HOME » NEWS » District » EX CM CT RAVI TALK AGAINST CORONAVIRUS VACCINE VCTV MAK

ಈ ಹಿಂದೆ ವ್ಯಾಕ್ಸಿನ್ ಕುರಿತು ಅಪ ಪ್ರಚಾರ ಮಾಡಿದ್ರು, ಈಗ ಲಸಿಕೆಗೆ ಎಲ್ಲೆಡೆ ಅಭಾವ ಸೃಷ್ಠಿಯಾಗಿದೆ; ಸಿ.ಟಿ. ರವಿ

ಚಿಕ್ಕಮಗಳೂರು ಜಿಲ್ಲೆಯಲ್ಲೂ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ನಾವು ಕಾನೂನು ಪಾಲನೆ ಮಾಡಿಕೊಂಡು ಕೂತಿದ್ದರೆ ಜೀವ ಹೋಗಿರ್ತಿತ್ತು. ಕೂಡಲೇ ನಿರ್ಣಯ ಕೈಗೊಂಡಿದ್ದಕ್ಕೆ ಜೀವ ಉಳಿದಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

news18-kannada
Updated:May 5, 2021, 7:23 AM IST
ಈ ಹಿಂದೆ ವ್ಯಾಕ್ಸಿನ್ ಕುರಿತು ಅಪ ಪ್ರಚಾರ ಮಾಡಿದ್ರು, ಈಗ ಲಸಿಕೆಗೆ ಎಲ್ಲೆಡೆ ಅಭಾವ ಸೃಷ್ಠಿಯಾಗಿದೆ; ಸಿ.ಟಿ. ರವಿ
ಸಿ ಟಿ ರವಿ.
  • Share this:
ಚಿಕ್ಕಮಗಳೂರು : ಮೊದಲು ವ್ಯಾಕ್ಸಿನ್ ಬಂದಾಗ ಬಿಜೆಪಿ ವ್ಯಾಕ್ಸಿನ್, ಜೀವ ತೆಗೆಯುವುದಕ್ಕೆ ಮಾಡಿದ್ದಾರೆ, ಈ ವ್ಯಾಕ್ಸಿನ್ ಪಡೆದರೆ ಮಕ್ಕಳಾಗುವುದಿಲ್ಲ ಎಂದೆಲ್ಲಾ ವ್ಯಾಕ್ಸಿನ್ ಕುರಿತು ರಾಜಕೀಯ ಅಪಪ್ರಚಾರ ಮಾಡಿದ್ದರು. ಅವರೇ ಕದ್ದು ಹೋಗಿ ವ್ಯಾಕ್ಸಿನ್ ತೆಗೆದುಕೊಂಡು ಬಂದರು. ಆದರೆ, ಇಂದು ಜನ ಸಾಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಈಗ ವ್ಯಾಕ್ಸಿನ್‍ಗೆ ಬೇಡಿಕೆ ಇದೆ. ಆದರೆ, ಆರಂಭದಲ್ಲಿ ಟಾರ್ಗೆಟ್ ರಿಚ್ ಆಗ್ತಿರಲಿಲ್ಲ. ವ್ಯಾಕ್ಸಿನ್ ಉಪಯೋಗಿಸಿಕೊಳ್ಳದೆ ದೊಡ್ಡ ಪ್ರಮಾಣದಲ್ಲಿ ವೇಸ್ಟ್ ಆಗಿದೆ. ಇದಕ್ಕೆಲ್ಲಾ ಕಾರಣ ರಾಜಕೀಯ ನಾಯಕರು ಅನುಮಾನ ಹುಟ್ಟು ಹಾಕಿದ್ದರಿಂದ ಈಗ ಲಸಿಕೆಗೆ ಅಭಾವ ಸೃಷ್ಠಿಯಾಗಿದೆ. ಇದರ ಹೊಣೆಯನ್ನೂ ಎಲ್ಲರೂ ಹೊರಬೇಕು ಎಂದಿದ್ದಾರೆ.

ಇನ್ನು ಇದೇ ವೇಳೆ ಆಕ್ಸಿಜನ್ ಸಮಸ್ಯೆ ಬಗ್ಗೆ ಮಾತಾನಾಡಿದ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲೂ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ನಾವು ಕಾನೂನು ಪಾಲನೆ ಮಾಡಿಕೊಂಡು ಕೂತಿದ್ದರೆ ಜೀವ ಹೋಗಿರ್ತಿತ್ತು. ಕೂಡಲೇ ನಿರ್ಣಯ ಕೈಗೊಂಡಿದ್ದಕ್ಕೆ ಜೀವ ಉಳಿದಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಬಳ್ಳಾಯಿಂದ ಲಿಕ್ವಿಡ್ ಆಕ್ಸಿಜನ್ ಬರಲಿಲ್ಲ. ಡಿಸಿಯವರು ನಾಳೆಯೊಳಗೆ ಬರದಿದ್ದರೆ ಕಷ್ಟ ಎಂದು ಹೇಳಿದರು.

ನಾವು ಪರ್ಯಾಯ ಮಾರ್ಗ ಬಳಸಿ ಆಕ್ಸಿಜನ್ ಪೂರೈಸಿದ್ದೇವೆ. ಮುಂದಿನದ್ದು ಆಮೇಲೆ ನೋಡೋಣ. ಹಣ ಲೆಕ್ಕವಲ್ಲ ಜೀವ ಮುಖ್ಯ ಎಂದು ಬೇರೆ ಮಾರ್ಗದಿಂದ ಆಕ್ಸಿಜನ್ ಪೂರೈಸಿದ್ದೇವೆ. ಚಾಮರಾಜನಗರ ರೀತಿ ಘಟನೆಯಾಗಿದ್ದರೆ ಸುದ್ದಿ ಆಗುತ್ತಿತ್ತು. ನಾವು ತೆರೆ ಹಿಂದೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ. ಆದರೆ ಅದೆಲ್ಲಾ ಸುದ್ದಿಯಾಗಲ್ಲ ಎಂದರು.

ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಚುನಾವಣೆ ಬಗ್ಗೆಯೂ ಮಾತನಾಡಿರುವ ಅವರು,   ಹತ್ಯಾ ರಾಜಕಾರಣಕ್ಕೆ ಐದು ದಶಕಗಳ ಇತಿಹಾಸವಿದೆ. ಚುನಾವಣಾ ಫಲಿತಾಂಶದ ಘೋಷಣೆಯಾದ ಬಳಿಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರನ್ನ ಟಾರ್ಗೇಟ್ ಮಾಡಿ ಮನೆಗೆ ಬೆಂಕಿ ಹಾಕುವ, ಕಚೇರಿ ಸುಡುವ, ಅಂಗಡಿ ಲೂಟಿ ಮಾಡೋದ್ರ ಜೊತೆ ಹತ್ಯೆ ಮಾಡುವ ರಾಜಕಾರಣ ನಡೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಇದನ್ನೂ ಓದಿ: Cabinet Meeting: ಚಾಮರಾಜನಗರ ಆಕ್ಸಿಜನ್ ದುರಂತ; ಸಚಿವ ಸಂಪುಟದಲ್ಲಿ ಸಿಎಂ ಗರಂ, ಲಾಕ್​ಡೌನ್ ಘೋಷಣೆ ಸಾಧ್ಯತೆ?

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಆರು ಜನರ ಕೊಲೆಯಾಗಿದೆ. 280ಕ್ಕೂ ಹೆಚ್ಚು ಬೆಂಕೆ-ಕಲ್ಲುತೂರಾಟ, ದೌರ್ಜನ್ಯ, ಲೂಟಿಯ ಪ್ರಕರಣಗಳು ದಾಖಲಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೆ ಓಟು ಹಾಕಬೇಕು. ಯಾರನ್ನ ಆರಿಸಬೇಕು ಅನ್ನೋದು ಜನರ ಹಕ್ಕು. ಯಾವ ಪಕ್ಷದ ಪರ ಕೆಲಸ ಮಾಡಬೇಕೆಂಬುದು ಸಂವಿಧಾನ ಕೊಟ್ಟಿರುವ ಹಕ್ಕು. ಹತ್ಯೆ ಮೂಲಕ ಪ್ರಜಾಪ್ರಭುತ್ವದ ಧ್ವನಿಯನ್ನ ಹತ್ತಿಕ್ಕುವ ಕೆಲಸವನ್ನ ಅಲ್ಲಿನ ತೃಣಮೂಲ ಕಾಂಗ್ರೆಸ್ ಮಾಡುತ್ತಿದೆ.
ಈ ಬಗ್ಗೆ ನಾಳೆ ರಾಷ್ಟ್ರಾದ್ಯಂತ ಲಾಕ್‍ಡೌನ್ ಇರುವ ರಾಜ್ಯಗಳಲ್ಲಿ ಕೊವಿಡ್ ನಿಯಮಗಳ ಅನ್ವಯ, ಲಾಕ್ ಡೌನ್ ಇಲ್ಲದ ರಾಜ್ಯಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದರು. ಮೂಲಭೂತ ಸಂಘಟನೆಗಳು ಸೇರಿ ಬಿಜೆಪಿ ಕಾರ್ಯಕರ್ತರನ್ನ ಟಾಗೇಟ್ ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published by: MAshok Kumar
First published: May 5, 2021, 7:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories