HOME » NEWS » District » EX BIGG BOSS CONTESTANT MASTAN CHANDRA DETAINED BY POLICE IN DRUG CASE SNVS

Drugs Case - ಮಾಜಿ ಬಿಗ್ ಬಾಸ್ ಕನ್ನಡ ಸ್ಪರ್ಧಿ ಮಸ್ತಾನ್ ಪೊಲೀಸರ ವಶಕ್ಕೆ

ಡ್ರಗ್ ಪೆಡ್ಲರ್​ಗಳ ಜೊತೆ ಸಂಬಂಧ ಇದ್ದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಇಂದು ಶುಕ್ರವಾರ ಮಸ್ತಾನ್ ಚಂದ್ರ ಹಾಗೂ ಕೇಶವ್ ಕೌಲ್ ಎಂಬ ವ್ಯಕ್ತಿಗಳ ಮನೆ ಮೇಲೆ ರೇಡ್ ಮಾಡಿದ್ದಾರೆ. ಬಳಿಕ ಮಸ್ತಾನ್ ಅವರನ್ನ ವಶಕ್ಕೆ ಪಡೆದಿದ್ದಾರೆ.

news18-kannada
Updated:March 5, 2021, 10:26 AM IST
Drugs Case - ಮಾಜಿ ಬಿಗ್ ಬಾಸ್ ಕನ್ನಡ ಸ್ಪರ್ಧಿ ಮಸ್ತಾನ್ ಪೊಲೀಸರ ವಶಕ್ಕೆ
ಮಸ್ತಾನ್ ಚಂದ್ರ (ಮಧ್ಯದಲ್ಲಿರುವವರು)
  • Share this:
ಬೆಂಗಳೂರು(ಮಾ. 05): ನಾಲ್ಕನೇ ಸೀಸನ್​ನ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನದಲ್ಲಿ ವೈಲ್ ಕಾರ್ಡ್ ಆಗಿ ಪ್ರವೇಶಿಸಿದ್ದ ಮಸ್ತಾನ್ ಚಂದ್ರ ಇದೀಗ ಡ್ರಗ್ಸ್ ಪ್ರಕರಣ ಸಂಬಂಧ ಪೊಲೀಸ್ ವಶದಲ್ಲಿದ್ದಾರೆ. ವಿವಿಧ ಡ್ರಗ್ ಪೆಡ್ಲರ್​ಗಳೊಂದಿಗೆ ಸಂಪರ್ಕ ಇರುವ ಹಿನ್ನೆಲೆಯಲ್ಲಿ ಗೋವಿಂದಪುರ ಠಾಣೆ ಪೊಲೀಸರು ಮಸ್ತಾನ್ ಚಂದ್ರರ ವಿಚಾರಣೆ ನಡೆಸುತ್ತಿದ್ದಾರೆ. ಬಾಳಸವಾಡಿ ಉಪವಿಭಾಗದ ಗೋವಿಂದಪುರ ಠಾಣೆ ಪೊಲೀಸರು ಇಂದು ಬೆಳಗ್ಗೆ ಆರು ಗಂಟೆಗೆ ಸಂಜಯ್ ನಗರದಲ್ಲಿರುವ ಮಸ್ತಾನ್ ಚಂದ್ರ ಅವರ ಮನೆ ಮೇಲೆ ರೇಡ್ ಮಾಡಿದ್ದರು. ಎಸಿಪಿ ಸಕ್ರಿ ನೇತೃತ್ವದಲ್ಲಿ ಈ ರೇಡ್ ನಡೆದಿತ್ತು. ಆ ಬಳಿಕ ಮಸ್ತಾನ್ ಅವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಗೋವಿಂದಪುರ ಠಾಣೆಗೆ ಕರೆದೊಯ್ದಿದ್ದಾರೆ.

ನೈಜೀರಿಯನ್ ಡ್ರಗ್ ಪೆಡ್ಲರ್​ಗಳ ಜೊತೆ ಮಸ್ತಾನ್ ನಂಟು: ನೈಜೀರಿಯಾದಿಂದ ಸ್ಟೂಡೆಂಟ್ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಯುಗೋಚುಕ್ವು ವಿಕ್ಟರ್ (34) ಎಂಬ ವ್ಯಕ್ತಿ ಎಂಡಿಎಂಎ ಡ್ರಗ್ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದ. ಬಂಧಿತನಿಂದ 40 ಲಕ್ಷ ಮೌಲ್ಯದ 500 ಗ್ರಾಮ್ ತೂಕದ ಡ್ರಗ್ ಪಿಲ್ಸ್​ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದರು. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತ ಮಸ್ತಾನ್ ಚಂದ್ರನಿಗೂ ಡ್ರಗ್ ಸಪ್ಲೈ ಮಾಡಿರುವುದು ತಿಳಿದುಬಂದಿದೆ.

ಜಾನ್ ಎಂಬ ಮತ್ತೊಬ್ಬ ಡ್ರಗ್ ಪೆಡ್ಲರ್ ಕೂಡ ಗೋವಿಂದಪುರ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ ಸಪ್ಲೈ ಮಾಡುವಾಗ ಸಿಕ್ಕಿಬಿದ್ದಿದ್ದ. ಈತನ ಮೊಬೈಲ್ ಅನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಮಸ್ತಾನ್ ಚಂದ್ರನ ನಂಬರ್ ಸಿಕ್ಕಿತ್ತು. ತಾನು ಮಸ್ತಾನ್​ಗೆ ಡ್ರಗ್ಸ್ ನೀಡಿರುವುದಾಗಿ ಜಾನ್ ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಸಂಜಯ್ ನಗರದಲ್ಲಿರುವ ಜಾನ್ ಮಸ್ತಾನ್ ಮನೆ ಮೇಲೆ ಪೊಲೀಸರು ರೇಡ್ ಮಾಡಿ ಪರಿಶೀಲಿಸಿ ಬಳಿಕ ವಶಕ್ಕೆ ತೆಗೆದುಕೊಂಡಿದ್ಧಾರೆ. ಇದೇ ವೇಳೆ, ನೈಜೀರಿಯನ್ ಡ್ರಗ್ ಪೆಡ್ಲರ್​ಗಳಿಂದ ಡ್ರಗ್ ಪಡೆದಿದ್ದರೆನ್ನಲಾದ ಕೇಶವ್ ಕೌಲ್ ಎಂಬ ವ್ಯಕ್ತಿಯ ಮನೆಗೂ ಪೊಲೀಸರು ಇಂದು ರೇಡ್ ಮಾಡಿದ್ದರು.

ಇದನ್ನೂ ಓದಿ: ಎಸ್​ಟಿ ಸಮುದಾಯದಿಂದ ‘ನಾಟಕ ಬಿಡಿ, ಮೀಸಲಾತಿ ಕೊಡಿ‘ ಅಭಿಯಾನ; ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಸಿಎಂಗೆ ಆಗ್ರಹ

ಯಾರು ಈ ಮಸ್ತಾನ್ ಚಂದ್ರ?

ಮಸ್ತಾನ್ ಚಂದ್ರ ಫ್ಯಾಷನ್ ಶೋ ರೀತಿಯ ದೊಡ್ಡ ದೊಡ್ಡ ಪಾರ್ಟಿ ಮತ್ತು ಈವೆಂಟ್​ಗಳನ್ನ ಆಯೋಜನೆ ಮಾಡುತ್ತಾರೆ. ಸ್ಯಾಂಡಲ್​ವುಡ್​ನ ಹಲವು ದೊಡ್ಡ ಸ್ಟಾರ್​ಗಳ ಜೊತೆ ಅವರು ಸಂಪರ್ಕ ಹೊಂದಿದ್ಧಾರೆ. ತನ್ನನ್ನು ತಾನು ಸ್ಯಾಂಡಲ್​ವುಡ್ ಸಿನಿಮಾ ನಿರ್ದೇಶಕ ಎಂದೂ ಇವರು ಗುರುತಿಸಿಕೊಂಡಿದ್ದಾರೆ. ನಾಲ್ಕನೇ ಸೀಸನ್​ನ ಬಿಗ್ ಬಾಸ್ ಶೋನಲ್ಲಿ ಇವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು.
Published by: Vijayasarthy SN
First published: March 5, 2021, 10:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories