ಕಾಳ ಸಂತೆಯಲ್ಲಿ ಮಾರಟವಾಗುತ್ತಿದೆ ಕೋವಿಡ್ ಚಿಕಿತ್ಸೆಗೆ ಬಳಸುವ Remdesivir!?

ಕೇವಲ ಹತ್ತು ದಿನಗಳ‌ ಹಿಂದೆ ಒಂದು ಯುನಿಟ್‌ಗೆ ಒಂದುವರೆ ಯಿಂದ ಎರಡು ಸಾವಿರ ರುಪಾಯಿಗೆ ಸಿಗುತ್ತಿದ್ದ ರಿಮೆಡಿಸಿವಿರ್ ಈಗ ನೇರ ಮಾರುಕಟ್ಟೆಯಲ್ಲಿ ಸೂಕ್ತ ಪೂರೈಕೆ ಇಲ್ಲವಂತೆ. ರಿಮೆಡಿಸಿವಿರ್ ಬೇಕೆ ಬೇಕು ಎಂದರೆ ಹತ್ತು ಪಟ್ಟು ಹಣ ಅಂದ್ರೆ ಹದಿನೈದರಿಂದ ಇಪ್ಪತ್ತು ಸಾವಿರ ರುಪಾಯಿ ಕೊಟ್ಟು ರಿಮೆಡಿಸಿವಿರ್ ಕೊಂಡು ಕೊಳ್ಳಬೇಕಂತೆ. 

ರೆಮಡೆಸಿವಿರ್

ರೆಮಡೆಸಿವಿರ್

  • Share this:
Coronavirus Updates: ಇಡೀ ದೇಶವೇ ಕೊರೋನಾ ಸೋಂಕಿನಿಂದ ನಲುಗಿ ಹೋಗಿದೆ, ಸೋಂಕು ತಡೆಗಟ್ಟಲು ಸರ್ಕಾರ ಹರಸಾಹಸ ಮಾಡ್ತಾ ಇದೆ. ಕೊರೋನಾ ಫ್ರಂಟ್ ಲೈನ್ ವರ್ಕರ್ಸ್ ಹಗಲಿರುಳು ಎನ್ನದೆ ದುಡಿಯುತ್ತಿದ್ದಾರೆ, ಆದ್ರೆ ಕೊರೋನಾ ಸೋಂಕಿತರಿಗೆ ನೀಡುವ ಚುಚ್ಚುಮದ್ದು ಮಾತ್ರ ಕಾಳ ಸಂತೆಯಲ್ಲಿ ಹತ್ತು ಪಟ್ಟು ಅಧಿಕ ಹಣಕ್ಕೆ ಮಾರಾಟ ಆಗುತ್ತಿದೆ ಎಂಬ ಗಂಭೀರ ಆರೋಪವೊಂದು ಕೇಳಿ ಬಂದಿದೆ.

ರಾಜ್ಯದಲ್ಲಿ ಎರಡನೇ ಅಲೇ ಕೊರೋನಾ ಅಲ್ಲೋಲ ಕಲ್ಲೋಲ‌ ಸೃಷ್ಟಿ ಮಾಡಿದೆ ರಾಜ್ಯದಲ್ಲಿ ದಿನಂಪ್ರತಿ ಸರಿ ಸುಮಾರು 15 ಸಾವಿರ ಜನರಲ್ಲಿ ಸೋಂಕು ಪತ್ತೆಯಾದ್ರೆ ದೇಶದಲ್ಲಿ ಬರೋಬ್ಬರಿ ಎರಡು ಲಕ್ಷಕ್ಕೂ ಅಧಿಕ ಜನರಲ್ಲಿ ಕೋವಿಡ್ ಕಾಣಿಸಿಕೊಳ್ಳುತಿದೆ. ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸಂಜೀವಿನಿಯಂತೆ ಬಳಕೆಯಾಗುವ ರಿಮೆಡಿಸಿವಿರ್.  ಸೋಂಕಿತರಿಗೆ ಅತ್ಯಗತ್ಯವಾಗಿರುವ ಈ ರಿಮೆಡಿಸಿವಿರ್ ನೇರ ಮಾರುಕಟ್ಟೆಯಲ್ಲಿ ಮಾರಾಟವಾಗದೆ ಈಗ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಕಾಳ ಸಂತೆಯಲ್ಲಿ Remdesivir: ಕೇವಲ ಹತ್ತು ದಿನಗಳ‌ ಹಿಂದೆ ಒಂದು ಯುನಿಟ್‌ಗೆ ಒಂದುವರೆ ಯಿಂದ ಎರಡು ಸಾವಿರ ರುಪಾಯಿಗೆ ಸಿಗುತ್ತಿದ್ದ ರಿಮೆಡಿಸಿವಿರ್ ಈಗ ನೇರ ಮಾರುಕಟ್ಟೆಯಲ್ಲಿ ಸೂಕ್ತ ಪೂರೈಕೆ ಇಲ್ಲವಂತೆ. ರಿಮೆಡಿಸಿವಿರ್ ಬೇಕೆ ಬೇಕು ಎಂದರೆ ಹತ್ತು ಪಟ್ಟು ಹಣ ಅಂದ್ರೆ ಹದಿನೈದರಿಂದ ಇಪ್ಪತ್ತು ಸಾವಿರ ರುಪಾಯಿ ಕೊಟ್ಟು ರಿಮೆಡಿಸಿವಿರ್ ಕೊಂಡು ಕೊಳ್ಳಬೇಕಂತೆ.

ರಾಜ್ಯದಲ್ಲೇ ಕೋವಿಡ್ ರಿಮೆಡಿಸಿವಿರ್ ತಯಾರು ಮಾಡುವ ಕಂಪನಿಗಳಿದ್ದರು ಆಸ್ಪತ್ರೆಗಳಿಗೆ ನೇರ ಮಾರುಕಟ್ಟೆ ಮೂಲಕ ರಿಮೆಡಿಸಿವಿರ್ ಸಪ್ಲೈ ಆಗದೆ ಕಾಳ‌ ಸಂತೆ ಮೊರೆ ಹೋಗುವ ಅಗತ್ಯ ಏನಿದೆ, ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಿ ಎಂದು ನೆಲಮಂಗಲದ ಹರ್ಷ ಆಸ್ಪತ್ರೆ ಮುಖ್ಯಸ್ಥ ಶಿವಕುಮಾರ್ ಬೆಂಗಳೂರು ಪೊಲೀಸ್ ಕಮಿಷನರ್‌‌ಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಸೋಂಕು ಉಲ್ಭಣಗೊಳ್ಳುತ್ತಿರುವ ಸಂಧರ್ಭದಲ್ಲಿ ಸರ್ಕಾರ ಇಂತಹ ಸಮಸ್ಯೆಗಳನ್ನ ಗಂಭೀರವಾಗಿ ಪರಿಗಣಿಸಿ ಶೀಘ್ರ ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಕೋವಿಡ್ ಸೋಂಕಿತರನ್ನ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ರೋಗ ಲಕ್ಷಣಗಳಿಲ್ಲದ ಸೋಂಕಿತರು, ಸಾಮಾನ್ಯ ರೋಗ ಲಕ್ಷಣಗಳಿರುವ ರೋಗಿಗಳು ಹಾಗೂ ಅತೀ ಹೆಚ್ಚು ಸಮಸ್ಯೆ ಒಳಗಾದವರು ಎಂದು. ರೋಗ ಲಕ್ಷಣಗಳಿಲ್ಲದವರಿಗೆ ಕೇವಲ ರೋಗನಿರೋಧಕ ಶಕ್ತಿ ಹೆಚ್ವಿಸುವಂತಹ ಕೆಲ ಮಾತ್ರಗಳನ್ನ ನೀಡಿ ಕೋವಿಡ್ ಕೇರ್ ಸೆಂಟರ್ ಅಥವಾ ಮನೆಗಳಲ್ಲೇ ಐಸೋಲೇಷನ್‌‌ಗೆ ಒಳಪಡಿಸಿದರೆ ಅಂತಹವರನ್ನ ಗುಣಪಡಿಸಬಹುದು. ಆದ್ರೆ ಸಾಮಾನ್ಯ ರೋಗ ಲಕ್ಷಣಗಳು ಹಾಗೂ ಅತೀ ಹೆಚ್ಚು ಸಮಸ್ಯೆಗೆ ಒಳಗಾದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಅತ್ಯಗತ್ಯವಾಗಿರುತ್ತದೆ. ಆಸ್ಪತ್ರೆಯಲ್ಲಿ ದಾಖಲಾಗದ ಸೋಂಕಿನ ಪ್ರಮಾಣ ಹೆಚ್ಚಾಗಿ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ಸೋಂಕಿತರಿಗೆ ಸಂಜೀವಿನಿಯಂತೆ ಬಳಕೆಯಾಗುತ್ತದೆ ಈ ರಿಮೆಡಿಸಿವಿರ್. ಸೋಂಕಿತರಿಗೆ ಅತೀ ಹೆಚ್ಚು ಸಮಸ್ಯೆ ಎದುರಾದಾಗ ರಿಮೆಡಿಸಿವಿರ್ ಚುಚ್ಚು ಮದ್ದು ನೀಡಿದರೆ ಸೋಂಕಿತರ ಜೀವ ಉಳಿಸಬಹುದಾಗಿದೆ.

ಒಟ್ಟಾರೆ ಕೊರೋನಾ ಸೋಂಕಿತರಿಗೆ ನಿತ್ಯ ಸಂಜೀವಿನಿ ಆಗಿದ್ದ ರಿಮೆಡಿಸಿವಿರ್‌ಗಳು ನೇರ ಮಾರುಕಟ್ಟೆಯಲ್ಲಿ ಸಿಗದೆ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನಾದರು ಸರ್ಕಾರ ಎಚ್ಚೆತ್ತುಕೊಂಡು ಸಾಂಕ್ರಾಮಿಕ ರೋಗದ ಜೊತೆ ಚಲ್ಲಾಟವಾಡದೆ ಶೀಘ್ರ ನೇರ ಮಾರುಕಟ್ಟೆಯಲ್ಲಿ ರಿಮೆಡಿಸಿವಿರ್ ದೊರಕುವಂತೆ ಕ್ರಮ ಕೈಗೊಳ್ಳಬೇಕಿದೆ.
Published by:Soumya KN
First published: