HOME » NEWS » District » EVEN THOUGH AFTER DONATING 2 5 LACKS TO COVID VACCINE WHY PRAMODADEVI RETURNED WITHOUT TAKING IT PMV MAK

ವ್ಯಾಕ್ಸಿನ್‌ಗಾಗಿ 2.5 ಲಕ್ಷ ಹಣ ಕೊಟ್ಟ ರಾಜವಂಶಸ್ಥೆ ಪ್ರಮೋದಾದೇವಿ; ಆದರೂ ಲಸಿಕೆ ಹಾಕಿಸಿಕೊಳ್ಳದೆ ವಾಪಸ್‌ ಆಗಿದ್ದೇಕೆ?

ಲಸಿಕೆ ವಿತರಣೆಗಾಗಿ 2.5 ಲಕ್ಷ ಹಣವನ್ನ ಮೈಸೂರಿನ ಜೆಎಸ್ಎಸ್‌ ಆಸ್ಪತ್ರೆಗೆ ನೀಡಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌,  1000 ಮಂದಿಗೆ ಲಸಿಕೆ ಹಾಕಲು ಮುಂಗಡವಾಗಿ ಹಣವನ್ನ ಆಸ್ಪತ್ರೆಗೆ ನೀಡಿದ್ದಾರೆ.

news18-kannada
Updated:March 2, 2021, 7:18 AM IST
ವ್ಯಾಕ್ಸಿನ್‌ಗಾಗಿ 2.5 ಲಕ್ಷ ಹಣ ಕೊಟ್ಟ ರಾಜವಂಶಸ್ಥೆ ಪ್ರಮೋದಾದೇವಿ; ಆದರೂ ಲಸಿಕೆ ಹಾಕಿಸಿಕೊಳ್ಳದೆ ವಾಪಸ್‌ ಆಗಿದ್ದೇಕೆ?
ರಾಜ ವಂಶಸ್ಥೆ ಪ್ರಮೋದಾ ದೇವಿ ನೇತೃತ್ಬದಲ್ಲಿ ಲಸಿಕೆ ಕಾರ್ಯಕ್ರಮ.
  • Share this:
ಮೈಸೂರು: ಇಂದು ದೇಶದಾದ್ಯಂತ ಸಾರ್ವಜನಿಕರಿಗೆ ಕೊರೊನಾ ವ್ಯಾಕ್ಸಿನ್ ಅಭಿಯಾನ ಆರಂಭವಾಗಿದ್ದು, 60 ವರ್ಷ ಮೆಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಸ್ವತಹ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವ್ಯಾಕ್ಸಿನ್ ಪಡೆದಿದ್ದು, ರಾಜ್ಯದಲ್ಲು ವ್ಯಾಕ್ಸಿನ್ ಅಭಿಯಾನ ಆರಂಭವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಕೊರೊನಾ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಮೈಸೂರಿನ ರಾಜಮನೆತನದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರೋನಾ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಮೋದಾದೇವಿ ಒಡೆಯರ್‌ ಎಲ್ಲರು ಧೈರ್ಯವಾಗಿ ಕೊರೋನಾ ಲಸಿಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. 

ದೇಶದಲ್ಲಿ ಮೂರನೇ ಹಂತದ ಕೊರೊನಾ ವಾಕ್ಸಿನ್ ಶುರುವಾಗಿದ್ದು, ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ನಡೆದ ಕೋವಿಡ್ ವಾಕ್ಸಿನ್ ಅಭಿಯಾನದಲ್ಲಿ ಪ್ರಮೋದಾ ದೇವಿ ಒಡೆಯರ್ ಅವರು ವಾಕ್ಸಿನ್ ನೀಡಿಕೆಗೆ ಚಾಲನೆ ನೀಡಿ ತಾವು ಮಾತ್ರ ವ್ಯಾಕ್ಸಿನ್ ಪಡೆದುಕೊಳ್ಳಲಿಲ್ಲ. ಖ್ಯಾತ ನೃತ್ಯಗಾರ್ತಿ ವಸುಂಧರ ದೊರೆಸ್ವಾಮಿ ಅವರಿಗೆ ಮೊದಲ ಲಸಿಕೆ ಪಡೆಯುವಾಗ ಪಕ್ಕದಲ್ಲೆ ನಿಂತಿದ್ದ ಪ್ರಮೋದಾದೇವಿ ಒಡೆಯರ್ ಅವರು ನಂತರ ಇವತ್ತು ನಾನು ಲಸಿಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದು ಕೇವಲ ಅಭಿಯಾನದ ಉದ್ಘಾಟನೆ ಮಾಡುತ್ತಿದ್ದೇನೆ ಮುಂದಿನ ದಿನದಲ್ಲಿ ನಾನು ಲಸಿಕೆ ತೆಗೆದುಕೊಳ್ಳುತ್ತೇನೆ. ಅದಕ್ಕಾಗಿ ರಿಜಿಸ್ಟರ್ ಕೂಡ ಮಾಡಿಸಿ ನಂತರ ಲಸಿಕೆ ಪಡೆಯುತ್ತೇನೆ. ಆದ್ರೆ ಇಂದು ಆಹ್ವಾನ ಮಾಡಿದ್ದಕ್ಕಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಯಾರು ಆತಂಕಪಡಬೇಡಿ, ಈ ಬಗ್ಗೆ ವೈದ್ಯರಿಂದ ನಾನು ಮಾಹಿತಿ ಪಡೆದಿದ್ದೇನೆ ಇಲ್ಲಿರುವ ವೈದ್ಯರೇ ಕೋವಿಡ್ ಲಸಿಕೆ ಪಡೆದಿದ್ದಾರೆ, ಯಾರಿಗು ಏನೂ ಆಗಿಲ್ಲ ಹಾಗಾಗಿ ಎಲ್ಲರು ಧೈರ್ಯವಾಗಿ ಲಸಿಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಇದೆ ವೇಳೆ ಹೊಸಮಠದ ಚಿದಾನಂದ ಸ್ವಾಮೀಗಳು, ಸಾಹಿತಿಗಳು ಹಾಗೂ ಹಲವು ಶ್ರೀಗಳಿಗೆ ವ್ಯಾಕ್ಸಿನ್ ನೀಡಲಾಯಿತು.

ಇದನ್ನೂ ಓದಿ: Kerala Assembly Elections 2021: ಕೇರಳದಲ್ಲಿ ಕಾವೇರಿದ ಚುನಾವಣಾ ಕಣ; ಮೈತ್ರಿಕೂಟಗಳ ನಡುವೆ ಸೀಟು ಹಂಚಿಕೆಗಾಗಿ ಜಿದ್ದಾಜಿದ್ದಿ!

ಇನ್ನು ಲಸಿಕೆ ವಿತರಣೆಗಾಗಿ 2.5 ಲಕ್ಷ ಹಣವನ್ನ ಮೈಸೂರಿನ ಜೆಎಸ್ಎಸ್‌ ಆಸ್ಪತ್ರೆಗೆ ನೀಡಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌,  1000 ಮಂದಿಗೆ ಲಸಿಕೆ ಹಾಕಲು ಮುಂಗಡವಾಗಿ ಹಣವನ್ನ ಆಸ್ಪತ್ರೆಗೆ ನೀಡಿದ್ದಾರೆ. ಬಡವರು, ನಿರ್ಗತಿಕರು ಯಾರಾದರೂ ಬಂದು ಲಸಿಕೆ ಪಡೆಯುಲು ಇಚ್ಛಿಸಿದರೆ ಅಂತವರಿಗೆ ಉಚಿತವಾಗಿ ಲಸಿಕೆ ನೀಡಿ ಅಂತ ಆಸ್ಪತ್ರೆಯ ಮುಖ್ಯಸ್ಥರಿಗೆ 2.5 ಲಕ್ಷ ಹಣ ನೀಡಿ, ಲಸಿಕೆ ವಿಚಾರದಲ್ಲಿ ಯಾರಿಗೂ ಕೊರತೆಯಾಗದಿರಲಿ ಎಂದು ಆಸ್ಪತ್ರೆ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ತಾವು ಈ ದಿನ ಲಸಿಕೆ ಪಡೆಯದೆ ಇದ್ದರೂ 1000 ಮಂದಿಯ ಲಸಿಕೆ ಹಣವನ್ನ ಮುಂಗಡವಾಗಿ ನೀಡಿದ ಪ್ರಮೋದಾದೇವಿ ಒಡೆಯರ್ ನಡೆಯನ್ನ ಆಸ್ಪತ್ರೆ ಮುಖ್ಯಸ್ಥರು ಹಾಗೂ ಸಾರ್ವಜನಿಕರು ಪ್ರಶಂಸೆ ಮಾಡಿದರು.

ಇನ್ನು ಮೈಸೂರಿನಲ್ಲಿ ಈವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 54,097 ಇದ್ದು, ಇದುವರೆಗೂ 52,862 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 205 ಇದ್ದು, ಮೈಸೂರಿನಲ್ಲಿ ಇದುವರೆಗೆ 1,030 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಇದೀಗ ವ್ಯಾಕ್ಸಿನ್ ಸಾರ್ವಜನಿಕರಿಗೆ ಲಭ್ಯವಾಗಿರೋದ್ರಿಂದ ಮೈಸೂರಿನಲ್ಲಿ ಕೊರೊನಾ ಕಂಟ್ರೋಲ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
Published by: MAshok Kumar
First published: March 2, 2021, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories