ನನ್ನ ಮೇಲೆ ರೈತರ ಋಣವಿದೆ, ಕಾಂಗ್ರೆಸ್‌ನವರದ್ದಲ್ಲ; ಹೆಚ್‌.ಡಿ. ಕುಮಾರಸ್ವಾಮಿ ಕಿಡಿ

ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ನಾನು ಯಾರ ಮನೆಗೂ ಹೋಗಿರಲಿಲ್ಲ. ಕಾಂಗ್ರೆಸ್‌ ನಾಯಕರೇ ನನ್ನ ಮನೆಗೆ ಬಂದಿದ್ದರು. ಸಿಎಂ ಸ್ಥಾನವನ್ನು ನೀವೆ ವಹಿಸಿಕೊಳ್ಳಿ. ಮೋದಿಯವರು 4 ವರ್ಷ ನಿಮಗೆ ಏನು ಸಮಸ್ಯೆ ನೀಡದಂತೆ ನಾವು ನೋಡಿಕೊಳ್ತೀವಿ ಎಂದಿದ್ದರು ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಹೆಚ್‌.ಡಿ. ಕುಮಾರಸ್ವಾಮಿ.

ಹೆಚ್‌.ಡಿ. ಕುಮಾರಸ್ವಾಮಿ.

  • Share this:
ರಾಮನಗರ (ಜೂನ್‌ 02);"ನನ್ನ ಮೇಲೆ ರೈತರ ಋಣ ಇದೆಯೇ ಹೊರತು ಬೇರೆ ಯಾರ ಋಣವೂ ಇಲ್ಲ. ನಾನು ಯಾರ ಋಣದಲ್ಲಿಯೂ ಇಲ್ಲ. ನನ್ನನ್ನ ಸಿಎಂ ಮಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗಿಲ್ಲ" ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಚನ್ನಪಟ್ಟಣದ ನಗರಸಭೆ ಆವರಣದಲ್ಲಿ 100 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಉಚಿತವಾಗಿ ದಿನಸಿ ಕಿಟ್ ಗಳನ್ನ ವಿತರಣೆ ಮಾಡಿದ ನಂತರ ಮತ್ತೆ ಹಳೆ ಮೈತ್ರಿಯನ್ನು ನೆನೆದು ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿರುವ ಅವರು, "ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ನಾನು ಯಾರ ಮನೆಗೂ ಹೋಗಿರಲಿಲ್ಲ. ಕಾಂಗ್ರೆಸ್‌ ನಾಯಕರೇ ನನ್ನ ಮನೆಗೆ ಬಂದಿದ್ದರು. ಸಿಎಂ ಸ್ಥಾನವನ್ನು ನೀವೆ ವಹಿಸಿಕೊಳ್ಳಿ. ಮೋದಿಯವರು 4 ವರ್ಷ ನಿಮಗೆ ಏನು ಸಮಸ್ಯೆ ನೀಡದಂತೆ ನಾವು ನೋಡಿಕೊಳ್ತೀವಿ ಎಂದಿದ್ದರು.

ಕಾಂಗ್ರೆಸ್ ನವರಿಗೆ ಮೈತ್ರಿ ಬೇಕಿತ್ತು, ನನಗೆ ರೈತರ ಋಣ ಇತ್ತು. ಹಾಗಾಗಿ 14 ತಿಂಗಳಲ್ಲಿ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆ ರೈತನ ಋಣ ತೀರಿಸಬೇಕಿತ್ತು, ತೀರಿಸಿದ್ದೇನೆ. ದೇವೇಗೌಡರ 60 ವರ್ಷದ ರಾಜಕೀಯ ಜೀವನದಲ್ಲಿ ಎಂದೂ ಅಧಿಕಾರ ಹುಡುಕಿ ಹೋಗಿಲ್ಲ. ಹಿಂಬಾಗಿಲಿನಿಂದ ಯಾವತ್ತು ರಾಜಕಾರಣ ಮಾಡಿಲ್ಲ ನಾನು ಸಹ ಅಂತ ರಾಜಕಾರಣಕ್ಕೆ ಎಡೆ ಮಾಡಿಕೊಡುವುದಿಲ್ಲ" ಎಂದಿದ್ದಾರೆ.

ಇದನ್ನೂ ಓದಿ : ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಸ್ಥಾನದಿಂದ ಮನೋಜ್‌ ತಿವಾರಿ ವಜಾ, ಆದೇಶ್‌ ಕುಮಾರ್‌ ನೇಮಕ

First published: