ. ಹಾಗಾಗಿ ಆ ದಾರಿಯಲ್ಲಿ ಹೋಗೋ ಚಿಲ್ಲರೆಗಳಿಗೆಲ್ಲಾ ನಾನು ಉತ್ತರ ಕೊಡಬೇಕಾ? ಕರವೇ ನಾರಾಯಣಗೌಡ ಯಾರೋ ನಂಗೆ ಗೊತ್ತಿಲ್ಲ, ಅವರೆಲ್ಲಾ ದೊಡ್ಡವರು, ನಾವೆಲ್ಲ ಸಣ್ಣವರು" ಎಂದು ಕಿಡಿಕಾರಿದ್ದಾರೆ.

"ರೈತರ ಸಾಲ ಮನ್ನಾ ಜೊತೆಗೆ ದ್ರಾಕ್ಷಿ ಬೆಳೆಗಾರರಿಗೆ 150 ಕೋಟಿ ಹಣ ಕೊಟ್ಟಿದ್ದೇನೆ. ಈ ಸರ್ಕಾರದಲ್ಲಿ ಹಣ ಬಿಡುಗಡೆ ಆಯ್ತಾ? ಅದನ್ನು ಕೇಳೋ ತಾಕತ್ತು ಇವರಿಗಿಲ್ಲ. ಆದರೆ, ನಾನು ಅಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ರಾಜಕೀಯ ಮಾಡ್ತಿದೀನಿ ಎನ್ನುವ ಬೇಜವಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ನೆನ್ನೆಯಿಂದ ಜೆಡಿಎಸ್ ಪಕ್ಷಕ್ಕೆ ರೈತದ್ರೋಹಿ ಎನ್ನುವ ಪಟ್ಟ ಕಟ್ಟಲು ಹೊರಟಿದ್ದಾರೆ. ರೈತದ್ರೋಹಿ ಎನ್ನುವರಿಗೆ, ಈ ಬಿಲ್ ನಲ್ಲಿರುವ ದೋಷಗಳೇನು? ಹೇಳಲಿ" ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಜೆಡಿಎಸ್​ ಮಣ್ಣಿನ ಮಕ್ಕಳಿಗೆ ಎಂದೂ ದ್ರೋಹ ಬಗೆಯದು; ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ

ಈ ನೂತನ ಭೂ ಸುಧಾರಣಾ ಮಸೂದೆಯಲ್ಲಿ 79 ಎ, 79 ಬಿ ಕೈ ಬಿಟ್ಟಿದ್ದಾರೆ. ಭೂ ಸುದಾರಣೆ ಮಸೂದೆ ತಂದಾಗ ನಾನು ಹಾಗೂ ದೇವೇಗೌಡರು ಬಿಲ್ ವಿರೊದಿಸಿದ್ದು ನಿಜ.  ಕಳೆದ ಅಧಿವೇಶನದಲ್ಲಿ ಕೆಲ ಬದಲಾವಣೆ ತರಲು ಸಲಹೆ ನೀಡಿದ್ದೆ, ಬಿಲ್ ನಲ್ಲಿ ನಾನು ನೀಡಿದ ಸಲಹೆಯಂತೆ ಬದಲಾವಣೆ ಮಾಡಿದ್ದಾರೆ. ಅಲ್ಲದೆ, ಕೃಷಿ ಮಸೂದೆಯಲ್ಲಿ‌ ರೈತರಿಗೆ ಮಾರಕವಾಗುವ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೇವಲ ವಿರೋದಕ್ಕೆ ಮಾತ್ರ ವಿರೋದ ಮಾಡುವುದು ಸರಿಯಲ್ಲ. ವಾಸ್ತವವಾಗಿ ಮಾತನಾಡುವ ಪಕ್ಷ ನಮ್ಮದು.

ಈಗ ರೈತಮುಖಂಡರು ಕೆಲವರು ಬಾರುಕೋಲು ಚಳುವಳಿ ಹೊರಟಿದ್ದಾರೆ. 1994 ರಲ್ಲಿ ಪ್ರೊಪೆಸರ್ ನಂಜುಂಡಸ್ವಾಮಿ ಶಾಸಕರಾಗಿದ್ದರು. 1961 ರ ಕಂದಾಯ ಕಾನೂನು 79(A),79(B) ತೆಗೆಯಬೇಕು ಎಂದು ವಿಧಾನಸೌಧದಲ್ಲಿ ಭಾಷಣ ಮಾಡಿದ್ದರು. ಈ ದೇಶದ ನಾಗರಿಕರ ಮೂಲಭೂತ ಹಕ್ಕನ್ನು ಮೊಟಕುಗೊಳಿಸದೆ, ತೆಗೆದು ಹಾಕಿ ಎಂದು ಭಾಷಣ ಮಾಡಿದ್ದರು. ಈಗ ಹೋರಾಟ ಮಾಡುತ್ತಿರುವ ರೈತ ಮುಖಂಡರಿಂದ ನಾನು ಏನನ್ನು ಹೇಳಿಸಿಕೊಳ್ಳಬೇಕಿಲ್ಲ. ರೈತ ಮುಖಂಡರ ಬೆಂಬಲ ನಮ್ಮ ಪಕ್ಷಕ್ಕೆ ಬೇಕಿಲ್ಲ, ಜೆಡಿಎಸ್ ಪಕ್ಷ ರೈತರಿಗಾಗಿಯೇ ಇದೆ, ಮುಂದೆಯು ರೈತರ ಪರ ಇರುತ್ತೆ" ಎಂದು ಹೋರಾಟಗಾರರ ವಿರುದ್ದ ಕಿಡಿಕಾರಿದ್ದಾರೆ.
Published by:MAshok Kumar
First published: