• Home
  • »
  • News
  • »
  • district
  • »
  • Corona Crisis: ಸೋಂಕಿನ ಲಕ್ಷಣ ಇದ್ರೂ ಇಲ್ಲಿ ಕೋವಿಡ್ ಪರೀಕ್ಷೆಯನ್ನೇ ಮಾಡ್ತಿಲ್ಲ, ಸೋಂಕಿತರು ಊರೆಲ್ಲಾ ಓಡಾಡಿ ವೈರಸ್ ಹಂಚುತ್ತಿದ್ದಾರೆ !

Corona Crisis: ಸೋಂಕಿನ ಲಕ್ಷಣ ಇದ್ರೂ ಇಲ್ಲಿ ಕೋವಿಡ್ ಪರೀಕ್ಷೆಯನ್ನೇ ಮಾಡ್ತಿಲ್ಲ, ಸೋಂಕಿತರು ಊರೆಲ್ಲಾ ಓಡಾಡಿ ವೈರಸ್ ಹಂಚುತ್ತಿದ್ದಾರೆ !

ಕೋವಿಡ್ ಪರೀಕ್ಷಾ ಕೇಂದ್ರ

ಕೋವಿಡ್ ಪರೀಕ್ಷಾ ಕೇಂದ್ರ

ತೀರಾ ರೋಗ ಲಕ್ಷಣ ಇದ್ರು ಕೂಡಾ ಅವರಿಗೆ ಕೋವಿಡ್ ಟೆಸ್ಟ್ ನಡೆಸುತ್ತಿಲ್ಲ. ಅಂತವರಿಗೆ ಸ್ಥಳೀಯ ಸರಕಾರಿ ವೈದ್ಯರ ಪರವಾನಗಿ ಪತ್ರ ತೆಗೆದುಕೊಂಡು ಬನ್ನಿ ಎಂದು ವಾಪಾಸು ಕಳಿಸುತ್ತಿದ್ದಾರೆ. ಹೀಗೆ ಕಾರವಾರದ ಜನ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅಲ್ಲಿಂದ ಇಲ್ಲಿ, ಇಲ್ಲಿಂದ‌ ಅಲ್ಲಿ ಅಲೆದಾಡುವಂತಾಗಿದೆ.

ಮುಂದೆ ಓದಿ ...
  • Share this:

ಕಾರವಾರ : ಉತ್ತರ ಕನ್ನಡ ಜಿಲ್ಲಾಡಳಿತ ಕೋವಿಡ್ ಪರೀಕ್ಷೆಯನ್ನ ಸದ್ಯ ಸ್ಥಗಿತಗೊಳಿಸಿದೆ. ರೋಗ  ಲಕ್ಷಣ ಇದ್ದವರು ಕೂಡಾ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಪರದಾಟ ನಡೆಸುವಂತಾಗಿದೆ. ಇದಕ್ಕೆಲ್ಲ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದ ಗೊಂದಲದ ಹೇಳಿಕೆ ಮತ್ತು ನಿಯಮಗಳು ಕಾರಣ ಎನ್ನಲಾಗಿದೆ. ಕಳೆದ ಏಳೆಂಟು ದಿನದಿಂದ ಕೋವಿಡ್ ಪರೀಕ್ಷೆಯನ್ನ ಸ್ಥಗಿತಗೊಳಿಸಿರುವ ಉತ್ತರ ಕನ್ನಡ ಜಿಲ್ಲಾಡಳಿತ ರೋಗ ಲಕ್ಷಣ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕ ಇದ್ದವರಿಗೆ ಮಾತ್ರ ಟ್ರೇಸ್ ಮಾಡಿ ಕೋವಿಡ್ ಪರೀಕ್ಷೆ ಮಾಡಿಸಲಾಗುತ್ತಿದೆ ಎನ್ನುತ್ತಿದೆ. ಆದ್ರೆ ರೋಗ ಲಕ್ಷಣ ಇದ್ದವರು ಟೆಸ್ಟಿಂಗ್ ಹೋದರೆ ಇಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ರೋಗ ಲಕ್ಷಣ ಇದ್ದವರಿಗೂ ಕೂಡಾ ಪರೀಕ್ಷೆ ಮಾಡಿಸುತ್ತಿಲ್ಲ ಎನ್ನುವ ಆರೋಪ ಈಗ ಬಲವಾಗಿ ಕೇಳಿ ಬರುತ್ತಿದೆ. ಇದ್ರಿಂದ ಬೇಸತ್ತ ಜನ್ರು ಕೂಡಲೆ ಟೆಸ್ಟಿಂಗ್ ಆರಂಭಿಸಿ ಎಂದು ಪಟ್ಟು ಹಿಡಿದಿದ್ದಾರೆ. ರೋಗ ಲಕ್ಷಣ ಇಲ್ಲದೆ ಇರೋರಿಗೆ ಯಾವುದೆ ಕಾರಣಕ್ಕೂ ಕೋವಿಡ್ ಪರೀಕ್ಷೆ ನಡೆಸಲ್ಲ ಎಂದು ಜಿಲ್ಲಾಡಳಿತ ಹೇಳಿದೆ, ಆದ್ರೆ ಇಲ್ಲಿ ರೋಗ ಲಕ್ಷಣ ಇದ್ದವರಿಗೂ ಪರೀಕ್ಷೆ ನಡೆಸಲಾಗುತ್ತಿಲ್ಲ ಎನ್ನೋದೆ ಸಾಕಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.


ರೋಗ ಲಕ್ಷಣ ಇದ್ದವರಿಗೆ ಡಾಕ್ಟರ್ ಪರವಾನಗಿ‌ ಲೆಟರ್ ಕಡ್ಡಾಯ ?


ರೋಗ ಲಕ್ಷಣ ಇದ್ದವರಿಗೆ ನೇರವಾಗಿ ಬಂದು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಇಲಾಖೆ ಹೇಳಿದೆ. ಆದ್ರೆ ಇಲ್ಲಿ ನಡೆಯುತ್ತಿರೋದೆ ಬೇರೆ... ತೀರಾ ರೋಗ ಲಕ್ಷಣ ಇದ್ರು ಕೂಡಾ ಅವರಿಗೆ ಕೋವಿಡ್ ಟೆಸ್ಟ್ ನಡೆಸುತ್ತಿಲ್ಲ. ಅಂತವರಿಗೆ ಸ್ಥಳೀಯ ಸರಕಾರಿ ವೈದ್ಯರ ಪರವಾನಗಿ ಪತ್ರ ತೆಗೆದುಕೊಂಡು ಬನ್ನಿ ಎಂದು ವಾಪಾಸು ಕಳಿಸುತ್ತಿದ್ದಾರೆ. ಹೀಗೆ ಕಾರವಾರದ ಜನ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅಲ್ಲಿಂದ ಇಲ್ಲಿ, ಇಲ್ಲಿಂದ‌ ಅಲ್ಲಿ ಅಲೆದಾಡುವಂತಾಗಿದೆ...ಕೋವಿಡ್ ರೋಗ ಲಕ್ಷಣ ಇದ್ದವರಿಗೂ ಕೂಡಾ ಪರೀಕ್ಷೆಗೆ ಅವಕಾಶ ಸಿಗದೆ ಇರೋದು ಜನಾಕ್ರೋಷಕ್ಕೆ ಕಾರಣವಾಗಿದೆ.


ರೋಗ ಲಕ್ಷಣ ಇದ್ದವರಿಂದ ಸಮೂದಾಯಕ್ಕೆ ಹರಡುವ ಭೀತಿ


ಈಗಾಗಲೆ ಕೊರೋನಾ ಸೋಂಕು ಸಮೂದಾಯಕ್ಕೆ ಹರಡಿದೆ ಮನೆ ಮನೆಗೂ ಸೋಂಕು ಹರಡಿದೆ. ಹೀಗಿರುವಾಗ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೋರಿರೋದು ಸೋಂಕಿತರ ಸಂಖ್ಯೆ ಹೆಚ್ಚಾಗಲು ರಹದಾರಿ ಮಾಡಿಕೊಡುತ್ತಿದೆ. ಸೋಂಕಿನ‌ ಗುಣಲಕ್ಷಣ ಇದ್ದವರು ಊರು‌ಕೇರಿ ಸುತ್ತಾಟ ನಡೆಸಿ ಸೋಂಕು ಹಬ್ಬಲು ಇವರೆ ಕಾರಣಿಕರ್ತರಾಗುತ್ತಾರೆ. ಇದಕ್ಕೆ ಆರೋಗ್ಯ ಇಲಾಖೆ ಸೇತುವೆ ಆಗಿದೆ. ರೋಗ ಲಕ್ಷಣ ಇದ್ದವರಿಗೆ ನೇರವಾಗಿ ಕೋವಿಡ್ ಟೆಸ್ಟ್ ಮಾಡಿಸಿದ್ರೆ ಉತ್ತಮ, ಇಲ್ಲ ಅಂದರೆ ಸೋಂಕು ಹರಡಲು ನೇರ ಹೊಣೆ ಆರೋಗ್ಯ ಇಲಾಖೆ ಆಗಲಿದೆ ಎಂದು ಜನ ಆರೋಪ ಮಾಡುತ್ತಿದ್ದಾರೆ.


ಹೀಗೆ ಆರೋಗ್ಯ ಇಲಾಖೆ ಹೇಳೊದೊಂದು ಮಾಡೋದೊಂದು ಮಾಡಿದ್ರೆ ಜನರಿಗೆ ಸಾಕಷ್ಟು ಗೊಂದಲ ಉಂಟಾಗಲಿದೆ. ಕೋವಿಡ್ ಪರೀಕ್ಷೆ ಆರಂಭಿಸಿ ಸೋಂಕಿನ‌ ಗುಣಲಕ್ಷಣ ಇದ್ದವರಿಗೂ ಕೋವಿಡ್ ಪರೀಕ್ಷೆ ನಡೆಸಿದ್ರೆ ಮುಂದೆ ಸೋಂಕು ನಿಯಂತ್ರಣಕ್ಕೆ ಬರಲಿದೆ. ಇಲ್ಲವಾದಲ್ಲಿ ಸೋಂಕು ಗಲ್ಲಿ ಗಲ್ಲಿಯಲ್ಲಿ ಸದ್ದಿಲ್ಲದೆ ಪಸರಿಸಲಿದೆ.

Published by:Soumya KN
First published: